ಮಾರುತಿ ಸುಜುಕಿ ವಿಟಾರಾ ಬ್ರೇಝಾ ಎಎಂಟಿ ವರ್ಷನ್ ಬಿಡುಗಡೆ

ವಿಟಾರಾ ಬ್ರೇಝಾ ಕಾರುಗಳು ಇದೀಗ ಎಎಂಟಿ(ಆಟೋಮ್ಯಾಟಿಕ್ ಗೇರ್‌ಬಾಕ್ಸ್) ಸೌಲಭ್ಯದೊಂದಿಗೆ ಬಿಡುಗಡೆಯಾಗಿದ್ದು, ದೆಹಲಿ ಎಕ್ಸ್‌ಶೋರಂ ಪ್ರಕಾರ ಎಎಂಟಿ ವರ್ಷನ್ ವಿಟಾರಾ ಬ್ರೇಝಾ ಕಾರುಗಳನ್ನು ಆರಂಭಿಕವಾಗಿ ರೂ.8.54 ಲಕ್ಷಕ್ಕೆ ಬಿಡುಗಡೆಗೊಳಿಸಲಾಗಿದೆ.

By Praveen Sannamani

ಮೊದಲ ಬಾರಿಗೆ ಬಿಡುಗಡೆಯಾದಾಗ ಕೇವಲ ಮ್ಯಾನುವಲ್ ಗೇರ್‌ಬಾಕ್ಸ್ ಸೌಲಭ್ಯ ಹೊಂದಿದ್ದ ವಿಟಾರಾ ಬ್ರೇಝಾ ಕಾರುಗಳು ಇದೀಗ ಎಎಂಟಿ(ಆಟೋಮ್ಯಾಟಿಕ್ ಗೇರ್‌ಬಾಕ್ಸ್) ಸೌಲಭ್ಯದೊಂದಿಗೆ ಬಿಡುಗಡೆಯಾಗಿದ್ದು, ದೆಹಲಿ ಎಕ್ಸ್‌ಶೋರಂ ಪ್ರಕಾರ ಎಎಂಟಿ ವರ್ಷನ್ ವಿಟಾರಾ ಬ್ರೇಝಾ ಕಾರುಗಳನ್ನು ಆರಂಭಿಕವಾಗಿ ರೂ.8.54 ಲಕ್ಷಕ್ಕೆ ಬಿಡುಗಡೆಗೊಳಿಸಲಾಗಿದೆ.

ಮಾರುತಿ ಸುಜುಕಿ ವಿಟಾರಾ ಬ್ರೇಝಾ ಎಎಂಟಿ ವರ್ಷನ್ ಬಿಡುಗಡೆ

ಸದ್ಯ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿರುವ ವಿಟಾರಾ ಬ್ರೇಝಾ ಕಾರುಗಳು ವಿಡಿಐ, ಜೆಡ್‌ಡಿಐ, ಜೆಡ್‌ಡಿಐ ಪ್ಲಸ್ ಮತ್ತು ಜೆಡ್‌ಡಿಐ ಡ್ಯುಯಲ್ ಟೋನ್ ಆವೃತ್ತಿಗಳಲ್ಲಿ ಲಭ್ಯವಿದ್ದು, ವಿವಿಧ ಮಾದರಿಗಳಲ್ಲಿ ಒದಗಿಸಲಾಗಿರುವ ಸೌಲಭ್ಯಗಳ ಮೇಲೆ ವಿವಿಧ ರೀತಿಯ ಬೆಲೆ ಪಡೆದುಕೊಂಡಿವೆ. ಹೀಗಾಗಿ ಆರಂಭಿಕವಾಗಿ ರೂ. 8.54 ಲಕ್ಷ ಬೆಲೆ ಹೊಂದಿರುವ ವಿಟಾರಾ ಬ್ರೇಝಾ ಎಎಂಟಿ ಕಾರುಗಳು ಟಾಪ್ ಎಂಡ್‌ ಮಾದರಿಯಲ್ಲಿ ರೂ.10.49 ಲಕ್ಷ ಬೆಲೆ ನಿಗದಿಮಾಡಲಾಗಿದೆ.

ಮಾರುತಿ ಸುಜುಕಿ ವಿಟಾರಾ ಬ್ರೇಝಾ ಎಎಂಟಿ ವರ್ಷನ್ ಬಿಡುಗಡೆ

ಎಎಂಟಿ ವಿಟಾರಾ ಬ್ರೇಝಾ ಕಾರುಗಳ ಬೆಲೆ ಪಟ್ಟಿ...

ಕಾರು ಆವೃತ್ತಿಗಳು ಬೆಲೆ(ಎಕ್ಸ್ ಶೋರಂ ದೆಹಲಿ)
ವಿಡಿಐ ಎಜಿಎಸ್ ರೂ. 8,54,000
ಜೆಡ್‌ಡಿಐ ಎಜಿಎಸ್ ರೂ. 9,31,500
ಜೆಡ್‌ಡಿಐ ಪ್ಲಸ್ ಎಜಿಎಸ್ ರೂ. 10,27,000
ಜೆಡ್‌ಡಿಐ ಪ್ಲಸ್ ಡ್ಯೂಯಲ್ ಟೋನ್ ಎಜಿಎಸ್ ರೂ. 10,49,000

ಮಾರುತಿ ಸುಜುಕಿ ವಿಟಾರಾ ಬ್ರೇಝಾ ಎಎಂಟಿ ವರ್ಷನ್ ಬಿಡುಗಡೆ

ಹೊಸ ಕಾರಿನ ವೈಶಿಷ್ಟ್ಯತೆ

ಎಎಂಟಿ ಸೌಲಭ್ಯ ಹೊರತು ಪಡಿಸಿ ಮ್ಯಾನುವಲ್ ಮಾದರಿಯಲ್ಲೇ ಹೊಸ ಕಾರಿನ ವಿನ್ಯಾಸಗಳನ್ನು ಮುಂದುವರಿಸಲಾಗಿದ್ದು, ಪ್ರತಿ ಕಾರು ಆವೃತ್ತಿಯಲ್ಲೂ ಸುರಕ್ಷತೆಗಾಗಿ ಡ್ಯುಯಲ್ ಏರ್‌ಬ್ಯಾಗ್, ಎಬಿಎಸ್ ಸೇರಿದಂತೆ ಹೊಸ ಬಗೆಯ ಡ್ಯುಯಲ್ ಟೋನ್ ಬಣ್ಣದ ಆಯ್ಕೆ ಪಡೆದಿದೆ.

ಮಾರುತಿ ಸುಜುಕಿ ವಿಟಾರಾ ಬ್ರೇಝಾ ಎಎಂಟಿ ವರ್ಷನ್ ಬಿಡುಗಡೆ

ಈ ಹಿಂದೆ ಲಭ್ಯವಿದ್ದ ಬಣ್ಣಗಳ ಜೊತೆ ಹೊಸದಾಗಿ ಆಟೋನಮ್ ಆರೇಂಜ್ ಮತ್ತು ಪರ್ಲ್ ಆರ್ಟಿಕ್ ಡ್ಯುಯಲ್ ಟೋನ್ ಬಣ್ಣ ಪಡೆದಿರುವ ಎಎಂಟಿ ಆವೃತ್ತಿಗಳು ಕ್ರೋಮ್ ಗ್ರೀಲ್, ಕಾರಿನ ಬೂಟ್ ಮೇಲೆ ಗಾರ್ನಿಷ್ ವಿನ್ಯಾಸ ಪಡೆದಿದ್ದು, ಎಎಂಟಿ ವರ್ಷನ್ ಟಾಪ್ ಎಂಡ್ ಮಾದರಿಯಲ್ಲಿ ಬ್ಲ್ಯಾಕ್ ಫಿನಿಷಿಂಗ್ ನ್ಯೂ ಅಲಾಯ ಚಕ್ರಗಳನ್ನು ಬಳಕೆ ಮಾಡಲಾಗಿದೆ.

ಮಾರುತಿ ಸುಜುಕಿ ವಿಟಾರಾ ಬ್ರೇಝಾ ಎಎಂಟಿ ವರ್ಷನ್ ಬಿಡುಗಡೆ

ಇನ್ನು ಕಾರಿನ ಇಂಟಿರಿಯರ್ ವಿನ್ಯಾಸಗಳ ಬಗೆಗೆ ಹೇಳುವುದಾದರೇ, ಎಎಂಟಿಯ ಎಲ್ಲಾ ಕಾರು ಆವೃತ್ತಿಗಳು ಸಹ ಬ್ಲ್ಯಾಕ್ ಥೀಮ್ ಡ್ಯಾಶ್‌ಬೋರ್ಡ್ ಸೌಲಭ್ಯ ಹೊಂದಿದ್ದು, ಇನ್ನುಳಿದಂತೆ ಮ್ಯಾನುವಲ್ ಮಾದರಿಯಲ್ಲಿ ಬಳಕೆ ಮಾಡಿರುವ ತಾಂತ್ರಿಕ ಅಂಶಗಳನ್ನೇ ಇಲ್ಲೂ ಜೋಡಿಸಲಾಗಿದೆ.

ಮಾರುತಿ ಸುಜುಕಿ ವಿಟಾರಾ ಬ್ರೇಝಾ ಎಎಂಟಿ ವರ್ಷನ್ ಬಿಡುಗಡೆ

ಎಂಜಿನ್ ಸಾಮರ್ಥ್ಯ

ಡಿಸೇಲ್ ಮಾದರಿಯಲ್ಲಿ ಮಾತ್ರ ಲಭ್ಯವಿರುವ ವಿಟಾರಾ ಬ್ರೇಝಾ ಕಾರುಗಳು 1.3-ಲೀಟರ್ ಫೌರ್ ಸಿಲಿಂಡರ್ ಡೀಸೆಲ್ ಎಂಜಿನ್ ಹೊಂದಿದ್ದು, 88-ಬಿಎಚ್‌ಪಿ ಮತ್ತು 200ಎನ್ಎಂ ಟಾರ್ಕ್ ಉತ್ಪಾದಿಸಬಲ್ಲದು. ಜೊತೆಗೆ 5-ಸ್ಪೀಡ್ ಮ್ಯಾನುವಲ್ ವರ್ಷನಲ್ಲೂ ಖರೀದಿಗೆ ಲಭ್ಯವಿದ್ದು, ಪ್ರತಿ ಲೀಟರ್ ಡಿಸೇಲ್‌ಗೆ 24.3 ಮೈಲೇಜ್ ನೀಡಬಲ್ಲವು.

ಮಾರುತಿ ಸುಜುಕಿ ವಿಟಾರಾ ಬ್ರೇಝಾ ಎಎಂಟಿ ವರ್ಷನ್ ಬಿಡುಗಡೆ

ಹೀಗಾಗಿ ಮೊನ್ನೆಯಷ್ಟೇ ಬಿಡುಗಡೆಯಾಗಿರುವ ಟಾಟಾ ನೆಕ್ಸಾನ್ ಡಿಸೇಲ್ ಎಎಂಟಿ ಕಾರುಗಳಿಗೆ ತ್ರೀವ ಪೈಪೋಟಿ ನೀಡಲಿದ್ದು, ತಾಂತ್ರಿಕವಾಗಿಯೂ ನೆಕ್ಸಾನ್ ಕಾರುಗಳಿಂತಲೂ ಗುಣಮಟ್ಟ ಹೊಂದಿರುವ ವಿಟಾರಾ ಬ್ರೇಝಾ ಕಾರುಗಳು ಬೆಲೆ ವಿಚಾರದಲ್ಲೂ ಗ್ರಾಹಕರನ್ನು ಸೆಳೆಯದೇ ಇರಲಾರವು.

ಮಾರುತಿ ಸುಜುಕಿ ವಿಟಾರಾ ಬ್ರೇಝಾ ಎಎಂಟಿ ವರ್ಷನ್ ಬಿಡುಗಡೆ

ಇನ್ನೊಂದು ಪ್ರಮಖ ವಿಚಾರ ಅಂದ್ರೆ, ಈಗಾಗಲೇ ದೇಶದಲ್ಲಿ ಮಾರಾಟವಾಗುತ್ತಿರುವ ಟಾಪ್ 10 ಕಾರುಗಳ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿರುವ ವಿಟಾರಾ ಬ್ರೇಝಾ ಕಾರುಗಳು ಬಿಡುಗಡೆಯಾದ ನಂತರ ಪ್ರತಿ ತಿಂಗಳು 15 ಸಾವಿರ ಕಾರುಗಳು ಮಾರಾಟವಾಗಿದ್ದು, ಇದೀಗ ಎಎಂಟಿ ಸೌಲಭ್ಯ ಒದಗಿಸಿರುವುದು ಮತ್ತಷ್ಟು ಗ್ರಾಹಕರನ್ನು ಸೆಳೆಯಲಿದೆ.

Most Read Articles

Kannada
Read more on maruti suzuki suv
English summary
Maruti Vitara Brezza AMT Launched In India; Prices Start At Rs 8.54 Lakh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X