ಹೊಸ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಗೊಂಡ 2018ರ ಮಸೆರಟಿ ಘಿಬ್ಲಿ..

ಇಟಲಿ ಮೂಲದ ಐಷಾರಾಮಿ ಕಾರು ತಯಾರಕ ಸಂಸ್ಥೆಯಾದ ಮಸೆರಟಿಯು ತನ್ನ ಹೊಸ ಘಿಬ್ಲಿ ಕಾರ್‌ ಅನ್ನು ವಿನೂತನ ವೈಶಿಷ್ಟ್ಯತೆಗಳೊಂದಿಗೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ.

ಇಟಲಿ ಮೂಲದ ಐಷಾರಾಮಿ ಕಾರು ತಯಾರಕ ಸಂಸ್ಥೆಯಾದ ಮಸೆರಟಿಯು ತನ್ನ ಹೊಸ ಘಿಬ್ಲಿ ಕಾರ್‌ ಅನ್ನು ವಿನೂತನ ವೈಶಿಷ್ಟ್ಯತೆಗಳೊಂದಿಗೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ್ದು, ಡೀಸೆಲ್, ಗ್ರ್ಯಾನ್‍ಸ್ಪೋರ್ಟ್ ಮತ್ತು ಗ್ರ್ಯಾನ್‍ಲಸ್ಸೊ ಎಂಬ ಮೂರು ವಿವಿಧ ಆವೃತ್ತಿಗಳಲ್ಲಿ ಖರೀದಿಸಬಹುದಾಗಿದೆ.

ಹೊಸ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಗೊಂಡ 2018ರ ಮಸೆರಟಿ ಘಿಬ್ಲಿ..

ಹೊಸ ಕಾರುಗಳ ಬೆಲೆ

ದೆಹಲಿಯ ಎಕ್ಸ್ ಶೋರುಂ ಪ್ರಕಾರ ಮಸೆರಟಿ ಘಿಬ್ಲಿ ಡೀಸೆಲ್ ಆವೃತ್ತಿಯು ರೂ. 1.33 ಕೋಟಿಗೆ ಲಭ್ಯವಿದ್ದು, ಹಾಗೆಯೇ ಗ್ರ್ಯಾನ್‍ಸ್ಪೋರ್ಟ್ ರೂ. 1.38 ಕೋಟಿಗೆ ಮತ್ತು ಗ್ರ್ಯಾನ್‍ಲಸ್ಸೊ ಆವೃತ್ತಿಯು ರೂ. 1.42 ಕೋಟಿಗೆ ನಿಗದಿಪಡಿಸಲಾಗಿದೆ.

ಹೊಸ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಗೊಂಡ 2018ರ ಮಸೆರಟಿ ಘಿಬ್ಲಿ..

2018ರ ಘಿಬ್ಲಿ ಕಾರುಗಳು 3.0 ಲೀಟರ್ ವಿ6 ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಹೊಂದಿದ್ದು, 275-ಬಿಹೆಚ್‍ಪಿ ಮತ್ತು 600-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದುಕೊಂಡಿವೆ.

ಹೊಸ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಗೊಂಡ 2018ರ ಮಸೆರಟಿ ಘಿಬ್ಲಿ..

ಜೊತೆಗೆ 8 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್‍ ಜೋಡಣೆ ಪಡೆದಿದ್ದು, ಇದರಲ್ಲಿ ಬಳಸಲಾಗಿರುವ ಎಂಜಿನ್ ಅನ್ನು ಮಸೆರಟಿ ಸಂಸ್ಥೆಯು ವಿಎಂ ಮೊಟೊರಿ ಎಂಬ ಸಂಸ್ಥೆಯೊಂದಿಗೆ ಜೊತೆಗೂಡಿ ತಯಾರಿಸಲಾಗಿದೆ ಎನ್ನಲಾಗಿದೆ.

ಹೊಸ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಗೊಂಡ 2018ರ ಮಸೆರಟಿ ಘಿಬ್ಲಿ..

ಈ ಮೂಲಕ ಮಸೆರಟಿ ಡೀಸೆಲ್ ಆವೃತ್ತಿಯು 6.3 ಸೆಕೆಂಡಿಗೆ 0-100 ಕಿಲೋಮೀಟರ್ ಸ್ಪೀಡ್‍ನಲ್ಲಿ ಚಲಿಸಬಲ್ಲ ಸಾಮರ್ಥ್ಯವನ್ನು ಹೊಂದಿದ್ದು, ಗಂಟೆಗೆ 250 ಕಿಲೋಮೀಟರ್ ಚಲಿಸಬಲ್ಲ ಟಾಪ್‍ಸ್ಪೀಡ್ಅನ್ನು ಪಡೆದುಕೊಂಡಿದೆ. ಇದಲ್ಲದೆ ಆಟೋ ಸ್ಟಾರ್ಟ್-ಸ್ಟಾಪ್ ಮತ್ತು ಆರ್‌ಡ್‍ಬ್ಲೂ ತಂತ್ರಜ್ಞಾನವನ್ನು ಸಿಒ2 (CO2) ಎಮಿಷನ್ ಮತ್ತು ಫ್ಯುಯಲ್ ಕನ್ಸಂಪ್ಷೆನ್ ಅನ್ನು ಕಡೆಮೆಗೊಳಿಸಲು ಬಳಸಲಾಗಿದೆ.

ಹೊಸ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಗೊಂಡ 2018ರ ಮಸೆರಟಿ ಘಿಬ್ಲಿ..

ಹೊಸ ಘಿಬ್ಲಿ ಗ್ರ್ಯಾನ್‍ಲಸ್ಸೊ ಆವೃತ್ತಿಗಳಲ್ಲಿ ಹೊರಭಾಗದ ವಿನ್ಯಾಸವನ್ನು ಹೆಚ್ಚಿಸಿದ್ದು, ಒಳಭಾಗದಲ್ಲಿ ಐಷಾರಾಮಿ ಸೀಟ್, 12 ವೇ ಅಡ್ಜಸ್ಟ್ಮೆಂಟ್ ಮತ್ತು ಮೆಮೊರಿ ಫಂಕ್ಷನ್ ಅನ್ನು ಪಡೆದಿವೆ. ಇದಲ್ಲದೇ ಈ ಕಾರು ಪೂರ್ಣ ಪ್ರೀಮಿಯಂ ಲೆದರ್ ಅಥವಾ ಎರ್ಮೆನೆಗಿಲ್ಡೊ ಜೆಂಘಾ ರೇಷ್ಮೆ ಎಡಿಷನ್ ನೊಂದಿಗೆ ಸಜ್ಜುಗೊಂಡಿರಲಿದೆ.

ಹೊಸ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಗೊಂಡ 2018ರ ಮಸೆರಟಿ ಘಿಬ್ಲಿ..

ಘಿಬ್ಲಿ ಗ್ರ್ಯಾನ್‍ಸ್ಪೋರ್ಟ್ 12 ವೇ ಹೊಂದಾಣಿಕೆಯಾಗಬಲ್ಲ ಆಸನಗಳು ಮತ್ತು ಮೆಮೊರಿ ಫಂಕ್ಷನ್ ಅನ್ನು ಪಡೆದಿದ್ದು, ಜೊತೆಗೆ ಗ್ರಿಫ್ಫಿ ಸ್ಪೋರ್ಟ್ಸ್ ಸ್ಟೀರಿಂಗ್ ವೀಲ್, ಪೆಡಲ್‍ ಶಿಫ್ಟ್ ಮತ್ತು ಐನಾಕ್ಸ್ ಸ್ಪೋರ್ಟ್ ಫೂಟ್ ಪೆಡಲ್‍ಗಳನ್ನು ಪಡೆದಿದೆ.

ಹೊಸ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಗೊಂಡ 2018ರ ಮಸೆರಟಿ ಘಿಬ್ಲಿ..

ಮುಂಭಾಗ ಹಾಗೂ ಹಿಂಭಾಗದ ಬಂಪರ್‍‍ಗಳನ್ನು ಪುನರುತ್ಥಾನಗೊಳಿಸಿದ್ದು, 2018 ಘಿಬ್ಲಿ ಅಡಾಪ್ಟಿವ್ ಫುಲ್ ಎಲ್ಇಡಿ ಹೆಡ್‍ಲ್ಯಾಂಪ್ಸ್, ಗ್ಲೇರ್ ಫ್ರೀ ಮ್ಯಾಟ್ರಿಕ್ಸ್ ಹೈ ಭಿಮ್, ಇಂಟಿಗ್ರೇಟೆಡ್ ವೆಹಿಕಲ್ ಕಂಟೋಲ್ ಸಿಸ್ಟಂ ಮತ್ತು ಶೈಹೂಕ್ ಸಸ್ಪೆಂಷನ್ ಸಿಸ್ಟಂ ಅನ್ನು ಪಡೆದಿದೆ. ಇದಲ್ಲದೆ ಘಿಬ್ಲಿ ಅಡ್ವಾನ್ಸ್ಡ್ ಡ್ರೈವಿಂಗ್ ಅಸ್ಸಿಸ್ಟಂಟ್ ಸಿಸ್ಟಂ ಎಂಬ ಸೇಫ್ಟಿ ಸಿಸ್ಟಂ ಅನ್ನು ಪಡೆದಿದೆ.

ಹೊಸ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಗೊಂಡ 2018ರ ಮಸೆರಟಿ ಘಿಬ್ಲಿ..

ಹೊಸದಾಗಿ ಬಿಡುಗಡೆಗೊಂಡ 2018ರ ಘಿಬ್ಲಿ ಕಾರುಗಳು ಮಾರುಕಟ್ಟೆಯಲ್ಲಿ ಬಿಎಂಡಬ್ಲ್ಯೂ 730ಡಿ, ಮರ್ಸಿಡಿಸ್ ಬೆಂಜ್ ಎಸ್350ಡಿ ಮತ್ತು ಜಾಗ್ವಾರ್ ಎಕ್ಸ್ ಜೆ 3.0 ಡೀಸೆಲ್ ಐಷಾರಾಮಿ ಕಾರುಗಳಿಗೆ ಪೈಪೋಟಿಯನ್ನು ನೀಡಲಿವೆ.

ಹೊಸ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಗೊಂಡ 2018ರ ಮಸೆರಟಿ ಘಿಬ್ಲಿ..

ಮಸೆರೆಟಿ ಸಂಸ್ಥೆಯು ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಎದುರಾಳಿಗಾಳಾದ ಜರ್ಮನ್ ಸಂಸ್ಥೆಗಳಿಂದ ಜನಪ್ರಿಯತೆಯನ್ನು ಗಳಿಸಲಿಲ್ಲವಾದರೂ, ಇದೇ ನಿಟ್ಟಿನಲ್ಲಿ ಈ ಬಾರಿ ಮಸೆರೆಟಿ ತನ್ನ ಎದುರಾಳಿಗಳಿಗೆ ಗಟ್ಟಿ ಪೈಪೋಟಿ ನೀಡಲು ಘಿಬ್ಲಿ ಕಾರುಗಳನ್ನು ಬಿಡುಗಡೆಗೊಳಿಸಿದೆ.

More from DriveSpark

Article Published On: Friday, March 16, 2018, 13:41 [IST]
English summary
Maserati Ghibli 2018 Launched In India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+