ಇನ್ಮುಂದೆ ಬಳಸಿದ ಅಡುಗೆ ಎಣ್ಣೆಯಿಂದಲೇ ಬಯೋ ಡೀಸೆಲ್ ತಯಾರಿಸಲಿದೆ ಮ್ಯಾಕ್ ಡೊನಾಲ್ಡ್

By Praveen Sannamani

ಹೆಚ್ಚುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಿಂದಾಗಿ ಸಾಮಾನ್ಯ ಹಾಗೂ ಮಧ್ಯಮ ವರ್ಗದ ಬೇಸತ್ತು ಹೋಗಿದ್ದಾರೆ. ದಿನೇ ದಿನೇ ಹೆಚ್ಚಳವಾಗುವ ಇಂಧನ ಬೆಲೆಗಳಿಂದಾಗಿ ವಾಹನ ಸವಾರಿಯೇ ಸಾಕು ಎನ್ನುವ ಪರಿಸ್ಥಿತಿ ಎದುರಾಗಿದ್ದು, ಈ ಹಿನ್ನೆಲೆ ಪೆಟ್ರೋಲ್ ಮತ್ತು ಡೀಸೆಲ್‌ಗಳಿಗೆ ಪರ್ಯಾಯವಾಗಿ ಸಂಶೋಧನೆ ಮಾಡಲಾಗುತ್ತಿರುವ ಹೊಸ ಇಂಧನ ಮೂಲಗಳು ಭವಿಷ್ಯದಲ್ಲಿ ಹೊಸ ಸಂಚಲನ ಸೃಷ್ಠಿಸುವ ತವಕದಲ್ಲಿವೆ.

ಇನ್ಮುಂದೆ ಬಳಸಿದ ಅಡುಗೆ ಎಣ್ಣೆಯಿಂದಲೇ ಬಯೋಡೀಸೆಲ್ ತಯಾರಿಸಲಿದೆ ಮ್ಯಾಕ್ ಡೊನಾಲ್ಡ್

ಹೌದು, ಡಿಸೇಲ್ ಮತ್ತು ಪೆಟ್ರೋಲ್‌ಗಳಿಗೆ ಪರ್ಯಾಯವಾಗಿ ಹೊಸ ಇಂಧನ ಮೂಲಗಳನ್ನು ಗುರುತಿಸಲು ಹಲವಾರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರಿಯ ಸಂಸ್ಥೆಗಳು ತಹರೇವಾರಿ ಸಂಶೋಧನೆ ನಡೆಸುತ್ತಿದ್ದು, ಈ ಮಧ್ಯೆ ಜನಪ್ರಿಯ ಆಹಾಯ ಉತ್ಪನ್ನ ತಯಾರಿಕಾ ಸಂಸ್ಥೆಯಾದ ಮ್ಯಾಕ್ ಡೊನಾಲ್ಡ್ ಸಹ ಬಯೋ ಡೀಸೆಲ್ ಉತ್ಪಾದನೆಗಾಗಿ ಹೊಸ ಮಾರ್ಗವನ್ನು ಕಂಡುಕೊಂಡಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ.

ಇನ್ಮುಂದೆ ಬಳಸಿದ ಅಡುಗೆ ಎಣ್ಣೆಯಿಂದಲೇ ಬಯೋಡೀಸೆಲ್ ತಯಾರಿಸಲಿದೆ ಮ್ಯಾಕ್ ಡೊನಾಲ್ಡ್

ಮ್ಯಾಕ್ ಡೊನಾಲ್ಡ್ ಸಂಸ್ಥೆಯು ದೇಶಿಯವಾಗಿ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಜನಪ್ರಿಯತೆ ಗಳಿಸಿರುವ ಆಹಾರ ಉತ್ಪನ್ನ ತಯಾರಿಕಾ ಸಂಸ್ಥೆಯಾಗಿದ್ದು, ಆಹಾರ ಉತ್ಪನ್ನಗಳನ್ನು ತಯಾರಿಸಲು ಉಪಯೋಗಿಸಲಾಗುವ ಅಡುಗೆ ಎಣ್ಣೆಯಿಂದಲೇ ಬಯೋ ಡೀಸೆಲ್ ಆಗಿ ಪರಿವರ್ತಿಸುವ ಬಗ್ಗೆ ಹೊಸ ಮಾರ್ಗ ಕಂಡುಕೊಂಡಿದೆ.

ಇನ್ಮುಂದೆ ಬಳಸಿದ ಅಡುಗೆ ಎಣ್ಣೆಯಿಂದಲೇ ಬಯೋಡೀಸೆಲ್ ತಯಾರಿಸಲಿದೆ ಮ್ಯಾಕ್ ಡೊನಾಲ್ಡ್

ಈ ವಿಚಾರ ಸ್ಪಲ್ಪ ಮಟ್ಟಿಗೆ ವಿಚಿತ್ರ ಅನ್ನಿಸಿದರೂ ವಾಸ್ತವವಾಗಿ ಮಾತನಾಡುವುದಾರರೇ ಮ್ಯಾಕ್ ಡೊನಾಲ್ಡ್ ಸಂಸ್ಥೆಯು ರೂಪಿಸಿರುವ ಹೊಸ ಯೋಜನೆಯು ಸಾಕಷ್ಟು ಜನಪ್ರಿಯತೆ ಪಡೆಯುವ ಎಲ್ಲಾ ಗುಣಲಕ್ಷಣಗಳನ್ನು ಹೊಂದಿದ್ದು, ಒಂದು ವೇಳೆ ಈ ಯೋಜನೆಯು ಚಾಲ್ತಿಗೆ ಬಂದಲ್ಲಿ ಡೀಸೆಲ್ ಬೆಲೆಯಲ್ಲಿ ಬಹುದೊಡ್ಡ ಬದಲಾವಣೆಯಾಗುವುರದಲ್ಲಿ ಯಾವುದೇ ಅನುಮಾನವಿಲ್ಲ.

ಇನ್ಮುಂದೆ ಬಳಸಿದ ಅಡುಗೆ ಎಣ್ಣೆಯಿಂದಲೇ ಬಯೋಡೀಸೆಲ್ ತಯಾರಿಸಲಿದೆ ಮ್ಯಾಕ್ ಡೊನಾಲ್ಡ್

ಭಾರತದ ಪ್ರಮುಖ ಮೆಟ್ರೋ ಸಿಟಿಗಳಲ್ಲಿ ಒಟ್ಟು 85 ಆಹಾರ ಮಳಿಗೆಗಳನ್ನು ಹೊಂದಿರುವ ಮ್ಯಾಕ್ ಡೊನಾಲ್ಡ್ ಇಂಡಿಯಾ ಸಂಸ್ಥೆಯು ಪ್ರತಿ ತಿಂಗಳು 50 ಸಾವಿರ ಲೀಟರ್‌ಗೂ ಹೆಚ್ಚು ಅಡುಗೆ ಎಣ್ಣೆ ಬಳಕೆ ಮಾಡುತ್ತಿದ್ದು, ಬಳಕೆ ಮಾಡಿದ ನಂತರ ಉಳಿಯುವ ಅಡುಗೆ ಎಣ್ಣೆಯು ಕಸತೊಟ್ಟಿ ಸೇರುತ್ತಿದೆ.

ಇನ್ಮುಂದೆ ಬಳಸಿದ ಅಡುಗೆ ಎಣ್ಣೆಯಿಂದಲೇ ಬಯೋಡೀಸೆಲ್ ತಯಾರಿಸಲಿದೆ ಮ್ಯಾಕ್ ಡೊನಾಲ್ಡ್

ಇದೇ ಕಾರಣಕ್ಕೆ ಬೃಹತ್ ಯೋಜನೆಯೊಂದನ್ನ ರೂಪಿಸಿರುವ ಮ್ಯಾಕ್ ಡೊನಾಲ್ಡ್ ಸಂಸ್ಥೆಯು ಅಡುಗೆಗೆ ಬಳಕೆ ಮಾಡಿ ಉಳಿಯುವ ಅಡುಗೆ ಎಣ್ಣೆಯನ್ನ ಪರ್ಯಾಯ ಇಂಧನವಾಗಿ ಬಳಕೆ ಮಾಡುವ ಬಗ್ಗೆ ಮಹತ್ವದ ಯೋಜನೆಯನ್ನ ಸಿದ್ದಪಡಿಸಿದೆ.

ಇನ್ಮುಂದೆ ಬಳಸಿದ ಅಡುಗೆ ಎಣ್ಣೆಯಿಂದಲೇ ಬಯೋಡೀಸೆಲ್ ತಯಾರಿಸಲಿದೆ ಮ್ಯಾಕ್ ಡೊನಾಲ್ಡ್

ದೀರ್ಘಕಾಲದ ಸಂಶೋಧನೆ ನಂತರವೇ ಈ ಯೋಜನೆ ಬಗ್ಗೆ ಮಾತನಾಡಿರುವ ಮ್ಯಾಕ್ ಡೊನಾಲ್ಡ್ ಇಂಡಿಯಾ ಸಂಸ್ಥೆಯು, ಬಳಸಿದ ಅಡುಗೆ ಎಣ್ಣೆಯನ್ನು ಸುಧಾರಿತ ತಂತ್ರಜ್ಞಾನದ ಮೂಲಕ ಫಿಲ್ಟರ್ ಮಾಡಿ ಬಯೋಡೀಸೆಲ್ ಆಗಿ ಪರಿವರ್ತಿಸುವ ಅವಕಾಶವಿದೆ ಎಂದಿದ್ದು, ಮ್ಯಾಕ್ ಡೊನಾಲ್ಡ್ ಯೋಜನೆ ಬಗ್ಗೆ ಬಯೋ ಡೀಸೆಲ್ ಅಸೋಸಿಯೇಷನ್ ಆಫ್ ಇಂಡಿಯಾ ಸಂಸ್ಥೆಯು ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇನ್ಮುಂದೆ ಬಳಸಿದ ಅಡುಗೆ ಎಣ್ಣೆಯಿಂದಲೇ ಬಯೋಡೀಸೆಲ್ ತಯಾರಿಸಲಿದೆ ಮ್ಯಾಕ್ ಡೊನಾಲ್ಡ್

ಮ್ಯಾಕ್ ಡೊನಾಲ್ಡ್ ಸಂಸ್ಥೆಯು ಮೊದಲ ಹಂತವಾಗಿ ಪ್ರತಿತಿಂಗಳು 35 ಸಾವಿರ ಲೀಟರ್ ಬಯೋ ಡಿಸೇಲ್ ಉತ್ಪಾದನೆ ಮಾಡುವ ಗುರಿಹೊಂದಿದ್ದು, ತನ್ನದೇ ಮಾಲಿಕ್ವ ಹೊಂದಿರುವ ಸರಕು ಸಾಗಾಣೆ ಮಾಡುವ ಟ್ರಕ್‌ಗಳಲ್ಲಿ ಇದನ್ನ ಬಳಕೆ ಮಾಡಲು ಉದ್ದೇಶಿಸಿದೆ.

ಇನ್ಮುಂದೆ ಬಳಸಿದ ಅಡುಗೆ ಎಣ್ಣೆಯಿಂದಲೇ ಬಯೋಡೀಸೆಲ್ ತಯಾರಿಸಲಿದೆ ಮ್ಯಾಕ್ ಡೊನಾಲ್ಡ್

ಇದರಿಂದ ಬಳಸಿದ ಅಡುಗೆ ಎಣ್ಣೆಯು ಮರುಬಳಕೆ ಮಾಡಿದಂತಾಗುವುದಲ್ಲದೇ ಸರಕು ವೆಚ್ಚಗಳನ್ನು ಸಹ ತಗ್ಗಿಸಬಹುದಾಗಿದೆ. ಇದೇ ಕಾರಣಕ್ಕೆ ಭವಿಷ್ಯ ಯೋಜನೆ ಬಗ್ಗೆ ದೃಡ ವಿಶ್ವಾಸ ವ್ಯಕ್ತಪಡಿಸಿರುವ ಮ್ಯಾಕ್ ಡೊನಾಲ್ಡ್ ಸಂಸ್ಥೆಯು ಮೊದಲು ತನ್ನದೇ ಆಹಾಯ ಮಳಿಗೆಗಳಲ್ಲಿನ ಬಳಸಿದ ಅಡುಗೆ ಎಣ್ಣೆಯನ್ನು ಬಯೋ ಡೀಸೆಲ್ ಆಗಿ ಪರಿವರ್ತನೆ ಮಾಡಲಿದೆ.

ಇನ್ಮುಂದೆ ಬಳಸಿದ ಅಡುಗೆ ಎಣ್ಣೆಯಿಂದಲೇ ಬಯೋಡೀಸೆಲ್ ತಯಾರಿಸಲಿದೆ ಮ್ಯಾಕ್ ಡೊನಾಲ್ಡ್

ತದನಂತರವಷ್ಟೇ ಇತರೆ ಆಹಾರ ಉತ್ಪನ್ನ ತಯಾರಿಕಾ ಸಂಸ್ಥೆಗಳಿಂದಲೂ ಬಳಸಿದ ಅಡುಗೆ ಎಣ್ಣೆಯನ್ನು ಖರೀದಿ ಮಾಡಿ ಬಯೋ ಡೀಸೆಲ್ ಆಗಿ ಪರಿವರ್ತನೆ ಮಾಡಿ ಮಾರಾಟ ಮಾಡುವ ಯೋಜನೆಯಿದ್ದು, ಮ್ಯಾಕ್ ಡೊನಾಲ್ಡ್ ಸಂಸ್ಥೆಯ ಹೊಸ ಯೋಜನೆಯೆಂತೆಯೇ ಸರ್ಕಾರಗಳ ಮಟ್ಟದಿಂದಲೂ ಬಯೋ ಡೀಸೆಲ್ ಕುರಿತಾಗಿ ಮತ್ತಷ್ಟು ಸಂಶೋಧನೆಗಳು ನಡೆಯುವ ಅವಶ್ಯಕತೆಯಿದೆ.

More from DriveSpark

Article Published On: Friday, July 27, 2018, 11:33 [IST]
English summary
McDonald's to recycle used cooking oil to power its trucks in India.
Read more on auto news auto facts
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+