ಮಾರುತಿ ಸುಜುಕಿ ಕಾರುಗಳ ಮೇಲೆ ಭಾರಿ ರಿಯಾಯಿತಿ..

ದೇಶಿಯ ವಾಹನ ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ ಇಂಡಿಯಾ, ಮಾರುಕಟ್ಟೆಯಲ್ಲಿ ತಮ್ಮ ಎದುರಾಳಿಗಳಿಗೆ ಟಾಂಗ್ ನೀಡಲು ಮತ್ತು ಮಾರಾಟದ ಸಂಖ್ಯೆಯನ್ನು ಹೆಚ್ಚಿಸಲು ತನ್ನ ಕಾರುಗಳ ಮೇಲೆ ಭಾರಿ ರಿಯಾಯಿತಿಯನ್ನು ಘೋಷಿಸಿದೆ.

By Rahul Ts

ದೇಶಿಯ ವಾಹನ ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ ಇಂಡಿಯಾ, ಮಾರುಕಟ್ಟೆಯಲ್ಲಿ ತಮ್ಮ ಎದುರಾಳಿಗಳಿಗೆ ಟಾಂಗ್ ನೀಡಲು ಮತ್ತು ಮಾರಾಟದ ಸಂಖ್ಯೆಯನ್ನು ಹೆಚ್ಚಿಸಲು ತನ್ನ ಕಾರುಗಳ ಮೇಲೆ ಭಾರಿ ರಿಯಾಯಿತಿಯನ್ನು ಘೋಷಿಸಿದೆ. ಈ ನಿಟ್ಟಿನಲ್ಲಿ ಸಂಸ್ಥೆಯು ಯಾವ ಕಾರುಗಳ ಮೇಲೆ ಎಷ್ಟು ರಿಯಾಯಿತಿ ನೀಡಲಿದೆ ಎಂಬುದರ ಬಗ್ಗೆ ಮಾಹಿತಿ ಇಂದಿನ ಲೇಖನದಲ್ಲಿ.

ಮಾರುತಿ ಸುಜುಕಿ ಕಾರುಗಳ ಮೇಲೆ ಭಾರಿ ರಿಯಾಯಿತಿ..

ಮಾರುತಿ ಆಲ್ಟೋ 800

ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ನಿಂದ ಕಡಿಮೆ ಬೆಲೆಗೆ ಮಾರಾಟವಾಗುತ್ತಿರುವ ಆಲ್ಟೋ 800 ಕಾರಿನ ಮೇಲೆ ರೂ. 30,000 ಸಾವಿರದ ನಗದು ರಿಯಾಯಿತಿಯೊಂದಿಗೆ 7 ವರ್ಷದ ಒಳಗಿನ ಆಲ್ಟೋ 800 ಕಾರುಗಳ ಮೇಲೆ ರೂ. 25,000 ಸಾವಿರದ ವಿನಿಮಯ ಬೋನಸ್ ಅನ್ನು ಕೂಡಾ ನೀಡುತ್ತಿದೆ. ಇದಲ್ಲದೆ 7 ವರ್ಷ ದಾಟಿದ ಕಾರುಗಳ ಮೇಲೆ ರೂ. 15,000 ಮೌಲ್ಯದ ವಿನಿಮಯ ಬೋನಸ್ ಅನ್ನು ಸಹ ನೀಡುತ್ತಿದೆ.

ಮಾರುತಿ ಸುಜುಕಿ ಕಾರುಗಳ ಮೇಲೆ ಭಾರಿ ರಿಯಾಯಿತಿ..

ಮಾರುತಿ ಆಲ್ಟೋ ಕೆ10

ಆಲ್ಟೊ ಕಾರಿಗಿಂತ ಆಲ್ಟೋ ಕೆ10 ಹೆಚ್ಚು ಸಾಮರ್ಥ್ಯವನ್ನು ಪಡೆದಿದ್ದು, ಈ ಕಾರು ಇದೀಗ ಎಎಮ್‍‍ಟಿ ಆಯ್ಕೆಯಲ್ಲಿಯೂ ಲಭ್ಯವಿದೆ. ಮ್ಯಾನುವಲ್ ಗೇರ್‍‍ಬಾಕ್ಸ್ ಆಧಾರಿತ ಕಾರುಗಳು ರೂ. 22,000 ಸಾವಿರದಷ್ಟು ನಗದು ರಿಯಾಯಿತಿಯಲ್ಲಿ ದೊರೆಯಲಿದ್ದು, ಇನ್ನು ಎಎಮ್‍‍‍ಟಿ ಆಧಾರಿತ ಕಾರುಗಳ ಮೇಲೆ ರೂ. 27,000 ಸಾವಿರದ ನಗದು ರಿಯಾಯಿತಿಯನ್ನು ನೀಡುತ್ತಿದೆ.

ಮಾರುತಿ ಸುಜುಕಿ ಕಾರುಗಳ ಮೇಲೆ ಭಾರಿ ರಿಯಾಯಿತಿ..

ಗ್ರಾಹಕರು ಮ್ಯಾನುವಲ್ ಗೇರ್‍‍ಬಾಕ್ಸ್ ಕಾರುಗಳ ಮೇಲೆ 30,000 ರೂಪಾಯಿ ವಿನಿಮಯ ಬೋನಸ್ ಮತ್ತು AMT ಮಾದರಿ ಕಾರುಗಳ ಮೇಲೆ ರೂ. 35,000 ಎಕ್ಸ್ಚೇಂಜ್ ಬೋನಸ್ ಹಾಗು ಏಳು ವರ್ಷಕ್ಕಿಂತಲೂ ಕಡಿಮೆಯಿರುವ ಕಾರುಗಳ ಮೇಲೆ ರೂ.10,000 ಸಾವಿರದ ವಿನಿಮಯ ಬೋನಸ್ ನೀಡುತ್ತಿದೆ.

ಮಾರುತಿ ಸುಜುಕಿ ಕಾರುಗಳ ಮೇಲೆ ಭಾರಿ ರಿಯಾಯಿತಿ..

ಮಾರುತಿ ವ್ಯಾಗನಾರ್

ಮಾರುತಿ ವ್ಯಾಗಾನಾರ್ ಎಲ್ಎಕ್ಸ್ಐ ಪೆಟ್ರೋಲ್ ವೇರಿಯಂಟ್ ಕಾರಿನ ಮೇಲೆ ರೂ. 30,000 ನವರೆಗು ನಗದು ರಿಯಾಯಿತಿ, ಎಎಮ್‍‍ಟಿ ಮತ್ತು ಸಿಎನ್‍ಜಿ ಮಾಡಲ್ ಕಾರುಗಳ ಮೇಲೆ ರೂ. 35,000 ಸಾವಿರದ ವರೆಗಿನ ನಗದು ರಿಯಾಯಿತಿಯನ್ನು ಪಡೆಯಬಹುದಾಗಿದೆ.

ಮಾರುತಿ ಸುಜುಕಿ ಕಾರುಗಳ ಮೇಲೆ ಭಾರಿ ರಿಯಾಯಿತಿ..

ಇದಲ್ಲದೆ ಮಾರುತಿ ವ್ಯಾಗನಾರ್ ಮ್ಯಾನುವಲ್ ಗೇರ್‍‍ಬಾಕ್ಸ್ ಕಾರುಗಳ ಮೇಲೆ ರೂ. 3000 ಸಾವಿರದ ವರೆಗಿನ ವಿನಿಮಯ ಬೋನಸ್ ಮತ್ತು ಎಎಮ್‍‍ಟಿ ವೇರಿಯಂಟ್ ಕಾರುಗಳ ಮೇಲೆ ರೂ. 35,000 ಸಾವಿರದ ವರೆಗಿನ ವಿನಿಮಯ ಬೋನಸ್ ಅನ್ನು ಪಡೆಯಬಹುದಾಗಿದೆ. ಇನ್ನು ಏಳು ವರ್ಷಕ್ಕಿಂತ ಹೆಚ್ಚಿನ ಕಾರುಗಳಿಗೆ ರೂ. 10,000 ಸಾವಿರದ ಒಳಗೆ ವಿನಿಮಯ ಬೋನಸ್ ಅನ್ನು ನೀಡುತ್ತಿದೆ.

ಮಾರುತಿ ಸುಜುಕಿ ಕಾರುಗಳ ಮೇಲೆ ಭಾರಿ ರಿಯಾಯಿತಿ..

ಮಾರುತಿ ಸೆಲೆರಿಯೊ

ಮಾರುತಿ ಸೆಲೆರಿಯೊ ಮ್ಯಾನುವಲ್ ಗೇರ್‍‍ಬಾಕ್ಸ್ ಪೆಟ್ರೋಲ್ ಮತ್ತು ಸಿಎನ್‍‍ಜಿ ವೇರಿಯಂಟ್ ಕಾರುಗಳ ಮೇಲೆ ರೂ. 30,000 ಸಾವಿರದಷ್ಟು ನಗದು ರಿಯಾಯಿತಿಯನ್ನು ಪಡೆಯಬಹುದಾಗಿದೆ.

ಮಾರುತಿ ಸುಜುಕಿ ಕಾರುಗಳ ಮೇಲೆ ಭಾರಿ ರಿಯಾಯಿತಿ..

ಇದಲ್ಲದೆ ಮ್ಯಾನುವಲ್ ಗೇರ್‍‍ಬಾಕ್ಸ್ ಮಾರುತಿ ಸೆಲೆರಿಯೊ ಕಾರುಗಳ ಮೇಲೆ ರೂ. 25,000 ಸಾವಿರದ ವರೆಗಿನ ವಿನಿಮಯ ಬೋನಸ್ ಹಾಗು ಎಎಮ್‍‍ಟಿ ಮಾಡಲ್ ಕಾರುಗಳ ಮೇಲೆ ರೂ. 30,000 ಸಾವಿರದ ವರೆಗಿನ ವಿನಿಮಯ ಬೋನಸ್ ಅನ್ನು ಪಡೆಯಬಹುದಾಗಿದೆ. ಇನ್ನು ಕಾರು 7 ವರ್ಷ ದಾಟಿದ್ದಲ್ಲಿ ರೂ. 10,000 ಸಾವಿರದ ವರೆಗಿನ ವಿನಿಮಯ ಬೋನಸ್ ಅನ್ನು ಪಡೆಯಬಹುದಾಗಿದೆ.

ಮಾರುತಿ ಸುಜುಕಿ ಕಾರುಗಳ ಮೇಲೆ ಭಾರಿ ರಿಯಾಯಿತಿ..

ಮಾರಿತಿ ಎರ್ಟಿಗಾ

ಪ್ರಸ್ಥುತ ತಲೆಮಾರಿನ ಮಾರುತಿ ಎರ್ಟಿಗಾ ಕಾರನ್ನು ಹೊಸ್ ತಲೆಮಾರಿನ ಎರ್ಟಿಗಾ ಕಾರು ಸ್ಥಳಾಂತಿಸರಿಲಿದ್ದು, ಸಂಸ್ಥೆತು ಇದೀಗ ಎಮ್‍‍ಪಿವಿ ಕಾರುಗಳ ಮೇಲೆ ರಿಯಾಯಿತಿಯನ್ನು ನೀಡುತ್ತಿದೆ. ಈ ಕಾರಿನ ಪೆಟ್ರೋಲ್ ವೇರಿಯಂಟ್‍‍ಗಳ ಮೇಲೆ ರೂ. 15.0000 ಸಾವಿರ ಮತ್ತು ಸಿಎನ್‍‍ಜಿ ವೇರಿಯಂಟ್ ಕಾರುಗಳ ಮೇಲೆ ರೂ. 10,000 ಸವಿರದ ನಗದು ರಿಯಾಯಿತಿಯನ್ನು ಪಡೆಯಬಹುದಾಗಿದೆ.

ಮಾರುತಿ ಸುಜುಕಿ ಕಾರುಗಳ ಮೇಲೆ ಭಾರಿ ರಿಯಾಯಿತಿ..

ಇನ್ನು ಈ ಕಾರಿನ ಡೀಸೆಲ್ ವೇರಿಯಂಟ್ ಕಾರುಗಳ ಮೇಲೆ ರೂ. 25,000 ಸಾವಿರದಷ್ಟು ನಗದು ರಿಯಾಯಿತಿಯನ್ನು ಪಡೆಯಬಹುದಾಗಿದ್ದು, ಡೀಸೆಲ್ ವೇರಿಯಂಟ್ ಕಾರುಗಳ ಮೇಲೆ ರೂ 35,000 ವಿನಿಮಯ ಬೋನಸ್ ಹಾಗು ಪೆಟ್ರೋಲ್ ವೇರಿಯಂಟ್ ಕಾರುಗಳ ಮೇಳೆ ರೂ. 30,000 ಸಾವಿರದ ವರೆಗಿನ ವಿನಿಮಯ ಬೋನಸ್ ಅನ್ನು ಪಡೆಯವಹುದಾಗಿದೆ. ಕಾರು 7 ವರ್ಷ ದಾಟಿದ್ದಲ್ಲಿ ರೂ. 10,000 ವರೆಗಿನ ವಿನಿಮಯ ಬೋನಸ್ ಅನ್ನು ಪಡೆಯಬಹುದಾಗಿದೆ.

ಮಾರುತಿ ಸುಜುಕಿ ಕಾರುಗಳ ಮೇಲೆ ಭಾರಿ ರಿಯಾಯಿತಿ..

ಮಾರುತಿ ಸಿಯಾಜ್

ಮಾರುಕಟ್ಟೆಯಲ್ಲಿ ಶೀಘ್ರವೆ ಸಿಯಾಜ್ ಕಾರಿನ ಫೇಸ್‍ಲಿಫ್ಟ್ ಕಾರುಗಳು ಎಂಟ್ರಿ ನೀಡಲಿದೆ. ಪ್ರಸ್ಥುತ ಮಾರಾಟಕ್ಕಿರುವ ಪೆಟ್ರೋಲ್ ವೇರಂಟ್ ಸಿಯಾಜ್ ಕಾರುಗಳ ಮೇಲೆ ರೂ. 40,000 ಸಾವಿರದಷ್ಟು ಹಾಗು ಡೀಸೆಲ್ ವೇರಿಯಂಟ್ ಸಿಯಾಜ್ ಕಾರುಗಳ ಮೇಲೆ ರೂ. 70,000 ಸಾವಿರದಷ್ಟು ನಗದು ರಿಯಾಯಿತಿಯನ್ನು ಪಡೆಯಬಹುದಾಗಿದ್ದು, ಇನ್ನು ಈ ಕಾರಿನ ಎಲ್ಲಾ ವೇರಿಯಂಟ್‍‍ಗಳ ಮೇಲೆ ರೂ. 50,000 ವರೆಗಿನ ವಿನಿಮಯ ಬೋನಸ್ ಅನ್ನು ಪಡೆಯಬಹುದಾಗಿದೆ.

ಮಾರುತಿ ಸುಜುಕಿ ಕಾರುಗಳ ಮೇಲೆ ಭಾರಿ ರಿಯಾಯಿತಿ..

ಮಾರುತಿ ಇಗ್ನಿಸ್

ಮಾರುತಿ ಸಂಸ್ಥೆಯು ಇತ್ತೀಚೆಗಿನ ದಿನದಲ್ಲಿ ತಮ್ಮ ಇಗ್ನಿಸ್ ಕಾರಿನ ಡೀಸೆಲ್ ವೇರಿಯಂಟ್ ಅನ್ನು ಸ್ಥಗಿತಗೊಳಿಸಿದ್ದು, ಪ್ರಸ್ಥುತ ಮಾರುಕಟ್ಟೆಯಲ್ಲಿ ಪೆಟ್ರೋಲ್ ವೇರಿಯಂಟ್ ಇಗ್ನಿಸ್ ಕಾರುಗಳು ಮಾರಾಟಗೊಳ್ಳುತ್ತಿದೆ.

ಮಾರುತಿ ಸುಜುಕಿ ಕಾರುಗಳ ಮೇಲೆ ಭಾರಿ ರಿಯಾಯಿತಿ..

ಮಾರುತಿ ಇಗ್ನಿಸ್ ಪೆಟ್ರೋಲ್ ವೇರಿಯಂಟ್ ಕಾರುಗಳ ಮೇಲೆ ರೂ. 30,000 ಸಾವಿರದಷ್ಟು ನಗದು ರಿಯಾಯಿತಿ ಮತ್ತು ಈ ಕಾರಿನ ಎಲ್ಲಾ ವೇರಿಯಂಟ್‍‍ಗಳ ಮೇಲೆ ರೂ. 25,000 ವರೆಗಿನ ವಿನಿಮಯ ಬೋನಸ್ ಅನ್ನು ಪಡೆಯಬಹುದಾಗಿದೆ.

ಮಾರುತಿ ಸುಜುಕಿ ಕಾರುಗಳ ಮೇಲೆ ಭಾರಿ ರಿಯಾಯಿತಿ..

ಮಾರುತಿ ಡಿಜೈರ್

ಮಾರುತಿ ಡಿಜೈರ್ ಕಾರಿನ ಪೆಟ್ರೋಲ್ ವೇರಿಯಂಟ್ ಕಾರುಗಳಿಗೆ ಯಾವುದೇ ರಿಯಾಯಿತಿ ದೊರೆಯುವುದಿಲ್ಲ. ಇನ್ನು ಡೀಸೆಲ್ ವೇರಿಯಂಟ್ ಡಿಜೈರ್ ಕಾರುಗಳ ಮೇಲೆ ರೂ. 15,000 ಸಾವಿರದ ವರೆಗಿನ ನಗದು ರಿಯಾಯಿತಿ ಮತ್ತು 7 ವರ್ಷಕ್ಕಿಂತ ಹೆಚ್ಚಿರುವ ಡಿಜೈರ್ ಕಾರುಗಳ ಮೇಲೆ ರೂ. 15,000 ಸಾವಿರದ ವಿನಿಮಯ ಬೋನಸ್ ಅನ್ನು ಪಡೆಯಬಹುದಾಗಿದೆ.

ಮಾರುತಿ ಸುಜುಕಿ ಕಾರುಗಳ ಮೇಲೆ ಭಾರಿ ರಿಯಾಯಿತಿ..

ಮಾರುತಿ ಸ್ವಿಫ್ಟ್

ಮಾರುತಿ ಸ್ವಿಫ್ಟ್ ಪೆಟ್ರೋಲ್ ವೇರಿಯಂಟ್ ಕಾರುಗಳ ಮೇಲೆ ಕೂಡಾ ರಿಯಾಯಿತಿ ದೆರೆಯುವುದಲ್ಲ. ಡೀಸೆಲ್ ವೇರಿಯಂಟ್ ಸ್ವಿಫ್ಟ್ ಕಾರುಗಳ ಮೇಲೆ ರೂ. 10,000 ಸಾವಿರದ ನಗದು ರಿಯಾಯಿತಿ ಮತ್ತು 7 ವರ್ಶಕ್ಕಿಂತ ಕಡಿಮೆ ಇರುವ ಕಾರುಗಳ ಮೇಲೆ ರೂ. 25,000 ಸಾವಿರದ ವಿನಿಮಯ ಬೋನಸ್ ಹಾಗು 7 ವರ್ಷಕ್ಕಿಂತ ಹೆಚ್ಚು ಇರುವ ಕಾರುಗಳ ಮೇಲೆ ರೂ. 10,000 ಸಾವಿರದ ವಿನಿಮಯ ಬೋನಸ್ ಅನ್ನು ಪಡೆಯಬಹುದಾಗಿದೆ.

ಮಾರುತಿ ಸುಜುಕಿ ಕಾರುಗಳ ಮೇಲೆ ಭಾರಿ ರಿಯಾಯಿತಿ..

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಈ ಮೇಲೆ ಹೇಳಿರುವ ರಿಯಾಯಿತಿ ಮತ್ತು ವಿನಿಮಯದ ಆಫರ್‍‍ಗಳಲ್ಲದೆ ಗ್ರಾಹಕರೂ ಚೌಕಾಸಿ ಮಾಡಿ ಇನ್ನು ಹೆಚ್ಚಿನ ರಿಯಾಯಿತಿಯನ್ನು ಪಡೆಯಬಹುದಾಗಿದ್ದು, ಡೀಲರ್‍‍ಗಳು ಕಡಿಮೆ ಹಾಗು ನಿಧಾನವಾಗಿ ಮಾರಾಟಗೊಳ್ಲುತ್ತಿರುವ ಕಾರುಗಳ ಮೇಲೆ ಖಚಿತವಾಗಿ ರಿಯಾಯಿತಿ ನೀಡಲಿದ್ದಾರೆ ಎಂದು ಊಹಿಸಲಾಗಿದೆ.

Source : Mycarhelpline

More from DriveSpark

Article Published On: Wednesday, July 4, 2018, 13:42 [IST]
English summary
MEGA discounts of up to Rs. 1.2 lakh on Maruti cars.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+