ಇ-ಕ್ಲಾಸ್ ಪವರ್‌ಫುಲ್ ಮರ್ಸಿಡಿಸ್ ಎಎಂಜಿ ಇ63 ಎಸ್ ಬಿಡುಗಡೆ

ಪವರ್‌ಫುಲ್ ಎಂಜಿನ್ ಪ್ರೇರಿತ ಎಎಂಜಿ ಇ63 ಎಸ್ ಕಾರುಗಳನ್ನು ಬಿಡುಗಡೆ ಮಾಡಲಾಗಿದೆ. ಹೊಸ ಕಾರುಗಳು ದೆಹಲಿ ಎಕ್ಸ್‌ಶೋರಂ ಪ್ರಕಾರ 1.50 ಕೋಟಿ ಬೆಲೆ ಹೊಂದಿದ್ದು, ಪರ್ಫಾಮೆನ್ಸ್ ಪ್ರಿಯರ ಹಾಟ್ ಫೆವರಿಟ್ ಎನ್ನಿಸಲಿದೆ.

By Praveen Sannamani

ಮರ್ಸಿಡಿಸ್ ಬೆಂಝ್ ಸಂಸ್ಥೆಯ ಎಎಂಜಿ ಸರಣಿಯಲ್ಲಿ ಮತ್ತೊಂದು ಹೊಸ ಕಾರು ಸೇರ್ಪಡೆಯಾಗಿದ್ದು, ಪವರ್‌ಫುಲ್ ಎಂಜಿನ್ ಪ್ರೇರಿತ ಎಎಂಜಿ ಇ63 ಎಸ್ ಕಾರುಗಳನ್ನು ಬಿಡುಗಡೆ ಮಾಡಲಾಗಿದೆ. ಹೊಸ ಕಾರುಗಳು ದೆಹಲಿ ಎಕ್ಸ್‌ಶೋರಂ ಪ್ರಕಾರ 1.50 ಕೋಟಿ ಬೆಲೆ ಹೊಂದಿದ್ದು, ಪರ್ಫಾಮೆನ್ಸ್ ಪ್ರಿಯರ ಹಾಟ್ ಫೆವರಿಟ್ ಎನ್ನಿಸಲಿದೆ.

ಇ-ಕ್ಲಾಸ್ ಪವರ್‌ಫುಲ್ ಮರ್ಸಿಡಿಸ್ ಎಎಂಜಿ ಇ63 ಎಸ್ ಬಿಡುಗಡೆ

ಮರ್ಸಿಡಿಸ್ ಬೆಂಝ್ ಸಂಸ್ಥೆಯು ಭಾರತದಲ್ಲಿ ಇದುವರೆಗೆ ಬಿಡುಗಡೆಗೊಳಿಸಿರುವ ಎಎಂಜಿ ಕಾರುಗಳ ಸರಣಿಯಲ್ಲೇ ಇದು ಅದ್ಬುತ ಪರ್ಫಾಮೆನ್ಸ್ ಮಾದರಿಯಾಗಿದ್ದು, ಇ-ಕ್ಲಾಸ್ ಕಾರುಗಳಲ್ಲೇ ಇದೊಂದು ಪವರ್‌ಫುಲ್ ಕಾರು ಆವೃತ್ತಿ ಎಂದು ಹೇಳಲಾಗಿದೆ. ಈ ಮೂಲಕ ಅಂತರಾಷ್ಟ್ರೀಯ ಖ್ಯಾತಿಯ ಬುದ್ದಾ ಇಂಟರ್‌ನ್ಯಾಷನಲ್ ಸರ್ಕಿಟ್‌ನಲ್ಲಿ ತನ್ನ ಶಕ್ತಿ ಪ್ರದರ್ಶನ ಮಾಡಿದ ಎಎಂಜಿ ಇ63 ಎಸ್ ಕಾರುಗಳು ಈ ಹಿಂದಿನ ಎಎಂಜಿ ಜಿಟಿ ಆರ್‌ಗಿಂತ ಉತ್ತಮ ಪರ್ಫಾಮೆನ್ಸ್ ಖಾತ್ರಿಪಡಿಸಿದೆ.

ಇ-ಕ್ಲಾಸ್ ಪವರ್‌ಫುಲ್ ಮರ್ಸಿಡಿಸ್ ಎಎಂಜಿ ಇ63 ಎಸ್ ಬಿಡುಗಡೆ

ಎಂಜಿನ್ ಸಾಮರ್ಥ್ಯ

4.0-ಲೀಟರ್ ಟರ್ಬೋ ವಿ8 ಪೆಟ್ರೋಲ್ ಎಂಜಿನ್ ಹೊಂದಿರುವ ಎಎಂಜಿ ಇ63 ಎಸ್ ಕಾರುಗಳು 9-ಸ್ಪೀಡ್ ಎಎಂಜಿ ಸ್ಪೀಡ್‌ಸಿಫ್ಟ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಗರಿಷ್ಠ ಮಟ್ಟದ 612-ಬಿಎಚ್‌ಪಿ ಮತ್ತು 850-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿಯನ್ನು ಹೊಂದಿದೆ.

ಇ-ಕ್ಲಾಸ್ ಪವರ್‌ಫುಲ್ ಮರ್ಸಿಡಿಸ್ ಎಎಂಜಿ ಇ63 ಎಸ್ ಬಿಡುಗಡೆ

ಜೊತೆಗೆ ಆಲ್ ವೀಲ್ಹ್ ಡ್ರೈವ್ ಸಿಸ್ಟಂ ಹೊಂದಿರುವ ಹೊಸ ಕಾರುಗಳು ಪರ್ಫಾಮೆನ್ಸ್ ಉದ್ದೇಶಕ್ಕಾಗಿ ಅಷ್ಟೇ ಅಲ್ಲದೇ ಆಪ್ ರೋಡ್‌ನಲ್ಲೂ ತನ್ನ ಚಾಲನಾ ಕೌಶಲ್ಯ ಪ್ರದರ್ಶಿಸುವ ಗುಣಹೊಂದಿದ್ದು, ಅಗತ್ಯಕ್ಕೆ ಅನುಸಾರವಾಗಿ ಹಿಂಬದಿಯ ಚಕ್ರಗಳಿಗೂ ಎಂಜಿನ್ ಪವರ್ ಸಾಗಿಸುವ ವ್ಯವಸ್ಥೆ ಪಡೆದುಕೊಂಡಿದೆ.

ಇ-ಕ್ಲಾಸ್ ಪವರ್‌ಫುಲ್ ಮರ್ಸಿಡಿಸ್ ಎಎಂಜಿ ಇ63 ಎಸ್ ಬಿಡುಗಡೆ

ಹೀಗಾಗಿಯೇ ಕೇವಲ 3.3 ಸೇಕೆಂಡುಗಳಲ್ಲಿ ಸೊನ್ನೆಯಿಂದ 100 ಕಿ.ಮೀ ವೇಗ ಪಡೆದುಕೊಳ್ಳಲಿರುವ ಎಎಂಜಿ ಇ63 ಎಸ್ ಕಾರುಗಳು ಗರಿಷ್ಠ ಮಟ್ಟದಲ್ಲಿ ಪ್ರತಿ ಗಂಟೆ 250 ಕಿ.ಮೀ ಟಾಪ್ ಸ್ಪೀಡ್ ಪಡೆದಿದ್ದು, ಆದ್ಯತೆ ಮೇರೆಗೆ ಕಾರಿನ ಗರಿಷ್ಠ ವೇಗವನ್ನು 250 ರಿಂದ 300 ಕಿ.ಮೀ ತನಕ ಹೆಚ್ಚಿಸಿಕೊಳ್ಳಬಹುದು.

ಇ-ಕ್ಲಾಸ್ ಪವರ್‌ಫುಲ್ ಮರ್ಸಿಡಿಸ್ ಎಎಂಜಿ ಇ63 ಎಸ್ ಬಿಡುಗಡೆ

ಕಾರಿನ ಒಳವಿನ್ಯಾಸ

ಐಷಾರಾಮಿ ಸೌಲಭ್ಯಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿರುವ ಎಎಂಜಿ ಇ63 ಎಸ್ ಕಾರುಗಳು ಎಎಂಜಿ ಪರ್ಫಾಮೆನ್ಸ್ ಸೀಟುಗಳನ್ನು ಹೊಂದಿದ್ದು, ಕಾರು ಚಾಲನೆಯ ಸಂದರ್ಭದಲ್ಲಿ ಸೀಟುಗಳನ್ನು ವಾತಾವರಣಕ್ಕೆ ಅನುಗುಣವಾಗಿ ಕೆಲವೇ ಸೇಕೆಂಡುಗಳಲ್ಲಿ ಬಿಸಿ ಅಥವಾ ತಂಪು ಮಾಡಿಕೊಳ್ಳಬಹುದು.

ಇ-ಕ್ಲಾಸ್ ಪವರ್‌ಫುಲ್ ಮರ್ಸಿಡಿಸ್ ಎಎಂಜಿ ಇ63 ಎಸ್ ಬಿಡುಗಡೆ

ಎಎಂಜಿ ಇ63 ಎಸ್ ಕಾರುಗಳಲ್ಲಿ ಇದಷ್ಟೇ ಅಲ್ಲದೇ ತ್ರಿ ಜೋನ್ ಕ್ಲೈಮೆಟ್ ಕಂಟ್ರೋಲರ್, ಬುರ್‌ಮಸ್ಟರ್ ಆಡಿಯೋ ಸಿಸ್ಟಂ, ನ್ಯೂಮರಸ್ ಡ್ರೈವರ್ ಅಸಿಸ್ಟ್ ಸಿಸ್ಟಂ ಮತ್ತು ಕಾರಿನ ಹೊರಮೈ ಹಾಗೂ ಒಳಮೈ ವಿನ್ಯಾಸದಲ್ಲಿ ಕಾರ್ಬನ್-ಫೈಬರ್ ಅಂಶಗಳನ್ನು ಸೇರಿಸಲಾಗಿದೆ.

ಇ-ಕ್ಲಾಸ್ ಪವರ್‌ಫುಲ್ ಮರ್ಸಿಡಿಸ್ ಎಎಂಜಿ ಇ63 ಎಸ್ ಬಿಡುಗಡೆ

ಇನ್ನು ಪರ್ಫಾಮೆನ್ಸ್ ಉದ್ದೇಶಕ್ಕಾಗಿ ಸಿದ್ದವಾಗಿರುವ ಎಎಂಜಿ ಇ63 ಎಸ್ ಕಾರುಗಳಲ್ಲಿ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಕಂಫರ್ಟ್, ಸ್ಪೋರ್ಟ್, ಸ್ಪೋರ್ಟ್ ಪ್ಲಸ್ ಮತ್ತು ರೇಸ್ ಎಂಬ ಡ್ರೈವಿಂಗ್ ಮೊಡ್ ಒದಗಿಸಲಾಗಿದೆ.

ಇ-ಕ್ಲಾಸ್ ಪವರ್‌ಫುಲ್ ಮರ್ಸಿಡಿಸ್ ಎಎಂಜಿ ಇ63 ಎಸ್ ಬಿಡುಗಡೆ

ಜೊತೆಗೆ ಹೊಸ ಕಾರಿನಲ್ಲಿ ಅಡ್ವಾನ್ಸ್ ಟೆಕ್ನಾಲಜಿ ಬಳಕೆ ಮಾಡಿರುವ ಮರ್ಸಿಡಿಸ್ ಸಂಸ್ಥೆಯು 12.5-ಇಂಚಿನ ಡಿಸ್‌ಫೈ, ಇನ್‌ಸ್ಟ್ರುಮೆಂಟೆಲ್ ಕನ್ಸೊಲ್, 9 ಏರ್‌ಬ್ಯಾಗ್ ಸೌಲಭ್ಯ ಜೋಡಿಸಿದ್ದು, ಈ ಹಿಂದಿನ ಸೂಪರ್ ಕಾರು ಮಾದರಿಯಾದ ಎಎಂಜಿ ಜಿಟಿ ಆರ್ ಕಾರುಗಳಿಂತಲೂ ಇದು ಉತ್ತಮ ಮಾದರಿ ಎನ್ನಲಾಗಿದೆ.

ಇ-ಕ್ಲಾಸ್ ಪವರ್‌ಫುಲ್ ಮರ್ಸಿಡಿಸ್ ಎಎಂಜಿ ಇ63 ಎಸ್ ಬಿಡುಗಡೆ

ಇದರಿಂದಾಗಿ ಸದ್ಯ ಮಾರಕಟ್ಟೆಯಲ್ಲಿರುವ ಬಿಎಂಡಬ್ಲ್ಯು ಎಂ5, ಮೆಸಾರಟಿ ಕ್ವಾಂಟ್ರೊರ್ಪೋಟ್ ಜಿಎಸ್‌ಟಿ, ಪೋರ್ಷೇ ಪನಾಮೆರಾ ಟರ್ಬೋ ಮತ್ತು ಆಡಿ ಆರ್‌ಎಸ್6 ಸೂಪರ್ ಕಾರು ಮಾದರಿಗಳ ಮಾರಾಟಕ್ಕೆ ಪೈಪೋಟಿ ನೀಡಲಿದೆ.

ಇ-ಕ್ಲಾಸ್ ಪವರ್‌ಫುಲ್ ಮರ್ಸಿಡಿಸ್ ಎಎಂಜಿ ಇ63 ಎಸ್ ಬಿಡುಗಡೆ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಮರ್ಸಿಡಿಸ್ ಬೆಂಝ್ ನಿರ್ಮಾಣದ ಹಲವಾರು ಎಎಂಜಿ ಕಾರು ಆವೃತ್ತಿಗಳು ಈಗಾಗಲೇ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿದ್ದು, ಇದೀಗ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಎಎಂಜಿ ಇ63 ಎಸ್ ಸೂಪರ್ ಕಾರು ಆವೃತ್ತಿಯನ್ನು ಪರಿಚಯಿಸುತ್ತಿರುವುದು ಪರ್ಫಾಮೆನ್ಸ್ ಪ್ರಿಯರ ಆಕರ್ಷಣೆಗೆ ಕಾರಣವಾಗಿದೆ.

Most Read Articles

Kannada
English summary
2018 Mercedes-AMG E63 S Launched In India At Rs 1.50 Crore.
Story first published: Friday, May 4, 2018, 15:52 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X