ಮರ್ಸಿಡಿಸ್ ಎಎಂಜಿ ಜಿಎಲ್ಇ 43 4ಮ್ಯಾಟಿಕ್ ಕೂಪೆ ಮತ್ತು ಎಸ್ಎಲ್‌ಸಿ 43 ಲಿಮಿಟೆಡ್ ಎಡಿಷನ್ ಬಿಡುಗಡೆ

ಮರ್ಸಿಡಿಸ್ ಬೆಂಝ್ ಸಂಸ್ಥೆಯು ಎಎಂಜಿ ಸರಣಿಯ ಜಿಎಲ್ಇ 43 4ಮ್ಯಾಟಿಕ್ ಕೂಪೆ ಮತ್ತು ಎಸ್ಎಲ್‌ಸಿ 43 ಲಿಮಿಟೆಡ್ ಎಡಿಷನ್ ಕಾರುಗಳನ್ನು ಬಿಡುಗಡೆ ಮಾಡಿದೆ.

By Praveen Sannamani

ಮರ್ಸಿಡಿಸ್ ಬೆಂಝ್ ಸಂಸ್ಥೆಯು ಎಎಂಜಿ ಸರಣಿಯ ಜಿಎಲ್ಇ 43 4ಮ್ಯಾಟಿಕ್ ಕೂಪೆ ಮತ್ತು ಎಸ್ಎಲ್‌ಸಿ 43 ಲಿಮಿಟೆಡ್ ಎಡಿಷನ್ ಕಾರುಗಳನ್ನು ಬಿಡುಗಡೆ ಮಾಡಿದ್ದು, ಜಿಎಲ್ಇ 43 4ಮ್ಯಾಟಿಕ್ ಕೂಪೆ ಆರೇಂಜ್ ಆರ್ಟ್ ವಿನ್ಯಾಸ ಮತ್ತು ಎಸ್ಎಲ್‌ಸಿ 43 ಲಿಮಿಟೆಡ್ ಎಡಿಷನ್‌ಗಳಲ್ಲಿ ರೆಡ್ ಆರ್ಟ್ ವಿನ್ಯಾಸ ಪಡೆದಿವೆ.

ಮರ್ಸಿಡಿಸ್ ಎಎಂಜಿ ಜಿಎಲ್ಇ 43 4ಮ್ಯಾಟಿಕ್ ಕೂಪೆ ಮತ್ತು ಎಸ್ಎಲ್‌ಸಿ 43 ಲಿಮಿಟೆಡ್ ಎಡಿಷನ್ ಬಿಡುಗಡೆ

ದೆಹಲಿ ಎಕ್ಸ್‌ಶೋರಂ ಪ್ರಕಾರ ಜಿಎಲ್ಇ 43 4ಮ್ಯಾಟಿಕ್ ಕೂಪೆ ಕಾರುಗಳು ರೂ. 1.02 ಕೋಟಿ ಮತ್ತು ಎಸ್ಎಲ್‌ಸಿ 43 ಲಿಮಿಟೆಡ್ ಎಡಿಷನ್ ಕಾರುಗಳು ರೂ. 87.48 ಲಕ್ಷ ಬೆಲೆ ಪಡೆದುಕೊಂಡಿದ್ದು, ಹೊಸ ಕಾರುಗಳು ಲಿಮಿಟೆಡ್ ಎಡಿಷನ್ ಹಿನ್ನೆಲೆ ಕೇವಲ 25 ಕಾರುಗಳು ಮಾತ್ರ ಮಾರಾಟಕ್ಕೆ ಲಭ್ಯವಿರಲಿವೆ ಎಂದು ಮರ್ಸಿಡಿಸ್ ಬೆಂಝ್ ಇಂಡಿಯಾ ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.

ಮರ್ಸಿಡಿಸ್ ಎಎಂಜಿ ಜಿಎಲ್ಇ 43 4ಮ್ಯಾಟಿಕ್ ಕೂಪೆ ಮತ್ತು ಎಸ್ಎಲ್‌ಸಿ 43 ಲಿಮಿಟೆಡ್ ಎಡಿಷನ್ ಬಿಡುಗಡೆ

ವಿನೂತನ ವೈಶಿಷ್ಟ್ಯತೆಗಳೊಂದಿಗೆ ಅಭಿವೃದ್ಧಿ ಹೊಂದಿರುವ ಜಿಎಲ್ಇ 43 4ಮ್ಯಾಟಿಕ್ ಕೂಪೆ ಕಾರುಗಳು ಫ್ರಂಟ್ ಬಂಪರ್ ಮತ್ತು ರಿಯರ್ ಬಂಪರ್‌ಗಳ ಮೇಲಿನ ಆರೇಂಜ್ ಆರ್ಟ್ ವಿನ್ಯಾಸದೊಂದಿಗೆ ಮಿಂಚುತ್ತಿದ್ದು, 21 ಇಂಚಿನ ಅಲಾಯ್ ವೀಲ್ಹ್‌ಗಳು, ಎಲ್ಇಡಿ ಹೆಡ್‌ಲೈಟ್ಸ್ ಮತ್ತು ಬ್ಲ್ಯಾಕ್ ಎಲ್ಇಡಿ ರಿಂಗ್ಸ್ ಪಡೆದುಕೊಂಡಿರುವುದು ಕಾರಿಗೆ ಸ್ಪೋರ್ಟಿ ಲುಕ್ ನೀಡಿದೆ.

ಮರ್ಸಿಡಿಸ್ ಎಎಂಜಿ ಜಿಎಲ್ಇ 43 4ಮ್ಯಾಟಿಕ್ ಕೂಪೆ ಮತ್ತು ಎಸ್ಎಲ್‌ಸಿ 43 ಲಿಮಿಟೆಡ್ ಎಡಿಷನ್ ಬಿಡುಗಡೆ

ಕಾರಿನ ಇಂಟಿರಿಯರ್ ಸಹ ಸುಧಾರಿತ ತಂತ್ರಜ್ಞಾನ ಪ್ರೇರಣೆ ಹೊಂದಿದ್ದು, ಆರೇಂಜ್ ಆರ್ಟ್ ವಿನ್ಯಾಸಗಳೊಂದಿಗೆ ಬ್ಲ್ಯಾಕ್ ನಪ್ಪಾ ಲೆದರ್ ಸೀಟುಗಳು, ಫ್ಲೋರ್ ಮ್ಯಾಟ್ ಮತ್ತು ಡೋರ್ ಪ್ಯಾನೆಲ್‌ಗಳನ್ನು ಪಡೆದಿರುಕೊಂಡಿರುವುದು ಮತ್ತೊಂದು ವಿಶೇಷ.

ಮರ್ಸಿಡಿಸ್ ಎಎಂಜಿ ಜಿಎಲ್ಇ 43 4ಮ್ಯಾಟಿಕ್ ಕೂಪೆ ಮತ್ತು ಎಸ್ಎಲ್‌ಸಿ 43 ಲಿಮಿಟೆಡ್ ಎಡಿಷನ್ ಬಿಡುಗಡೆ

ಎಸ್ಎಲ್‌ಸಿ 43 ಲಿಮಿಟೆಡ್ ಎಡಿಷನ್ ಕಾರಿನ ಫ್ರಂಟ್ ಮತ್ತು ರಿಯರ್ ಬಂಪರ್‌ಗಳ ಮೇಲೂ ಸಹ ರೆಡ್ ಆರ್ಟ್ ವಿನ್ಯಾಸಗಳನ್ನು ಪ್ರಯೋಗಿಸಲಾಗಿದ್ದು, 18-ಇಂಚಿನ ಅಲಾಯ್ ವೀಲ್ಹ್‌ಗಳು, ಬ್ರೇಕ್ ಕ್ಯಾಲಿರ್ಪ್ಸ್‌ಗಳಲ್ಲೂ ರೆಡ್ ಆರ್ಟ್ ಬಳಕೆ ಮಾಡಲಾಗಿದೆ.

ಮರ್ಸಿಡಿಸ್ ಎಎಂಜಿ ಜಿಎಲ್ಇ 43 4ಮ್ಯಾಟಿಕ್ ಕೂಪೆ ಮತ್ತು ಎಸ್ಎಲ್‌ಸಿ 43 ಲಿಮಿಟೆಡ್ ಎಡಿಷನ್ ಬಿಡುಗಡೆ

ಒಟ್ಟಿನಲ್ಲಿ ರೆಡ್ ಆರ್ಟ್ ಮತ್ತು ಆರೇಂಜ್ ಆರ್ಟ್ ವಿನ್ಯಾವು ಗ್ರಾಹಕರನ್ನು ಸೆಳೆಯುವಲ್ಲಿ ಪ್ರಮುಖ ಪಾತ್ರವನ್ನು ವಹಿಸಲಿದ್ದು, ಕಾರಿನ ತಾಂತ್ರಿಕ ಅಂಶಗಳು ಸಹ ಸಾಮಾನ್ಯ ಕಾರು ಮಾದರಿಗಳಿಂತೂ ವಿಭಿನ್ನವಾಗಿರುವುದು ಕಾರಿನ ಮೌಲ್ಯವನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿವೆ ಎನ್ನಬಹುದು.

ಮರ್ಸಿಡಿಸ್ ಎಎಂಜಿ ಜಿಎಲ್ಇ 43 4ಮ್ಯಾಟಿಕ್ ಕೂಪೆ ಮತ್ತು ಎಸ್ಎಲ್‌ಸಿ 43 ಲಿಮಿಟೆಡ್ ಎಡಿಷನ್ ಬಿಡುಗಡೆ

ಎಂಜಿನ್ ಸಾಮರ್ಥ್ಯ

ಎಎಂಜಿ ಜಿಎಲ್ಇ 43 4ಮ್ಯಾಟಿಕ್ ಕೂಪೆ ಮತ್ತು ಎಸ್ಎಲ್‌ಸಿ 43 ಲಿಮಿಟೆಡ್ ಎಡಿಷನ್‌ಗಳು 9-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ 3-ಲೀಟರ್ ಟರ್ಬೋ ಚಾರ್ಜ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 361-ಬಿಎಚ್‌ಪಿ ಮತ್ತು 520-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲವು.

ಮರ್ಸಿಡಿಸ್ ಎಎಂಜಿ ಜಿಎಲ್ಇ 43 4ಮ್ಯಾಟಿಕ್ ಕೂಪೆ ಮತ್ತು ಎಸ್ಎಲ್‌ಸಿ 43 ಲಿಮಿಟೆಡ್ ಎಡಿಷನ್ ಬಿಡುಗಡೆ

ಇದರಲ್ಲಿ ಎಸ್ಎಲ್‌ಸಿ 43 ಲಿಮಿಟೆಡ್ ಎಡಿಷನ್ ಮಾದರಿಯು ರಿಯರ್ ವೀಲ್ಹ್ ಡ್ರೈವ್ ಟೆಕ್ನಾಲಜಿಯನ್ನು ಹೆಚ್ಚುವರಿಯಾಗಿ ಪಡೆದುಕೊಂಡಿದ್ದು, ಐಷಾರಾಮಿ ಕಾರು ಪ್ರಯಾಣಕ್ಕೆ ಮತ್ತಷ್ಟು ಮೆರಗು ತಂದಿವೆ ಎನ್ನಲಾಗಿದೆ.

ಮರ್ಸಿಡಿಸ್ ಎಎಂಜಿ ಜಿಎಲ್ಇ 43 4ಮ್ಯಾಟಿಕ್ ಕೂಪೆ ಮತ್ತು ಎಸ್ಎಲ್‌ಸಿ 43 ಲಿಮಿಟೆಡ್ ಎಡಿಷನ್ ಬಿಡುಗಡೆ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಎಎಂಜಿ ಜಿಎಲ್ಇ 43 4ಮ್ಯಾಟಿಕ್ ಕೂಪೆ ಮತ್ತು ಎಸ್ಎಲ್‌ಸಿ 43 ಲಿಮಿಟೆಡ್ ಎಡಿಷನ್‌ಗಳು ಸ್ಪೋರ್ಟಿ ಲುಕ್‌ನೊಂದಿಗೆ ಐಷಾರಾಮಿ ಕಾರು ಪ್ರಿಯರನ್ನು ಸೆಳೆಯುವ ತವಕದಲ್ಲಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆಗೆ ತಕ್ಕಂತೆ ಹೊಸ ಸೌಲಭ್ಯಗಳನ್ನು ನೀಡಿರುವುದು ಪ್ರಮುಖ ವಿಚಾರ ಎನ್ನಿಸಲಿದೆ. ಇದಲ್ಲದೇ ಮರ್ಸಿಡಿಸ್ ಸಂಸ್ಥೆಯು ಎಎಂಜಿ ಸರಣಿಯಲ್ಲಿ ಇ 63 4ಮ್ಯಾಟಿಕ್ ನಂತರ ಬಿಡುಗಡೆ ಮಾಡಿದ ಎರಡನೇ ಕಾರು ಆವೃತ್ತಿ ಇದಾಗಿದೆ.

More from DriveSpark

Article Published On: Tuesday, May 22, 2018, 14:22 [IST]
English summary
Mercedes-AMG Launches GLE 43 4MATIC Coupe And SLC 43 Limited Edition Models.
Read more on mercedes benz amg
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+