ಬಹುನೀರಿಕ್ಷಿತ ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್ ಫೇಸ್‌ಲಿಫ್ಟ್ ಬಿಡುಗಡೆ

ದೇಶದ ಜನಪ್ರಿಯ ಐಷಾರಾಮಿ ಕಾರು ಉತ್ಪಾದನಾ ಸಂಸ್ಥೆಯಾದ ಮರ್ಸಿಡಿಸ್ ಬೆಂಝ್ ತನ್ನ ಬಹುನೀರಿಕ್ಷಿತ ಸಿ-ಕ್ಲಾಸ್ ಫೇಸ್‌ಲಿಫ್ಟ್ ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಈ ಹಿಂದಿನ ಸಿ-ಕ್ಲಾಸ್ ಆವೃತ್ತಿಗಿಂತಲೂ ಹೊಸ ಕಾರುಗಳಲ್ಲಿ ಪ್ರೀಮಿಯಂ ವೈಶಿಷ್ಟ್ಯತೆಗಳನ್ನು ಹೆಚ್ಚಿಸಿರುವುದೆೇ ಪ್ರಮುಖ ಬದಲಾವಣೆಯಾಗಿದೆ.

ಬಹುನೀರಿಕ್ಷಿತ ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್ ಫೇಸ್‌ಲಿಫ್ಟ್ ಬಿಡುಗಡೆ

ಮರ್ಸಿಡಿಸ್ ಬೆಂಝ್ ಸಂಸ್ಥೆಯು ಸಿ-ಕ್ಲಾಸ್ ಫೇಸ್‌ಲಿಫ್ಟ್ ಕಾರುಗಳನ್ನು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಮೂರು ವೆರಿಯೆಂಟ್‌ಗಳಲ್ಲಿ ಪರಿಚಯಿಸಲಾಗಿದ್ದು, ಸಿ220ಡಿ ಪ್ರೈಮ್, ಸಿ220ಡಿ ಪ್ರೊಗ್ರೆಸಿವ್ ಮತ್ತು ಸಿ300ಡಿ ಎಎಂಜಿ ಎನ್ನುವ ಮೂರು ವೆರಿಯೆಂಟ್‌ಗಳೊಂದಿಗೆ ವಿವಿಧ ಬೆಲೆ ಹೊಂದಿವೆ.

ಬಹುನೀರಿಕ್ಷಿತ ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್ ಫೇಸ್‌ಲಿಫ್ಟ್ ಬಿಡುಗಡೆ

ಸಿ-ಕ್ಲಾಸ್ ಫೇಸ್‌ಲಿಫ್ಟ್ ಕಾರುಗಳ ಆರಂಭಿಕ ವೆರಿಯೆಂಟ್‌ಗಳು ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ.40 ಲಕ್ಷ, ಎರಡನೇ ಮಾದರಿಯ ವೆರಿಯೆಂಟ್‌ಗಳು ರೂ.44.25 ಲಕ್ಷ ಮತ್ತು ಟಾಪ್ ಎಂಡ್ ವೆರಿಯೆಂಟ್‌ಗಳು ರೂ. 48.50 ಲಕ್ಷ ಬೆಲೆ ಪಡೆದುಕೊಂಡಿವೆ.

ಬಹುನೀರಿಕ್ಷಿತ ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್ ಫೇಸ್‌ಲಿಫ್ಟ್ ಬಿಡುಗಡೆ

ಮೇಲೆ ಹೇಳಿದ ಹಾಗೆ, ಸಿ-ಕ್ಲಾಸ್ ಫೇಸ್‌ಲಿಫ್ಟ್ ಕಾರುಗಳು ಹಳೆಯ ಆವೃತ್ತಿಗಿಂತಲೂ ಹೆಚ್ಚಿನ ಮಟ್ಟದ ಪ್ರೀಮಿಯಂ ಸೌಲಭ್ಯಗಳನ್ನು ಹೊಂದಿದ್ದು, ಹೊಸ ಕಾರುಗಳಲ್ಲಿ ನ್ಯೂ ಡೈಮಂಡ್ ಸ್ಟಂಡ್ಡ್ ಫ್ರಂಟ್ ಗ್ರೀಲ್ ಸೇರಿದಂತೆ ಪ್ರಮುಖ ಬದಲಾವಣೆ ಮಾಡಲಾಗಿದೆ.

ಬಹುನೀರಿಕ್ಷಿತ ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್ ಫೇಸ್‌ಲಿಫ್ಟ್ ಬಿಡುಗಡೆ

ಇದರ ಹೊರತಾಗಿ ಹಳೆಯ ಕಾರುಗಳ ಮಾದರಿಗಳಿದ್ದ ಎಂಜಿನ್ ಸಾಮರ್ಥ್ಯವನ್ನೇ ಹೊಸ ಕಾರುಗಳಲ್ಲೂ ಮುಂದುವರಿಸಲಾಗಿದ್ದು, ಹೊಸ ಎಂಜಿನ್‌ಗಳನ್ನು ಬಿಎಸ್-6 ವೈಶಿಷ್ಟ್ಯತೆಗಳೊಂದಿಗೆ ನವೀಕರಣ ಮಾಡಿರುವುದು ಮಾಲಿನ್ಯ ತಡೆಗೆ ಮಹತ್ವದ ನಿರ್ಧಾರ ಎನ್ನಬಹುದು.

ಬಹುನೀರಿಕ್ಷಿತ ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್ ಫೇಸ್‌ಲಿಫ್ಟ್ ಬಿಡುಗಡೆ

ಎಂಜಿನ್ ಸಾಮರ್ಥ್ಯ

ಬಿಎಸ್-6 ಮಾದರಿಯ 2.0-ಲೀಟರ್(2000ಸಿಸಿ) ಫೌರ್ ಸಿಲಿಂಡರ್, ಇನ್ ಟರ್ಬೋಚಾರ್ಜ್ಡ್ ಡಿಸೇಲ್ ಎಂಜಿನ್ ಹೊಂದಿರುವ ಸಿ-ಕ್ಲಾಸ್ ಫೇಸ್‌ಲಿಫ್ಟ್ ಕಾರುಗಳಲ್ಲಿ 9ಜಿ-ಟ್ರೋನಿಕ್ ಟ್ರಾನ್ಸ್‌ಮಿಷನ್ ಜೋಡಣೆಯಿದ್ದು, ಇವು ಸಿ ಸ್ಮೆಗ್ಮೆಂಟ್‌ ಕಾರು ಮಾದರಿಯಲ್ಲೇ ಹೆಚ್ಚು ಐಷಾರಾಮಿ ಅನುಭವ ನೀಡುತ್ತವೆ.

ಬಹುನೀರಿಕ್ಷಿತ ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್ ಫೇಸ್‌ಲಿಫ್ಟ್ ಬಿಡುಗಡೆ

ಇದಲ್ಲದೆ ವೆರಿಯೆಂಟ್‌ಗಳಿಗೆ ಅನುಗುಣವಾಗಿ ಪವರ್ ಉತ್ಪಾದನಾ ಶಕ್ತಿ ಸಹ ಬದಲಾವಣೆಗೊಳ್ಳಲಿದ್ದು, ಸಿ220ಡಿ ಪ್ರೈಮ್, ಸಿ220ಡಿ ಪ್ರೊಗ್ರೆಸಿವ್ ಕಾರುಗಳು 194-ಬಿಎಚ್‌ಪಿ ಮತ್ತು 400-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದಲ್ಲಿ ಟಾಪ್ ವೆರಿಯೆಂಟ್ ಸಿ300ಡಿ ಎಎಂಜಿ ಕಾರುಗಳು 254-ಬಿಎಚ್‌ಪಿ ಮತ್ತು 500-ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿವೆ.

ಬಹುನೀರಿಕ್ಷಿತ ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್ ಫೇಸ್‌ಲಿಫ್ಟ್ ಬಿಡುಗಡೆ

ಈ ಮೂಲಕ ಐಷಾರಾಮಿ ಸೆಡಾನ್ ಕಾರುಗಳಲ್ಲಿ ವಿಶೇಷ ಎನ್ನಿಸಲಿರುವ ಸಿ-ಕ್ಲಾಸ್ ಕಾರುಗಳಲ್ಲಿ ಹೊಸ ಮಾದರಿಯ ಹೆಡ್‌ಲ್ಯಾಂಡ್, ನವೀಕೃತ ಬಂಪರ್ ಡಿಸೈನ್, 17-ಇಂಚಿನ ಅಲಾಯ್ ಚಕ್ರಗಳು, ನವೀಕೃತ ಹಿಂಭಾಗದ ಬಂಪರ್, ಹೊಸ ವಿನ್ಯಾಸದ ಎಲ್ಇಡಿ ಟೈಲ್ ಲ್ಯಾಂಪ್, ಮಲ್ಟಿಬೀಮ್ ಎಲ್ಇಡಿ ಹೆಡ್‌ಲ್ಯಾಂಪ್ಸ್ 12.3-ಇಂಚಿನ ಕಲರ್ ಇಸ್‌ಸ್ಟ್ರುಮೆಂಟ್ ಕ್ಲಸ್ಟರ್ ಸೌಲಭ್ಯವಿವೆ.

ಬಹುನೀರಿಕ್ಷಿತ ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್ ಫೇಸ್‌ಲಿಫ್ಟ್ ಬಿಡುಗಡೆ

ಹಾಗೆಯೇ ಹೊಸ ಕಾರುಗಳಲ್ಲಿ ಸುರಕ್ಷತೆಗಾಗಿ ಡ್ಯುಯಲ್ ಜೋನ್ ಕ್ಲೈಮೆಟ್ ಕಂಟ್ರೋಲ್, ಆಕ್ಟಿವ್ ಪಾರ್ಕ್ ಅಸಿಸ್ಟ್, ಪನೊರಮಿಕ್ ಸನ್‌ರೂಫ್, ವೈರ್‌ಲೆಸ್ ಫೋನ್‌ಚಾರ್ಜಿಂಗ್, ಆ್ಯಪಲ್ ಕಾರ್ ಪ್ಲೇ, ಅಂಡ್ರಾಯ್ಡ್ ಆಟೋ, 7 ಏರ್‌ಬ್ಯಾಗ್‌ಗಳು, ಅಟೆನ್ಷನ್ ಅಸಿಸ್ಟ್ ಮತ್ತು ಅಡಾಪ್ಟಿವ್ ಬ್ರೇಕಿಂಗ್ ಸಿಸ್ಟಂ ಇರಲಿವೆ.

ಬಹುನೀರಿಕ್ಷಿತ ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್ ಫೇಸ್‌ಲಿಫ್ಟ್ ಬಿಡುಗಡೆ

ಈ ಬಗ್ಗೆ ಮಾತನಾಡಿರುವ ಮರ್ಸಿಡಿಸ್ ಬೆಂಝ್ ಇಂಡಿಯಾ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಮಿಚೆಲ್ ಜಾಪ್ ಅವರು, ಸಿ-ಕ್ಲಾಸ್ ಉತ್ಪನ್ನಗಳು ಭಾರತದಲ್ಲಿ ಬಹುದೊಡ್ಡ ಬದಲಾವಣೆ ಕಾರಣವಾಗಿದ್ದು, ಸಿ-ಕ್ಲಾಸ್ ಸರಣಿಗಳಲ್ಲಿ ಇದೀಗ ಮತ್ತಷ್ಟು ಬದಲಾವಣೆ ತರುತ್ತಿರುವುದಕ್ಕೆ ನಮಗೆ ಹೆಮ್ಮೆಯಾಗುತ್ತಿದೆ ಎಂದಿದ್ದಾರೆ.

ಬಹುನೀರಿಕ್ಷಿತ ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್ ಫೇಸ್‌ಲಿಫ್ಟ್ ಬಿಡುಗಡೆ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಮರ್ಸಿಡಿಸ್ ಸಂಸ್ಥೆಯು ತನ್ನ ಹೊಸ ಉತ್ಪನ್ನಗಳನ್ನು ಭಾರತದಲ್ಲಿ ಬಿಎಸ್-6 ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆ ಮಾಡುತ್ತಿದ್ದು, ಇದು ದೇಶದ ಮೊದಲ ಐಷಾರಾಮಿ ಕಾರು ಉತ್ಪಾದನಾ ಸಂಸ್ಥೆ ತೆಗೆದುಕೊಂಡ ಮಹತ್ವದ ನಿರ್ಧಾರ ಎನ್ನಬಹುದು. ಯಾಕೆಂದ್ರೆ, 2019ರ ಎಪ್ರಿಲ್‌ನಿಂದ ಕಡ್ಡಾಯವಾಗಿ ಜಾರಿಗೆ ಬರಲಿರುವ ಬಿಎಸ್-6 ವೈಶಿಷ್ಟ್ಯತೆಯನ್ನು ಮರ್ಸಿಡಿಸ್ ಬೆಂಝ್ ಸಂಸ್ಥೆಯು ಈಗಿನಿಂದಲೇ ಶುರು ಮಾಡಿದೆ.

More from DriveSpark

ಮರ್ಸಿಡಿಸ್ ಬೆಂಝ್ ಸಂಸ್ಥೆಯ ದುಬಾರಿ ಬೆಲೆಯ ಎಎಂಜಿ ಎಸ್63 ಕೂಪೆ ಕಾರುಗಳ ಫೋಟೋ ಗ್ಯಾಲರಿ ನೋಡಿ..

Article Published On: Friday, September 21, 2018, 11:16 [IST]
English summary
2018 Mercedes-Benz C-Class Facelift Launched In India; Prices Start At Rs 40 Lakh.
Read more on mercedes benz sedan
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+