ಟ್ಯಾಕ್ಸಿ ಆಪರೇಟರ್ಗಳಿಗಾಗಿ ಮರ್ಸಿಡೀಸ್-ಬೆಂಝ್‍ನಿಂದ ಹೊಸ ವಿ-ಕ್ಲಾಸ್ ಲಗ್ಷುರಿ ವ್ಯಾನ್
ಜರ್ಮನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಮರ್ಸಿಡೀಸ್-ಬೆಂಝ್ ದೇಶಿಯ ಮಾರುಕಟ್ಟೆಯಲ್ಲಿ ತಮ್ಮ ಉತ್ಪನ್ನ ಬಂಡವಾಳವನ್ನು ಹೆಚ್ಚಿಸುವುದರ ಬಗ್ಗೆ ಸುಳಿವು ನೀಡಿದೆ. ಈ ನಿಟ್ಟಿನಲ್ಲಿ ಸಂಸ್ಥೆಯು ವಿ-ಕ್ಲಾಸ್ ವ್ಯಾನ್ ಅನ್ನು ದೇಶಿಯ ಮಾರುಕಟ್ಟೆಗೆ ಪರಿಚಯಿಸುವುದು ಖಚಿತವಾಗಿದ್ದು, ಹೊಸ ವಾಹನ ಮಾಹಿತಿ ಇಲ್ಲಿದೆ ನೋಡಿ.

ಮರ್ಸಿಡೀಸ್ ಪರಿಚಯಿಸಲಿರುವ ಹೊಸ ವಿ-ಕ್ಲಾಸ್ ವ್ಯಾನ್‌ಗಳು ಸ್ವಂತ ಬಳಕೆಗೆ ಮತ್ತು ಲಾಂಗ್ ಡ್ರೈವ್ ಟ್ಯಾಕ್ಸಿ ರೈಡಿಂಗ್ ಉದ್ದೇಶಗಳಿಗಾಗಿ ಬಳಸಿಕೊಳ್ಳಬಹುದಾಗಿದೆ. ಈ ವ್ಯಾನ್‌ನಲ್ಲಿ ಆರು ಮಂದಿ ಕೂರಬಹುದಾಗಿದ್ದು, ಅಲ್ಲದೇ ಎರಡು ಬೆಂಚ್ ಸ್ಥಾನಗಳೊಂದಿಗೆ ಗರಿಷ್ಠ ಎಂಟು ಜನರು ಕೂರಬಹುದಾದ ಅವಕಾಶ ಕಲ್ಪಿಸಿಕೊಳ್ಳಬಹುದಾಗಿದೆ.

'ಭಾರತದಲ್ಲಿ ಹೊಸ ವಾಹನಗಳ ಅಮದು ಮಾಡಿಕೊಳ್ಳುವ ವ್ಯವಸ್ಥೆಯು ಸುಲಭವಾಗಿರುವ ಕಾರಣ ಸಂಸ್ಥೆಯು ವಿ-ಕ್ಲಾಸ್ ವ್ಯಾನ್ ಅನ್ನು ಶೀಘ್ರವೇ ಮಾರುಕಟ್ಟೆಯಲ್ಲಿ ಪರಿಚಯಿಸಲಿದ್ದೇವೆ' ಎಂದು ಮರ್ಸಿಡೀಸ್ ಬೆಂಝ್ ಇಂಡಿಯಾದ ಮಾರುಕಟ್ಟೆ ವಿಭಾಗದ ಅಧ್ಯಕ್ಷ ಮೈಕಲ್ ಜಾಪ್ ಅವರು ಹೇಳಿಕೊಂಡಿದ್ದಾರೆ.

ಮರ್ಸಿಡೀಸ್ ಬೆಂಝ್ ಸಂಸ್ಥೆಯು ವಿ-ಕ್ಲಾಸ್ ವ್ಯಾನ್ ಅನ್ನು ಟ್ಯಾಕ್ಸಿ ನಿರ್ವಾಹಕರು ತಮ್ಮ ಅತಿಥಿಗಳನ್ನು ಸಾಗಿಸಲು ಮತ್ತು ಐಷಾರಾಮಿ ಹೋಟೆಲ್ ಸೇವೆಗಳಿಗಾಗಿಯೇ ವಿಶೇಷವಾಗಿ ಈ ವಾಹನವನ್ನು ಸಿದ್ದಪಡಿಸಿದ್ದಾರೆ.

ಐಷರಾಮಿ ಸೌಲಭ್ಯವನ್ನು ಒದಗಿಸಲು ಮಾರುಕಟ್ಟೆಗೆ ಲಗ್ಗೆಯಿಡಲಿರುವ ಹೊಸ ಮರ್ಸಿಡೀಸ್ ಬೆಂಝ್ ವಿ-ಕ್ಲಾಸ್ ವ್ಯಾನ್‍ಗಳು, (4895ಎಂಎಂ) ಕಾಂಪ್ಯಾಕ್ಟ್, (5140ಎಂಎಂ) ಲಾಂಗ್ ಮತ್ತು (5370ಎಂಎಂ) ಎಕ್ಸ್ಟ್ರಾ ಲಾಂಗ್ ಎಂಬ ಮೂರು ಆಕಾರಗಳಲ್ಲಿ ದೊರೆಯಲಿದೆ.

ಹೊಸ ಮರ್ಸಿಡೀಸ್ ಬೆಂಝ್ ವಿ-ಕ್ಲಾಸ್ ವ್ಯಾನ್‌ಗಳಲ್ಲಿ ಎಲೆಕ್ಟ್ರಿಕ್ ಸ್ಲೈಡಿಂಗ್ ಡೋರ್ಸ್, ಪನೊರಮಿಕ್ ಸನ್‍ರೂಫ್, ಎಲೆಕ್ಟ್ರಾನಿಕ್ ಕ್ಲೈಮೇಟ್ ಕಂಟ್ರೋಲ್ ಸಿಸ್ಟಮ್, ಹೀಟೆಡ್ ಮತ್ತು ಅಪರ್ ಸಪೋರ್ಟ್‍ನೊಂದಿಗೆ ವೆಂಟಿಲೇಟೆಡ್ ಸೀಟ್‍ಗಳನ್ನು ನೀಡಲಾಗಿದೆ.

ಇದಲ್ಲದೆ ಮರ್ಸಿಡೀಸ್ ಬೆಂಝ್‍ನ ವಿ-ಕ್ಲಾಸ್ ಐಷಾರಾಮಿ ವ್ಯಾನ್‍ನಲ್ಲಿ 5 ಲೀಟರ್ ಕೂಲಿಂಗ್ ಕಂಪಾರ್ಟ್ಮೆಂಟ್ ಮತ್ತು ಥರ್ಮಲ್ ಕಪ್ ಹೋಲ್ಡರ್‍ಗಳನ್ನು ಒದಗಿಸಲಾಗಿದೆ. ವಿ-ಕ್ಲಾಸ್ ವ್ಯಾನ್‌ಗಳು 2 ಲೀಟರ್ ಡೀಸೆಲ್ ಮತ್ತು 2 ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿರಲಿದೆ.

ಡೀಸೆಲ್ ಆಧಾರಿತ ವಿ-ಕ್ಲಾಸ್ ವ್ಯಾನ್‍ಗಳು 3 ವಿವಿಧ ಪವರ್ ಆಪ್ಷನ್ ಅನ್ನು ನೀಡಲಾಗಿದ್ದು, ಎಂಜಿನ್ ಅನ್ನು 6 ಸ್ಪೀಡ್ ಮ್ಯಾನುವಲ್ ಅಥವಾ 7 ಸ್ಪೀಡ್ ಆಟೋಮ್ಯಾಟಿಕ್ ಗೇರ್‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ವಿ-ಕ್ಲಾಸ್ ವ್ಯಾನ್‌ನಲ್ಲಿ ಫ್ರಂಟ್ ಆಲ್ ವ್ಹೀಲ್ ಡ್ರೈವಿಂಗ್ ಕಾನ್ಫಿಗರೇಷನ್ ಮತ್ತು ಆಲ್ ವ್ಹೀಲ್ ಡ್ರೈವ್ ಅನ್ನು 4ಮ್ಯಾಟಿಕ್ ಎಂಡಬ್ಲ್ಯೂಡಿ ಸಿಸ್ಟಮ್ ಅನ್ನು ಆಯ್ಕೆಯಾಗಿ ನೀಡಲಾಗಿದೆ. ಆದರೆ ಭಾರತದಕ್ಕೆ ಬರಲಿರುವ ಈ ವ್ಯಾನ್‍ಗಳು ಕೇವಲ ಫ್ರಂಟ್ ವ್ಹೀಲ್-ಡ್ರೈವಿಂಗ್ ಸಿಸ್ಟಂ ಅನ್ನು ಮಾತ್ರ ಪಡೆಯಲಿದೆ ಎನ್ನಲಾಗಿದೆ.

ಸಡಿಲವಾದ ಆಮದು ನಿಯಮಗಳೊಂದಿಗೆ ಮರ್ಸಿಡೀಸ್-ಬೆಂಝ್ ಭಾರತದಲ್ಲಿ ವಿ-ಕ್ಲಾಸ್ ವ್ಯಾನ್ ಅನ್ನು ಪರಿಚಯಿಸಲು ಯೋಜನೆಯಲ್ಲಿದ್ದು, ಸಮ್ಮತಿ ಇಲ್ಲದೆ 2,500 ಯುನಿಟ್ ಕಾರುಗಳು / ದ್ವಿಚಕ್ರ ವಾಹನಗಳನ್ನು ಆಮದು ಮಾಡಲು ತಯಾರಕರು ಅನುಮತಿಸಲಾಗಿದೆ.

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ
ಪರಿಷ್ಕೃತ ಆಮದು ನಿಯಮಗಳ ಕಾರಣದಿಂದಾಗಿ ಮರ್ಸಿಡಿಸ್-ಬೆಂಝ್ ಸಂಸ್ಥೆಯು ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಹೊಸ ಉತ್ಪನ್ನವನ್ನು ಪ್ರಯೋಗಿಸಲು ಸಿದ್ಧವಾಗಿದೆ. ಮರ್ಸಿಡಿಸ್-ಬೆಂಝ್ ವಿ-ಕ್ಲಾಸ್ ವ್ಯಾನ್ ಫ್ಲೀಟ್ ಆಪ್‌ರೇಟರ್‌ಗಳಿಗೆ ಮತ್ತು ಐಷಾರಾಮಿ ಹೊಟೇಲ್‌ಗಳ ಗ್ರಾಹಕ ಸೇವೆಗೆ ಹೆಚ್ಚು ಬಳಕೆಯಾಗುವ ವಾಹನವಾಗಿದ್ದು, ಮರ್ಸಿಡಿಸ್-ಬೆಂಝ್ ವಿ-ಕ್ಲಾಸ್ ರೂ. 40 ಲಕ್ಷದಿಂದ ರೂ.48.5 ಲಕ್ಷದ ಎಕ್ಸ್ ಶೋರಂ ಬೆಲೆಯನ್ನು ಹೊಂದಿರಲಿದೆ ಎಂದು ಅಂದಾಜಿಸಲಾಗಿದೆ.

ಕೇವಲ ಮರ್ಸಿಡೀಸ್ ಬೆಂಝ್ ಅಲ್ಲದೆಯೆ ಟೊಯೊಟಾ ಸಂಸ್ಥೆಯು ಕೂಡಾ ಏಳು ಆಸನವುಳ್ಳ ಆಲ್ಫಾರ್ಡ್ ವ್ಯಾನ್ ಅನ್ನು ದೇಶಿಯಮಾರುಕಟ್ಟೆಗೆ ಪರಿಚಯಿಸಲಿದೆ. ಹಾಗಾದರೆ ಟೊಯೊಟಾ ಪರಿಚಯಿಸಲಿರುವ ಆಲ್ಫಾರ್ಡ್ ವ್ಯಾನಿನ ಬಗ್ಗೆ ಮಾಹಿತಿಯನ್ನು ತಿಳಿಯಲು ಮುಂದೆ ಓದಿರಿ.

ಜಪಾನ್ ಮೂಲದ ಪ್ರತಿಷ್ಠಿತ ಕಾರು ಉತ್ಪಾದನಾ ಸಂಸ್ಥೆಯಾದ ಟೊಯೊಟಾ ಮೋಟಾರ್ಸ್ ತಮ್ಮ ಹೊಸ ಅಲ್ಫಾರ್ಡ್ ಎಮ್‍ಪಿವಿ ವ್ಯಾನ್ ಅನ್ನು ಪರಿಚಯಿಸಲಿದ್ದು, ಮೊದಲ ಬಾರಿಗೆ ದೆಹಲಿಯಲ್ಲಿ ನಡೆದ 2018ರ ಆಟೋ ಎಕ್ಸ್‌ಪೋದಲ್ಲಿ ಈ ಕಾರನ್ನ ಪ್ರದರ್ಶನ ಮಾಡಲಾಗಿತ್ತು.

ಈ ವಾಹನಕ್ಕೆ ಈಗಾಗಲೇ ಟ್ರಾವೆಲ್ ಹಾಗು ಟೂರ್ ಇಂಡಸ್ಟ್ರಿಯಲ್ಲಿ ಭಾರೀ ಬೇಡಿಕೆ ಬರುತ್ತಿದೆ. ಕೇವಲ ಟೂರಿಂಗ್ ಆಪರೇಟರ್ಸ್‍ಗೆ ಮಾತ್ರವಲ್ಲದೆ ಕುಟುಂಬದ ಜೊತೆ ಹೊರ ಸಂಚಾರಕ್ಕೆ ಹೋಗಲು ಕೂಡಾ ಸಾಕಷ್ಟು ಅನುಕೂಲಕಲಕರ ವಾಹನ ಇದಾಗಿದೆ.

ಆಲ್ಫಾರ್ಡ್ ಐಷಾರಾಮಿ ಎಮ್‌ಪಿವಿ ವ್ಯಾನ್‍ಗಳು ಪ್ರದರ್ಶಿಸುವುದರ ಮೂಲಕ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಕುತೂಹಲವನ್ನುಂಟು ಮಾಡಿದ ಟೊಯೊಟಾ, ಜನಪ್ರಿಯ ಇನೋವಾ ಕ್ರಿಸ್ಟಾ ಕಾರಿಗೆ ಪರ್ಯಾಯ ವಾಹನ ಮಾದರಿಯಾಗಿಸಲಿದೆ.

ಕಾರಿನ ಹೊರ ವಿನ್ಯಾಸ
ಕಾರಿನ ಮುಂಭಾಗದಲ್ಲಿ ಅಗಲವಾದ ಕ್ರೋಮ್ ಗ್ರಿಲ್ ಅನ್ನು ಪಡೆದುಕೊಂಡಿರಲಿದ್ದು, ಜೊತೆಗೆ, ಲಾರ್ಜ್ ಸೆಂಟ್ರಲ್ ಏರ್ ಇಂಟೇಕ್, ಪ್ರಾಮಿನಂಟ್ ಪ್ರೊಜೆಕ್ಟರ್ ಹೆಡ್‍ಲ್ಯಾಂಪ್ಸ್ ಯೂನಿಟ್ಸ್, ಫಾಗ್ ಲ್ಯಾಂಪ್ಸ್ ಮತ್ತು ಎಲ್ಇಡಿ ಡಿಆರ್‍ಎಲ್‍ಗಳನ್ನು ಅಳವಡಿಸಲಾಗಿದೆ.

ಕಾರಿನ ಒಳ ವಿನ್ಯಾಸ
ಆಲ್ಫಾರ್ಡ್ ಐಷಾರಾಮಿ ಎಮ್ ಪಿವಿಗಳ ಒಳಭಾಗವು ಲೆದರ್ ಮತ್ತು ಮರದ ಫಲಕಗಳಿಂದ ಒಳಗೊಂಡಿದ್ದು, ಇಂಟಿಗ್ರೇಟೆಡ್ ಮಸಾಜರ್ಸ್, ರೆಕ್ಲೈನಿಂಗ್ ಸೀಟ್ಸ್, ಟಚ್ ಕಂಟ್ರೋಲ್ಸ್, ಅಗಲವಾದ ಇನ್ಫೋಟೈನೆಂಟ್ ಸಿಸ್ಟಮ್ ಮತ್ತು ಕಾರಿನ ಮಧ್ಯದಲ್ಲಿರುವ ಸೀಟುಗಳು ಹಲವಾರು ಐಷಾರಾಮಿ ಸೌಕರ್ಯಗಳನ್ನು ಪಡೆದುಕೊಂಡಿರುವುದಲ್ಲದೇ ಈ ಕಾರಿನ ವಿಶೇಷ.

ಭಾರತೀಯ ರಸ್ತೆಗಳಲ್ಲಿ ಈಗಾಗಲೇ ಟೊಯೊಟಾ ನಿರ್ಮಾಣದ ಆಲ್ಫಾರ್ಡ್ ಮತ್ತು ವೆಲ್ಫೈರ್ ಕಾರುಗಳನ್ನು ಕಾಣಬಹುದಾಗಿದ್ದು, ಆಸಕ್ತ ಗ್ರಾಹಕರು ಯುರೋಪಿನ್ ಮಾರುಕಟ್ಟೆಗಳಿಂದ ಆಮದು ಮಾಡಿಕೊಳ್ಳುತ್ತಿರುವುದು ಹಳೆಯ ವಿಚಾರ.

ಎಂಜಿನ್ ವೈಶಿಷ್ಟ್ಯತೆ
ಆಲ್ಫಾರ್ಡ್ ಐಷಾರಾಮಿ ಎಮ್‌ಪಿವಿ ವ್ಯಾನ್‌ಗಳು ಪೆಟ್ರೋಲ್ ಮಾದರಿಯಲ್ಲೇ ಎರಡು ವಿಭಾಗಗಳಲ್ಲಿ ಅಭಿವೃದ್ಧಿಯಾಗಿದ್ದು, 2.5- ಲೀಟರ್ 4 ಸಿಲಿಂಡರ್ ಪೆಟ್ರೋಲ್ ಎಂಜಿನ್ ಮಾದರಿಯು 179-ಬಿಹೆಚ್‌ಪಿ ಮತ್ತು 235-ಎನ್ಎಮ್ ಟಾರ್ಕ್ ಉತ್ಪಾದಿಸುವ ಗುಣಹೊಂದಿದೆ. ಹಾಗೆಯೇ 3.5-ಲೀಟರ್ ವಿ6 ಎಂಜಿನ್ ಹೊಂದಿರುವ ಮತ್ತೊಂದು ಮಾದರಿಯು 297-ಬಿಎಚ್‌ಪಿ ಮತ್ತು 361-ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು ಎಂದು ಟೊಯೊಟಾ ಹೇಳಿಕೊಂಡಿದೆ.

ಇನ್ನು ಟೊಯೊಟಾ ಆಲ್ಫಾರ್ಡ್ ಐಷಾರಾಮಿ ಎಮ್‍ಪಿವಿ ವ್ಯಾನ್ ಮಾದರಿಯ ಹೈಬ್ರಿಡ್ ಆವೃತ್ತಿಯು 2.5 ಲೀಟರ್ 4 ಸಿಲೆಂಡರ್ ಎಂಜಿನನ್ನು ಪಡೆದುಕೊಂಡಿದ್ದು, ಟೊಯೊಟಾ ಆಲ್ಫಾರ್ಡ್ ಐಷಾರಾಮಿ ಎಮ್‌ಪಿವಿಯು 8 ಸ್ಪೀಡ್ ಆಟೊಮ್ಯಾಟಿಕ್ ಅಥವಾ ಸಿವಿಟಿ ಟ್ರ್ಯಾನ್ಸ್‌ಮಿಷನ್ ಪಡೆದುಕೊಳ್ಳಲಿದ್ದು, ಹೈಬ್ರೀಡ್ ಆವೃತ್ತಿಯು ಸಿವಿಟಿ ಪವರ್ ಟ್ರೈನ್ ಅನ್ನು ಹೊಂದಿರಲಿದೆ.

ಪ್ರಸ್ತುತ ವಿದೇಶಿ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಟೊಯೊಟಾ ಆಲ್ಫಾರ್ಡ್ ಐಷಾರಾಮಿ ಎಮ್‍ಪಿವಿ ಕಾರುಗಳು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡರೆ ಸಿಬಿಯು ಮಾರ್ಗದಿಂದ ಬರಲಿದ್ದು, ಸುಮಾರು ರೂ.40 ರಿಂದ 55 ಲಕ್ಷದ ಬೆಲೆಗೆ ಮಾರಾಟವಾಗುವ ಸಾಧ್ಯತೆಗಳಿವೆ.
ಹಾಗಾದರೆ ನಿಮ್ಮ ಪ್ರಕಾರ ಬಿಡುಗಡೆಗೊಳ್ಳಲಿರುವ ಟೊಯೊಟಾ ಆಲ್ಫಾರ್ಡ್ ಮತ್ತು ಮರ್ಸಿಡೀಸ್-ಬೆಂಝ್ ವಿ-ಕ್ಲಾಸ್ ವ್ಯಾನ್‍ಗಳಲ್ಲಿ ಯಾವುದು ಉತ್ತಮ ಎಂದು ಕೇಳಗೆ ಕಮೆಂಟ್ ಮಾಡಿ.More from DriveSpark
ಟ್ಯಾಕ್ಸಿ ವಿಭಾಗದಲ್ಲಿ ಸದ್ಯ ಹೆಚ್ಚು ಸದ್ದು ಮಾಡುತ್ತಿರುವ ಹೊಸ ಮಹೀಂದ್ರಾ ಮರಾಜೊ ಕಾರಿನ ಚಿತ್ರಗಳು ಇಲ್ಲಿದೆ ನೋಡಿ..


Click it and Unblock the Notifications








