ಎಕ್ಸ್-ಮೋಷನ್ ಕಾನ್ಸೆಪ್ಟ್ ಎಸ್‌ಯುವಿ ಪ್ರದರ್ಶನ ಮಾಡಿದ ಎಂಜಿ ಮೋಟಾರ್ಸ್

Written By:

ಚೀನಾ ಮೂಲದ ಸೈಕ್ ಸಂಸ್ಥೆಯ ಅಧೀನದಲ್ಲಿರುವ ಬ್ರಿಟನ್ ಮೂಲದ ಎಂಜಿ ಮೋಟಾರ್ ಸಂಸ್ಥೆಯು ಮೊದಲ ಬಾರಿಗೆ ಭಾರತೀಯ ಮಾರುಕಟ್ಟೆಯ ಪ್ರವೇಶ ಪಡೆಯುತ್ತಿದ್ದು, ಮೊದಲ ಹಂತದಲ್ಲೇ ಜನಪ್ರಿಯ ಹ್ಯುಂಡೈ ಕ್ರೇಟಾ ಹಿಂದಿಕ್ಕಬಲ್ಲ ಝೆಡ್ಎಸ್ ಎಸ್‌ಯುವಿ ಮಾದರಿಯನ್ನು ಬಿಡುಗಡೆಗೊಳಿಸುತ್ತಿದೆ.

ಎಕ್ಸ್-ಮೋಷನ್ ಕಾನ್ಸೆಪ್ಟ್ ಎಸ್‌ಯುವಿ ಪ್ರದರ್ಶನ ಮಾಡಿದ ಎಂಜಿ ಮೋಟಾರ್ಸ್

ಹೀಗಿರುವಾಗಲೇ ಎಂಜಿ ಮೋಟಾರ್ಸ್ ಸಂಸ್ಥೆಯು ಎಕ್ಸ್-ಮೋಷನ್ ಎನ್ನುವ ಮತ್ತೊಂದು ವಿನೂತ ಎಸ್‌ಯುವಿ ಮಾದರಿಯ ಟೀಸರ್ ಬಿಡುಗಡೆಗೊಳಿಸಿದ್ದು, ಈ ಕಾರು ಮಾದರಿ ಕೂಡಾ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.

ಎಕ್ಸ್-ಮೋಷನ್ ಕಾನ್ಸೆಪ್ಟ್ ಎಸ್‌ಯುವಿ ಪ್ರದರ್ಶನ ಮಾಡಿದ ಎಂಜಿ ಮೋಟಾರ್ಸ್

ಆದರೆ, ಈ ಬಗ್ಗೆ ಮಾಹಿತಿ ಇಲ್ಲವಾದ್ರೂ ಎಸ್‌ಯುವಿ ಕಾರುಗಳ ಮೇಲೆ ಹೆಚ್ಚಿನ ಗಮನಹರಿಸಿರುವ ಎಂಜಿ ಮೋಟಾರ್ಸ್ ಸಂಸ್ಥೆಯು ವಿನೂತನ ಎಕ್ಸ್-ಮೋಷನ್ ಕಾರು ಆವೃತ್ತಿಯನ್ನು ಚೀನಾದಲ್ಲಿ ಇದೇ ವರ್ಷ ಬಿಡುಗಡೆ ಮಾಡುವುದು ಖಚಿತವಾಗಿದೆ.

ಎಕ್ಸ್-ಮೋಷನ್ ಕಾನ್ಸೆಪ್ಟ್ ಎಸ್‌ಯುವಿ ಪ್ರದರ್ಶನ ಮಾಡಿದ ಎಂಜಿ ಮೋಟಾರ್ಸ್

ಮುಂಬರುವ ಬಿಜೀಂಗ್ ಮೋಟಾರ್ ಶೋನಲ್ಲಿ ಹೊಸ ಕಾರುನ್ನು ಬಿಡುಗಡೆ ಮಾಡಲಿದ್ದು, ಯುಕೆ ಮತ್ತು ಆಸ್ಟ್ರೇಲಿಯಾ ಮಾರುಕಟ್ಟೆಯಲ್ಲೂ ಹೊಸ ಕಾರು ಸದ್ದು ಮಾಡಲಿವೆ. ಇನ್ನು ಹೊಸ ಎಕ್ಸ್-ಮೋಷನ್ ಕಾರು ಎಂಜಿ ಕಾರಿನ ಮತ್ತೊಂದು ಆವೃತ್ತಿ ಇ-ಮೋಷನ್ ಪ್ರೇರಣೆಯೊಂದಿಗೆ ಸಿದ್ದವಾಗಿದೆ.

ಎಕ್ಸ್-ಮೋಷನ್ ಕಾನ್ಸೆಪ್ಟ್ ಎಸ್‌ಯುವಿ ಪ್ರದರ್ಶನ ಮಾಡಿದ ಎಂಜಿ ಮೋಟಾರ್ಸ್

ಫ್ರಂಟ್ ಫಾಸಿಯಾ ಮತ್ತು ಲಾರ್ಜ್ ಗ್ರೀಲ್‌ನೊಂದಿಗೆ 3ಡಿ ಸ್ಟರ್ಡ್‌ಗಳನ್ನು ಹೊಂದಿರುವ ಹೊಸ ಕಾರು ಶಾರ್ಪ್ ಡಿಸೈನ್ ಎಸ್‌ಯುವಿ ಪ್ರಿಯರಿಗೆ ಹೊಸ ಚಾಲನಾ ಅನುಭೂತಿ ನೀಡಲಿವೆ. ಜೊತೆಗೆ ಈ ಕಾರು 2.0-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಹೊಂದಿರಲಿದ್ದು, 221ಬಿಎಚ್‌ಪಿ ಮತ್ತು 360ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು.

ಎಕ್ಸ್-ಮೋಷನ್ ಕಾನ್ಸೆಪ್ಟ್ ಎಸ್‌ಯುವಿ ಪ್ರದರ್ಶನ ಮಾಡಿದ ಎಂಜಿ ಮೋಟಾರ್ಸ್

ಇನ್ನು ಕಳೆದ ವರ್ಷವಷ್ಟೇ ಎಂಜಿ ಮೋಟಾರ್ಸ್ ಸಂಸ್ಥೆಯು ಗುಜರಾತ್‌ನಲ್ಲಿ 2 ಸಾವಿರ ಕೋಟಿ ಬಂಡವಾಳದೊಂದಿಗೆ ಮೊದಲ ಉತ್ಪಾದನಾ ಘಟಕವನ್ನು ಆರಂಭಗೊಳಿಸಿದ್ದು, ಇದೀಗ ಹೊಸ ಕಾರು ಉತ್ಪನ್ನಗಳ ನಿರ್ಮಾಣ ಕಾರ್ಯವನ್ನು ತೀವ್ರಗೊಳಿಸಿದೆ.

ಎಕ್ಸ್-ಮೋಷನ್ ಕಾನ್ಸೆಪ್ಟ್ ಎಸ್‌ಯುವಿ ಪ್ರದರ್ಶನ ಮಾಡಿದ ಎಂಜಿ ಮೋಟಾರ್ಸ್

ಈ ಮೂಲಕ ಮೊದಲ ಹಂತದಲ್ಲೇ ವಿನೂತನ ಶೈಲಿಯ ಎಸ್‌ಯುವಿಯೊಂದನ್ನು ಬಿಡುಗಡೆಗೊಳಿಸುವ ನಿಟ್ಟಿನಲ್ಲಿ ಉತ್ಸುಕವಾಗಿರುವ ಎಂಜಿ ಮೋಟಾರ್ಸ್, ಜನಪ್ರಿಯ ಹ್ಯುಂಡೈ ಕ್ರೇಟಾ ಎಸ್‌ಯುವಿ ಪ್ರಬಲ ಪ್ರತಿ ಸ್ಪರ್ಧಿಯಾಗುವ ನೀರಿಕ್ಷೆಯಿದೆ.

ಎಕ್ಸ್-ಮೋಷನ್ ಕಾನ್ಸೆಪ್ಟ್ ಎಸ್‌ಯುವಿ ಪ್ರದರ್ಶನ ಮಾಡಿದ ಎಂಜಿ ಮೋಟಾರ್ಸ್

ಹೀಗಾಗಿ ಎಂಜಿ ಮೋಟಾರ್ಸ್ ನಿರ್ಮಾಣ ಮಾಡಿರುವ ಝೆಡ್‌ಎಸ್ ಎಸ್‌ಯುವಿ ಸಹ ಹಲವು ವಿಶೇಷತೆಗಳೊಂದಿಗೆ ಅಭಿವೃದ್ಧಿ ಹೊಂದಿದ್ದು, ಕ್ಲಾಸ್ ಲೀಡಿಂಗ್ ಸೌಲಭ್ಯಗಳನ್ನು ಹೊಂದಿರಲಿದೆ. ಈ ಮೂಲಕ ಮಧ್ಯಮ ಗಾತ್ರದ ಎಸ್‌ಯುವಿಯನ್ನು ಇಷ್ಟಪಡುವ ಗ್ರಾಹಕರಿಗೆ ಇದೊಂದು ಅತ್ಯುತ್ತಮ ಆಯ್ಕೆಯಾಗಲಿದೆ ಎನ್ನಬಹುದು.

Read more on mg motors
English summary
MG Motor Tease New X-Motion SUV Concept.
Story first published: Monday, April 16, 2018, 18:50 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark