ಕೂಲ್ ಎಲ್ಇಡಿ ಮಾಡಿಫೈ ಗ್ರೀಲ್ ಪಡೆದ ಹ್ಯುಂಡೈ ಕ್ರೇಟಾ ಫೇಸ್‌ಲಿಫ್ಟ್
ಕಳೆದ ತಿಂಗಳಷ್ಟೇ ಹ್ಯುಂಡೈ ಕ್ರೇಟಾ ಫೇಸ್‌ಲಿಫ್ಟ್ ಕಾರುಗಳು ಹಲವು ಬದಲಾವಣೆಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು, ಇದರ ಮಧ್ಯೆ ಮಾಡಿಫೈ ಗ್ರೀಲ್ ಹೊಂದಿರುವ ಕ್ರೇಟಾ ಫೇಸ್‌ಲಿಫ್ಟ್ ಕಾರು ಮಾದರಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಹೌದು, ಮುಂಬೈ ಮೂಲದ ಕಾರ್ ಚಿಕ್ಸ್ ಇಂಡಿಯಾ ಎನ್ನುವ ಮಾಡಿಫೈ ಸಂಸ್ಥೆಯೊಂದು ಕ್ರೇಟಾ ಫೇಸ್‌ಲಿಫ್ಟ್ ಆವೃತ್ತಿಗಳಿಗಾಗಿ ವಿನೂತನ ಮಾದರಿಯ ಕೂಲ್ ಎಲ್ಇಡಿ ಗ್ರೀಲ್ ಪರಿಚಯಿಸಿದೆ. ಎಲ್ಇಡಿ ಲೈಟ್ಸ್‌ಗಳೊಂದಿಗೆ ಸಿದ್ದವಾಗಿರುವ ಈ ಗ್ರೀಲ್ ಎಸ್‌ಯುವಿ ಪ್ರಿಯರನ್ನ ಆಕರ್ಷಣೆ ಮಾಡುತ್ತಿದೆ.

ಕೂಲ್ ಎಲ್ಇಡಿ ಮಾಡಿಫೈ ಗ್ರೀಲ್ ಮಾದರಿಯು ಕ್ರೇಟಾ ಕಾರುಗಳ ಅಂದವನ್ನು ಹೆಚ್ಚಿಸಿದ್ದು, ಕಾರ್ ಚಿಕ್ಸ್ ಇಂಡಿಯಾ ಮಾಡಿಫೈ ಸಂಸ್ಥೆಯು ಇದಕ್ಕಾಗಿ ರೂ. 15 ಸಾವಿರ ಶುಲ್ಕ ನಿಗದಿ ಮಾಡಿದೆ. ಆಸಕ್ತ ಗ್ರಾಹಕರು ಈ ವಿಚಾರಣೆ ಮಾಡಬಹುದಾಗಿದ್ದು, ಈ ಕೂಲ್ ಎಲ್ಇಡಿ ಗ್ರೀಲ್ ಹಲವು ವಿಶೇಷತೆಗಳಿಂದ ಕೂಡಿದೆ.

ರಾತ್ರಿ ವೇಳೆ ಅಷ್ಟೇ ಅಲ್ಲದೇ ಹಗಲಿನ ಅವಧಿಯಲ್ಲೂ ಕೂಲ್ ಎಲ್ಇಡಿ ಗ್ರೀಲ್ ಹೊಳೆಯುತ್ತಿರುವಂತೆ ಕಾಣಲಿದ್ದು, ನೋಡುಗರಿಗೆ ಇದು ಐಷಾರಾಮಿ ಕಾರಿನಂತೆ ಬಾಸವಾಗುತ್ತದೆ. ಹೀಗಾಗಿ ಇದು ಸ್ಪೋರ್ಟಿ ಲುಕ್ ಕಾರು ಮಾದರಿಗಳನ್ನ ಬಯಸುವ ಗ್ರಾಹಕರನ್ನು ಸೆಳೆಯುವುದರಲ್ಲಿ ಯಾವುದೇ ಅನುಮಾನವಿಲ್ಲ.

ಇನ್ನು ಕಾರಿನ ಮುಂಭಾಗ ಗ್ರೀಲ್ ಅನ್ನು ಹೊರತುಪಡಿಸಿ ಇನ್ನುಳಿದಂತೆ ತಾಂತ್ರಿಕ ಅಂಶಗಳನ್ನು ಯಥಾವತ್ತಾಗಿ ಮುಂದುವರಿಸಲಾಗಿದ್ದು, ಕ್ರೇಟಾ ಫೇಸ್‌ಲಿಫ್ಟ್ ಕಾರುಗಳು ಪೆಟ್ರೋಲ್ ಎಂಜಿನ್ ಮತ್ತು ಡೀಸೆಲ್ ಎಂಜಿನ್ ಮಾದರಿಯಲ್ಲಿ ಖರೀದಿಗೆ ಲಭ್ಯವಿದ್ದು, ಇವುಗಳಲ್ಲಿ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಪೆಟ್ರೋಲ್ ಆವೃತ್ತಿಯಲ್ಲಿ 6 ವೆರಿಯೆಂಟ್‌ಗಳು ಮತ್ತು ಡೀಸೆಲ್ ಆವೃತ್ತಿಯಲ್ಲಿ 7 ವೆರಿಯೆಂಟ್‌ಗಳನ್ನು ಪರಿಚಯಿಸಲಾಗಿದೆ.

ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ. 9.43 ಲಕ್ಷಕ್ಕೆ ಮತ್ತು ಟಾಪ್ ಎಂಡ್ ಮಾದರಿಯ ಬೆಲೆಯನ್ನು ರೂ. 15.03 ಲಕ್ಷಕ್ಕೆ ನಿಗದಿಗೊಳಿಸಲಾಗಿದ್ದು, 1.4-ಲೀಟರ್ ಡೀಸೆಲ್, 1.6-ಲೀಟರ್ ಪೆಟ್ರೋಲ್ ಮತ್ತು 1.6-ಡೀಸೆಲ್ ಎಂಜಿನ್‌ಗಳನ್ನು ಹೊಂದಿದ್ದು, ಇದರಲ್ಲಿ 1.4-ಲೀಟರ್ ಪೆಟ್ರೋಲ್ ಎಂಜಿನ್‌ಗಳು 88.7-ಬಿಎಚ್‌ಪಿ, 1.6-ಲೀಟರ್ ಪೆಟ್ರೋಲ್ ಎಂಜಿನ್‌ಗಳು 121-ಬಿಎಚ್‌ಪಿ ಮತ್ತು 1.6-ಲೀಟರ್ 126-ಬಿಎಚ್‌ಪಿ ಉತ್ಪಾದನಾ ಗುಣ ಪಡೆದಿವೆ.

ಇದರಲ್ಲಿ 1.4-ಲೀಟರ್ ಪೆಟ್ರೋಲ್ ಮಾದರಿಯು 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಪಡೆದಿದ್ದು, ಇನ್ನುಳಿದ 1.6-ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಮಾದರಿಗಳಲ್ಲಿ 6-ಸ್ಪೀಡ್ ಆಟೋ ಮ್ಯಾಟಿಕ್ ಒದಗಿಸಲಾಗಿದೆ.

ಹೊಸ ಕಾರುಗಳ ಪರ್ಫಾಮೆನ್ಸ್ ಹೆಚ್ಚಿಸಲು ಕ್ಲಾಸ್ ಲೀಡಿಂಗ್ ಎನ್‌ವಿಹೆಚ್ ತಂತ್ರಜ್ಞಾನ ಬಳಕೆ ಮಾಡಿದ್ದು, ಇವು ಆರಾಮದಾಯಕ ಕಾರು ಚಾಲನೆಗೆ ಸಹಕಾರಿಯಾಗಿದೆ. ಇದರ ಜೊತೆಗೆ ಸ್ಪೋರ್ಟಿ ಲುಕ್ ಹೆಚ್ಚಿಸಲು ನೀವು ಹೆಚ್ಚವರಿಯಾಗಿ ಮಾಡಿಫೈ ಸೌಲಭ್ಯವನ್ನು ಬಳಸಿಕೊಳ್ಳಬಹುದು.
ಮಾಡಿಫೈ ಕ್ರೇಟಾ ಫೇಸ್‌ಲಿಫ್ಟ್ ಕಾರಿನ ವಿಡಿಯೋ ಇಲ್ಲಿದೆ ನೋಡಿ..


Click it and Unblock the Notifications








