ನೂರು ಬಾರಿ ಓವರ್ ಸ್ಪೀಡಿಂಗ್ ಮಾಡಿದ ಈತನಿಗೆ ಬಿದ್ದ ದಂಡ ಎಷ್ಟು ಗೊತ್ತಾ.?

ವಾಹನಗಳ ಚಾಲನೆ ಸಂದರ್ಭದಲ್ಲಿ ಬಹುತೇಕ ವಾಹನ ಸವಾರರು ಯಾವುದಾದರೂ ಒಂದು ರೂಪದಲ್ಲಿ ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡುವುದು ಕಾಮನ್. ಆದ್ರೆ ತಾನು ಮಾಡುತ್ತಿರುವುದು ತಪ್ಪು ಅಂತಾ ಗೊತ್ತಿದ್ರು ಕೂಡಾ ನೂರಾರು ಬಾರಿ ತಪ್ಪು ಮಾಡುವವರಿಗೆ ಏನ್ ಹೇಳುವುದು ಗೊತ್ತಾಗುವುದಿಲ್ಲ. ಇಲ್ಲೂ ಕೂಡಾ ಓವರ್ ಸ್ಪೀಡಿಂಗ್ ಕಾರು ಚಾಲನೆ ಮಾಡುತ್ತಿದ್ದ ಕಾರು ಮಾಲೀಕನ ಕಥೆ ಕೇಳಿದ್ರೆ ನೀವು ಅಚ್ಚರಿ ಆಗದೆ ಇರದು.

ನೂರು ಬಾರಿ ಓವರ್ ಸ್ಪೀಡಿಂಗ್ ಮಾಡಿದ ಈತನಿಗೆ ಬಿದ್ದ ದಂಡ ಎಷ್ಟು ಗೊತ್ತಾ.?

ಕೆಲವು ವಾಹನ ಮಾಲೀಕರಿಗೆ ಯಾರು ಏನೇ ಹೇಳಿದ್ರು ಸಂಚಾರಿ ನಿಯಮವನ್ನು ಉಲ್ಲಂಘನೆ ಮಾಡುವುದೇ ತಮ್ಮ ಕೆಲಸ ಎನ್ನುವಂತೆ ವರ್ತಿಸುತ್ತಿರುತ್ತಾರೆ. ಹೀಗೆ ಇಲ್ಲೊಬ್ಬ ಐಷಾರಾಮಿ ಕಾರು ಮಾಲೀಕನೊಬ್ಬ 103 ಬಾರಿ ಓವರ್ ಸ್ಪೀಡಿಂಗ್ ಮಾಡಿ ಸಾವಿರಾರು ರೂಪಾಯಿ ದಂಡ ಜಡಿಸಿಕೊಂಡಿದ್ದಾರೆ.

ಮುಂಬೈ ನಗರದ ಮಲಬಾರ್ ಹಿಲ್ ನಿವಾಸಿಯಾಗಿರುವ ವಜ್ರದ ವ್ಯಾಪಾರಿ ರಹಿಲ್ ಮೆಹ್ತಾ ತನ್ನ ಹೋಂಡಾ ಅಕಾರ್ಡ್ ಹಾಗೂ ಬಿಎಂಡಬ್ಲ್ಯು 3-ಸಿರೀಸ್ ಕಾರಿನ ಮೂಲಕ ಸುಮಾರು 103 ಬಾರಿ ಸ್ಪೀಡ್ ಲಿಮಿಟ್ ಅನ್ನು ದಾಟಿದ್ದಾರೆ.

ನೂರು ಬಾರಿ ಓವರ್ ಸ್ಪೀಡಿಂಗ್ ಮಾಡಿದ ಈತನಿಗೆ ಬಿದ್ದ ದಂಡ ಎಷ್ಟು ಗೊತ್ತಾ.?

ರಹಿಲ್ ಮೆಹ್ತಾ ಅವರು ತಮ್ಮ ಹೋಂಡಾ ಅಕಾರ್ಡ್ ಕಾರಿನಲ್ಲಿ 84 ಬಾರಿ ಸ್ಪೀಡ್ ಲಿಮಿಟ್ ದಾಟಿದ್ದು, ಬಿಎಂಡಬ್ಲ್ಯು 3-ಸಿರೀಸ್ ಕಾರಿನಲ್ಲಿ 19 ಬಾರಿ ಸ್ಪೀಡ್ ಲಿಮಿಟ್ ದಾಟಿದ ಕಾರಣ ಮುಂಬೈ ಟ್ರಾಫಿಕ್ ಪೊಲೀಸರು ಇ-ಚಲಾನ್ ಅನ್ನು ಕಳುಹಿಸಿದ್ದಾರೆ.

ನೂರು ಬಾರಿ ಓವರ್ ಸ್ಪೀಡಿಂಗ್ ಮಾಡಿದ ಈತನಿಗೆ ಬಿದ್ದ ದಂಡ ಎಷ್ಟು ಗೊತ್ತಾ.?

ಎಂಟು ತಿಂಗಳ ಅವಧಿಯಲ್ಲಿ ಸುಮಾರು 103 ಬಾರಿ ತಮ್ಮ ಎರಡೂ ಕಾರಿನಲ್ಲಿ ಓವರ್ ಸ್ಪೀಡಿಂಗ್ ಮಾಡಿರುವ ಮೆಹ್ತಾ ಅವರು ಅದೇ ಎಂಟು ತಿಂಗಳಿನಿಂದ ಒಂದು ಬಾರಿಯ ಟ್ರಾಫಿಕ್ ಉಲ್ಲಂಘನೆಗೂ ದಂಡವನ್ನು ಪಾವತಿಸಲಿಲ್ಲವಂತೆ.

ನೂರು ಬಾರಿ ಓವರ್ ಸ್ಪೀಡಿಂಗ್ ಮಾಡಿದ ಈತನಿಗೆ ಬಿದ್ದ ದಂಡ ಎಷ್ಟು ಗೊತ್ತಾ.?

ಕಳೆದ ಸೆಪ್ಟೆಂಬರ್ 23ರಂದು ಮೆಹ್ತಾ ಅವರ ಹೋಂಡಾ ಆಕಾರ್ಡ್ ಕಾರು ಮುಂಬೈ ನಗರದಲ್ಲಿನ ಕ್ರಾವ್‍‍ಫಾರ್ಡ್ ಮಾರುಕಟ್ಟೆಯ ಹತ್ತಿರ ಪಾರ್ಕ್ ಮಾಡಲಾಗಿದ್ದು, ಸ್ಥಳದಲಿದ್ದ ಟ್ರಾಫಿಕ್ ಪೊಲೀಸ್ ಸುನೀಲ್ ಪಾಟಿಲ್ ಬಳಿ ಅಕಾರ್ಡ್ ಕಾರಿನ ನಂಬರ್ ಪ್ಲೇಟ್ ಪೊಲೀಸ್ ಡೇಟಾದಿಂದ ಸಂಗ್ರಹಿಸಲ್ಪಟ್ಟಿತು.

ನೂರು ಬಾರಿ ಓವರ್ ಸ್ಪೀಡಿಂಗ್ ಮಾಡಿದ ಈತನಿಗೆ ಬಿದ್ದ ದಂಡ ಎಷ್ಟು ಗೊತ್ತಾ.?

ಸ್ಥಳದಲ್ಲಿಯೇ ತಮ್ಮ ಉಪಕರಣದಲ್ಲಿ ಅಕಾರ್ಡ್ ಕಾರಿನ ರಿಜಿಸ್ಟರ್ ನಂಬರ್ ಅನ್ನು ಒತ್ತಿದಾಗ ಆ ಕಾರಿನ ಮೇಲೆ ಇದ್ದದ್ದು ಸುಮಾರು ರೂ. 85,000 ಸಾವಿರದ ದಂಡ. ತಕ್ಷಣವೇ ಆ ಕಾರನ್ನು ಸೀಜ್ ಮಾಡಲಾಗಿದ್ದು, ಮೆಹ್ತಾ ಅವರನ್ನು ದಂಡದ ಮೊತ್ತವನ್ನು ಪಾವತಿಸಲು ಪೊಲೀಸರು ಆದೇಶಿಸಿದರು. ಇದು ಅಕಾರ್ಡ್ ಕಾರಿನದ್ದಾದರೆ ಇನ್ನು ಬಿಎಂಡಬ್ಲ್ಯೂ ಕಾರಿನ ಮೇಲೆ ಸುಮಾರು ರೂ.19,000 ಸಾವಿರದ ದಂಡ ಇತ್ತು.

ನೂರು ಬಾರಿ ಓವರ್ ಸ್ಪೀಡಿಂಗ್ ಮಾಡಿದ ಈತನಿಗೆ ಬಿದ್ದ ದಂಡ ಎಷ್ಟು ಗೊತ್ತಾ.?

ರಹಿಲ್ ಮೆಹ್ತಾ ಅವರು ಈ ಟ್ರಾಫಿಕ್ ಉಲ್ಲಾಂಘನೆಯ ಕುರಿತಾಗಿ ತಮಗೆ ತಿಳಿದಿಲ್ಲವೆಂದು ಹೇಳಲಾಗಿದ್ದು, ಜೊತೆಗೆ ಈ ಕುರಿತಾಗಿ ಯಾವುದೇ ಸಂದೇಶವು ತಮಗೆ ದೊರೆತಿಲ್ಲ ಎಂದು ಹೇಳಿದ್ದಾರೆ. ನಂತರ ಸೆಪ್ಟೆಂಬರ್ 25ರಂದು ಮೆಹ್ತಾ ಅವರು ವೋರ್ಲಿಯಲ್ಲಿನ ಪೊಲೀಸ್ ಹೆಡ್‍ ಕ್ವಾರ್ಟರ್ಸ್‍ಗೆ ಹೋಗುವ ಎರಡೂ ಕಾರಿನ ಮೇಲಿದ್ದ ಅಷ್ಟೂ ದಂಡವನ್ನು ಪಾವತಿಸಿದ್ದಾರೆ. ಆಶ್ಚರ್ಯವೇನೆಂದರೆ ಪಾವತಿಸಿದ ಅಷ್ಟೂ ದಂಡವು ಓವರ್ ಸ್ಪೀಡ್ ಮಾಡಿದ್ದರಿಂದಲೆ ಎಂದು ಸಾಭೀತಾಗಿದೆ.

ನೂರು ಬಾರಿ ಓವರ್ ಸ್ಪೀಡಿಂಗ್ ಮಾಡಿದ ಈತನಿಗೆ ಬಿದ್ದ ದಂಡ ಎಷ್ಟು ಗೊತ್ತಾ.?

ಕೇವಲ ಮೆಹ್ತಾರವರನ್ನು ಮಾತ್ರವಲ್ಲದೇ ಟ್ರಾಫಿಕ್ ನಿಯಮವನ್ನು ಉಲ್ಲಂಘಿಸಿದ ಅನೇಕ ಬಾಲಿವುಡ್ ನಟರು ಹಾಗು ರಾಜಕೀಯ ವ್ಯಕ್ತಿಗಳಿಂದಲೂ ಸುಮಾರು 103 ಕೋಟಿಯ ದಂಡವನ್ನು ಮುಂಬೈ ಟ್ರಾಫಿಕ್ ಪೊಲೀಸರು ವಸೂಲಿ ಮಾಡಿದ್ದಾರೆ ಎಂದರೆ ನೀವು ನಂಬಲೇಬೇಕು.

Most Read Articles

Kannada
English summary
Mumbai businessman collects 103 speeding fines – Pays Rs 1 lakh to Mumbai Police.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X