ಸಿಲಿಕಾನ್ ಸಿಟಿಯಲ್ಲಿ ಹೆಚ್ಚಿದ ಮಾಲಿನ್ಯ- 'ನಮ್ಮ ಆಟೋ' ಚಾಲಕರಿಂದ ಮಹತ್ವದ ಹೆಜ್ಜೆ..!

ದೇಶದಲ್ಲಿನ ಹಲವಾರು ಪ್ರಮುಖ ನಗರಗಳಲ್ಲಿ ಅದೆಷ್ಟೋ ಟಾಕ್ಸಿ ಸಂಸ್ಥೆಗಳು ತಲೆಎತ್ತಿದರೂ ಆಟೋರಿಕ್ಷಾಗಳಿರುವ ಬೇಡಿಕೆ ಮಾತ್ರ ಕಡಿಮೆ ಆಗಿಲ್ಲ ಅಂದ್ರೆ ತಪ್ಪಾಗುದಿಲ್ಲ. ಆದ್ರೆ ಸದ್ಯ ಮಾರುಕಟ್ಟೆಯಲ್ಲಿ 4 ಸ್ಟ್ರೋಕ್ ಆಟೋಗಳು ಬಂದರೂ ಸಹ ಇನ್ನು ಕೆಲವು ಆಟೋರಿಕ್ಷಾ ಚಾಲಕರು 2 ಸ್ಟ್ರೋಕ್ ವಾಹನವನ್ನೆ ಬಳಕೆ ಮಾಡುತ್ತಿರುವುದು ಮಾತ್ರ ಬೇಸರದ ಸಂಗತಿ.

ಸಿಲಿಕಾನ್ ಸಿಟಿಯಲ್ಲಿ ಹೆಚ್ಚಿನ ಮಾಲಿನ್ಯ- 'ನಮ್ಮ ಆಟೋ' ಚಾಲಕರಿಂದ ಮಹತ್ವದ ಹೆಜ್ಜೆ..!

ಈ ನಿಟ್ಟಿನಲ್ಲಿ ಸ್ಯಾಂಡಲ್‍ವುಡ್ ಚಿತ್ರರಂಗದಲ್ಲಿ ಪ್ರಸಿದ್ಧರಾಗಿದ್ದಲ್ಲದೇ ಆಟೋ ಚಾಲಕರ ಐಕಾನ್ ಎಂದೇ ಜನಪ್ರಿಯರಾಗಿರುವ ನಟ ಶಂಕರ್‍‍‍ನಾಗ್ ಅವರ ಹುಟ್ಟುಹಬ್ಬದ ಪ್ರಯುಕ್ತ 'ನಮ್ಮ ಆಟೋ' ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಸಾವಿರಾರು ಆಟೋ ಚಾಲಕರಿಗೆ 4 ಸ್ಟ್ರೋಕ್ ಆಟೋರಿಕ್ಷಾಗಳ ಕುರಿತು ತಿಳಿಹೇಳಲಾಗುತ್ತಿದ್ದು, ಮಾಲಿನ್ಯ ತಡೆಯತ್ತ ಹೆಜ್ಜೆಯಿಡಲಾಗುತ್ತಿದೆ.

ಸಿಲಿಕಾನ್ ಸಿಟಿಯಲ್ಲಿ ಹೆಚ್ಚಿನ ಮಾಲಿನ್ಯ- 'ನಮ್ಮ ಆಟೋ' ಚಾಲಕರಿಂದ ಮಹತ್ವದ ಹೆಜ್ಜೆ..!

ಇನ್ನೊಂದು ವಿಶೇಷ ಅಂದ್ರೆ 2018ರ 'ನಮ್ಮ ಆಟೋ' ಕಾರ್ಯಕ್ರಮವು ಕೆಲವು ಮಹತ್ವದ ಘಟನೆ ಸಾಕ್ಷಿಯಾಗಿದ್ದಲ್ಲದೇ, ಅದು ಇತ್ತೀಚೆಗೆ ಮಹೀಂದ್ರಾ ಸಂಸ್ಥೆಯು ಅನಾವರಣಗೊಳಿಸಿದ ಎಲೆಕ್ಟ್ರಿಕ್ ಆಟೊರಿಕ್ಷಾಗಳನ್ನು ಇಲ್ಲಿ ಬಿಡುಗಡೆಗೊಳಿಸಿ ಅದರ ಉಪಯೋಗಗಳನ್ನು ಚಾಲಕರಿಗೆ ತಿಳಿಸಿಕೊಟ್ಟಿದ್ದು ವಿಶೇಷವಾಗಿತ್ತು.

ಸಿಲಿಕಾನ್ ಸಿಟಿಯಲ್ಲಿ ಹೆಚ್ಚಿನ ಮಾಲಿನ್ಯ- 'ನಮ್ಮ ಆಟೋ' ಚಾಲಕರಿಂದ ಮಹತ್ವದ ಹೆಜ್ಜೆ..!

ದೇಶದ ಪ್ರಮುಖನಗರಗಳಲ್ಲಿ ಇಂಧನ ಆಧಾರಿತ ಆಟೋರಿಕ್ಷಾಗಳು ಕಡಿಮೆಯಾದಲ್ಲಿ ವಾಯು ಮಾಲಿನ್ಯವು ಸಹ ಕಡಿಮೆ ಆಗುತ್ತದೆ ಎನ್ನುವ ಆಲೋಚನೆಯೊಂದಿಗೆ ಮಹೀಂದ್ರಾ ಸಂಸ್ಥೆಯು ಎಲೆಕ್ಟ್ರಿಕ್ ಆಟೋರಿಕ್ಷಾಗಳನ್ನು ಪರಿಚಯಿಸಿದೆ.

ಸಿಲಿಕಾನ್ ಸಿಟಿಯಲ್ಲಿ ಹೆಚ್ಚಿನ ಮಾಲಿನ್ಯ- 'ನಮ್ಮ ಆಟೋ' ಚಾಲಕರಿಂದ ಮಹತ್ವದ ಹೆಜ್ಜೆ..!

ಇದಲ್ಲದೇ ಕಳೆದ 5 ವರ್ಷಗಳಿಂದ 'ನಮ್ಮ ಆಟೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಸುಮಾರು 5 ಸಾವಿರಕ್ಕೂ ಹೆಚ್ಚು ಆಟೋ ಚಾಲಕರಿಗೆ ಸದ್ಯದ ಬೆಳವಣಿಗಳ ಮಾಹಿತಿ ಹಂಚಿಕೆಯೊಂದಿಗೆ ಕಡಿಮೆ ಬಡ್ಡಿ ದರದಲ್ಲಿ ಹೊಸ ಆಟೋ ಖರೀದಿಗೂ ಆರ್ಥಿಕ ಸಹಾಯ ಮಾಡಲಾಗುತ್ತಿದೆ.

ಸಿಲಿಕಾನ್ ಸಿಟಿಯಲ್ಲಿ ಹೆಚ್ಚಿನ ಮಾಲಿನ್ಯ- 'ನಮ್ಮ ಆಟೋ' ಚಾಲಕರಿಂದ ಮಹತ್ವದ ಹೆಜ್ಜೆ..!

ಜೊತೆಗೆ ಆಟೋ ಚಾಲಕರ ವ್ಯವಹಾರಿಕವಾಗಿ ಮಾತ್ರವಲ್ಲದೆ ಅವರ ಕುಟುಂಬಕ್ಕೂ ಕೂಡಾ ಸಹಾಯ ಮಾಡುವ ಈ 'ನಮ್ಮ ಆಟೋ' ಯೋಜನೆಯು ಹಲವು ಯೋಜನೆಗಳನ್ನು ಜಾರಿ ಮಾಡಿದ್ದು, ನಗರದಲ್ಲಿನ ಎಲ್ಲಾ ಆಟೋಚಾಲಕರನ್ನು ಒಟ್ಟುಗೂಡಿಸಿ ಅವರ ಒಗ್ಗಟ್ಟನ್ನು ಸಮಾಜಕ್ಕೆ ತಲುಪಿಸುವುದೇ ಈ ಕಾರ್ಯಕ್ರಮ ಮೂಲ ಉದ್ದೇಶವಾಗಿದೆ ಎನ್ನಬಹುದು.

ಸಿಲಿಕಾನ್ ಸಿಟಿಯಲ್ಲಿ ಹೆಚ್ಚಿನ ಮಾಲಿನ್ಯ- 'ನಮ್ಮ ಆಟೋ' ಚಾಲಕರಿಂದ ಮಹತ್ವದ ಹೆಜ್ಜೆ..!

'ನಮ್ಮ ಆಟೋ' ಯೋಜನೆಯು ಕೇವಲ ಬೆಂಗಳೂರು ನಗರದಲ್ಲಿ ಮಾತ್ರವಲ್ಲದೇ ತಮಿಳುನಾಡಿನ ಚೆನ್ನೈ ನಗರದಲ್ಲಿಯು ಸಹ ಈ ಯೋಜನೆಯನ್ನು ಪ್ರಾರಂಭಿಸಿದ್ದು, ಈ ಯೋಜನೆಯಲ್ಲಿ ಬೆಂಗಳೂರು ಮತ್ತು ಚೆನ್ನೈ ನಗರದಲ್ಲಿನ 13,500ಕ್ಕೂ ಹೆಚ್ಚು ಆಟೋ ಚಾಲಕರು ಈ ಯೋಜನೆಯಲ್ಲಿ ಕೈಜೋಡಿಸಿದ್ದಾರೆ.

ಸಿಲಿಕಾನ್ ಸಿಟಿಯಲ್ಲಿ ಹೆಚ್ಚಿನ ಮಾಲಿನ್ಯ- 'ನಮ್ಮ ಆಟೋ' ಚಾಲಕರಿಂದ ಮಹತ್ವದ ಹೆಜ್ಜೆ..!

ಮೊನ್ನೆಯಷ್ಟೇ ಬೆಂಗಳೂರಿನ ಜಯನಗರದ 5ನೇ ಹಂತದಲ್ಲಿರುವ ಶಾಲಿನಿ ಗ್ರೌಂಡ್ಸ್ ನಲ್ಲಿ ಈ ವರ್ಷದ ನಮ್ಮ ಆಟೋ ಕಾರ್ಯಕ್ರಮವನ್ನು ಹಮಿಕೊಳ್ಳಲಾಗಿತ್ತಲ್ಲದೇ ಈ ಕಾರ್ಯಕ್ರಮಕ್ಕೆ ಇಯು ಸ್ವಿಚ್ ಏಷಿಯಾ ಎಂಬ ಸಂಸ್ಥೆಯು ಪ್ರಾಯೋಜಕತ್ವದೊಂದಿದೆ ಹೊಸ ಯೋಜನೆಗಳ ಬಗ್ಗೆ ಮಹತ್ವದ ಚರ್ಚೆ ನಡೆಸಲಾಯ್ತು.

ಸಿಲಿಕಾನ್ ಸಿಟಿಯಲ್ಲಿ ಹೆಚ್ಚಿನ ಮಾಲಿನ್ಯ- 'ನಮ್ಮ ಆಟೋ' ಚಾಲಕರಿಂದ ಮಹತ್ವದ ಹೆಜ್ಜೆ..!

ಇದರಲ್ಲಿ ದೇಶಿಯ ವಾಹನ ತಯಾರಕ ಸಂಸ್ಥೆಯಾದ ಮಹೀಂದ್ರಾ ಸಂಸ್ಥೆಯು ತಮ್ಮ ಬಹುನೀರಿಕ್ಷಿತ ಎಲೆಕ್ಟ್ರಿಕ್ ಆಟೋರಿಕ್ಷಾಗಳನ್ನು ಪ್ರದರ್ಶನ ಮಾಡಿದ್ದಲ್ಲದೇ ಚಾಲಕರಿಗೆ ಹೊಸ ಎಲೆಕ್ಟ್ರಿಕ್ ರಿಕ್ಷಾ ಬಳಕೆ ಮತ್ತು ಉಪಯೋಗಗಳ ಬಗ್ಗೆಯೂ ಮಾಹಿತಿ ಹಂಚಿಕೊಳ್ಳಲಾಯ್ತ.

ಸಿಲಿಕಾನ್ ಸಿಟಿಯಲ್ಲಿ ಹೆಚ್ಚಿನ ಮಾಲಿನ್ಯ- 'ನಮ್ಮ ಆಟೋ' ಚಾಲಕರಿಂದ ಮಹತ್ವದ ಹೆಜ್ಜೆ..!

ಹಾಗೆಯೇ ಮಹೀಂದ್ರಾ ಸಂಸ್ಥೆಯು ಬೆಂಗಳೂರಿನಲ್ಲಿರುವ ಪ್ಲ್ಯಾಂಟ್‍ನಲ್ಲಿ ಉತ್ಪಾದಿಸಲಾದ ಈ ಟ್ರಿಯೊ ಎಲೆಕ್ಟ್ರಿಕ್ ಆಟೋರಿಕ್ಷಾಗಳನ್ನು ಆಟೋಚಾಲಕರಿಗೆ ಟೆಸ್ಟ್ ಡ್ರೈವ್ ಮಾಡುವ ಅವಕಾಶವನ್ನು ನೀಡುವ ಮೂಲಕ ಕಡಿಮೆ ಬಡ್ಡಿದರದಲ್ಲಿ ಹೊಸ ವಾಹನ ಖರೀದಿಸುವ ಗ್ರಾಹಕರಿಗೆ ಅವಕಾಶ ನೀಡಿತ್ತು.

ಸಿಲಿಕಾನ್ ಸಿಟಿಯಲ್ಲಿ ಹೆಚ್ಚಿನ ಮಾಲಿನ್ಯ- 'ನಮ್ಮ ಆಟೋ' ಚಾಲಕರಿಂದ ಮಹತ್ವದ ಹೆಜ್ಜೆ..!

ಮಹೀಂದ್ರಾ ಸಂಸ್ಥೆಯು ಟ್ರಿಯೊ ಮತ್ತು ಟ್ರಿಯೊ ಯಾರಿ ಎಂಬ ಎರಡು ಎಲೆಕ್ಟ್ರಿಕ್ ಆಟೊರಿಕ್ಷಾಗಳನ್ನು ಬಿಡುಗಡೆಗೊಳಿಸಿದ್ದು, ಟ್ರಿಯೋ ವಾಹನದಲ್ಲಿ ಮೂವರು ಮತ್ತು ಟ್ರಿಯೊ ಯಾರಿ ವಾಹನದಲ್ಲಿ ಐದು ಮಂದಿ ಕುಳಿತು ಪ್ರಯಾಣಿಸಬಹುದಾಗಿದೆ. ಮಹೀಂದ್ರಾ ಎಲೆಕ್ಟ್ರಿಕ್ ಆಟೋಗಳು ಬೆಂಗಳೂರು ಎಕ್ಸ್ ಶೋರೂಂ ಪ್ರಕಾರ ರೂ. 2.22 ಲಕ್ಷಕ್ಕೆ ಪ್ರಾರಂಭಿಕ ಬೆಲೆ ಪಡೆದುಕೊಂಡಿದೆ.

ಸಿಲಿಕಾನ್ ಸಿಟಿಯಲ್ಲಿ ಹೆಚ್ಚಿನ ಮಾಲಿನ್ಯ- 'ನಮ್ಮ ಆಟೋ' ಚಾಲಕರಿಂದ ಮಹತ್ವದ ಹೆಜ್ಜೆ..!

ಮಹೀಂದ್ರಾ ಟ್ರಿಯೊ ಎಲೆಕ್ಟ್ರಿಕ್ ಆಟೋ ಒಂದು ಬಾರಿ ಪೂರ್ತಿ ಚಾರ್ಜ್ ಆಗಲು 3 ಗಂಟೆ 50 ನಿಮಿಷಗಳ ಸಮಯವನ್ನು ತೆಗೆದುಕೊಂಡರೆ, ಟ್ರಿಯೋ ಯಾರಿ ಎಲೆಕ್ಟ್ರಿಕ್ ಆಟೋ 2 ಗಂಟೆ 30 ನಿಮಿಷದಲ್ಲಿ ಪೂರ್ಣ ಚಾರ್ಜ್ ಆಗುತ್ತದೆ.

ಸಿಲಿಕಾನ್ ಸಿಟಿಯಲ್ಲಿ ಹೆಚ್ಚಿನ ಮಾಲಿನ್ಯ- 'ನಮ್ಮ ಆಟೋ' ಚಾಲಕರಿಂದ ಮಹತ್ವದ ಹೆಜ್ಜೆ..!

ಮಹೀಂದ್ರಾ ಟ್ರಿಯೊ ವಾಹನದಲ್ಲಿ ಅಳವಡಿಸಲಾದ 7.47 ಕಿಲೋವ್ಯಾಟ್ಸ್ ಲೀಥಿಯಂ ಐಯಾನ್ ಬ್ಯಾಟರಿಯು 5.4 ಕಿಲೋವ್ಯಾಟ್ಸ್ ಪೀಕ್ ಪವರ್ ಮತ್ತು 30ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಲಿದ್ದು, ಸುಮಾರು ಒಂದು ಬಾರಿಯ ಚಾರ್ಜ್‍ಗೆ 130 ಕಿಲೋಮೀಟರ್ ಮೈಲೇಜ್ ಹಿಂದಿರುಗಿಸಬಲ್ಲವು.

ಸಿಲಿಕಾನ್ ಸಿಟಿಯಲ್ಲಿ ಹೆಚ್ಚಿನ ಮಾಲಿನ್ಯ- 'ನಮ್ಮ ಆಟೋ' ಚಾಲಕರಿಂದ ಮಹತ್ವದ ಹೆಜ್ಜೆ..!

ಇನ್ನು ಮಹೀಂದ್ರಾ ಟ್ರಿಯೊ ಯಾರಿ ವಾಹನದಲ್ಲಿ ಅಳವಡಿಸಲಾದ 3.69 ಕಿಲೋವ್ಯಾಟ್ಸ್ ಲೀಥಿಯಂ ಐಯಾನ್ ಬ್ಯಾಟರಿ 2ಕಿಲೋವ್ಯಾಟ್ಸ್ ಪೀಕ್ ಪವರ್ ಮತ್ತು 17.5 ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಒಂದು ಬಾರಿಯ ಚಾರ್ಜ್‍ಗೆ ಸುಮಾರು 80 ಕಿಲೋಮೀಟರ್ ಮೈಲೇಜ್ ಸಾಮರ್ಥ್ಯವನ್ನು ಪಡೆದುಕೊಂಡಿದೆ.

ಸಿಲಿಕಾನ್ ಸಿಟಿಯಲ್ಲಿ ಹೆಚ್ಚಿನ ಮಾಲಿನ್ಯ- 'ನಮ್ಮ ಆಟೋ' ಚಾಲಕರಿಂದ ಮಹತ್ವದ ಹೆಜ್ಜೆ..!

ಮಹೀಂದ್ರಾ ಟ್ರಿಯೊ ಆಟೋ ಗಂಟೆಗೆ 45 ಕಿಲೋಮೀಟರ್ ವೇಗದಲ್ಲಿ ಚಲಿಸಬಲ್ಲ ಟಾಪ್ ಸ್ಪೀಡ್ ಹೊಂದಿದ್ದರೆ ಇನ್ನು ಮಹೀಂದ್ರಾ ಟ್ರಿಯೊ ಯಾರಿ ಗಂಟೆಗೆ 24.5 ಕಿಲೋಮೀಟರ್ ವೇಗದಲ್ಲಿ ಚಲಿಸಬಲ್ಲ ಸಾಮರ್ಥ್ಯವನ್ನು ಪಡೆದುಕೊಂಡಿದೆ.

ಸಿಲಿಕಾನ್ ಸಿಟಿಯಲ್ಲಿ ಹೆಚ್ಚಿನ ಮಾಲಿನ್ಯ- 'ನಮ್ಮ ಆಟೋ' ಚಾಲಕರಿಂದ ಮಹತ್ವದ ಹೆಜ್ಜೆ..!

ಐಪಿ 67 ರೇಟೆಡ್ ಬ್ಯಾಟರಿ ಬಾಕ್ಸ್ ಉತ್ತಮ ಬ್ಯಾಟರಿ ಸುರಕ್ಷತೆಯನ್ನು ಒದಗಿಸುತ್ತದೆ, ಹಿಂಭಾಗದ ಇನ್‍ಬಿಲ್ಟ್ ಕ್ರ್ಯಾಶ್ ಗಾರ್ಡ್ ಅಪಘಾತದ ಸಂದರ್ಭದಲ್ಲಿ ಪ್ರಯಾಣಿಕರನ್ನು ರಕ್ಷಿಸುತ್ತದೆ. ಈ ವೈಶಿಷ್ಟ್ಯಗಳು ಮಾಲೀಕರನ್ನು ಮತ್ತು ಚಾಲಕರನ್ನು 20-25% ರಷ್ಟು ಲಾಭ ಗಳಿಸುವ ಸಾಮರ್ಥ್ಯವನ್ನು ಹೆಚ್ಚಿಸಲು ಅವಕಾಶ ನೀಡುತ್ತದೆ. ಟ್ರಿಯೊ ಪ್ರತಿ ಕಿ.ಮಿಗೆ 0.50 ರೂ. ವೆಚ್ಚವನ್ನು ನಿರ್ವಹಿಸುತ್ತಿದೆ ಎಂದು ಮಹೀಂದ್ರಾ ಹೇಳಿಕೊಂಡಿದೆ.

ಸಿಲಿಕಾನ್ ಸಿಟಿಯಲ್ಲಿ ಹೆಚ್ಚಿನ ಮಾಲಿನ್ಯ- 'ನಮ್ಮ ಆಟೋ' ಚಾಲಕರಿಂದ ಮಹತ್ವದ ಹೆಜ್ಜೆ..!

ಈ ವೇಳೆ 2018ರ ನಮ್ಮ ಆಟೋ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಬಂದಿದ್ದ ಐಪಿಎಸ್ ಅಧಿಕಾರಿ ಅಣ್ಣಾಮಲೈ ಕೂಡಾ ಮಾಲಿನ್ಯ ತಡೆಯುವತ್ತ ಹೊಸ ಹೆಜ್ಜೆಯಿರಿಸುತ್ತಿರುವ ಆಟೋ ಚಾಲಕರನ್ನು ಪ್ರೋತ್ಸಾಹಿಸಿದ್ದಲ್ಲದೇ, ಟ್ರಾಫಿಕ್ ನಿಯಮಗಳನ್ನು ತಪ್ಪದೇ ಪಾಲಿಸುವಂತೆ ಕಿವಿಮಾತು ಹೇಳಿದರು.

Article Published On: Monday, November 19, 2018, 12:50 [IST]
English summary
Namma auto project bangalore mahindra treo showcased images details.
Read more on auto news bangalore
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+