ಬಿಡುಗಡೆಗೆ ಸಜ್ಜುಗೊಂಡ ಹೊಸ 2018ರ ಹ್ಯುಂಡೈ ಕ್ರೆಟಾ..!!
ದಕ್ಷಿಣ ಕೊರಿಯಾ ಮೂಲದ ವಾಹನ ತಯಾರಕ ಸಂಸ್ಥೆಯಾದ ಹ್ಯುಂಡೈ ತನ್ನ ಜನಪ್ರಿಯ ಕಾರುಗಳ ಮೂಲಕ ಗ್ರಾಹಕರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿದ್ದು, ಇದೀಗ ಹೊಸ 2018ರ ಹ್ಯುಂಡೈ ಕ್ರೆಟಾ ಕಾರ್ ಅನ್ನು ಬಿಡುಗಡೆ ಮಾಡುವ ಬಗ್ಗೆ ಮಾಹಿತಿ ಹೊರಹಾಕಿದೆ.
ದಕ್ಷಿಣ ಕೊರಿಯಾ ಮೂಲದ ವಾಹನ ತಯಾರಕ ಸಂಸ್ಥೆಯಾದ ಹ್ಯುಂಡೈ ತನ್ನ ಜನಪ್ರಿಯ ಕಾರುಗಳ ಮೂಲಕ ಗ್ರಾಹಕರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿದ್ದು, ಇದೀಗ ಹೊಸ 2018ರ ಹ್ಯುಂಡೈ ಕ್ರೆಟಾ ಕಾರ್ ಅನ್ನು ಬಿಡುಗಡೆ ಮಾಡುವ ಬಗ್ಗೆ ಮಾಹಿತಿ ಹೊರಹಾಕಿದೆ.

ಈಗಾಗಲೇ ಹೊಸ ಕ್ರೆಟಾ ಕಾರುಗಳು ದೇಶ ವಿವಿಧಡೆ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡಿದ್ದು, ಮಾಹಿತಿಗಳ ಪ್ರಕಾರ ಹೊಸ ಕಾರುಗಳು 1.6-ಲೀಟರ್ ಪೆಟ್ರೋಲ್, 1.4 ಮತ್ತು 1.6-ಲೀಟರ್ ಡೀಸೆಲ್ ಆವೃತ್ತಿಗಳಲ್ಲಿ ಲಭ್ಯವಿರಲಿದೆ ಎನ್ನಲಾಗಿದೆ.

1.6 ಲೀಟರ್ ಪೆಟ್ರೋಲ್ ಎಂಜಿನ್ ಮಾದರಿಯು 121-ಬಿಹೆಚ್‍ಪಿ ಮತ್ತು 154-ಎನ್ಎಂ ಟಾರ್ಕ್ ಉತ್ಪಾದಿಸಿದಲ್ಲಿ 1.4 ಲೀಟರ್ ಡೀಸೆಲ್ ಎಂಜಿನ್ ಮಾದರಿಯು 89-ಬಿಹೆಚ್‍ಪಿ ಮತ್ತು 224-ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು.

ಹಾಗೆಯೇ 1.6 ಲೀಟರ್ ಡೀಸೆಲ್ ಎಂಜಿನ್ ಮಾದರಿಯು 126-ಬಿಹೆಚ್‍ಪಿ ಮತ್ತು 256-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಲಿದ್ದು, ಎಲ್ಲಾ ಎಂಜಿನ್‍ಗಳನ್ನು 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು 1.6-ಡೀಸೆಲ್ ಎಂಜಿನ್ ಮಾದರಿಗಳನ್ನು 6 ಸ್ಪೀಡ್ ಆಟೋಮ್ಯಾಟಿಕ್ ಗೇರ್‍ಬಾಕ್ಸ್ ಆಯ್ಕೆಯಲ್ಲಿ ದೊರೆಯಲಿವೆ.

ಇನ್ನು ಹೊಸ ಕ್ರೆಟಾ ಫೇಸ್‍ಲಿಫ್ಟ್ ಕಾರುಗಳು ನವಿಕರಿಸಲಾಗಿರುವ ಹೆಡ್‍ಲ್ಯಾಂಪ್‍ಗಳು, ಹೊಸ ಬಂಪರ್ ಮತ್ತು ಎಲ್ಇಡಿ ಡಿಎಲ್‍ಆರ್ ಗಳನ್ನು ಪಡೆದಿದ್ದು, ರಿಯರ್ ಭಾಗವು ಕೂಡ ಹೊಸ ಬಂಪರ್‍ನೊಂದಿಗೆ ಪರಿಷ್ಕರಿಸಿದ ಟೈಲ್‍ಲೈಟ್ ಗಳನ್ನು ಪಡೆದಿದೆ.

ಇನ್ನುಳಿದಂತೆ ಕಾರಿನ ಒಳಭಾಗದಲ್ಲಿ 8 ಇಂಚಿನ ಟಚ್‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂನೊಂದಿಗೆ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಆಯ್ಕೆಯನ್ನು ನೀಡಲಾಗಿದ್ದು, ಇವು ಎಸ್‌ಯುವಿ ಪ್ರಿಯರಿಗೆ ಹೊಸ ಚಾಲನಾ ಅನುಭೂತಿ ನೀಡಲಿವೆ.

ಇದರ ಜೊತೆಗೆ ಹೊಸ ಕಾರು ಸನ್‍ರೂಫ್, ರೈನ್ ಸೆಂಸಿಂಗ್ ವೈಪರ್ಸ್, ಕ್ರೂಸ್ ಕಂಟ್ರೋಲ್ ಮತ್ತು ಆಟೋಮ್ಯಾಟಿಕ್ ಹೆಡ್‍ಲ್ಯಾಂಪ್ ಗಳನ್ನು ಪಡೆದಿದ್ದು, ಸುರಕ್ಷಾ ವೈಶಿಷ್ಟ್ಯತೆಗಳಿಗೂ ಹೆಚ್ಚಿನ ಒತ್ತು ನೀಡಲಾಗಿದೆ.

ಹೊಸ ವಿನ್ಯಾಸ ಮತ್ತು ವೈಶಿಷ್ಟ್ಯತೆಗಳನ್ನು ಪಡೆದ 2018ರ ಹ್ಯುಂಡೈ ಕ್ರೆಟಾ ಫೇಸ್‍ಲಿಫ್ಟ್ ಕಾರು ಇದೇ ಮೇ ತಿಂಗಳಿನಲ್ಲಿ ಬಿಡುಗಡೆಗೊಳ್ಳಲಿದ್ದು, ಇದರ ಬೆಲೆಯು ಪ್ರಸ್ಥುತ ಲಭ್ಯವಿರುವ ಕ್ರೆಟಾ ಕಾರಿನ ಬೆಲೆಯನ್ನೇ ಪಡೆದಿರಲಿದೆ ಎಂಬ ಮಾಹಿತಿ ಲಭ್ಯವಾಗಿದೆ.


Click it and Unblock the Notifications