ಬಹಿರಂಗಗೊಂಡ ಹೊಸ ಹೋಂಡಾ ಸಿಆರ್-ವಿ ಕಾರಿನ ಬಿಡುಗಡೆಯ ಮಾಹಿತಿ..

ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಹೋಂಡಾ ಮೋಟರ್ಸ್ ತಮ್ಮ ಹೊಸ ತಲೆಮಾರಿನ ಸಿಆರ್-ವಿ ಕ್ರಾಸ್‍ಓವರ್ ಎಸ್‍‍ಯುವಿ ಕಾರನ್ನು ದೇಶಿಯ ಮಾರುಕಟ್ಟೆಗೆ ಪರಿಚಯಿಸುವ ಯೋಜನೆಯಲಿದೆ.

By Rahul Ts

ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಹೋಂಡಾ ಮೋಟರ್ಸ್ ತಮ್ಮ ಹೊಸ ತಲೆಮಾರಿನ ಸಿಆರ್-ವಿ ಕ್ರಾಸ್‍ಓವರ್ ಎಸ್‍‍ಯುವಿ ಕಾರನ್ನು ದೇಶಿಯ ಮಾರುಕಟ್ಟೆಗೆ ಪರಿಚಯಿಸುವ ಯೋಜನೆಯಲಿದ್ದು, ಮಾಹಿತಿಗಳ ಪ್ರಕಾರ ಇದೇ ಅಕ್ಟೋಬರ್ ತಿಂಗಳಿನಲ್ಲಿ ಬಿಡುಗಡೆಗೊಳಿಸಲಿದೆ.

ಬಹಿರಂಗಗೊಂಡ ಹೊಸ ಹೋಂಡಾ ಸಿಆರ್-ವಿ ಕಾರಿನ ಬಿಡುಗಡೆಯ ಮಾಹಿತಿ..

ಹೊಸ ಹೊಂಡಾ ಸಿಆರ್-ವಿ ಕಾರು ಮೊದಲ ಬಾರಿಗೆ 2018ರ ಅಟೋ ಎಕ್ಸ್ ಪೋ ಮೇಳದಲ್ಲಿ ಪ್ರದರ್ಶನಗೊಂಡು, ಗ್ರಾಹಕರಲ್ಲಿ ಕುತೂಹಲವನ್ನು ಹುಟ್ಟುಹಾಕಿತ್ತು. ಹೊಸ ತಲೆಮಾರಿನ ಸಿಆರ್-ವಿ ಕಾರು ಮೂರು ಸಾಲಿನ ಸೀಟ್ ಆಕಾರದಲ್ಲಿ ಬಿಡುಗಡೆಗೊಳಲಿದ್ದು, ಪ್ರಸ್ಥುತ ಇರುವ ಸಿಆರ್‍-ವಿ ಕಾರಿಗಿಂತ ವಿಶಾಲವಾಗಿದೆ.

ಬಹಿರಂಗಗೊಂಡ ಹೊಸ ಹೋಂಡಾ ಸಿಆರ್-ವಿ ಕಾರಿನ ಬಿಡುಗಡೆಯ ಮಾಹಿತಿ..

ಮುಂದಿನ ತಲೆಮಾರಿನ ಹೋಂಡಾ ಸಿಆರ್-ವಿ ಕಾರು ಈ ಬಾರಿ ಹೊಸ ಡೀಸೆಲ್ ಎಂಜಿನ್ ಪಡೆಯಲಿದೆ. ಒದಗಿಸಲಾಗಿರುವ ಹೊಸ 1.6 ಲೀಟರ್ ಡೀಸೆಲ್ ಎಂಜಿನ್ ಅನ್ನು ಅರ್ಥ್ ಎಂಜಿನ್ ಫಾಮಿಲಿಯಿಂದ ಆಮದು ಮಾಡಿಕೊಳ್ಳಲಾಗಿದೆ.

ಬಹಿರಂಗಗೊಂಡ ಹೊಸ ಹೋಂಡಾ ಸಿಆರ್-ವಿ ಕಾರಿನ ಬಿಡುಗಡೆಯ ಮಾಹಿತಿ..

ಹೊಸ ಸಿಆರ್-ವಿ ಕಾರು 1.6 ಲೀಟರ್ ಡೀಸೆಲ್ ಎಂಜಿನ್ 118ಬಿಹೆಚ್‍ಪಿ ಮತ್ತು 300ಎನ್ ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಎಂಜಿನ್ ಅನ್ನು 9 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಇದಲ್ಲದೇ ಸಿಆರ್-ವಿ ಕಾರು ಆಲ್ ವ್ಹೀಲ್ ಡ್ರೈವ್ ಅನ್ನು ಪಡೆದುಕೊಂಡಿರಲಿದೆ.

ಬಹಿರಂಗಗೊಂಡ ಹೊಸ ಹೋಂಡಾ ಸಿಆರ್-ವಿ ಕಾರಿನ ಬಿಡುಗಡೆಯ ಮಾಹಿತಿ..

ಇನ್ನು ಹೊಸ ಸಿಆರ್-ವಿ ಕಾರು ಪೆಟ್ರೋಲ್ ಮಾದರಿಯಲ್ಲಿಯು ದೊರೆಯಲಿದ್ದು, ಇದರಲ್ಲಿನ 2 ಲೀಟರ್ ಪೆಟ್ರೋಲ್ ಎಂಜಿನ್ 152ಬಿಹೆಚ್‍‍ಪಿ ಮತ್ತು 189ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದೆ. ಎಂಜಿನ್ ಅನ್ನು ಸಿವಿಟಿ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದ್ದು, ಫ್ರಂಟ್ ವ್ಹೀಲ್ ಡ್ರೈವ್ ಅನ್ನು ಒದಗಿಸಲಾಗಿದೆ.

ಬಹಿರಂಗಗೊಂಡ ಹೊಸ ಹೋಂಡಾ ಸಿಆರ್-ವಿ ಕಾರಿನ ಬಿಡುಗಡೆಯ ಮಾಹಿತಿ..

ಹೋಂಡಾ ಸಂಸ್ಥೆಯು ಇನ್ನು ಈ ಕಾರಿನ ಇನ್ನಿತರೆ ಮಾಹಿತಿಗಳನ್ನು ಬಹಿರಂಗಗೊಳಿಸಲಿಲ್ಲವಾದರೂ, ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ ಆಯ್ಕೆಯನ್ನು ಸಪೋರ್ಟ್ ಮಾಡಬಲ್ಲ 7 ಇಂಚಿನ ಟಚ್‍‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಡ್ಯುಯಲ್ ಜೋನ್ ಕ್ಲೈಮೇಟ್ ಕಂಟ್ರೋಲ್ ಮತ್ತು ವಿದ್ಯುತ್‍‍ನಿಂದ ಅಡ್ಜಸ್ಟ್ ಮಾಡಬಲ್ಲ ಡ್ರೈವರ್ ಸೀಟ್ ಅನ್ನು ಅಳವಡಿಸಬಹುದು ಎಂಬ ನಿರೀಕ್ಷೆಯಲ್ಲಿದೆ.

ಬಹಿರಂಗಗೊಂಡ ಹೊಸ ಹೋಂಡಾ ಸಿಆರ್-ವಿ ಕಾರಿನ ಬಿಡುಗಡೆಯ ಮಾಹಿತಿ..

ಹೇಗಾದರೂ ಹೋಂಡಾ ಸಿಆರ್-ವಿ ಕಾರು ದೇಶಿಯವಾಗಿಯೆ ತಯಾರಿಸಲಾಗಿದ್ದು, ಅಕರಿನ ಬೆಲೆಯು ಕೂಡಾ ಕಡಿಮೆ ಇರಲಿದೆ ಎನ್ನಲಾಗಿದೆ. ಅಂದರೇ ಸುಮಾರು ಎಕ್ಸ್ ಶೋರಂ ಪ್ರಕಾರ ರೂ.28 ಲಕ್ಷದ ಬೆಲೆಯನ್ನು ಇರಬಹುದು ಎನ್ನಲಾಗಿದೆ.

ಬಹಿರಂಗಗೊಂಡ ಹೊಸ ಹೋಂಡಾ ಸಿಆರ್-ವಿ ಕಾರಿನ ಬಿಡುಗಡೆಯ ಮಾಹಿತಿ..

ಹೋಂಡಾ ಸಂಸ್ಥೆಯು ಹೊಸ ತಲೆಮಾರಿನ ಸಿಆರ್-ವಿ ಕ್ರಾಸ್‍ಓವರ್ ಎಸ್‍‍ಯುವಿ ಕಾರನ್ನು ಬಿಡುಗಡೆಗೊಳಿಸಿದ ನಂತರ, 2018ರ ಆಟೋ ಎಕ್ಸ್ ಪೋ ಮೇಳದಲ್ಲಿ ಪ್ರದರ್ಶಿಸಲಾದ ಸಿಆರ್-ವಿ ಕಾರಿನ ಎಂಜಿನ್ ಅನ್ನು ಆಧರಿಸಲಾದ ಹೊಸ ಸಿವಿಕ್ ಕಾರನ್ನು ಕೂಡಾ ಬಿಡುಗಡೆಗೊಳಿಸಲಿದೆ.

ಬಹಿರಂಗಗೊಂಡ ಹೊಸ ಹೋಂಡಾ ಸಿಆರ್-ವಿ ಕಾರಿನ ಬಿಡುಗಡೆಯ ಮಾಹಿತಿ..

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ

ಹೋಂಡಾ ಸಂಸ್ಥೆಯು ತಮ್ಮ ಸಿಆರ್-ವಿ ಕಾರಿನ ಬಿಡುಗಡೆಯ ಬಗೆ ಬಹಿರಂಗಗೊಳಿಸಿದ್ದು, ಈ ಬಾರಿ ಹೊಸ ಎಂಜಿನ್, ಹೊಸ ವೈಶಿಷ್ಟ್ಯತೆಗಳನ್ನು ಮತ್ತು ವಿಷಾಲವಾದ ಆಕರವನ್ನು ಪಡೆದು ಮಾರುಕಟ್ಟೆಗೆ ಲಗ್ಗೆಯಿಡಲಿದೆ. ಇನ್ನು ಕಾರಿನ ಹೆಚ್ಚಿನ ಮಾಹಿತಿಗಾಗಿ ಇನ್ನು ಕೆಲ ದಿನಗಳ ವರೆಗೂ ಕಾಯ್ದು ನೋಡಬೇಕಿದೆ.

Article Published On: Thursday, August 9, 2018, 12:09 [IST]
English summary
New Honda CR-V India Launch Details Revealed.
Read more on honda new car suv
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+