ಬಿಡುಗಡೆಯಾಗಲಿರುವ ಕ್ರೇಟಾ ಫೇಸ್‌ಲಿಫ್ಟ್ ತಾಂತ್ರಿಕ ಅಂಶಗಳ ಬ್ರೌಷರ್ ಸೋರಿಕೆ...
ಕ್ರೇಟಾ ಫೇಸ್ಲಿಫ್ಟ್ ಕಾರುಗಳು ಮಾರುಕಟ್ಟೆಗೆ ಲಗ್ಗೆಯಿಡಲು ಸಜ್ಜಾಗುತ್ತಿದ್ದು, ಇದಕ್ಕೂ ಮುನ್ನ ಹೊಸ ಕಾರಿನ ತಾಂತ್ರಿಕ ಅಂಶಗಳು ಸೋರಿಕೆಯಾಗಿವೆ.
ಸದ್ಯ ಹ್ಯುಂಡೈ ನಿರ್ಮಾಣದ ಕ್ರೇಟಾ ಫೇಸ್ಲಿಫ್ಟ್ ಕಾರುಗಳು ಮಾರುಕಟ್ಟೆಗೆ ಲಗ್ಗೆಯಿಡಲು ಸಜ್ಜಾಗುತ್ತಿದ್ದು, ಇದಕ್ಕೂ ಮುನ್ನ ಹೊಸ ಕಾರಿನ ತಾಂತ್ರಿಕ ಅಂಶಗಳು ಸೋರಿಕೆಯಾಗಿವೆ. ಹೀಗಾಗಿ ಬಿಡುಗಡೆಯಾಗುತ್ತಿರುವ ಕ್ರೇಟಾ ಫೇಸ್ಲಿಫ್ಟ್ ಕಾರುಗಳು ಎಸ್‌ಯುವಿ ಪ್ರಿಯರಲ್ಲಿ ಕುತೂಹಲ ಹುಟ್ಟುಹಾಕಿವೆ.

ದೇಶಿಯ ಮಾರುಕಟ್ಟೆಯಲ್ಲಿ ತನ್ನ ವಾಹನಗಳಿಂದ ಜನಪ್ರಿಯತೆಯನ್ನು ಪಡೆದ ಹ್ಯುಂಡೈ ಸಂಸ್ಥೆಯು ತಮ್ಮ ಕ್ರೆಟಾ ಫೆಸ್‍ಲಿಫ್ಟ್ ಕಾರನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಲಿದ್ದು, ಈಗಾಗಲೆ ಡೀಲರ್‍ಗಳ ಯಾರ್ಡ್ ಅನ್ನು ಸೇರಿವೆ. ಈ ಹಿಂದೆಯೆ ನಾವು ಕಾರಿನ ವೇರಿಯಂಟ್‍ಗಳ ಬಗ್ಗೆ ಮಾಹಿತಿ ನೀಡಿದ್ದು, ಇದೀಗ ಹೊಸ ಕಾರಿನ ತಾಂತ್ರಿಕ ಅಂಶಗಳ ಮಾಹಿತಿ ಇರುವ ಬ್ರೌಷರ್ ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆಯಾಗಿದೆ.

ಮಾಹಿತಿಗಳ ಪ್ರಕಾರ ಹ್ಯುಂಡೈ ಕ್ರೇಟಾ ಫೇಸ್ಲಿಫ್ಟ್ ಕಾರುಗಳು ಇ, ಇ+, ಎಸ್, ಎಸ್ಎಕ್ಸ್, ಎಸ್ಎಕ್ಸ್ ಡ್ಯುಯಲ್ ಟೋನ್ ಮತ್ತು ಎಸ್ಎಕ್ಸ್ (ಓ) ಎಂಬ ಆರು ವೇರಿಯಂಟ್‍ಗಳಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿವೆ ಎನ್ನಲಾಗಿದೆ.

ಹ್ಯುಂಡೈ ಕ್ರೇಟಾ ಫೇಸ್‍ಲಿಫ್ಟ್ ಕಾರಿನ ಮುಂಭಾಗದಲ್ಲಿ ಕೇಸ್‍ಕೇಡಿಂಗ್ ಗ್ರಿಲ್, ಸ್ಕಿಡ್ ಪ್ಲೇಟ್ಸ್, ಡ್ಯುಯಲ್ ಟೋನ್ ಬಂಪರ್ ಮತ್ತು ಸ್ಪ್ಲಿಟ್ ಟೈಲ್ ಲೈಟ್ ಕ್ಲಸ್ಟರ್ ಅನ್ನು ಅಳವಡಿಸಲಾಗಿದ್ದು, ಜೊತೆಗೆ ಬಿ-ಫಂಕ್ಷನಲ್ ಪ್ರೊಜೆಕ್ಟರ್ ಹೆಡ್‍ಲ್ಯಾಂಪ್ಸ್, ಎಲ್ಇಡಿ ಡಿಆರ್‍ಎಲ್ ಮತ್ತು 17 ಇಂಚಿನ ಅಲಾಯ್ ಚಕ್ರಗಳನ್ನು ಪಡೆದುಕೊಂಡಿರಲಿದೆ.

ಜೊತೆಗೆ ಕ್ರೇಟಾ ಫೇಸ್ಲಿಫ್ಟ್ ಕಾರುಗಳು ಸ್ಮಾರ್ಟ್ ಕೀ ಬ್ಯಾಂಡ್, 6 ವಿಧಗಳಲ್ಲಿ ಅಡ್ಜಸ್ಟ್ ಮಾಡಬಹುದಾದ ಡ್ರೈವರ್ ಸೀಟ್ಸ್, ಎಲೆಕ್ಟ್ರಾನಿಕ್ ಸನ್‍ರೂಫ್, ವೈರ್‍ಲೆಸ್ ಚಾರ್ಜಿಂಗ್ ಮತ್ತು ಕ್ರೂಸ್ ಕಂಟ್ರೋಲ್‍ನಂತಹ ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿದ್ದು, ಎಲೆಕ್ಟ್ರಿಕ್ ಸನ್ ರೂಫ್ ವೈಶಿಷ್ಟ್ಯತೆಯು ಕ್ರೆಟಾ ಫೇಸ್‍ಲಿಫ್ಟ್ ಕಾರಿನ ಎಸ್ಎಕ್ಸ್ ಆಟೊಮ್ಯಾಟಿಕ್ ಟ್ರಿಮ್ ವೇರಿಯಂಟ್‍ನಲ್ಲಿ ದೊರೆಯುತ್ತವೆ.

ಇನ್ನು ಕ್ರೇಟಾ ಹೊಸ ಕಾರುಗಳು ಪರ್ಲ್ ವೈಟ್, ಸ್ಲಿಕ್ ಸಿಲ್ವರ್, ಸ್ಟಾರ್ ಡಸ್ಟ್, ಫೈರ್ಲಿ ರೆಡ್, ಫ್ಯಾಂಟಮ್ ಬ್ಲ್ಯಾಕ್ ಮತ್ತು ಡ್ಯುಯಲ್ ಟೋನ್ ಪರ್ಲ್ ವೈಟ್ ಹಾಗೂ ಫ್ಯಾಂಟಮ್ ಬ್ಲ್ಯಾಕ್ ಬಣ್ಣ ಹೊಂದಿದ್ದು, ಹೊಸದಾಗಿ ಪ್ಯಾಶನ್ ಆರೆಂಜ್ ಬಣ್ಣವು ಡ್ಯುಯಲ್ ಟೋನ್ ಆಯ್ಕೆಯ ಬ್ಲಾಕ್ ರೂಫ್‍ನೊಂದಿಗೆ ಬರಲಿದೆ. ಇದಲ್ಲದೇ ಎರಡನೆಯದಾಗಿ ಪೋಲಾರ್ ವೈಟ್ ಬಣ್ಣದೊಂದಿಗೆ ಫ್ಯಾಂಟಮ್ ಬ್ಲಾಕ್ ರೂಫ್ ಎಂಬ ಮತ್ತೊಂದು ಡ್ಯುಯಲ್ ಟೋನ್ ಆಯ್ಕೆಯೊಂದಿಗೆ ಕೂಡಾ ಬರಲಿದೆ.

ಪ್ರಯಾಣಿಕರ ಸುರಕ್ಷತೆಗಾಗಿ ಹ್ಯುಂಡೈ ಕ್ರೇಟಾ ಫೇಸ್‍ಲಿಫ್ಟ್ ಕಾರುಗಳಲ್ಲಿ ಡ್ಯುಯಲ್ ಏರ್‍ಬ್ಯಾಗ್ಸ್ ಮತ್ತು ಎಬಿಎಸ್ ಅನ್ನು ಕಾರಿನ ಎಲ್ಲಾ ವೇರಿಯಂಟ್‍ಗಳಲ್ಲಿ ನೀಡಲಾಗುತ್ತಿದ್ದು, ಕಾರಿನ ಟಾಪ್ ಸ್ಪೆಕ್ ಮಾಡೆಲ್‍ಗಳು ಆರ್ ಏರ್‍ಬ್ಯಾಗ್ಸ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಹಿಲ್ ಅಸ್ಸಿಸ್ಟ್, ರಿಯರ್ ಪಾರ್ಕಿಂಗ್ ಸೆನ್ಸಾರ್ಸ್ ಮತ್ತು ಕ್ಯಾಮೆರಾ ಹಾಗೆಯೇ ಐಎಸ್ಒಫಿಕ್ಸ್ ವೈಲ್ಡ್ ಸೀಟ್ ಮೌಂಟ್ ಅನ್ನು ಅಳವಡಿಸಲಾಗಿದೆ.

ಎಂಜಿನ್ ವೈಶಿಷ್ಟ್ಯತೆ
ಹ್ಯುಂಡೈ ಕ್ರೇಟಾ ಫೇಸ್ಲಿಫ್ಟ್ ಕಾರುಗಳು 1.4 ಲೀಟರ್ ಡೀಸೆಲ್, 1.6 ಲೀಟರ್ ಡೀಸೆಲ್ ಮತ್ತು 1.6 ಲೀಟರ್ ಪೆಟ್ರೋಲ್ ಎಂಜಿನ್ ಮಾದರಿಗಳಲ್ಲಿ ಬರಲಿದ್ದು, 1.6 ಲೀಟರ್ ಎಂಜಿನ್‍ಗಳು 6 ಸ್ಪೀಡ್ ಮ್ಯಾನುವಲ್ ಅಥವ 6 ಸ್ಪೀಡ್ ಆಟೋಮ್ಯಾಟಿಕ್ ಗೇರ್‍ಬಾಕ್ಸ್ ನೊಂದಿಗೆ ಮತ್ತು 1.4 ಲೀಟರ್ ಎಂಜಿನ್‍ಗಳನ್ನು 5 ಸ್ಪೀಡ್ ಮ್ಯಾನುವಲ್ ಗೇರ್‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಹೊಸ ಕ್ರೇಟಾ ಫೇಸ್ಲಿಫ್ಟ್ ಕಾರುಗಳು ಪ್ರಸ್ಥುತ ತಲೆಮಾರಿನ ಕ್ರೆಟಾ ಕಾರುಗಳಿಗಿಂತ ವಿಭಿನ್ನವಾದ ವೈಶಿಷ್ಟ್ಯತೆಗಳನ್ನು ಹೊತ್ತು ಮಾರುಕಟ್ಟೆಗೆ ಲಗ್ಗೆಯಿಡಲಿದ್ದು, ಜೊತೆಗೆ ಸಂಸ್ಥೆಯು ಕಾರಿನ ಒಳಭಾಗದಲ್ಲಿಯೂ ಕೂಡ ಗುರುತರ ಬದಲಾವಣೆಗಳನ್ನು ಮಾಡಿವೆ.

ಇನ್ನು ಹ್ಯುಂಡೈ ಕ್ರೇಟಾ ಫೇಸ್‍ಲಿಫ್ಟ್ ಕಾರಿನ ಬಿಡುಗಡೆಯ ಸರಿಯಾದ ದಿನಾಂಕದ ಬಗ್ಗೆ ಮಾಹಿತಿ ದೊರೆತಿಲ್ಲವಾದರು, ಇದೇ ತಿಂಗಳಿನ ಕೊನೆಯಲ್ಲಿ ಬಿಡುಗಡೆಗೊಳ್ಳಬಹುದೆಂಬ ನಿರೀಕ್ಷೇಯಿದೆ. ಅಲ್ಲದೇ ಕಾರಿನ ಬೆಲೆಯ ಬಗ್ಗೆ ನಿಖರ ಮಾಹಿತಿ ದೊರೆತಿಲ್ಲವಾದರೂ ಪ್ರಸ್ತುತ ಕ್ರೇಟಾ ಕಾರುಗಳಿಂತ ಹೊಸ ಕ್ರೇಟಾ ಕಾರುಗಳು ರೂ.20 ಸಾವಿರದಿಂದ ರೂ.30 ಸಾವಿರ ಹೆಚ್ಚುವರಿ ಬೆಲೆ ಪಡೆಯಬಹುದು.


Click it and Unblock the Notifications