ಹ್ಯುಂಡೈ ಕ್ರೆಟಾ ಫೇಸ್‍‍ಲಿಫ್ಟ್ ಕಾರಿನ ಟಾಪ್ ಫೀಚರ್‍‍ಗಳಿವು..

ಕೊರಿಯನ್ ಮೂಲದ ವಾಹನ ತಾಯರಕ ಸಂಸ್ಥೆಯಾದ ಹ್ಯುಂಡೈ ತಮ್ಮ ಜನಪ್ರಿಯ ಕ್ರೆಟಾ ಕಾರಿನ ಫೇಸ್‍‍ಲಿಫ್ಟ್ ಮಾದರಿಯನ್ನು ಬಿಡುಗಡೆಗೊಳಿಸಿದ್ದು, ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ 9.43 ಲಕ್ಷಕ್ಕೆ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದೆ.

By Rahul Ts

ಕೊರಿಯನ್ ಮೂಲದ ವಾಹನ ತಾಯರಕ ಸಂಸ್ಥೆಯಾದ ಹ್ಯುಂಡೈ ತಮ್ಮ ಜನಪ್ರಿಯ ಕ್ರೆಟಾ ಕಾರಿನ ಫೇಸ್‍‍ಲಿಫ್ಟ್ ಮಾದರಿಯನ್ನು ಬಿಡುಗಡೆಗೊಳಿಸಿದ್ದು, ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ 9.43 ಲಕ್ಷಕ್ಕೆ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದೆ. ಹೊಸದಾಗಿ ಬಿಡುಗಡೆಗೊಂಡ ಈ ಕಾರು ಹೊಸ ವಿನ್ಯಾಸ ಮತ್ತು ಹಲವಾರು ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿದೆ.

ಹ್ಯುಂಡೈ ಕ್ರೆಟಾ ಫೇಸ್‍‍ಲಿಫ್ಟ್ ಕಾರಿನ ಟಾಪ್ ಫೀಚರ್‍‍ಗಳಿವು..

ಹ್ಯುಂಡೈ ಕ್ರೆಟಾ ಫೇಸ್‍‍ಲಿಫ್ಟ್ ಕಾರು ಇ, ಇ+, ಎಸ್, ಎಸ್ಎಕ್ಸ್, ಎಸ್ಎಕ್ಸ್ ಡ್ಯುಯಲ್ ಟೋನ್ ಮತ್ತು ಎಸ್ಎಕ್ಸ್ (ಒ) ಎಂಬ ಆರು ವೇರಿಯಂಟ್‍‍ಗಳಲ್ಲಿ ಖರೀದಿಗೆ ಲಭ್ಯವಿದ್ದು, ಬೇಸ್ ವೇರಿಯಂಟ್ ಕಾರುಗಳು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ 9.43 ಲಕ್ಷಕ್ಕೆ ನಿಗದಿಯಾಗಿದ್ದರೆ ಇನ್ನು ಕಾರಿನ ಟಾಪ್ ಎಂಡ್ ವೇರಿಯಂಟ್‍‍ಗಳು ರೂ 15.03 ಲಕ್ಷಕ್ಕೆ ನಿಗದಿಪಡಿಸಲಾಗಿದೆ.

ಹ್ಯುಂಡೈ ಕ್ರೆಟಾ ಫೇಸ್‍‍ಲಿಫ್ಟ್ ಕಾರಿನ ಟಾಪ್ ಫೀಚರ್‍‍ಗಳಿವು..

ಎಲೆಕ್ಟ್ರಿಕ್ ಸನ್‍ರೂಫ್

ಹ್ಯುಂಡೈ ಕ್ರೆಟಾ ಫೇಸ್‍‍ಲಿಫ್ಟ್ ಕಾರುಗಳಲ್ಲಿ ಹೊಸದಾಗಿ ಸನ್‍‍ರೂಫ್ ಅನ್ನು ಅಳವಡಿಸಲಾಗಿದ್ದು, ಇದನ್ನು ಸ್ಮಾರ್ಟ್ ಎಲೆಕ್ಟ್ರಿಕ್ ಸನ್‍‍ರೂಫ್ ಎಂದು ಕರೆಯಲ್ಪಡುತ್ತದೆ. ಈ ಫೀಚರ್ ಕೇವಲ ಕಾರಿನ ಎಸ್ಎಕ್ಸ್ ಮತ್ತು ಎಸ್ಎಕ್ಸ್ (ಒ) ವೇರಿಯಂಟ್‍‍ಗಳಲ್ಲಿ ಮಾತ್ರ ಲಭ್ಯವಿರಲಿದೆ.

ಹ್ಯುಂಡೈ ಕ್ರೆಟಾ ಫೇಸ್‍‍ಲಿಫ್ಟ್ ಕಾರಿನ ಟಾಪ್ ಫೀಚರ್‍‍ಗಳಿವು..

ಸ್ಮಾರ್ಟ್ ಕೀ ಬ್ಯಾಂಡ್

ಕ್ರೆಟಾ ಫೇಸ್‍‍ಲಿಫ್ಟ್ ಕಾರುಗಳಲ್ಲಿ ಸ್ಮಾರ್ಟ್ ಕೀ ಬ್ಯಾಂಡ್ ಎಂಬ ವೈಶಿಷ್ಟ್ಯತೆಯನ್ನು ಅಳವಡಿಸಲಾಗಿದ್ದು, ಈ ಫೀಚರ್ ಕಾರಿನ ಬಾಗಿಲುಗಳನ್ನು ಆಟೋಮ್ಯಾಟಿಕ್ ಲಾಕ್ ಮತ್ತು ಅನ್‍‍ಲಾಕ್ ಮಾಡಲು ಸಹಕಾರಿಯಾಗಿವೆ. ಇದಲ್ಲದೆ ಇದರಿಂದಾಗಿ ಎಂಜಿನ್ ಸ್ಟಾರ್ಟ್/ಸ್ಟಾಪ್, ಟೈಲ್‍‍ಗೇಟ್ ಒಪೆನಿಂಗ್ ಮತ್ತು ಸ್ಲೀಪ್ ಮಾನಿಟರಿಂಗ್ ಅನ್ನು ನಿಯಂತ್ರಿಸಬಹುದಾಗಿದೆ.

ಹ್ಯುಂಡೈ ಕ್ರೆಟಾ ಫೇಸ್‍‍ಲಿಫ್ಟ್ ಕಾರಿನ ಟಾಪ್ ಫೀಚರ್‍‍ಗಳಿವು..

ಹೊಸ ಬಣ್ಣ

ಹ್ಯುಂಡೈ ಕ್ರೆಟಾ ಫೇಸ್‍‍ಲಿಫ್ಟ್ ಕಾರುಗಳು ಇದೀಗ ಪ್ಯಾಶನ್ ಆರೆಂಜ್, ಮೆರಿನಾ ಬ್ಲೂ ಮತ್ತು ಡ್ಯುಯಲ್ ಟೋನ್ ಆರೇಂಜ್/ಬ್ಲಾಕ್ ಎಂಬ ಹೊಸ ಬಣ್ಣಗಳನ್ನು ಪಡೆದುಕೊಂಡಿದ್ದು, ಜೊತೆಗೆ ಪರ್ಲ್ ವೈಟ್, ಸ್ಲೀಕ್ ಸಿಲ್ವರ್ ಸ್ಟಾರ್‍‍ಡಸ್ಟ್, ಫೈರಿ ರೆಡ್, ಫ್ಯಾಂಥಮ್ ಬ್ಲಾಕ್ ಮತ್ತು ಡ್ಯುಯಲ್ ಟೋನ್ ವೈಟ್/ಬ್ಲಾಕ್ ಬಣ್ಣಗಳಾಲ್ಲಿ ಕೂಡ ಖರೀದಿಗೆ ಲಭ್ಯವಿದೆ.

ಹ್ಯುಂಡೈ ಕ್ರೆಟಾ ಫೇಸ್‍‍ಲಿಫ್ಟ್ ಕಾರಿನ ಟಾಪ್ ಫೀಚರ್‍‍ಗಳಿವು..

ಕ್ರೆಟಾ ಫೇಸ್‍‍ಲಿಫ್ಟ್ ಕಾರಿನ ಎಸ್ಎಕ್ಸ್ ಡ್ಯುಯಲ್ ಟೋನ್ ವೇರಿಯಂಟ್ ಕಾರುಗಳ ಒಳಭಾಗದಲ್ಲಿ ವಿಶೇಷವಾಗಿ ಟಾಂಗೇರಿಯನ್ ಆರೇಂಜ್ ಬಣ್ಣದಿಂದ ಸಜ್ಜುಗೊಳಿಸಲಾಗಿದೆ.

ಹ್ಯುಂಡೈ ಕ್ರೆಟಾ ಫೇಸ್‍‍ಲಿಫ್ಟ್ ಕಾರಿನ ಟಾಪ್ ಫೀಚರ್‍‍ಗಳಿವು..

ಹ್ಯುಂಡೈ ಆಟೋ ಲಿಂಕ್

ಈ ಕಾರಿನಲ್ಲಿ ಹ್ಯುಂಡೈ ಆಟೋ ಲಿಂಕ್ ಎಂಬ ವೈಶಿಷ್ಟ್ಯತೆಯನ್ನು ಅಳವಡಿಸಲಾಗಿದ್ದು, ಇದರ ಸಹಾಯದಿಂದ ಕಾರಿನ ಆರೋಗ್ಯದ ಸ್ಥಿತಿಯನ್ನು ಕಂಡುಕೊಳ್ಳಬಹುದಾಗಿದೆ. ಅಲ್ಲದೆ ಇದರಿಂದ ಡ್ರೈವಿಂಗ್ ಹಿಸ್ಟರಿ, ವೆಹಿಕಲ್ ಹೆಲ್ತ್ ಚೆಕ್, ಕಾರ್ ಹೆಲ್ತ್ ರಿಪೋರ್ಟ್, ಡ್ರೈವಿಂಗ್ ಮಾಹಿತಿ ಮತ್ತು ಇಕೊ ಡ್ರೈವಿಂಗ್ ಅನ್ನು ಗಮನಿಸಬಹುದಾಗಿದೆ.

ಹ್ಯುಂಡೈ ಕ್ರೆಟಾ ಫೇಸ್‍‍ಲಿಫ್ಟ್ ಕಾರಿನ ಟಾಪ್ ಫೀಚರ್‍‍ಗಳಿವು..

ಇದಲ್ಲದೆ ಹೊಸ ಹ್ಯುಂಡೈ ಕ್ರೆಟಾ ಫೇಸ್‍‍ಲಿಫ್ಟ್ ಕಾರುಗಳಲ್ಲಿ ವೈರ್‍‍ಲೆಸ್ ಚಾರ್ಜಿಂಗ್, 6 ವಿಧಾನಗಳಲ್ಲಿ ಬದಲಾಯಿಸಬಹುದಾದ ಡ್ರೈವರ್ ಸೀಟ್ಸ್, ಕ್ರೂಸ್ ಕಂಟ್ರೋಲ್, ಎಬಿಎಸ್‍‍ನೊಂದಿಗೆ ಇಬಿಡಿ, 6 ಏರ್‍‍ಬ್ಯಾಗ್ಸ್, ಪುಶ್ ಬಟನ್ ಸ್ಟಾರ್ಟ್/ಸ್ಟಾಪ್ ಮತ್ತು 60:40 ಸ್ಪ್ಲಿಟ್ ರಿಯರ್ ಸೀಟ್‍‍ಗಳನ್ನು ಅಳವಡಿಸಲಾಗಿದೆ.

Article Published On: Tuesday, May 29, 2018, 9:30 [IST]
English summary
Hyundai Creta Facelift 2018 Top Features.
Read more on hyundai new launches suv
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+