ಬಿಡುಗಡೆಗೊಳ್ಳಲಿರುವ ಹ್ಯುಂಡೈ ಎಲಾಂಟ್ರಾ ಫೇಸ್‍ಲಿಫ್ಟ್ ಕಾರು ಇದೇ..
ದಕ್ಷಿಣ ಕೊರಿಯ ಮೂಲದ ವಾಹನ ತಯಾರಕ ಸಂಸ್ಥೆಯಾದ ಹ್ಯುಂಡೈ ತಮ್ಮ ಪ್ಯಾಸೆಂಜರ್ ಸೆಗ್ಮೆಂಟ್ ಕಾರುಗಳಿಂದ ಜಾಗತಿಕ ಮಾರುಕಟ್ಟೆಯಲ್ಲಿ ಜನಪ್ರಿಯತೆಯನ್ನು ಪಡಿದಿದೆ.
ದಕ್ಷಿಣ ಕೊರಿಯ ಮೂಲದ ವಾಹನ ತಯಾರಕ ಸಂಸ್ಥೆಯಾದ ಹ್ಯುಂಡೈ ತಮ್ಮ ಪ್ಯಾಸೆಂಜರ್ ಸೆಗ್ಮೆಂಟ್ ಕಾರುಗಳಿಂದ ಜಾಗತಿಕ ಮಾರುಕಟ್ಟೆಯಲ್ಲಿ ಜನಪ್ರಿಯತೆಯನ್ನು ಪಡಿದಿದ್ದು, ಸಂಸ್ಥೆಯು ಇದೀಗ ತನ್ನ ಎಲಾಂಟ್ರಾ ಸೆಡಾನ್ ಕಾರಿನ ಫೇಸ್‍ಲಿಫ್ಟ್ ಮಾದರಿಯನ್ನು ಬಿಡುಗಡೆಗೊಳಿಸಲಿದೆ.

ತನ್ನ ಹಳೆಯ ಮಾದರಿಯ ಕಾರಿಗಿಂತಾ ಹೊಸ ಎಲಾಂಟ್ರಾ ಕಾರುಗಳು ವಿನ್ಯಾಸದಲ್ಲಿ ಗುರುತರ ಬದಲಾವಣೆಗಳನ್ನು ಪಡೆದಿದ್ದು, ಇದೀಗ ಕಾರಿನ ಚಿತ್ರಗಳು ಸೋರಿಕೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇನ್ನು ಈ ಕಾರು ಜಾಗತಿಕವಾಗಿ ಮುಂದಿನ ತಿಂಗಳು ಬಿಡುಗಡೆಗೊಂಡರೆ, ಭಾರತದಲ್ಲಿ ಮಾತ್ರ 2019ರ ಮೊದಲ ತ್ರೈಮಾಸಿಕ ಅವಧಿಯಲ್ಲಿ ಬಿಡುಗಡೆಗೊಳ್ಳಲಿದೆ.

ಚಿತ್ರಗಳಲ್ಲಿ ನೋಡುವುದಾದರೆ ಹೊಸ ಎಲಾಂಟ್ರಾ ಫೇಸ್‍ಲಿಫ್ಟ್ ಕಾರು ತನ್ನ ಹಳೆಯ ಮಾದರಿಯಂತೆ ಗಾತ್ರ ಮತ್ತು ಆಕಾರವನ್ನು ಹೋಲಲಿದ್ದು, ಕಾರಿನ ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಗುರುತರ ಬದಲಾವಣೆಗಳನ್ನು ಪಡೆದಿದೆ. ಎಲಾಂಟ್ರಾ ಫೇಸ್‍ಲಿಫ್ಟ್ ಕಾರು ಅಗಲವಾದ ಹೆಡ್‍ಲ್ಯಾಂಪ್ಸ್, ಹೊಸ ಬಂಪರ್, ಹೊಸ ಕೇಸ್‍ಕೇಡಿಂಗ್ ಗ್ರಿಲ್ ವಿನ್ಯಾಸ ಮತ್ತು ಎಲ್ಇಡಿ ಅಂಶಗಳನ್ನು ಪಡೆದಿದೆ.

ಬಂಪರ್‍ಗಳು ಹೆಚ್ಚು ಆಕ್ರಮಣಕಾರಿ, ಹೆಡ್‍ಲ್ಯಾಂಪ್ ಮತ್ತು ಮಂಜು ದೀಪಗಳ ನಡುವೆ ಹೊಸ ಕ್ರೀಸ್ ಲೈನ್ ಅನ್ನು ಅಳವಡಿಸಲಾಗಿದ್ದು, ಫಾಗ್ ಲ್ಯಾಂಪ್ ತ್ರಿಭುಜದ ಆಕಾರದಲ್ಲಿದೆ, ಹುಂಡೈನ ಏರ್ ವೆಂಟ್ ಪರದೆಯ ದ್ವಾರಗಳಿಂದ ಸುತ್ತುವರಿದಿದೆ.

ಎಲಾಂಟ್ರಾ ಕಾರಿನ ಹಿಂಭಾಗದ ವಿನ್ಯಾಸದಲ್ಲೂ ಬದಲಾವಣೆಯನ್ನು ಕಾಣಬಹುದಾಗಿದ್ದು, ಕಾರಿನ ನಂಬರ್ ಪ್ಲೇಟ್ ಅನ್ನು ಹಿಂಭಾಗದ ಬಂಪರ್‍ಗೆ ಸ್ಥಳಾಂತರಗೊಳಿಸಲಾಗಿದೆ.

ಎಲಾಂಟ್ರಾ ಫೇಸ್‍ಲಿಫ್ಟ್ ಟೈಲ್ ದೀಪಗಳನ್ನು ಬೇರ್ಪಡಿಸುತ್ತದೆ ಮತ್ತು ತೀಕ್ಷ್ಣವಾದ ನೋಟ, ಕಡಿಮೆ ಹಿಂಭಾಗದ ಬಂಪರ್‍ನ ಉದ್ದಕ್ಕೂ ಚಲಿಸುವ ದಪ್ಪದಾದ ಕ್ರೋಮ್ ಬ್ಯಾಂಡ್ ಅನ್ನು ನೀಡುತ್ತದೆ. ಹಿಂಭಾಗದಲ್ಲಿ ಪ್ರಮುಖ ಪ್ರತಿಫಲಕಗಳು, ರಿವರ್ಸ್ ದೀಪಗಳು ಮತ್ತು ಹಿಂಭಾಗದ ಫಾಗ್ ಲ್ಯಾಂಪ್ ವಸತಿಗಳನ್ನೂ ಸಹ ಕಾಣಬಹುದು.

ಕಾರಿನ ಒಳಭಾಗದಲ್ಲಿಯೂ ಸಹ ಬದಲಾವಣೆಗಳನ್ನು ಮಾಡಲಾಗಿದ್ದು, ವಿನೂತನವಾದ ವೈಶಿಷ್ಟ್ಯತೆಗಳನ್ನು ಅಳವಡಿಸಲಾಗಿದೆ ಎನ್ನಲಾಗಿದೆ. ಈ ಬಾರಿ ಎಲಾಂಟ್ರಾ ಫೇಸ್‍ಲಿಫ್ಟ್ ಕಾರಿನಲ್ಲಿ ವೈರ್‍ಲೆಸ್ ಚಾರ್ಜಿಂಗ್ ವೈಶಿಷ್ಟ್ಯತೆಯನ್ನು ಕಾಣಬಹುದಾಗಿದ್ದು, ಇನ್ನಿತರೆ ವೈಶಿಷ್ಟ್ಯತೆಗಳ ಬಗ್ಗೆ ಸಂಸ್ಥೆಯು ಮಾಹಿತಿಯನ್ನು ಬಹಿರಂಗಪಡಿಸಲಿಲ್ಲ.

ಕೊರಿಯನ್ ದೇಶಗಳಲ್ಲಿ ಬಿಡುಗಡೆಗೊಳ್ಳುವ ಎಲಾಂಟ್ರಾ ಫೇಸ್‍ಲಿಫ್ಟ್ ಕಾರುಗಳು ಸ್ಮಾರ್ಟ್‍ಸ್ಟ್ರೀಮ್‍ನ ಜಿ1.6 ಪೆಟ್ರೋಲ್ ಎಂಜಿನ್ ಸಹಾಯದಿಂದ 123ಬಿಹೆಚ್‍ಪಿ ಮತ್ತು 154ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆಯಲಿದೆ.

ಭಾರತಕ್ಕೆ ಬರಲಿರುವ ಹ್ಯುಂಡೈ ಎಲಾಂಟ್ರಾ ಫೇಸ್‍ಲಿಫ್ಟ್ ಕಾರುಗಳ ಎಂಜಿನ್‍ನಲ್ಲಿ ಯಾವುದೇ ಬದಲಾವಣೆಗಳಾನ್ನು ಪಡೆದಿರುವುದಿಲ್ಲ. ಈ ಕಾರು ಭಾರತದಲ್ಲಿ 1.6 ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ ಮತ್ತು 2.0 ಲೀಟರ್ ನ್ಯಾಚುರಲ್ಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಬ ಎರಡು ಎಂಜಿನ್ ಆಯ್ಕೆಗಳಲ್ಲಿ ದೊರೆಯಲಿದ್ದು, ಮ್ಯಾನುವಲ್ ಅಥವಾ ಆಟೋಮ್ಯಾಟಿಕ್ ಗೇರ್‍ಬಾಕ್ಸ್ ಆಯ್ಕೆಯಲ್ಲಿ ಲಭ್ಯವಿರಲಿದೆ.

ದೇಶಿಯ ಮಾರುಕಟ್ಟೆಯಲ್ಲಿ ಎಂಟ್ರಿ ಕೊಡಲಿರುವ ಹ್ಯುಂಡೈ ಎಲಾಂಟ್ರಾ ಫೇಸ್‍ಲಿಫ್ಟ್ ಕಾರು ಈಗಾಗಲೆ ಲಭ್ಯವಿರುವ ಸ್ಕೋಡಾ ಆಕ್ಟೇವಿಯಾ ಮತ್ತು ಟೊಯೊಟಾ ಕೊರೊಲ್ಲಾ ಆಲ್ಟಿಸ್ ಕಾರುಗಳಿಗೆ ಪೈಪೋಟಿ ನೀಡಲಿದೆ.
Source : Rushlane


Click it and Unblock the Notifications








