ಐ20 ಫೇಸ್‌ಲಿಫ್ಟ್ v/s ಮಾರುತಿ ಸುಜುಕಿ ಬಲೆನೊ.. ಇವುಗಳಲ್ಲಿ ಯಾವುದು ಬೆಸ್ಟ್?
ಕಾರು ಮಾರಾಟದಲ್ಲಿ ಅಗ್ರಸ್ಥಾನದಲ್ಲಿರುವ ಹ್ಯುಂಡೈ ಐ20 ಫೇಸ್‌ಲಿಫ್ಟ್ ಹಾಗೂ ಮಾರುತಿ ಸುಜುಕಿ ಬಲೆನೊ ಕಾರುಗಳ ಬಗೆಗೆ ಇಲ್ಲಿ ಚರ್ಚಿಸಲಾಗಿದ್ದು, ಗ್ರಾಹಕರ ಆಯ್ಕೆ ಯಾವುದು ಸೂಕ್ತ ಎನ್ನುವ ವಿವರಣೆ ಇಲ್ಲಿದೆ ನೋಡಿ.
ಸದ್ಯ ಭಾರತೀಯ ಮಾರುಕಟ್ಟೆಯಲ್ಲಿನ ಕಾರುಗಳ ಮಾರಾಟ ಪ್ರಕ್ರಿಯೆ ಜೋರಾಗಿಯೇ ನಡೆದಿದ್ದು, ಅದರಲ್ಲೂ ಹ್ಯಾಚ್‌ಬ್ಯಾಕ್ ಆವೃತ್ತಿಗಳಿಗೆ ವಿಶೇಷ ಬೇಡಿಕೆಯಿದೆ. ಹೀಗಾಗಿ ಕಾರು ಮಾರಾಟದಲ್ಲಿ ಅಗ್ರಸ್ಥಾನದಲ್ಲಿರುವ ಹ್ಯುಂಡೈ ಐ20 ಫೇಸ್‌ಲಿಫ್ಟ್ ಹಾಗೂ ಮಾರುತಿ ಸುಜುಕಿ ಬಲೆನೊ ಕಾರುಗಳ ಬಗೆಗೆ ಇಲ್ಲಿ ಚರ್ಚಿಸಲಾಗಿದ್ದು, ಗ್ರಾಹಕರ ಆಯ್ಕೆ ಯಾವುದು ಸೂಕ್ತ ಎನ್ನುವ ವಿವರಣೆ ಇಲ್ಲಿದೆ ನೋಡಿ.

ದೇಶಿಯ ಮಾರುಕಟ್ಟೆಯ ಕಾರು ಮಾರಾಟದಲ್ಲಿ ಸದ್ಯ ನಂ.1 ಸ್ಥಾನ ಕಾಯ್ದುಕೊಂಡಿರುವ ಮಾರುತಿ ಸುಜುಕಿ ಮತ್ತು ಎರಡನೇ ಸ್ಥಾನದಲ್ಲಿರುವ ಹ್ಯುಂಡೈ ನಡುವೆ ಭಾರೀ ಪೈಪೋಟಿ ಇದ್ದು, ಉತ್ಪನ್ನಗಳಲ್ಲಿನ ವಿಭಿನ್ನತೆ ಮೂಲಕ ಗ್ರಾಹಕರನ್ನು ತಮ್ಮತ್ತ ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿವೆ ಎನ್ನಬಹುದು.

ಮಾರುತಿ ಸುಜುಕಿ ಬಲೆನೊ ಮತ್ತು ಹ್ಯುಂಡೈ ಫೇಸ್‌ಲಿಫ್ಟ್ ಐ20 ಕಾರುಗಳು ಸದ್ಯ ಹ್ಯಾಚ್‌ಬ್ಯಾಕ್ ಪ್ರಿಯರ ಹಾಟ್ ಫೇವರಿಟ್ ಎನಿಸಿದ್ದು, ಬೆಲೆ, ತಾಂತ್ರಿಕ ಅಂಶಗಳು, ವಿನ್ಯಾಸಗಳು, ಗ್ರಾಹಕ ಸ್ನೇಹಿ ಕಾರಿನ ಸೌಲಭ್ಯಗಳ ಬಗೆಗೆ ಇಲ್ಲಿ ಚರ್ಚೆ ಮಾಡೋಣ.

ಹ್ಯುಂಡೈ ಐ20 ಫೇಸ್‌ಲಿಫ್ಟ್
ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ ಸಂಸ್ಥೆಯು ಭಾರತದಲ್ಲಿ 2018ರ ಎಲೈಟ್ ಐ20 ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರುಗಳನ್ನು ಬಿಡುಗಡೆ ಮಾಡಿದ್ದು, ಹೊಸ ಕಾರಿನ ಬೆಲೆಗಳು ರೂ. 5.34 ಲಕ್ಷದಿಂದ ಆರಂಭವಾಗಿ ಟಾಪ್ ವೆರಿಯಂಟ್‌ಗಳು ರೂ. 9.15 ಲಕ್ಷ ಬೆಲೆ ಹೊಂದಿವೆ.

ನ್ಯೂ ಕ್ಲ್ಯಾಡಿಂಗ್ ಮತ್ತು ಗ್ರಿಲ್‌ಗಳು ಹೊಸ ಕಾರಿನ ಲುಕ್ ಹೆಚ್ಚಿಸಿದ್ದು, ಸ್ಟೈಲಿಶ್ ಬಂಪರ್, ನ್ಯೂ ಅಲಾಯ್ ಚಕ್ರಗಳು, ದೊಡ್ಡದಾದ ಟೈಲ್‌ಲ್ಯಾಂಪ್, ನ್ಯೂ ಟೈಲ್‌ಗೇಟ್‌ಗಳು 2018ರ ಎಲೈಟ್ ಐ20 ಪ್ರಮುಖಾಂಶಗಳಾಗಿದ್ದು, ಹೊಸ ನಮೂನೆಯ ಇಂಟಿರಿಯರ್ ಮತ್ತು ಇನ್ಪೋಟೈನ್‍ಮೆಂಟ್ ಕೂಡಾ ಗ್ರಾಹಕರನ್ನು ಸೆಳೆದಿವೆ.

ಎಂಜಿನ್ ಸಾಮರ್ಥ್ಯ
ಎಲೈಟ್ ಐ20 ಕಾರು ಮಾದರಿಗಳಲ್ಲಿ ಪ್ರಮುಖವಾಗಿ ಮೂರು ಮಾದರಿಗಳನ್ನು ಪರಿಚಯಿಸಲಾಗಿದ್ದು, ಗ್ರಾಹಕರ ಆಯ್ಕೆಗೆ ಅನುಗುಣವಾಗಿ 1.2-ಲೀಟರ್ ಪೆಟ್ರೋಲ್ ಎಂಜಿನ್, 1.4-ಲೀಟರ್ ಪೆಟ್ರೋಲ್ ಎಂಜಿನ್ ಮತ್ತು 1.4-ಲೀಟರ್ ಡೀಸೆಲ್ ಎಂಜಿನ್ ಪರಿಚಯಿಸಲಾಗಿದೆ.

ಈ ಮೂಲಕ 1.2-ಲೀಟರ್ ಪೆಟ್ರೋಲ್ ಎಂಜಿನ್ ಮಾದರಿಯಲ್ಲಿ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಒದಗಿಸಲಾಗಿದ್ದು, 1.4-ಲೀಟರ್ ಡೀಸೆಲ್ ಎಂಜಿನ್ ಮಾದರಿಯಲ್ಲಿ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ನೀಡಲಾಗಿದೆ.

ಹೊಸ ಕಾರಿನ ವಿಶೇಷತೆ ಏನು?
ಹೊಸ ಕಾರುಗಳ ಇಂಟಿರಿಯರ್ ಮತ್ತು ಎಕ್ಸಿಟಿರಿಯರ್ ವಿನ್ಯಾಸಗಳು ಆಕರ್ಷಕವಾಗಿದ್ದು, ಡ್ಯುಯಲ್ ಟೋನ್ ಪೇಂಟ್, ಸ್ಪೋರ್ಟಿ ಇಂಟಿರಿಯರ್ ಡಿಸೈನ್, ಐ ಬ್ಲ್ಯೂ ಸ್ಮಾರ್ಟ್ ಫೋನ್ ಆ್ಯಪ್, ರಿರ್ ಆರ್ಮ್‌ಸ್ಟ್ ಜೊತೆ ಕಪ್ ಹೊಲ್ಡರ್ ಒಳಗೊಂಡಿದೆ.

ಮಾರುತಿ ಸುಜುಕಿ ಬಲೆನೊ
2015 ಅಕ್ಟೋಬರ್ 26ರಂದು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದ್ದ ಬಲೆನೊ ಕಾರು ಮಾದರಿಯೂ, ಸುಧಾರಿತ ತಂತ್ರಜ್ಞಾನಗಳ ವ್ಯವಸ್ಥೆ ಮತ್ತು ಉತ್ತಮ ಕಾರ್ಯಕ್ಷಮತೆಯಿಂದಾಗಿ ಗ್ರಾಹಕರ ಮನಗೆದ್ದಿದೆ.

ಕಳೆದ ವರ್ಷ 10 ಉತ್ತಮ ಕಾರುಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದ ಬಲೆನೊ, ಅಲ್ಪಾವಧಿಯಲ್ಲಿ ಮಹತ್ತರ ಸಾಧನೆ ಮಾಡಿರುವುದು ಮಾರುತಿ ಸುಜುಕಿ ಸಂಸ್ಥೆಗೆ ಮತ್ತಷ್ಟು ಭರವಸೆ ನೀಡಿತ್ತು.

ಸದ್ಯ ಮಾರುಕಟ್ಟೆಯಲ್ಲಿ ಭಾರೀ ಪ್ರಮಾಣದಲ್ಲಿ ಮಾರಾಟಗೊಳ್ಳುತ್ತಿರುವ ಬಲೆನೊ ಆವೃತ್ತಿಯು, 1.2-ಲೀಟರ್ ಪೆಟ್ರೋಲ್ ಎಂಜಿನ್ ಹಾಗೂ 1.3-ಲೀಟರ್ ಡಿಸೇಲ್ ಎಂಜಿನ್‌ನೊಂದಿಗೆ ಅಭಿವೃದ್ಧಿ ಹೊಂದಿದ್ದು, ಆರಂಭಿಕ ಕಾರಿನ ಬೆಲೆಯು 7.36 ಲಕ್ಷ ಹಾಗೂ ಟಾಪ್ ಮಾದರಿಯು 8.41 ಲಕ್ಷ ಬೆಲೆ ಹೊಂದಿದೆ.

ಈ ಮೂಲಕ ಹ್ಯುಂಡೈ ಐ20 ಫೇಸ್‌ಲಿಫ್ಟ್‌ಗಿಂತಲೂ ಹಲವು ವಿಭಾಗಗಳಲ್ಲಿ ಉತ್ತಮ ಎನಿಸಿರುವ ಪ್ರಿಮಿಯಂ ಬಲೆನೊ ಆಯ್ಕೆಗೆ ಉತ್ತಮವಾಗಿದ್ದು, ಕಡಿಮೆ ಬೆಲೆಗಳಲ್ಲಿ ಆರಂಭಿಕ ಕಾರು ಮಾದರಿ ಖರೀದಿಸುವುದಾರರೇ ಐ20 ಫೇಸ್‌ಲಿಫ್ಟ್ ಕೂಡಾ ಉತ್ತಮ ಎನ್ನಬಹುದು.


Click it and Unblock the Notifications