ಭಾರತಕ್ಕೆ ಬರಲಿರುವ ಹ್ಯುಂಡೈ ಕೊನಾ ಎಲೆಕ್ಟ್ರಿಕ್ ಕಾರಿನ ವಿಶೇಷತೆಗಳೇನು..?

ಹ್ಯುಂಡೈ ಸಂಸ್ಥೆಯು 2018ರ ಜಿನೆವಾ ಮೋಟಾರ್ ಪ್ರದರ್ಶನದಲ್ಲಿ ತನ್ನ ಹೊಸ ಕೋನಾ ಇವಿ ಕಾರನ್ನು ಪರಿಚಯಿಸಲಿದ್ದು, ಎಲೆಕ್ಟ್ರಿಕ್ ಕೋನಾ ಕಂಪ್ಯಾಕ್ಟ್ ಕಾರು ಎಸ್‌ಯುವಿಯು ವಿಭಾಗದಲ್ಲಿ ಹೊಸ ನೀರಿಕ್ಷೆ ಹುಟ್ಟುಹಾಕಿದೆ.

By Rahul Ts

ಹ್ಯುಂಡೈ ಪರಿಚಯಿಸುತ್ತಿರುವ ಕೋನಾ ಕಾರು ಎರಡು ವಿಭಿನ್ನ ಪವರ್ ಟ್ರೈನ್ ಗಳಿಂದ 470 ಕಿ.ಮೀ ನಿಂದ 500 ಕಿ.ಮೀ.ವರೆಗೆ ಮೈಲೇಜ್ ಸಾಮರ್ಥ್ಯ ಹೊಂದಿದ್ದು, ಹೊಸ ಕೋನಾ ಇವಿ ವಿವರಗಳನ್ನು ಇದೇ ತಿಂಗಳ 27 ರಂದು ಬಹಿರಂಗಪಡಿಸಲಾಗುತ್ತಿದೆ.

ಭಾರತಕ್ಕೆ ಬರಲಿರುವ ಹ್ಯುಂಡೈ ಕೊನಾ ಎಲೆಕ್ಟ್ರಿಕ್ ಕಾರಿನ ವಿಶೇಷತೆಗಳೇನು..?

ಇದು ಒಂದು ಮೋಜಿನ ವಿನೋದದಿಂದ ಚಾಲನೆಗೊಳ್ಳುವ ಕಾರು ಹಾಗೂ ಅನುಕೂಲಕರ ಮತ್ತು ಸಂಪರ್ಕದ ವೈಶಿಷ್ಟ್ಯಗಳೊಂದಿಗೆ ವ್ಯಾಪಕ ಶ್ರೇಣಿ ಮತ್ತು ಸಕ್ರಿಯ ಸುರಕ್ಷತೆ, ಡ್ರೈವಿಂಗ್ ಅಸ್ಸಿಸ್ಟನ್ಸ್ ತಂತ್ರಜ್ಞಾನಗಳಿಂದ ಪ್ರಯೋಜನವನ್ನು ಪಡೆದಿರುತ್ತದೆ ಎಂದು ಹ್ಯುಂಡೈ ಸಂಸ್ಥೆಯು ಹೇಳಿಕೊಂಡಿದೆ.

ಭಾರತಕ್ಕೆ ಬರಲಿರುವ ಹ್ಯುಂಡೈ ಕೊನಾ ಎಲೆಕ್ಟ್ರಿಕ್ ಕಾರಿನ ವಿಶೇಷತೆಗಳೇನು..?

ಮಾಹಿತಿಗಳ ಪ್ರಕಾರ ಹ್ಯುಂಡೈ ಸಂಸ್ಥೆಯು ಕಾರಿನ ಎಲೆಕ್ಟ್ರಿಕ್ ಪವರ್ ಟ್ರೈನ್ ನಿರ್ಮಿಸಲು ಎಲ್ ಜಿ ಕೆಮಿಕಲ್ಸ್ ಜೊತೆ ಕೈಜೋಡಿಸಿದ್ದು, ಇದೇ ಬ್ಯಾಟರಿಯನ್ನು ಛ್ಹೆವಿ ಬೋಲ್ಟ್ ಹ್ಯಾಚ್ ಬ್ಯಾಕ್ ಕಾರಿನಲ್ಲು ಕೂಡ ಇರಿಸಲಾಗಿರಲಿದೆ ಎನ್ನಲಾಗಿದೆ. ಅಲ್ಲದೆ ಕೊನಾ ಇವಿ 40 ಕಿಲೋವ್ಯಾಟ್ಸ್ ಮತ್ತು 64ಕಿಲೋ ವ್ಯಾಟ್ಸ್ ಬ್ಯಾಟರಿ ಪ್ಯಾಕ್‌ನ್ನು ಹೊಂದಿರಲಿದೆ.

ಭಾರತಕ್ಕೆ ಬರಲಿರುವ ಹ್ಯುಂಡೈ ಕೊನಾ ಎಲೆಕ್ಟ್ರಿಕ್ ಕಾರಿನ ವಿಶೇಷತೆಗಳೇನು..?

ಹುಂಡೈ ಸಂಸ್ಥೆಯು ತನ್ನ ಮೊದಲ ಇವಿ ಕಾರನ್ನು 2019ರಲ್ಲಿ ಪರಿಚಯಿಸಲಿದ್ದು, ಇದಲ್ಲದೆ ಲೋನಿಕ್ ಹೈಬ್ರಿಡ್ ಮತ್ತು ಎಲೆಕ್ಟಿಕ್ ಮಾದರಿಯನ್ನು 2018ರ ಆಟೋ ಎಕ್ಸ್ ಪೋನಲ್ಲಿ ಪ್ರದರ್ಶಿಸಲಾಗಿತ್ತು. ಹೀಗಾಗಿ ಹೈಬ್ರಿಡ್ ಕಾರನ್ನು ಭಾರತದಲ್ಲಿ ಪರಿಚಯಿಸುವ ಯಾವುದೇ ಸುಳಿವು ಇಲ್ಲಾವಾದರೂ ಎಲೆಕ್ಟ್ರಿಕ್ ಕಾರನ್ನು ಮಾತ್ರ ಭಾರತದಲ್ಲಿ ಪರಿಚಯಿಸುವುದು ಖಚಿತವಾಗಿದೆ.

ಭಾರತಕ್ಕೆ ಬರಲಿರುವ ಹ್ಯುಂಡೈ ಕೊನಾ ಎಲೆಕ್ಟ್ರಿಕ್ ಕಾರಿನ ವಿಶೇಷತೆಗಳೇನು..?

ಇದೇ ತಿಂಗಳಲ್ಲಿ ಹ್ಯುಂಡೈ ಕೋನಾ ಕನ್ವೆಷನಲ್ ಪವರ್ ಟ್ರೈನ್ ಆವೃತಿಯನ್ನು ಅಮೆರಿಕಾದ ಮಾರುಕಟ್ಟೆಯಲ್ಲಿ ಮಾರಾಟ ಮಾಡಬಹುದು ಎನ್ನಲಾಗಿದ್ದು, ಎಸ್‌ಯುವಿ ಕಾರು ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಯಲ್ಲಿ ಫ್ರಂಟ್ ವೀಲ್ಹ್ ಡ್ರೈವ್ ಹಾಗು ರಿರ್ ವೀಲ್ ಡ್ರೈವ್ ಆಯ್ಕೆ ಹೊಂದಿರಲಿದೆ.

ಭಾರತಕ್ಕೆ ಬರಲಿರುವ ಹ್ಯುಂಡೈ ಕೊನಾ ಎಲೆಕ್ಟ್ರಿಕ್ ಕಾರಿನ ವಿಶೇಷತೆಗಳೇನು..?

ಇಂಜಿನ್ ಸಾಮರ್ಥ್ಯ

ಹ್ಯುಂಡೈ ಕೋನಾ ಎಸ್ ಯುವಿ 2 ಲೀಟರ್ ಪೆಟ್ರೋಲ್ ಎಂಜಿನ್ ಆವೃತ್ತಿಯು 147ಬಿಹೆಚ್ ಪಿ ಮತ್ತು 179ಎನ್ಎಂ ಟಾರ್ಕನ್ನು ಉತ್ಪಾದಿಸುವ ಶಕ್ತಿಯನ್ನು ಹೊಂದಿದ್ದು, ಇದನ್ನು 6 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸಿಗೆ ಜೋಡಿಸಲಾಗಿದೆ.

ಭಾರತಕ್ಕೆ ಬರಲಿರುವ ಹ್ಯುಂಡೈ ಕೊನಾ ಎಲೆಕ್ಟ್ರಿಕ್ ಕಾರಿನ ವಿಶೇಷತೆಗಳೇನು..?

ಹಾಗೆಯೇ ಡೀಸೆಲ್ ಆವೃತ್ತಿಯು 1.6 ಲೀಟರ್ ಟರ್ಬೋಚಾರ್ಜ್ಡ್ ಎಂಜಿನ್ 175 ಬಿಹೆಚ್ ಪಿ ಮತ್ತು 265 ಎನ್ಎಂ ಟಾರ್ಕನ್ನು ಉತ್ಪಾದಿಸುವ ಶಕ್ತಿಯನ್ನು ಹೊಂದಿರಲಿದೆ ಹಾಗು ಇದನ್ನು 7 ಸ್ಪೀಡ್ ಡ್ಯಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್ ಬಾಕ್ಸ್‌ಗೆ ಜೋಡಿಸಲಾಗಿದೆ.

ಭಾರತಕ್ಕೆ ಬರಲಿರುವ ಹ್ಯುಂಡೈ ಕೊನಾ ಎಲೆಕ್ಟ್ರಿಕ್ ಕಾರಿನ ವಿಶೇಷತೆಗಳೇನು..?

ಹ್ಯುಂಡೈ ಕೋನಾ ಎಸ್ ಯುವಿ 1 ಲೀಟರ್ ಟರ್ಬೊ ಡೀಸೆಲ್ ಎಂಜಿನ್ ನಲ್ಲಿಯು ಲಭ್ಯವಿರಲಿದ್ದು, 118ಬಿಹೆಚ್ ಪಿ ಮತ್ತು 172ಎನ್ಎಂ ಟಾರ್ಕನ್ನು ಉತ್ಪಾದಿಸುವ ಶಕ್ತಿಯನ್ನು ಹೊಂದಿರಲಿದೆ. ಹಾಗೆಯೆ ಎಂಜಿನನ್ನು 6 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸಿಗೆ ಜೋಡಿಸಲಾಗಿದೆ.

ಭಾರತಕ್ಕೆ ಬರಲಿರುವ ಹ್ಯುಂಡೈ ಕೊನಾ ಎಲೆಕ್ಟ್ರಿಕ್ ಕಾರಿನ ವಿಶೇಷತೆಗಳೇನು..?

ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಹೆಚ್ಚುತ್ತಿದ್ದು, ವಾಹನ ತಯಾರಕ ಸಂಸ್ಥೆಗಳು ಕೂಡ ಗ್ರಾಹಕರ ಮೆಚ್ಚುಗೆಯನ್ನು ಪಡೆಯಲು ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸುತ್ತಿವೆ. ಹಾಗೆಯೇ ಹ್ಯುಂಡೈ ಕೂಡ ತನ್ನ ಮೊದಲ ಎಲೆಕ್ಟ್ರಿಕ್ ಕಾರನ್ನು ತಯಾರಿಸಿದ್ದು, ಗ್ರಾಹಕರ ಮೆಚ್ಚುಗೆಯನ್ನು ಎಷ್ಟರ ಮಟ್ಟಿಗೆ ಪಡೆಯಲಿದೆ ಎಂಬುವುದನ್ನು ಕಾರಿನ ಬಿಡುಗಡೆಯ ನಂತರ ನೋಡಬೇಕಿದೆ.

Article Published On: Friday, February 16, 2018, 13:02 [IST]
English summary
New Hyundai Kona Electric Vehicle Teased Ahead Of Debut; Expected Launch Date, Specs & Features.
Read more on hyundai electric car
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+