ಕೇವಲ ಒಂದೇ ವಾರದಲ್ಲಿ 23 ಸಾವಿರ ಗ್ರಾಹಕರಿಂದ ಹೊಸ ಸ್ಯಾಂಟ್ರೋ ಕಾರಿಗಾಗಿ ಬುಕ್ಕಿಂಗ್

ನಿನ್ನೆಯಷ್ಟೇ ಹ್ಯುಂಡೈ ಸಂಸ್ಥೆಯು ತನ್ನ ಬಹುನೀರಿಕ್ಷಿತ ಹೊಸ ಸ್ಯಾಂಟ್ರೋ ಕಾರನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದ್ದು, ಹ್ಯುಂಡೈ ನೀರಿಕ್ಷೆಯೆಂತೆ ಹೊಸ ಕಾರು ಖರೀದಿಯ ಪ್ರಕ್ರಿಯೆಗೆ ಭರ್ಜರಿ ಚಾಲನೆ ಸಿಕ್ಕಿದೆ. ಕಾರು ಬಿಡುಗಡೆಗೂ ಒಂದು ವಾರದ ಮುನ್ನವೇ ಸ್ಯಾಂಟ್ರೋ ಬುಕ್ಕಿಂಗ್ ಆರಂಭಿಸಿದ್ದ ಹ್ಯುಂಡೈ ಸಂಸ್ಥೆಗೆ ಕಾರು ಖರೀದಿದಾರರ ಪ್ರಕ್ರಿಯೆ ಕಂಡು ಅಚ್ಚರಿಗೆ ಒಳಗಾಗಿದೆ.

ಕೇಲವ ಒಂದೇ ವಾರದಲ್ಲಿ 23 ಸಾವಿರ ಗ್ರಾಹಕರಿಂದ ಹೊಸ ಸ್ಯಾಂಟ್ರೋ ಕಾರಿಗಾಗಿ ಬುಕ್ಕಿಂಗ್

ಸ್ಯಾಂಟ್ರೋ ಆವೃತ್ತಿಯು ಆಟೋ ಉದ್ಯಮದಲ್ಲಿ ಹಲವು ವಿಶೇಷತೆಗಳಿಗೆ ಕಾರಣವಾಗಿರುವುದಲ್ಲದೇ ಕಾರು ಪ್ರಿಯರ ಹಾಟ್ ಫೆವರಿಟ್ ಆಗಿರುವುದು ಬಹುತೇಕರಿಗೆ ಗೊತ್ತಿರುವ ವಿಚಾರ. ಇದೀಗ ಮತ್ತೊಮ್ಮೆ ಸಂಚಲನ ಸೃಷ್ಠಿಸಲು ಸಜ್ಜಾಗಿರುವ ಹೊಸ ಸ್ಯಾಂಟ್ರೋ ಕಾರು ಮಧ್ಯಮ ವರ್ಗಗಳ ಬೇಡಿಕೆಗೆ ತಕ್ಕಂತೆ ಹೊಸ ವೈಶಿಷ್ಟ್ಯತೆಗಳೊಂದಿಗೆ ಭಾರತದಲ್ಲಿ ಮರುಬಿಡುಗಡೆಯಾಗಿದೆ.

ಕೇಲವ ಒಂದೇ ವಾರದಲ್ಲಿ 23 ಸಾವಿರ ಗ್ರಾಹಕರಿಂದ ಹೊಸ ಸ್ಯಾಂಟ್ರೋ ಕಾರಿಗಾಗಿ ಬುಕ್ಕಿಂಗ್

ಸ್ಯಾಂಟ್ರೋ ಕಾರು ಬಿಡುಗಡೆಗೊಂಡು 20 ವರ್ಷವಾದ್ರು ಇನ್ನು ಕೂಡಾ ಜನಪ್ರಿಯತೆಯಲ್ಲಿ ಮುಂಚೂಣಿಯಲ್ಲಿರುವ ಏಕೈಕ ಕಾರು ಮಾದರಿಯಾಗಿದ್ದು, ಇದೀಗ ಮಹತ್ತರ ಬದಲಾವಣೆಯೊಂದಿಗೆ ಮತ್ತೆ ಮರಳಿ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ.

ಕೇಲವ ಒಂದೇ ವಾರದಲ್ಲಿ 23 ಸಾವಿರ ಗ್ರಾಹಕರಿಂದ ಹೊಸ ಸ್ಯಾಂಟ್ರೋ ಕಾರಿಗಾಗಿ ಬುಕ್ಕಿಂಗ್

ಹೀಗಾಗಿಯೇ ಬುಕ್ಕಿಂಗ್ ಆರಂಭವಾದ ಕೇವಲ ಒಂದು ವಾರದಲ್ಲಿ ಬರೋಬ್ಬರಿ 23 ಸಾವಿರ ಗ್ರಾಹಕರು ಮುಂಗಡ ಪಾವತಿ ಹೊಸ ಕಾರಿಗಾಗಿ ಎದುರು ನೋಡುತ್ತಿದ್ದು, ಮಾಹಿತಿ ಪ್ರಕಾರ ಹೊಸ ಕಾರು ಖರೀದಿಗಾಗಿ ಇದೀಗ ಬುಕ್ಕಿಂಗ್ ಮಾಡಿದರೂ ಸಹ ಕಾರು ಪಡೆಯಲು ಕನಿಷ್ಠ ಮೂರು ತಿಂಗಳಾದ್ರು ಕಾಯಲೇಬೇಕಾದ ಅನಿವಾರ್ಯತೆ ಇದೆ.

ಕೇಲವ ಒಂದೇ ವಾರದಲ್ಲಿ 23 ಸಾವಿರ ಗ್ರಾಹಕರಿಂದ ಹೊಸ ಸ್ಯಾಂಟ್ರೋ ಕಾರಿಗಾಗಿ ಬುಕ್ಕಿಂಗ್

ಇನ್ನು ಬಿಡುಗಡೆಯಾಗಿರುವ ಹೊಸ ಸ್ಯಾಂಟ್ರೋ ಕಾರು ಐದು ಪ್ರಮುಖ ವೆರಿಯೆಂಟ್‌ಗಳಲ್ಲಿ ಲಭ್ಯವಿದ್ದು, ಸೌಲಭ್ಯಗಳಿಗೆ ಅನುಗುಣವಾಗಿ ಡಿ-ಲೈಟ್, ಎರಾ, ಮ್ಯಾಗ್ನಾ, ಸ್ಪೋರ್ಟ್ಜ್ ಮತ್ತು ಆಸ್ಟ್ರಾ ವೆರಿಯೆಂಟ್‌ಗಳನ್ನು ಆಯ್ಕೆ ಮಾಡಬಹುದು.

ಕೇಲವ ಒಂದೇ ವಾರದಲ್ಲಿ 23 ಸಾವಿರ ಗ್ರಾಹಕರಿಂದ ಹೊಸ ಸ್ಯಾಂಟ್ರೋ ಕಾರಿಗಾಗಿ ಬುಕ್ಕಿಂಗ್

ಹೊಸ ಸ್ಯಾಂಟ್ರೋ ಕಾರು ಪೆಟ್ರೋಲ್ ಎಂಜಿನ್ ಮತ್ತು ಸಿಎನ್‌ಜಿ ಇಂಧನ ಆಯ್ಕೆಯನ್ನು ಹೊಂದಿದ್ದು, ಟಾಲ್-ಬಾಯ್ ಡಿಸೈನ್ ಹೊಂದಿರುವ ಹೊಸ ಕಾರು ವ್ಯಯಕ್ತಿಕ ಬಳಕೆಯ ಕಾರುಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಳ್ಳುವ ತವಕದಲ್ಲಿದೆ.

ಕೇಲವ ಒಂದೇ ವಾರದಲ್ಲಿ 23 ಸಾವಿರ ಗ್ರಾಹಕರಿಂದ ಹೊಸ ಸ್ಯಾಂಟ್ರೋ ಕಾರಿಗಾಗಿ ಬುಕ್ಕಿಂಗ್

ಹಳೆಯ ಮಾದರಿಯ ಸ್ಯಾಂಟ್ರೋ ಕಾರಿಗೂ ಮತ್ತು ಹೊಸ ಸ್ಯಾಂಟ್ರೋ‌ ಕಾರಿಗೂ ಸಾಕಷ್ಟು ಭಿನ್ನತೆಯಿದ್ದು, ಹೊಸ ಕಾರಿನ ಹೊರ ಮತ್ತು ಒಳ ಭಾಗದ ಡಿಸೈನ್‌ನಲ್ಲಿ ಮಹತ್ವದ ಬದಲಾವಣೆ ಕಂಡಿರುವ ಹೊಸ ಸ್ಯಾಂಟ್ರೋ ಕಾರು ಹೊಚ್ಚ ಹೊಸ ಡಿಸೈನ್ ಪ್ರೇರಿತ ಕಾಸ್‌ಕ್ಯಾಡಿಂಗ್ ಬ್ಲ್ಯಾಕ್ ಗ್ರಿಲ್, ಸ್ವೆಪ್ಟ್‌ಬ್ಯಾಕ್ ಹೆಡ್‌ಲ್ಯಾಂಪ್, ಫಾಗ್ ಲ್ಯಾಂಪ್, ಬ್ಲ್ಯಾಕ್ ಪ್ಲ್ಯಾಸ್ಟಿಕ್ ಕ್ಲ್ಯಾಡಿಂಗ್, ಸ್ಪೋರ್ಟಿ ಬಂಪರ್ ಪಡೆದುಕೊಂಡಿದೆ.

ಕೇಲವ ಒಂದೇ ವಾರದಲ್ಲಿ 23 ಸಾವಿರ ಗ್ರಾಹಕರಿಂದ ಹೊಸ ಸ್ಯಾಂಟ್ರೋ ಕಾರಿಗಾಗಿ ಬುಕ್ಕಿಂಗ್

ಕಾರಿನ ಹಿಂಭಾಗ ಡಿಸೈನ್ ಕೂಡಾ ಗುರತರ ಬದಲಾವಣೆ ಪಡೆದುಕೊಂಡಿದ್ದು, ದೊಡ್ಡ ಗಾತ್ರದ ವಿಂಡ್ ಶಿಲ್ಡ್, ನವೀಕೃತ ಟೈಲ್ ಲೈಟ್ ಕ್ಲಸ್ಟರ್, ಹೈ ಸ್ಟಾಪ್ ಲ್ಯಾಂಪ್, ಹೊಸ ರಿಯರ್ ಬಂಪರ್ ಸೌಲಭ್ಯದಿಂದಾಗಿ ನೋಡಲು ಗ್ರಾಂಡ್ ಐ10 ನಂತೆಯೇ ಲುಕ್ ಪಡೆದುಕೊಂಡಿದೆ.

ಕೇಲವ ಒಂದೇ ವಾರದಲ್ಲಿ 23 ಸಾವಿರ ಗ್ರಾಹಕರಿಂದ ಹೊಸ ಸ್ಯಾಂಟ್ರೋ ಕಾರಿಗಾಗಿ ಬುಕ್ಕಿಂಗ್

ಸ್ಯಾಂಟ್ರೋ ಕಾರಿನ ಬೆಲೆಗಳು (ಎಕ್ಸ್‌ಶೋರೂಂ ಪ್ರಕಾರ)

ವೆರಿಯೆಂಟ್‌ಗಳು -ಬೆಲೆಗಳು

ಡಿಲೈಟ್ -ರೂ. 3,89,900

ಎರಾ -ರೂ. 4,24,900

ಮ್ಯಾಗ್ನಾ -ರೂ. 4,57,900

ಮ್ಯಾಗ್ನಾ ಎಎಂಟಿ -ರೂ.5,18,900

ಸ್ಪೋರ್ಟ್ಜ್ -ರೂ. 4,99,900

ಸ್ಪೋರ್ಟ್ಜ್ ಎಎಂಟಿ -ರೂ.5,64,900

ಆಸ್ಟ್ರಾ -ರೂ.5,45,900

ಮ್ಯಾಗ್ನಾ ಸಿಎನ್‌ಜಿ -ರೂ.5,23,900

ಸ್ಪೋರ್ಟ್ಜ್ ಸಿಎನ್‌ಜಿ -ರೂ.5,64,900

ಕೇಲವ ಒಂದೇ ವಾರದಲ್ಲಿ 23 ಸಾವಿರ ಗ್ರಾಹಕರಿಂದ ಹೊಸ ಸ್ಯಾಂಟ್ರೋ ಕಾರಿಗಾಗಿ ಬುಕ್ಕಿಂಗ್

ಹಾಗೆಯೇ ಪ್ರೀಮಿಯಂ ಇಂಟಿರಿಯರ್ ವೈಶಿಷ್ಟ್ಯತೆಗಳನ್ನು ಹೊತ್ತು ಬಂದಿರುವ ಹೊಸ ಸ್ಯಾಂಟ್ರೋ ಕಾರು ಒಳಭಾಗದ ವಿನ್ಯಾಸಗಳು ಸಹ ಎಂಟ್ರಿ ಲೆವಲ್ ಕಾರುಗಳಲ್ಲೇ ವಿಶೇಷವಾಗಿದ್ದು, ವೀಲ್ಹ್ ಆರ್ಚ್‌ ಹೆಚ್ಚಿಸಿರುವ ಹಿನ್ನೆಲೆಯಲ್ಲಿ ಕಾರಿನ ಕ್ಯಾಬಿನ್ ಸ್ಥಳಾವಕಾಶ ಕೂಡಾ ಹೆಚ್ಚಿದೆ.

ಕೇಲವ ಒಂದೇ ವಾರದಲ್ಲಿ 23 ಸಾವಿರ ಗ್ರಾಹಕರಿಂದ ಹೊಸ ಸ್ಯಾಂಟ್ರೋ ಕಾರಿಗಾಗಿ ಬುಕ್ಕಿಂಗ್

ಇದರಿಂದ ಕಾರು ಚಾಲನೆಗೆ ಮತ್ತಷ್ಟು ಅನುಕೂಲಕರವಾಗಿದ್ದು, ದೂರದ ಪ್ರಯಾಣದ ವೇಳೆ ಹಿಂಬದಿಯಲ್ಲಿ ಕುಳಿತು ಪ್ರಯಾಣಿಸುವವರಿಗೆ ಕ್ಯಾಬಿನ್ ವಿಸ್ತರಣೆ ಮಾಡಿರುವುದು ಸಾಕಷ್ಟು ಸಹಕಾರಿಯಾಗಲಿದೆ ಎನ್ನಬಹುದು.

ಕೇಲವ ಒಂದೇ ವಾರದಲ್ಲಿ 23 ಸಾವಿರ ಗ್ರಾಹಕರಿಂದ ಹೊಸ ಸ್ಯಾಂಟ್ರೋ ಕಾರಿಗಾಗಿ ಬುಕ್ಕಿಂಗ್

ಕಾರಿನ ಒಳಭಾಗದಲ್ಲಿ ಅಳವಡಿಸಲಾಗಿರುವ ಡ್ಯುಯಲ್ ಥೀಮ್ ಡ್ಯಾಶ್ ಬೋರ್ಡ್, ಡೋರ್ ಟ್ರಿಮ್, ಗ್ರಾಂಡ್ ಐ10 ಮಾದರಿಯಲ್ಲಿ ಎಸಿ ವೆಂಟ್ಸ್ ಮತ್ತು ಸ್ಟೀರಿಂಗ್ ವೀಲ್ಹ್, ಸಿಲ್ವರ್ ಅಕ್ಸೆಂಟ್ ಮತ್ತು ಹಿಂಬದಿಯ ಪ್ರಯಾಣಿಕರಿಗೂ ಪ್ರತ್ಯೇಕ ಎಸಿ ವೆಂಟ್ಸ್ ನೀಡಲಾಗಿದೆ.

ಕೇಲವ ಒಂದೇ ವಾರದಲ್ಲಿ 23 ಸಾವಿರ ಗ್ರಾಹಕರಿಂದ ಹೊಸ ಸ್ಯಾಂಟ್ರೋ ಕಾರಿಗಾಗಿ ಬುಕ್ಕಿಂಗ್

ಪ್ರೀಮಿಯಂ ವೈಶಿಷ್ಟ್ಯತೆಗಳಾದ 7-ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ಅಂಡ್ರಾಯಿಡ್ ಆಟೋ, ಆ್ಯಪಲ್ ಕಾರ್ ಪ್ಲೇ, ಮಿರರ್‌ ಲಿಂಕ್, ಎಲೆಕ್ಟ್ರಿಕ್ ಅಡ್ಜೆಸ್ಟ್‌ಮೆಂಟ್ ರಿಯರ್ ವ್ಯೂವ್ ಮಿರರ್, ಮಲ್ಟಿ ಇನ್ಫಾರ್ಮೆಷನ್ ಡಿಸ್‌ಪ್ಲೇ, ರಿಯರ್ ವೈಪರ್ ಮತ್ತು ರಿಯರ್ ಡಿಫಾಗರ್ ಸೌಲಭ್ಯವಿದೆ.

ಕೇಲವ ಒಂದೇ ವಾರದಲ್ಲಿ 23 ಸಾವಿರ ಗ್ರಾಹಕರಿಂದ ಹೊಸ ಸ್ಯಾಂಟ್ರೋ ಕಾರಿಗಾಗಿ ಬುಕ್ಕಿಂಗ್

ಎಂಜಿನ್ ಸಾಮರ್ಥ್ಯ

ನೆಕ್ಸ್ಟ್ ಜನರೇಷನ್ ಹ್ಯುಂಡೈ ಸ್ಯಾಂಟ್ರೊ ಕಾರು 1.1-ಲೀಟರ್ (1,100 ಸಿಸಿ) ಫೋರ್ ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ ಎಎಂಟಿ ಆಯ್ಕೆಯೊಂದಿಗೆ 68-ಬಿಎಚ್‌ಪಿ ಮತ್ತು 99-ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು.

ಕೇಲವ ಒಂದೇ ವಾರದಲ್ಲಿ 23 ಸಾವಿರ ಗ್ರಾಹಕರಿಂದ ಹೊಸ ಸ್ಯಾಂಟ್ರೋ ಕಾರಿಗಾಗಿ ಬುಕ್ಕಿಂಗ್

ಇದಲ್ಲದೇ ಹೊಸ ಸ್ಯಾಂಟ್ರೋ ಕಾರಿನ ಮ್ಯಾಗ್ನಾ ಮತ್ತು ಸ್ಪೋರ್ಟ್ಜ್ ವೆರಿಯೆಂಟ್‌ಗಳಲ್ಲಿ ಸಿಎನ್‌ಜಿ ಇಂಧನ ಆಯ್ಕೆ ಲಭ್ಯವಿರಲಿದ್ದು, ಇದು ಅತ್ಯುತ್ತಮ ಮೈಲೇಜ್ ನೀಡಬಲ್ಲ ಕಾರು ಮಾದರಿಯಾಗಿ ಮತ್ತಷ್ಟು ಜನಪ್ರಿಯತೆ ಹೊಂದಲಿದೆ.

ಕೇಲವ ಒಂದೇ ವಾರದಲ್ಲಿ 23 ಸಾವಿರ ಗ್ರಾಹಕರಿಂದ ಹೊಸ ಸ್ಯಾಂಟ್ರೋ ಕಾರಿಗಾಗಿ ಬುಕ್ಕಿಂಗ್

ಮೈಲೇಜ್

ಹ್ಯುಂಡೈ ಸಂಸ್ಥೆಯ ಅಧಿಕೃತ ಮಾಹಿತಿ ಪ್ರಕಾರ ಪೆಟ್ರೋಲ್ ಎಂಜಿನ್ ಸ್ಯಾಂಟ್ರೋ ಕಾರುಗಳು ಪ್ರತಿ ಲೀಟರ್‌ಗೆ 20.3 ಕಿ.ಮಿ ಮೈಲೇಜ್ ನೀಡಿದ್ದಲ್ಲಿ ಸಿಎನ್‌ಜಿ ಇಂಧನ ಆಯ್ಕೆ ಹೊಂದಿರುವ ಸ್ಯಾಂಟ್ರೋ ಕಾರು ಪ್ರತಿ ಕೆಜಿ ಸಿಎನ್‌ಜಿಗೆ 30.5 ಕಿ.ಮಿ ಗರಿಷ್ಠ ಮೈಲೇಜ್ ನೀಡಲಿವೆ.

ಕೇಲವ ಒಂದೇ ವಾರದಲ್ಲಿ 23 ಸಾವಿರ ಗ್ರಾಹಕರಿಂದ ಹೊಸ ಸ್ಯಾಂಟ್ರೋ ಕಾರಿಗಾಗಿ ಬುಕ್ಕಿಂಗ್

ಲಭ್ಯವಿರುವ ಬಣ್ಣಗಳು

ಗ್ರೀನ್, ಫೈರ್ಲಿ ರೆಡ್, ಇಂಪಿರಿಯರ್ ಬ್ಲಿಜ್, ಮರಿಯನ್ ಬ್ಲ್ಯೂ, ಸ್ಟಾರ್ ಡಸ್ಟ್, ಟೈಫೂನ್ ಸಿಲ್ವರ್ ಮತ್ತು ಪೊಲಾರ್ ವೈಟ್ ಬಣ್ಣಗಳಲ್ಲಿ ಹೊಸ ಸ್ಯಾಂಟ್ರೋ ಲಭ್ಯವಾಗಲಿದೆ.

ಕೇಲವ ಒಂದೇ ವಾರದಲ್ಲಿ 23 ಸಾವಿರ ಗ್ರಾಹಕರಿಂದ ಹೊಸ ಸ್ಯಾಂಟ್ರೋ ಕಾರಿಗಾಗಿ ಬುಕ್ಕಿಂಗ್

ಜೊತೆಗೆ ಪ್ರಯಾಣಿಕ ಸುರಕ್ಷತೆಗಾಗಿ ಎಬಿಎಸ್, ಇಬಿಡಿ, ಡ್ರೈವರ್ ಸೈಡ್ ಏರ್‌ಬ್ಯಾಗ್ ಸೌಲಭ್ಯಗಳನ್ನು ಹೊಂದಿದ್ದು, ಟಾಪ್ ಎಂಡ್ ಮಾದರಿಯಲ್ಲಿ ಹೆಚ್ಚುವರಿಯಾಗಿ ಪ್ಯಾಸೆಂಜರ್ ಸೈಡ್ ಏರ್‌ಬ್ಯಾಗ್, ರಿವರ್ಸ್ ಪಾರ್ಕಿಂಗ್ ಸೆನ್ಸಾರ್, ಕ್ಯಾಮೆರಾ, ಸ್ಪೀಡ್ ಸೆಸ್ಸಿಂಗ್ ಆಟೋ ಡೋರ್ ಲಾಕ್ ಮತ್ತು ಸೆಂಟ್ರಲ್ ಲಾಕಿಂಗ್ ಸೌಲಭ್ಯಗಳನ್ನು ನೀಡಿರುವುದು ಗ್ರಾಹಕರ ಆಯ್ಕೆಯನ್ನು ಹೆಚ್ಚಿಸಲಿವೆ.

ಕೇಲವ ಒಂದೇ ವಾರದಲ್ಲಿ 23 ಸಾವಿರ ಗ್ರಾಹಕರಿಂದ ಹೊಸ ಸ್ಯಾಂಟ್ರೋ ಕಾರಿಗಾಗಿ ಬುಕ್ಕಿಂಗ್

ಈ ಮೂಲಕ ಎಂಟ್ರಿ ಲೆವಲ್ ಕಾರು ಮಾರಾಟದಲ್ಲಿ ಮಾರುತಿ ಸುಜುಕಿ ಸಂಸ್ಥೆಗೆ ತ್ರೀವ ಪೈಪೋಟಿ ನೀಡಲಿರುವ ಹ್ಯುಂಡೈ ಸಂಸ್ಥೆಯು ಮಾರುತಿ ಆಲ್ಟೊ 800, ಸೆಲೆರಿಯೊ ಮತ್ತು ಟಾಟಾ ಮೋಟಾರ್ಸ್ ನಿರ್ಮಾಣದ ಟಿಯಾಗೊ, ರೆನಾಲ್ಟ್ ಕ್ವಿಡ್ ಕಾರುಗಳ ಮಾರಾಟಕ್ಕೆ ಟಕ್ಕರ್ ನೀಡಲಿದೆ ಎನ್ನಬಹುದು.

More from DriveSpark

Article Published On: Wednesday, October 24, 2018, 12:24 [IST]
English summary
New Hyundai Santro Receives Over 23,000 Pre-Bookings; Waiting Period Is Now Three Months.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+