ನಾಳೆ ಬಿಡುಗಡೆಯಾಗಲಿರುವ ಹ್ಯುಂಡೈ ಹೊಸ ಸ್ಯಾಂಟ್ರೋ ಕಾರು ಖರೀದಿಗೆ ಮುಗಿಬಿದ್ದ ಗ್ರಾಹಕರು..!

ದೇಶದ ಜನಪ್ರಿಯ ಕಾರು ಮಾದರಿಗಳಲ್ಲಿ ಒಂದಾಗಿರುವ ಸ್ಯಾಂಟ್ರೋ ಆವೃತ್ತಿಯು ಆಟೋ ಉದ್ಯಮದಲ್ಲಿ ಹಲವು ವಿಶೇಷತೆಗಳಿಗೆ ಕಾರಣವಾಗಿರುವುದಲ್ಲದೇ ಕಾರು ಪ್ರಿಯರ ಹಾಟ್ ಫೆವರಿಟ್ ಆಗಿರುವುದು ಬಹುತೇಕರಿಗೆ ಗೊತ್ತಿರುವ ಗೊತ್ತಿರುವ ವಿಚಾರ. ಇದೀಗ ಮತ್ತೊಮ್ಮೆ ಸಂಚಲನ ಸೃಷ್ಠಿಸಲು ಸಜ್ಜಾಗಿರುವ ಸ್ಯಾಂಟ್ರೋ ಕಾರು ನೆಕ್ಸ್ಟ್ ಜನರೇಷನ್ ವೈಶಿಷ್ಟ್ಯತೆಗಳನ್ನು ಹೊತ್ತು ಬರುತ್ತಿದೆ.

ನಾಳೆ ಬಿಡುಗಡೆಯಾಗಲಿರುವ ಹ್ಯುಂಡೈ ಹೊಸ ಸ್ಯಾಂಟ್ರೋ ಕಾರು ಖರೀದಿಗೆ ಮುಗಿಬಿದ್ದ ಗ್ರಾಹಕರು..!

ಸ್ಯಾಂಟ್ರೋ ಕಾರುಗಳು ಬಿಡುಗಡೆಗೊಂಡ 20 ವರ್ಷವಾದ್ರು ಇನ್ನು ಕೂಡಾ ಬೇಡಿಕೆಯಲ್ಲಿ ಮುಂಚೂಣಿಯಲ್ಲಿರುವ ಏಕೈಕ ಕಾರು ಮಾದರಿಯಾಗಿದ್ದು, ಇದೀಗ ಮಹತ್ತರ ಬದಲಾವಣೆಯೊಂದಿಗೆ ಮರಳಿ ಮಾರುಕಟ್ಟೆಗೆ ಲಗ್ಗೆಯಿಡುತ್ತಿದೆ. ಹೀಗಾಗಿ ಬಿಡುಗಡೆಯ ಹೊಸ್ತಿನಲ್ಲಿರುವ ಸ್ಯಾಂಟ್ರೋ ಕಾರುಗಳ ಖರೀದಿಗೆ ಆನ್‌ಲೈನ್ ಬುಕ್ಕಿಂಗ್ ಆರಂಭಿಸಲಾಗಿದ್ದು, ಬುಕ್ಕಿಂಗ್ ಆರಂಭವಾದ ಕೆಲವೇ ದಿನಗಳಲ್ಲಿ 15 ಸಾವಿರಕ್ಕೂ ಬುಕ್ಕಿಂಗ್ ಹರಿದುಬಂದಿದೆ.

ನಾಳೆ ಬಿಡುಗಡೆಯಾಗಲಿರುವ ಹ್ಯುಂಡೈ ಹೊಸ ಸ್ಯಾಂಟ್ರೋ ಕಾರು ಖರೀದಿಗೆ ಮುಗಿಬಿದ್ದ ಗ್ರಾಹಕರು..!

ಹ್ಯುಂಡೈ ಸಂಸ್ಥೆಯು ನೆಕ್ಸ್ಟ್ ಜನರೇಷನ್ ಸ್ಯಾಂಟ್ರೋ ಕಾರುಗಳ ಬಿಡುಗಡೆಗಾಗಿ ಬೃಹತ್ ಯೋಜನೆ ರೂಪಿಸಿದ್ದು, ಇದೇ ತಿಂಗಳು 23ರಂದು ಹೊಸ ಕಾರನ್ನು ಬಿಡುಗಡೆಗೊಳಿಸಲು ಸಹ ವೇದಿಕೆ ಸಿದ್ದವಾಗಿದೆ. ಹೀಗಿರುವಾಗಲೇ ಸ್ಯಾಂಟ್ರೋ ಕಾರಿನ ಬೆಲೆ ಪಟ್ಟಿಯು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಟುತ್ತಿದೆ.

ನಾಳೆ ಬಿಡುಗಡೆಯಾಗಲಿರುವ ಹ್ಯುಂಡೈ ಹೊಸ ಸ್ಯಾಂಟ್ರೋ ಕಾರು ಖರೀದಿಗೆ ಮುಗಿಬಿದ್ದ ಗ್ರಾಹಕರು..!

ಹೊಸ ಸ್ಯಾಂಟ್ರೋ ಕಾರುಗಳು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಪ್ರಮುಖ 9 ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಾಗಲಿದ್ದು, ಪೆಟ್ರೋಲ್ ಮತ್ತು ಸಿಎನ್‌ಜಿ ಎಂಜಿನ್ ಪ್ರೇರಣೆಯೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡುವುದು ಖಚಿತವಾಗಿದೆ.

ನಾಳೆ ಬಿಡುಗಡೆಯಾಗಲಿರುವ ಹ್ಯುಂಡೈ ಹೊಸ ಸ್ಯಾಂಟ್ರೋ ಕಾರು ಖರೀದಿಗೆ ಮುಗಿಬಿದ್ದ ಗ್ರಾಹಕರು..!

ಸ್ಯಾಂಟ್ರೋ ಕಾರುಗಳು ಡಿಲೈಟ್, ಎರಾ, ಮ್ಯಾಗ್ಮಾ, ಮ್ಯಾಗ್ಮಾ ಎಎಂಟಿ, ಸ್ಪೋರ್ಟ್ಜ್, ಸ್ಪೋಟ್ಜ್ ಎಎಂಟಿ, ಆಸ್ಟ್ರಾ, ಮ್ಯಾಗ್ಮಾ ಸಿಎನ್‌ಜಿ, ಸ್ಪೋರ್ಟ್ಜ್ ಸಿಎನ್‌ಜಿ ಎನ್ನುವ ಪ್ರಮುಖ 9 ವೆರಿಯೆಂಟ್‌ಗಳಲ್ಲಿ ಲಭ್ಯವಾಗಲಿದ್ದು, ಕಾರಿನಲ್ಲಿರುವ ವಿಶೇಷತೆಗಳಿಗೆ ಅನುಗುಣವಾಗಿ ಬೆಲೆ ಪಡೆದುಕೊಂಡಿವೆ.

ನಾಳೆ ಬಿಡುಗಡೆಯಾಗಲಿರುವ ಹ್ಯುಂಡೈ ಹೊಸ ಸ್ಯಾಂಟ್ರೋ ಕಾರು ಖರೀದಿಗೆ ಮುಗಿಬಿದ್ದ ಗ್ರಾಹಕರು..!

ಸ್ಯಾಂಟ್ರೋ ಕಾರಿನ ಬೆಲೆಗಳ ಪಟ್ಟಿ(ದೆಹಲಿ ಎಕ್ಸ್‌ಶೋರೂಂ ಪ್ರಕಾರ)

ವೆರಿಯೆಂಟ್ -ಬೆಲೆಗಳು

ಡಿಲೈಟ್ -ರೂ. 3,87,627

ಎರಾ -ರೂ. 4,12,156

ಮ್ಯಾಗ್ಮಾ -ರೂ. 4,40,457

ಮ್ಯಾಗ್ಮಾ ಎಎಂಟಿ-ರೂ. 4,97,061

ಸ್ಪೋರ್ಟ್ಜ್ -ರೂ. 4,78,193

ಸ್ಪೋರ್ಟ್ಜ್ ಎಎಂಟಿ -ರೂ. 5,20,646

ಆಸ್ಟ್ರಾ -ರೂ. 5,29,137

ಮ್ಯಾಗ್ಮಾ ಸಿಎನ್‌ಜಿ -ರೂ. 5,00,835

ಸ್ಪೋರ್ಟ್ಜ್ ಸಿಎನ್‌ಜಿ -ರೂ. 5,38,571

ನಾಳೆ ಬಿಡುಗಡೆಯಾಗಲಿರುವ ಹ್ಯುಂಡೈ ಹೊಸ ಸ್ಯಾಂಟ್ರೋ ಕಾರು ಖರೀದಿಗೆ ಮುಗಿಬಿದ್ದ ಗ್ರಾಹಕರು..!

ಇನ್ನು ಹೊಸ ಸ್ಯಾಂಟ್ರೋ ಕಾರು ಖರೀದಿಗಾಗಿ ಈಗಾಗಲೇ ಗ್ರಾಹಕರಲ್ಲೇ ಪೈಪೋಟಿ ಶುರುವಾಗಿದ್ದು, ದೀಪಾವಳಿ ಹಬ್ಬಕ್ಕೆ ಹೊಸ ಕಾರು ಖರೀದಿಸುವ ಸಲುವಾಗಿ ಈಗಾಗಲೇ 15 ಸಾವಿರಕ್ಕೂ ಅಧಿಕ ಗ್ರಾಹಕರು ಮುಂಗಡ ಪಾವತಿಸಿ ಕಾರು ಖರೀದಿಗಾಗಿ ಎದುರು ನೋಡುತ್ತಿದ್ದಾರೆ.

ನಾಳೆ ಬಿಡುಗಡೆಯಾಗಲಿರುವ ಹ್ಯುಂಡೈ ಹೊಸ ಸ್ಯಾಂಟ್ರೋ ಕಾರು ಖರೀದಿಗೆ ಮುಗಿಬಿದ್ದ ಗ್ರಾಹಕರು..!

ಹ್ಯುಂಡೈ ಸಂಸ್ಥೆಯು ತನ್ನ ಎಂಟ್ರಿ ಲೆವಲ್ ಇಯಾನ್ ಕಾರುಗಳನ್ನು ಸ್ಧಗಿತಗೊಳಿಸಿ ಹೊಸ ಸ್ಯಾಂಟ್ರೋ ಕಾರುಗಳ ಮೇಲೆ ಹೆಚ್ಚಿನ ಒತ್ತು ನೀಡಲು ಮುಂದಾಗಿದ್ದು, ವ್ಯಯಕ್ತಿಕ ಕಾರು ಬಳಕೆದಾರರಿಗೆ ಬೇಕಿರುವ ಎಲ್ಲಾ ಅಗತ್ಯ ಸೌಲಭ್ಯಗಳನ್ನು ನೀಡುವ ಮೂಲಕ ಎಂಟ್ರಿ ಲೆವಲ್ ಕಾರುಗಳಲ್ಲಿ ಹೊಸ ಸಂಚಲನ ಸೃಷ್ಠಿಸಿದೆ.

ನಾಳೆ ಬಿಡುಗಡೆಯಾಗಲಿರುವ ಹ್ಯುಂಡೈ ಹೊಸ ಸ್ಯಾಂಟ್ರೋ ಕಾರು ಖರೀದಿಗೆ ಮುಗಿಬಿದ್ದ ಗ್ರಾಹಕರು..!

ಶಾರ್ಪ್ ಡಿಸೈನ್ ಹೊಂದಿರುವ ಹೊಸ ಸ್ಯಾಂಟ್ರೊ ಕಾರುಗಳು ಈಗಾಗಲೇ ಸ್ಟಾಟ್ ಟೆಸ್ಟಿಂಗ್ ವೇಳೆ ಅತ್ಯುತ್ತಮ ಮಾದರಿಯಲ್ಲಿ ಎಂಜಿನ್ ಕಾರ್ಯಕ್ಷಮತೆ ಪ್ರದರ್ಶನ ತೋರಿದ್ದು, ಅಧಿಕ ಮೈಲೇಜ್ ಮತ್ತು ಅತ್ಯುತ್ತಮ ಬ್ರೇಕಿಂಗ್ ಸೌಲಭ್ಯಗಳು ಗ್ರಾಹಕರ ನಂಬಿಕೆಗೆ ವಿಶ್ವಾಸರ್ಹವಾಗಿವೆ.

ನಾಳೆ ಬಿಡುಗಡೆಯಾಗಲಿರುವ ಹ್ಯುಂಡೈ ಹೊಸ ಸ್ಯಾಂಟ್ರೋ ಕಾರು ಖರೀದಿಗೆ ಮುಗಿಬಿದ್ದ ಗ್ರಾಹಕರು..!

ಹಳೆಯ ಮಾದರಿಯ ಸ್ಯಾಂಟ್ರೋ ಕಾರುಗಳಿಗೂ ಮತ್ತು ಹೊಸ ಸ್ಯಾಂಟ್ರೋ‌ ಕಾರುಗಳಿಗೂ ಸಾಕಷ್ಟು ಭಿನ್ನತೆಯಿದ್ದು, ಹೊಸ ಕಾರಿನ ಹೊರ ಮತ್ತು ಒಳ ಭಾಗದ ಡಿಸೈನ್‌ನಲ್ಲಿ ಸಾಕಷ್ಟು ಬದಲಾವಣೆ ಕಂಡಿರುವ ನೆಕ್ಸ್ಟ್ ಜನರೇಷನ್ ಸ್ಯಾಂಟ್ರೋ ಕಾರುಗಳು ಹೊಸ ಡಿಸೈನ್ ಪ್ರೇರಿತ ಬ್ಲ್ಯಾಕ್ ಗ್ರಿಲ್, ಫಾಗ್ ಲ್ಯಾಂಪ್, ಬ್ಲ್ಯಾಕ್ ಪ್ಲ್ಯಾಸ್ಟಿಕ್ ಕ್ಲ್ಯಾಡಿಂಗ್, ಸ್ಪೋರ್ಟಿ ಬಂಪರ್ ಪಡೆದುಕೊಂಡಿದೆ.

ನಾಳೆ ಬಿಡುಗಡೆಯಾಗಲಿರುವ ಹ್ಯುಂಡೈ ಹೊಸ ಸ್ಯಾಂಟ್ರೋ ಕಾರು ಖರೀದಿಗೆ ಮುಗಿಬಿದ್ದ ಗ್ರಾಹಕರು..!

ಹೊಸ ಸ್ಯಾಂಟ್ರೋ ಕಾರು ರೆನಾಲ್ಟ್ ಕ್ವಿಡ್ ಮತ್ತು ಮಾರುತಿ ಸುಜುಕಿ ಸೆಲೆರಿಯೊ ಕಾರುಗಳಿಂತಲೂ ಉತ್ತಮ ವೀಲ್ಹ್ ಬೆಸ್ ಹೊಂದಿದ್ದು, 3610ಎಂಎಂ ಉದ್ದ, 1645ಎಂಎಂ ಅಗಲ, 1560ಎಂಎಂ ಎತ್ತರ ಮತ್ತು 160ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ಪಡೆದುಕೊಂಡಿದೆ.

ನಾಳೆ ಬಿಡುಗಡೆಯಾಗಲಿರುವ ಹ್ಯುಂಡೈ ಹೊಸ ಸ್ಯಾಂಟ್ರೋ ಕಾರು ಖರೀದಿಗೆ ಮುಗಿಬಿದ್ದ ಗ್ರಾಹಕರು..!

ಜೊತೆಗೆ ಪ್ರಯಾಣಿಕ ಸುರಕ್ಷತೆಗಾಗಿ ಎಬಿಎಸ್ ಮತ್ತು ಡ್ಯುಯಲ್ ಏರ್‌ಬ್ಯಾಗ್ ಸೌಲಭ್ಯಗಳನ್ನು ಸಹ ಆಯ್ಕೆ ರೂಪದಲ್ಲಿ ನೀಡಲಿದ್ದು, ಅಲಾಯ್ ಚಕ್ರಗಳು, ಪಾರ್ಕಿಂಗ್ ಸೆನ್ಸಾರ್, ಎಸಿ ವೆಂಟ್ಸ್, ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಮತ್ತು ವಿಶೇಷ ವಿನ್ಯಾಸದ ಟಾಲಿ ಬಾಯ್ ಡಿಸೈನ್ ಹೊಂದಿರಲಿವೆ.

ನಾಳೆ ಬಿಡುಗಡೆಯಾಗಲಿರುವ ಹ್ಯುಂಡೈ ಹೊಸ ಸ್ಯಾಂಟ್ರೋ ಕಾರು ಖರೀದಿಗೆ ಮುಗಿಬಿದ್ದ ಗ್ರಾಹಕರು..!

ಎಂಜಿನ್ ಸಾಮರ್ಥ್ಯ

ನೆಕ್ಸ್ಟ್ ಜನರೇಷನ್ ಹ್ಯುಂಡೈ ಸ್ಯಾಂಟ್ರೊ ಕಾರುಗಳು 1.1-ಲೀಟರ್(1,100 ಸಿಸಿ) ಫೌರ್ ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿರಲಿದ್ದು, 5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಸೌಲಭ್ಯವು ಆಯ್ಕೆ ರೂಪದಲ್ಲಿ ದೊರೆಯಲಿವೆ.

ನಾಳೆ ಬಿಡುಗಡೆಯಾಗಲಿರುವ ಹ್ಯುಂಡೈ ಹೊಸ ಸ್ಯಾಂಟ್ರೋ ಕಾರು ಖರೀದಿಗೆ ಮುಗಿಬಿದ್ದ ಗ್ರಾಹಕರು..!

ಇದಲ್ಲದೇ ಹೊಸ ಸ್ಯಾಂಟ್ರೋ ಕಾರುಗಳಲ್ಲಿ ಮ್ಯಾಗ್ಮಾ ಮತ್ತು ಸ್ಪೋರ್ಟ್ಜ್ ವೆರಿಯೆಂಟ್‌ಗಳಲ್ಲಿ ಸಿಎನ್‌ಜಿ ಎಂಜಿನ್ ಲಭ್ಯವಿರಲಿದ್ದು, ಇದು ಅತ್ಯುತ್ತಮ ಮೈಲೇಜ್ ನೀಡಬಲ್ಲ ಕಾರು ಮಾದರಿಯಾಗಿ ಮತ್ತಷ್ಟು ಜನಪ್ರಿಯತೆ ಹೊಂದಲಿದೆ.

ನಾಳೆ ಬಿಡುಗಡೆಯಾಗಲಿರುವ ಹ್ಯುಂಡೈ ಹೊಸ ಸ್ಯಾಂಟ್ರೋ ಕಾರು ಖರೀದಿಗೆ ಮುಗಿಬಿದ್ದ ಗ್ರಾಹಕರು..!

ಲಭ್ಯವಿರುವ ಬಣ್ಣಗಳು

ಗ್ರೀನ್, ಫೈರ್ಲಿ ರೆಡ್, ಇಂಪಿರಿಯರ್ ಬ್ಲಿಜ್, ಮರಿಯನ್ ಬ್ಲ್ಯೂ, ಸ್ಟಾರ್ ಡಸ್ಟ್, ಟೈಫೂನ್ ಸಿಲ್ವರ್ ಮತ್ತು ಪೊಲಾರ್ ವೈಟ್ ಬಣ್ಣಗಳಲ್ಲಿ ಹೊಸ ಸ್ಯಾಂಟ್ರೋ ಲಭ್ಯವಾಗಲಿದೆ.

ನಾಳೆ ಬಿಡುಗಡೆಯಾಗಲಿರುವ ಹ್ಯುಂಡೈ ಹೊಸ ಸ್ಯಾಂಟ್ರೋ ಕಾರು ಖರೀದಿಗೆ ಮುಗಿಬಿದ್ದ ಗ್ರಾಹಕರು..!

ಈ ಮೂಲಕ ಎಂಟ್ರಿ ಲೆವಲ್ ಕಾರುಗಳ ಮಾರಾಟದಲ್ಲಿ ಮಾರುತಿ ಸುಜುಕಿ ಸಂಸ್ಥೆಗೆ ಪೈಪೋಟಿ ನೀಡಲಿರುವ ಹ್ಯುಂಡೈ ಸಂಸ್ಥೆಯು ಮಾರುತಿ ಆಲ್ಟೊ 800, ಸೆಲೆರಿಯೊ ಮತ್ತು ಟಾಟಾ ಮೋಟಾರ್ಸ್ ನಿರ್ಮಾಣದ ಟಿಯಾಗೊ ಕಾರುಗಳ ಮಾರಾಟಕ್ಕೆ ಟಕ್ಕರ್ ನೀಡಲಿದೆ.

More from DriveSpark

ಹ್ಯುಂಡೈ ಹೊಸ ಸ್ಯಾಂಟ್ರೋ ಕಾರಿನ ಫೋಟೋ ಗ್ಯಾಲರಿ..!

Article Published On: Monday, October 22, 2018, 14:48 [IST]
English summary
New Hyundai Santro Garners 14,000 Bookings Ahead Of Launch.
Read more on hyundai santro
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+