ಬೆಂಗಳೂರಿನ ಮಹೀಂದ್ರಾ ಡೀಲರ್ಸ್ ಯಾರ್ಡ್ ತಲುಪಿದ ಸ್ಯಾಂಗ್‌ಯಾಂಗ್ ಹೊಸ ಎಸ್‌ಯುವಿ
ಮಹೀಂದ್ರಾ ಸಂಸ್ಥೆಯು ಕಾರು ಮಾರಾಟದಲ್ಲಿ ಹೊಸ ಮುನ್ನಡೆ ಬರೆಯುತ್ತಿದ್ದು, ಇದಕ್ಕೆ ಪ್ರತಿಯಾಗಿ ಗ್ರಾಹಕರ ಬೇಡಿಕೆಗೆ ತಕ್ಕಂತೆ ವಿವಿಧ ನಮೂನೆ ಹೊಸ ಉತ್ಪನ್ನಗಳನ್ನು ಸಹ ಬಿಡುಗಡೆ ಮಾಡುತ್ತಿದೆ. ಇದರಲ್ಲಿ ಸ್ಯಾಂಗ್‌ಯಾಂಗ್ ಜೊತೆಗೂಡಿ ಅಭಿವೃದ್ಧಿ ಪಡಿಸಲಾಗಿರುವ ಹೊಸ ಎಸ್‌ಯುವಿ ಕಾರು ಇದೀಗ ಬಿಡುಗಡೆಗೂ ಮುನ್ನವೇ ಕಾರು ಪ್ರಿಯರ ಆಕರ್ಷಣೆಗೆ ಕಾರಣವಾಗಿದೆ.

ಹೌದು, ಮಹೀಂದ್ರಾ ಸಂಸ್ಥೆಯು ದಕ್ಷಿಣ ಕೊರಿಯಾದ ಮಧ್ಯಮ ಗಾತ್ರದ ಐಷಾರಾಮಿ ಕಾರು ಉತ್ಪಾದನಾ ಸಂಸ್ಥೆಯಾದ ಸ್ಯಾಂಗ್‌ಯಾಂಗ್ ಜೊತೆಗೂಡಿ ಹೊಸ ನಮೂನೆಯ ಕಾರು ಉತ್ಪನ್ನಗಳನ್ನು ಅಭಿವೃದ್ಧಿ ಪಡೆಸಿದ್ದು, ಸ್ಯಾಂಗ್‌ಯಾಂಗ್ ಟಿವೊಲಿ ಮಾದರಿಯಲ್ಲಿ ಉತ್ಪಾದನೆ ಮಾಡಲಾಗಿರುವ ಹೊಸ ಸಬ್ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯು ಮುಂದಿನ ಕೆಲವೇ ದಿನಗಳಲ್ಲಿ ಬಿಡುಗಡೆಯ ಸುಳಿವು ನೀಡಿದೆ.

ಬಿಡುಗಡೆಗಾಗಿ ಮಹೀಂದ್ರಾ ಸಂಸ್ಥೆಯು ಹೊಸ ಕಾರಿನ ಎಂಜಿನ್ ಕಾರ್ಯಕ್ಷಮತೆ ಕುರಿತಂತೆ ಹಲವು ಸುತ್ತಿನ ಪರೀಕ್ಷಾ ಕಾರ್ಯಗಳನ್ನು ಪೂರ್ಣಗೊಳಿಸಿದ್ದು, ಇದೀಗ ಅಂತಿಮವಾಗಿ ಬಿಡುಗಡೆಯ ಉದ್ದೇಶದಿಂದ ನಮ್ಮ ಬೆಂಗಳೂರಿನ ಮಹೀಂದ್ರಾ ಡೀಲರ್ಸ್‌ಗಳಲ್ಲಿ ಹೊಸ ಕಾರುಗಳನ್ನು ಸ್ಟಾಕ್ ಮಾಡುತ್ತಿರುವ ಬಗ್ಗೆ ವರದಿಯಾಗಿದೆ.

ವಿಟಾರಾ ಬ್ರೆಝಾ ಡಿಸೈನ್ ಆಧರಿಸಿರುವ ಮಹೀಂದ್ರ ಹೊಸ ಕಾರನ್ನ ಎಸ್201 ಕೋಡ್ ಆಧಾರದ ಮೇಲೆ ಎಂಜಿನ್ ಕಾರ್ಯಕ್ಷಮತೆಯನ್ನು ಪರೀಕ್ಷೆ ಮಾಡಲಾಗುತ್ತಿದ್ದು, ಹೊಸ ಕಾರಿನ ಅಧಿಕೃತ ಹೆಸರು ಇದುವರೆಗೂ ತಿಳಿದುಬಂದಿಲ್ಲ.

ಹೀಗಾಗಿ ಮುಂದಿನ ತಿಂಗಳು ಹೊಸ ಕಾರಿನ ಅಧಿಕೃತ ಹೆಸರು ಬಹಿರಂಗಪಡಿಸುವ ಸಾಧ್ಯತೆಗಳಿದ್ದು, ಹೊಸ ಕಾರುಗಳು ಡ್ಯುಯಲ್ ಟೋನ್ ಡ್ಯಾಶ್‌ಬೋರ್ಡ್, ಫ್ಲಕ್ಸ್ ಅಲ್ಯುಮಿನಿಯಂ ಪ್ಯಾನೆಲ್, ಸುಧಾರಿತ ಆಡಿಯೋ ಸಿಸ್ಟಂ, ಬ್ಯೂಟೂಥ್ ಕನೆಕ್ಟಿವಿಟಿ, ಸ್ಟಿರಿಂಗ್ ಮೇಲೆ ಎಸ್201 ಕೋಡ್ ನೇಮ್ ಪ್ಲೇಟ್ ಬಳಕೆ ಮಾಡಲಾಗಿದೆ.

ಕಾರು ಪ್ರಯಾಣಕ್ಕೆ ಅನುಕೂಲಕರವಾಗುವ ಇನ್‌ಸ್ಟ್ರುಮೆಂಟಲ್ ಕ್ಲಸ್ಟರ್, ಮಲ್ಟಿ ಫಂಕ್ಷನಲ್ ಸೇಂಟರ್ ಡಿಸ್‌ಫ್ಲೇ, ಸ್ಯಾಂಗ್‌ಯಾಂಗ್ ಟಿವೊಲಿ ಮಾದರಿಯಲ್ಲೇ ಬಹುತೇಕ ಇಂಟಿರಿಯರ್ ಡಿಸೈನ್‌ಗಳನ್ನು ಹೊಸ ಮಹೀಂದ್ರಾ ಕಂಪ್ಯಾಕ್ಟ್ ಎಸ್‌ಯುವಿಯಲ್ಲೂ ಬಳಕೆ ಮಾಡಿರುವುದನ್ನು ಸೆರೆಚಿತ್ರಗಳಲ್ಲಿ ನೋಡಬಹುದಾಗಿದೆ.

7-ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಬಳಕೆ ಮಾಡಲಾಗಿದ್ದು, ಸ್ಮಾರ್ಟ್ ಫೋನ್ ಕನೆಕ್ಟ್ ಮಾಡಿಕೊಳ್ಳುವ ಮೂಲಕ ಆಂಡ್ರಾಯಿಡ್ ಆಟೋ ಮತ್ತು ಆ್ಯಪಲ್ ಕಾರ್‌ಪ್ಲೇ ನಿಯಂತ್ರಣ ಮಾಡಬಹುದಾಗಿದೆ. ಜೊತೆಗೆ ನ್ಯಾವಿಗೇಷನ್ ಮತ್ತು ರಿವರ್ಸ್ ಕ್ಯಾಮೆರಾ ಡಿಸ್‌ಫ್ಲೇ ಸಹ ಇದರಲ್ಲಿದೆ.

ಇನ್ನು ಹೆಚ್ಚುವರಿಯಾಗಿ ಕಾರಿನ ಒಳಭಾಗದ ಮಧ್ಯದಲ್ಲಿ ವಿಸ್ತರಿತ ಕನ್ಸೋಲ್ ಬಳಕೆ ಮಾಡಲಾಗಿದ್ದು, ಡ್ಯುಯಲ್ ಜೋನ್ ಕ್ಲೈಮೆಟ್ ಕಂಟ್ರೋಲ್, ಡ್ಯುಯಲ್ ಯುಎಸ್‌ಬಿ ಫೋರ್ಟ್ಸ್, ಆಕ್ಸ್ ಇನ್‌ಫುಟ್ ಜಾಕ್ಸ್, ವರ್ಟಿಕಲ್ ಎಸಿ ವೆಂಟ್, ಮಧ್ಯದಲ್ಲಿ ಟಚ್ ಸ್ಕ್ರಿನ್ ಸಿಸ್ಟಂ ಸೇರಿಸಲಾಗಿದೆ.

ಹಾಗೆಯೇ ಕಾರಿನ ಹೊರ ವಿನ್ಯಾಸಗಳ ಬಗೆಗೆ ಹೇಳುವುದಾದರೇ, ಪ್ರೋಜೆಕ್ಟರ್ ಹೆಡ್‌ಲ್ಯಾಂಪ್, ಡಿಆರ್‌ಎಲ್ಎಸ್, ಎಲ್ಇಡಿ ಟೈಲ್ ಗೇಟ್, ORVMs,ಟರ್ನ್ ಇಂಡಿಕೇಟರ್ಸ್, ರೂಫ್ ರೈಲ್ಸ್, ರಿಯರ್ ಸ್ಪಾಯ್ಲರ್, ರಿಯರ್ ವೈಪರ್, 17-ಇಂಚಿನ ಅಲಾಯ್ ವೀಲ್ಹ್‌ಗಳನ್ನು ಹೊಂದಿರಲಿದೆ.

ಒಟ್ಟಿನಲ್ಲಿ ಸುಧಾರಿತ ತಂತ್ರಜ್ಞಾನ ಪ್ರೇರಣೆ ಹೊಂದಿರುವ ಮಹೀಂದ್ರಾ ಹೊಸ ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳು ಎಕ್ಸ್‌ಯುವಿ500ಗಿಂತ ಕೆಳ ಹಂತದ ಕಾರು ಆವೃತ್ತಿಯಾಗಿ ಅಭಿವೃದ್ಧಿ ಹೊಂದಲಿದ್ದು, ಬಿಡುಗಡೆಯ ನಂತರ ಮಾರುತಿ ಸುಜುಕಿ ವಿಟಾರಾ ಬ್ರೇಝಾ, ಟಾಟಾ ನೆಕ್ಸಾನ್, ಫೋರ್ಡ್ ಇಕೋ ಸ್ಪೋರ್ಟ್ಸ್ ಕಾರುಗಳಿಗೆ ತೀವ್ರ ಪೈಪೋಟಿ ನೀಡುವ ಗುಣಲಕ್ಷಣ ಪಡೆದಿದೆ. ಆದ್ರೆ ಹೊಸ ಕಾರಿನ ಬಿಡುಗಡೆ ಮಾಹಿತಿ ನಿಖರವಾಗಿ ಲಭ್ಯವಾಗಲಿದ್ದರೂ ಮುಂಬರುವ ದೀಪಾವಳಿ ವೇಳೆ ಹೊಸ ಕಾರು ಮಾರುಕಟ್ಟೆಗೆ ಲಗ್ಗೆಯಿಡುವ ಸಾಧ್ಯತೆಗಳಿವೆ.
Source: Rushlane


Click it and Unblock the Notifications








