ಬಿಎಸ್ 6 ಸೌಲಭ್ಯ ಹೊಂದಿರುವ ಮಾರುತಿ ಆಲ್ಟೋ ಸ್ಪೆಷಲ್ ಏನು?
ಬಿಎಸ್-4 ಮತ್ತು ಅದಕ್ಕೂ ಹೆಚ್ಚಿನ ಗುಣಮಟ್ಟದ ವಾಹನಗಳ ಉತ್ಪಾದನೆ, ಮಾರಾಟಕ್ಕೆ ಮಾತ್ರ ಅವಕಾಶವಿದೆ. ಜೊತೆಗೆ 2020ರ ವೇಳಗೆ ಬಿಎಸ್ 4 ಕೂಡಾ ನಿಷೇಧಗೊಳ್ಳಲಿದ್ದು, ಈ ಹಿನ್ನೆಲೆ ವಾಹನ ಉತ್ಪಾದಕರು ಬಿಎಸ್6 ವಾಹನ ಅಭಿವೃದ್ಧಿಯತ್ತ ಗಮನಹರಿಸುತ್ತಿದೆ.
ಭಾರತೀಯ ಆಟೋಮೊಬೈಲ್ ಉದ್ಯಮದಲ್ಲಿ ಇತ್ತೀಚೆಗಷ್ಟೇ ಬಿಎಸ್-3 ವಾಹನಗಳು ನಿಷೇಧಗೊಂಡ ಬಳಿಕ ಬಿಎಸ್-4 ಮತ್ತು ಅದಕ್ಕೂ ಹೆಚ್ಚಿನ ಗುಣಮಟ್ಟದ ವಾಹನಗಳ ಉತ್ಪಾದನೆ ಮತ್ತು ಮಾರಾಟಕ್ಕೆ ಮಾತ್ರ ಅವಕಾಶವಿದೆ. ಜೊತೆಗೆ 2020ರ ವೇಳಗೆ ಬಿಎಸ್ 4 ಕೂಡಾ ನಿಷೇಧಗೊಳ್ಳಲಿದ್ದು, ಈ ಹಿನ್ನೆಲೆ ವಾಹನ ಉತ್ಪಾದಕರು ಬಿಎಸ್ 6 ವಾಹನ ಅಭಿವೃದ್ಧಿಯತ್ತ ಗಮನಹರಿಸುತ್ತಿದ್ದಾರೆ.

ಇದೀಗ ಮಾರುತಿ ಸುಜುಕಿ ಸಹ ಬಿಎಸ್ 6 ವೈಶಿಷ್ಟ್ಯತೆಯುಳ್ಳ ಕಾರು ಮಾದರಿಗಳ ಉತ್ಪಾದನೆಗೆ ಮಹತ್ವದ ಯೋಜನೆ ರೂಪಿಸಿದ್ದು, ಕೇಂದ್ರ ಸರ್ಕಾರದ ನಿರ್ದೇಶನದಂತೆ ಬಿಎಸ್ 6 ವಾಹನಗಳನ್ನು ಬಿಡುಗಡೆಗೊಳಿಸುತ್ತಿದೆ. ಅದರಲ್ಲಿ ಜನಪ್ರಿಯ ಆಲ್ಟೋ ಕಾರು ಮಾದರಿಯನ್ನು ಮೊದಲ ಹಂತದಲ್ಲಿ ಮಾರುಕಟ್ಟೆಗೆ ಪರಿಚಯಿಸುತ್ತಿದೆ.
Recommended Video


ಬಿಡುಗಡೆ ನಂತರ ಇದುವರೆಗೆ 35 ಲಕ್ಷ ಆಲ್ಟೋ ಕಾರುಗಳನ್ನು ಮಾರಾಟ ಮಾಡಿರುವ ಮಾರುತಿ ಸುಜುಕಿಯು ಕಾರು ಮಾರಾಟದಲ್ಲಿ ದಾಖಲೆ ಸೃಷ್ಠಿಸಿದ್ದು, ಸದ್ಯದಲ್ಲೇ ಬಿಎಸ್ 6 ವಿನ್ಯಾಸಗಳೊಂದಿಗೆ ಗ್ರಾಹಕರ ಕೈ ಸೇರಲಿವೆ.

ಇದರಿಂದ ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ 800 ಸಿಸಿ ಮತ್ತು 1000 ಸಿಸಿ ಆಲ್ಟೋ ಕಾರುಗಳಿಗೆ ಮತ್ತಷ್ಟು ಬೇಡಿಕೆ ಸೃಷ್ಠಿಯಾಗಲಿದ್ದು, ಪರಿಸರ ಮಾಲಿನ್ಯ ತಡೆಯುವ ಸುಧಾರಿತ ತಂತ್ರಜ್ಞಾನಗಳನ್ನು ಹೊಸ ಕಾರುಗಳಲ್ಲಿ ಅಳವಡಿಸಲಾಗುತ್ತದೆ.

ಈ ಮೂಲಕ ಪರಿಸರ ಮಾಲಿನ್ಯವನ್ನು ಪರಿಣಾಮಕಾರಿಯಾಗಿ ಹತೋಟಿ ತರುಬಹುದಾಗಿದ್ದು, ಹೊಸ ಮಾದರಿಯ ಎಂಜಿನ್ ಅಳಡಿಕೆಯಿಂದಾಗಿ ಕಾರಿನ ಬೆಲೆಗಳು ತುಸು ಏರಿಕೆ ಕೂಡಾ ಆಗಲಿವೆ.

ಮೂಲಗಳ ಪ್ರಕಾರ ಬಿಎಸ್ 4 ಗಿಂತ ಬಿಎಸ್ 6 ಸೌಲಭ್ಯ ಹೊಂದಿರುವ ಕಾರುಗಳ ಬೆಲೆ ಪ್ರಸ್ತುತ ಮಾದರಿಗಳ ಬೆಲೆಗಿಂತ 20ರಿಂದ 30 ಸಾವಿರ ಹೆಚ್ಚಾಗಲಿವೆ ಎಂಬ ಮಾಹಿತಿ ಇದ್ದು, ಇದರ ಜೊತೆಗೆ ಪ್ರತಿ ಕಾರು ಮಾದರಿಯೂ ಎಲೆಕ್ಟ್ರಿಕ್ ಎಂಜಿನ್ ಆಯ್ಕೆಯನ್ನು ಹೊಂದಿರಲಿವೆ.

ಇದಲ್ಲದೇ ಮಾರುತಿ ನಿರ್ಮಾಣದ ಎಂಟ್ರಿ ಲೆವಲ್ ವಾಹನಗಳಾದ ವ್ಯಾಗನ್ ಆರ್, ಸೆಲೆರಿಯೊ, ಒಮಿನಿ ಸಹ ಸದ್ಯದಲ್ಲೇ ಬಿಎಸ್ 6 ನೊಂದಿಗೆ ಮಾರುಕಟ್ಟೆ ಪ್ರವೇಶಿಸಲಿದ್ದು, ಮತ್ತಷ್ಟು ಗ್ರಾಹಕರ ಸ್ನೇಹಿ ಸೌಲಭ್ಯಗಳನ್ನು ಹೊತ್ತು ಬರಲಿವೆ.

ಈ ಬಗ್ಗೆ ಮಾತನಾಡಿರುವ ಮಾರುತಿ ಸುಜುಕಿ ಹಿರಿಯ ಕಾರ್ಯನಿರ್ವಾಹಕ ನಿರ್ದೇಶಕ ಆರ್.ಎಸ್. ಕಲ್ಸಿ, "ಸರ್ಕಾರದ ನಿರ್ದೇಶನದಂತೆ ನಿಗದಿತ ಅವಧಿಯಲ್ಲಿ ಬಿಎಸ್ 6 ಸೌಲಭ್ಯವುಳ್ಳ ಕಾರು ಮಾದರಿಗಳನ್ನು ಮಾರುಕಟ್ಟೆಗೆ ಪ್ರವೇಶಿಸುತ್ತವೆ" ಎಂದಿದ್ದಾರೆ.

ಹೀಗಾಗಿ 2020ರ ವೇಳೆಗೆ ಪ್ರತಿಯೊಂದು ವಾಹನ ಮಾದರಿಗಳು ಸಹ ಬಿಎಸ್ 6ನೊಂದಿಗೆ ಮಾರುಕಟ್ಟೆ ಪ್ರವೇಶ ಪಡೆಲಿದ್ದು, ಕಾರು ಮಾರಾಟದಲ್ಲಿ ದಾಖಲೆ ಸೃಷ್ಠಿಸಿರುವ ಆಲ್ಟೋ ಬಿಎಸ್ 6 ಮೂಲಕ ಮತ್ತಷ್ಟು ಜನಪ್ರಿಯತೆ ಹೊಂದುವುದರಲ್ಲಿ ಯಾವುದೇ ಅನುಮಾನವಿಲ್ಲ.


Click it and Unblock the Notifications