Just In
- 1 hr ago ಅಪ್ಪ-ಮಗಳ ಭಾಂದವ್ಯ.. ಪ್ರೀತಿಯ ಪುತ್ರಿಗೆ ತಂದೆಯಿಂದ 2 ಕೋಟಿಯ ಪೋರ್ಷೆ ಕಾರು ಗಿಫ್ಟ್
- 2 hrs ago ಯುವಕರಿಗೆ ಸಿಹಿಸುದ್ದಿ: ಕೈಗೆಟುಕುವ ಬೆಲೆ, ಮಾಸ್ ಲುಕ್ನಲ್ಲಿ ಬರುತ್ತಿದೆ ಹೊಸ ಬಜಾಜ್ ಪಲ್ಸರ್ 400 ಬೈಕ್
- 3 hrs ago Ola: ಓಲಾದಿಂದ ಕಡಿಮೆ ಬೆಲೆಯ 'ಎಸ್1 ಎಕ್ಸ್' ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ದೊಡ್ಡ ಘೋಷಣೆ.. ಏನದು?
- 4 hrs ago ಫೋಕ್ಸ್ವ್ಯಾಗನ್ ವರ್ಟಸ್ ಕಾರಿಗೆ ಮನಸೋತ ಗ್ರಾಹಕರು: ಭಾರೀ ಬೇಡಿಕೆ
Don't Miss!
- Lifestyle ಪ್ರವಾಹಕ್ಕೆ ಕಾರಣವಾಗೋದು ಮಳೆಯಲ್ಲ ಬೇಸಿಗೆಯ ಬಿಸಿಲು..! ನಂಬಲು ಸಾಧ್ಯವಿಲ್ಲ ಅಂದ್ರೆ ಈ ವಿಡಿಯೋ ನೋಡಿ..!
- News Zero Shadow Day: ನಾಳೆ ಬುಧವಾರ ಬೆಂಗಳೂರಿನಲ್ಲಿ ಶೂನ್ಯ ನೆರಳು ದಿನ; ಸಮಯ, ವಿವರ
- Sports David Warner: ಊಟನೂ ಬೇಡ, ಹುಡುಗಿನೂ ಬೇಡ; ಆಧಾರ್ ಕಾರ್ಡ್ ಬೇಕೆಂದ ಡೇವಿಡ್ ವಾರ್ನರ್!
- Technology Lava: ಲಾವಾ ಪ್ರೊ ವಾಚ್ Zn ಹಾಗೂ Vn ಸ್ಮಾರ್ಟ್ವಾಚ್ ಲಾಂಚ್! ಸೀಮಿತ ಅವಧಿಯ ಕೊಡುಗೆ ಸಹ ಲಭ್ಯ..
- Finance ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 10 ಹಳದಿ ಅನಕೊಂಡ ಸಹಿತ ವ್ಯಕ್ತಿ ಬಂಧನ
- Movies Sathya : ತಾಜ್ ಮಹಲ್ ಎದುರು ನಿಂತ ಸತ್ಯಾ, ಪತಿ ಜೊತೆ ಗೌತಮಿ ಪ್ರವಾಸ...!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಇದೇ ತಿಂಗಳು 20ರಂದು ಬಿಡುಗಡೆಯಾಗಲಿರುವ ಸಿಯಾಜ್ ಫೇಸ್ಲಿಫ್ಟ್ ವಿಶೇಷತೆ ಏನು?
ಭಾರೀ ನೀರಿಕ್ಷೆ ಹುಟ್ಟಹಾಕಿರುವ ಸಿಯಾಜ್ ಫೇಸ್ಲಿಫ್ಟ್ ವರ್ಷನ್ಗಳನ್ನ ಇದೇ ತಿಂಗಳು 20ರಂದು ಬಿಡುಗಡೆಗೊಳಿಸುವ ಬಗ್ಗೆ ಮಾರುತಿ ಸುಜುಕಿ ಸಂಸ್ಥೆಯಿಂದ ಅಧಿಕೃತ ಮಾಹಿತಿ ಲಭ್ಯವಾಗಿದ್ದು, ಹತ್ತು ಹಲವು ಹೊಸ ಸೌಲಭ್ಯಗಳನ್ನು ಹೊತ್ತು ಬರುತ್ತಿರುವ ಸಿಯಾಜ್ ಫೇಸ್ಲಿಫ್ಟ್ ಕಾರುಗಳ ವಿಶೇಷತೆ ಬಗ್ಗೆ ಇಲ್ಲಿ ಚರ್ಚಿಸಲಾಗಿದೆ.
ಸಿಯಾಜ್ ಸೆಡಾನ್ ಫೇಸ್ಲಿಫ್ಟ್ ಕಾರುಗಳ ಖರೀದಿಗಾಗಿ ಈಗಾಗಲೇ ಸಾವಿರಾರು ಗ್ರಾಹಕರು ಮುಗಿಬಿದ್ದಿದ್ದು, ಇದಕ್ಕಾಗಿಯೇ ನೆಕ್ಸಾ ಡೀಲರ್ಗಳು ಕಾರಿನ ಖರೀದಿಗಾಗಿ ಬುಕ್ಕಿಂಗ್ ಪ್ರಕ್ರಿಯೆಯನ್ನು ಕೂಡಾ ಆರಂಭಿಸಿದ್ದಾರೆ. ಹಲವು ಹೊಸ ವೈಶಿಷ್ಟ್ಯತೆಗಳನ್ನು ಹೊತ್ತುಬರುತ್ತಿರುವ ಸಿಯಾಜ್ ಫೇಸ್ಲಿಫ್ಟ್ ಕಾರುಗಳು ಹಳೆಯ ಮಾದರಿಗಿಂತ ಸಾಕಷ್ಟು ಬದಲಾವಣೆ ಪಡೆದುಕೊಂಡಿದ್ದು, ಹೋಂಡಾ ಸಿಟಿ ಕಾರುಗಳಿಗೆ ತ್ರೀವ ಪೈಪೋಟಿ ನೀಡುವ ತವಕದಲ್ಲಿದೆ.
ಸಿಯಾಜ್ ಫೇಸ್ಲಿಫ್ಟ್ ಕಾರು ಖರೀದಿಗಾಗಿ ಗ್ರಾಹಕರು ಹತ್ತಿರದ ನೆಕ್ಸಾ ಶೋರಂನಲ್ಲಿ ರೂ. 21 ಸಾವಿರ ಪಾವತಿಸಿ ಮುಂಗಡವಾಗಿ ಬುಕ್ಕಿಂಗ್ ಮಾಡಬಹುದಾಗಿದ್ದು, ಇದಷ್ಟೆ ಅಲ್ಲದೇ ಸಂಸ್ಥೆಯು ತಮ್ಮ ಹಿಂದಿನ ತಲೆಮಾರಿನ ಸಿಯಾಜ್ ಕಾರುಗಳ ಮೇಲೆ ಸುಮಾರು ರೂ. 1 ಲಕ್ಷದ ವರೆಗಿನ ರಿಯಾಯಿತಿ ಕೂಡಾ ನೀಡುತ್ತಿದೆ. ಹೀಗಿದ್ದರೂ, ಗ್ರಾಹಕರು ಮಾತ್ರ ಫೇಸ್ಲಿಫ್ಟ್ ಸಿಯಾಜ್ ಖರೀದಿಗಾಗಿ ಎದುರುನೋಡುತ್ತಿರುವುದು ಹೊಸ ಕಾರಿನ ಮೇಲೆ ಸಾಕಷ್ಟು ನೀರಿಕ್ಷೆ ಇಟ್ಟುಕೊಳ್ಳಲಾಗಿದೆ.
ಹೊಸ ಸಿಯಾಜ್ ಫೇಸ್ಲಿಫ್ಟ್ ಕಾರಿನ ಮುಂಭಾಗದಲ್ಲಿ ಮರು ವಿನ್ಯಾಸಗೊಳಿಸಲಾದ ಗ್ರಿಲ್, ಹೊಸದಾಗಿ ವಿನ್ಯಾಸಗೊಳಿಸಿದ ಎಲ್ಇಡಿ ಡಿಆರ್ಎಲ್ ಹೆಡ್ಲ್ಯಾಂಪ್ಸ್, ಸೆಂಟ್ರಲ್ ಏರ್ ಡ್ಯಾಮ್ ನೊಂದಿಗೆ ರಿವ್ಯಾಂಪ್ಡ್ ಫ್ರಂಟ್ ಬಂಪರ್ ಮತ್ತು ಸಿ-ಆಕಾರದ ಕ್ರೋಮ್ ಅನ್ನು ಫಾಗ್ ಲ್ಯಾಂಪ್ನಲ್ಲಿ ಅಳವಡಿಸಲಾಗಿದೆ.
ಇದಲ್ಲದೆ ಸಿಯಾಜ್ ಫೇಸ್ಲಿಫ್ಟ್ ಕಾರುಗಳಲ್ಲಿ ಮಲ್ಟಿ ಸ್ಪೋಕ್ ಅಲಾಯ್ ವ್ಹೀಲ್ಸ್, ಕ್ರೋಮ್ ಡೋರ್ ಹ್ಯಾಂಡಲ್ಸ್ ಮತ್ತು ಒಆರ್ವಿಎಮ್ ಅನ್ನು ಇಂಟಿಗ್ರೇಟೆಡ್ ಟರ್ನ್ ಇಂಡಿಕೇಟರ್ಸ್ ಅನ್ನು ಪ್ರಸ್ತುತ ಮಾರಾಟಗೊಳ್ಳುತ್ತಿರುವ ಸಿಯಾಜ್ ಕಾರಿನಿಂದ ಆಧರಿಸಿದೆ. ಹಾಗೆಯೇ ಮರು ವಿನ್ಯಾಸಗೊಳಿಸಲಾದ ಹಿಂಭಾಗದ ಬಂಪರ್ ಅನ್ನು ಕೂಡಾ ಅಳವಡಿಸಲಾಗಿದೆ.
ಎಂಜಿನ್ ಸಾಮರ್ಥ್ಯ
ಪೆಟ್ರೋಲ್ ವರ್ಷನ್ಗಳು 1.5-ಲೀಟರ್ ಕೆ15ಬಿ ಎಂಜಿನ್ ಹೊಂದಿದ್ದು, ಡೀಸೆಲ್ ವರ್ಷನ್ಗಳಲ್ಲಿ 1.3-ಲೀಟರ್ ಮೈಲ್ಡ್ ಹೈಬ್ರಿಡ್ ಎಂಜಿನ್ ಪಡೆದಿವೆ. ಇವುಗಳಲ್ಲಿ ಪೆಟ್ರೋಲ್ ಕಾರುಗಳು 91-ಬಿಎಚ್ಪಿ, 130-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ ಡಿಸೇಲ್ ಕಾರುಗಳು 89-ಬಿಎಚ್ಪಿ, 200ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು.
ಇನ್ನು ಟ್ರಾನ್ಸ್ ಮಿಷನ್ ಬಗ್ಗೆ ಹೇಳುವುದಾದರೇ, ಎಂಜಿನ್ ಅನ್ನು 5 ಸ್ಪೀಡ್ ಮ್ಯಾನುವಲ್ ಗೇರ್ಬಾಕ್ಸ್ ನೊಂದಿಗೆ ಜೋಡಿಸಲಾಗಿದ್ದು, ಸದ್ಯ ಖರೀದಿಗಿರುವ 4 ಸ್ಪೀಡ್ ಆಟೋಮ್ಯಾಟಿಕ್ ಗೇರ್ಬಾಕ್ಸ್ ಅನ್ನು ಭರ್ತಿ ಮಾಡಲಿದೆ.
ಸಿಯಾಜ್ ಫೇಸ್ಲಿಫ್ಟ್ ಕಾರಿನ ಒಳಭಾಗದಲ್ಲಿ ಅಪ್ ಮಾರ್ಕೆಟ್ ಡ್ಯಾಶ್ಬೋರ್ಡ್, ಸೀಟ್ ಮತ್ತು ಹೊಸ ವೈಶಿಷ್ಟ್ಯತೆಗಳನ್ನು ಪಡೆದಿರಲಿದೆ ಎನ್ನಲಾಗಿದ್ದು, ಇನ್ನು ಹೊಸದಾಗಿ ಬಿಡುಗಡೆಗೊಳ್ಳುವ ಕಾರುಗಳು ಎಲೆಕ್ಟ್ರಿಕ್ ಸನ್ರೂಫ್, ಅಡಿಷನಲ್ ಸೇಫ್ಟಿ ಫೀಚರ್ಸ್ ಹಾಗು ಇನ್ನಿತರೆ ಆಯ್ಕೆಗಳನ್ನು ಪಡೆಯಲಿದೆ.
ಇನ್ನು ಕಾರಿನ ಬೆಲೆಯ ಬಗ್ಗೆ ಯಾವುದೆ ಖಚಿತ ಮಾಹಿತಿಯು ಲಭ್ಯವಾಗಿಲ್ಲವಾದರು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ 8 ರಿಂದ 12 ಲಕ್ಷದ ವರೆಗು ಇರಬಹುದೆಂದು ಅಂದಾಜಿಸಲಾಗಿದ್ದು, ಹೋಂಡಾ ಸಿಟಿ, ಹ್ಯುಂಡೈ ವೆರ್ನಾ, ಫೋಕ್ಸ್ವ್ಯಾಗನ್ ವೆಂಟೊ ಮತ್ತು ಸ್ಕೋಡಾ ರ್ಯಾಪಿಡ್ ಕಾರುಗಳಿಗೆ ಇದು ಪೈಪೋಟಿಯನ್ನು ನೀಡಲಿದೆ.
ಒಟ್ಟಿನಲ್ಲಿ ಹಲವು ಹೊಸ ಸೌಲಭ್ಯವನ್ನು ಹೊತ್ತು ಮಾರುಕಟ್ಟೆ ಪ್ರವೇಶ ಪಡೆಯುತ್ತಿರುವ ಹೊಸ ಸಿಯಾಜ್ ಕಾರುಗಳ ಮತ್ತಷ್ಟು ಮಾಹಿತಿಯನ್ನು ಅಗಸ್ಟ್ 20ರಂದು ನಿಮ್ಮ ಡ್ರೈವ್ಸ್ಪಾರ್ಕ್ ನೀಡಲಿದ್ದು, ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ಡೀಲರ್ಸ್ ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ.