ಬಿಡುಗಡೆಯಾಗಲಿರುವ 2018ರ ಸ್ವಿಫ್ಟ್ ಸ್ಪೆಷಲ್ ಏನು? ಹೊಸ ಕಾರಿನ ಬೆಲೆ ಎಷ್ಟು?

ಮಾರುತಿ ಸುಜುಕಿ ಸದ್ಯದಲ್ಲೇ ಅತಿ ನೂತನ ಸ್ವಿಫ್ಟ್ ಕಾರನ್ನು ಬಿಡುಗಡೆ ಮಾಡಲಿದ್ದು, ಈ ಹಿನ್ನೆಲೆ ಹ್ಯಾಚ್‌ಬ್ಯಾಕ್ ಪ್ರಿಯರನ್ನು ಸೆಳೆಯಲು ಸಿದ್ಧಗೊಂಡಿರುವ ಹೊಸ ಕಾರಿನ ಕುರಿತಾದ ವಿಶೇಷತೆಗಳ ಬಗ್ಗೆ ಇಲ್ಲಿ ಚರ್ಚಿಸುತ್ತಿದ್ದೇವೆ.

By Praveen

ದೇಶದ ಅಗ್ರ ಪ್ರಯಾಣಿಕ ಕಾರು ನಿರ್ಮಾಣ ಸಂಸ್ಥೆಯಾಗಿರುವ ಮಾರುತಿ ಸುಜುಕಿ ಸದ್ಯದಲ್ಲೇ ಅತಿ ನೂತನ ಸ್ವಿಫ್ಟ್ ಕಾರನ್ನು ಬಿಡುಗಡೆ ಮಾಡಲಿದ್ದು, ಈ ಹಿನ್ನೆಲೆ ಹ್ಯಾಚ್‌ಬ್ಯಾಕ್ ಪ್ರಿಯರನ್ನು ಸೆಳೆಯಲು ಸಿದ್ಧಗೊಂಡಿರುವ ಹೊಸ ಕಾರಿನ ಕುರಿತಾದ ವಿಶೇಷತೆಗಳ ಬಗ್ಗೆ ಇಲ್ಲಿ ಚರ್ಚಿಸುತ್ತಿದ್ದೇವೆ.

ಬಿಡುಗಡೆಯಾಗಲಿರುವ 2018ರ ಸ್ವಿಫ್ಟ್ ಸ್ಪೆಷಲ್ ಏನು? ಹೊಸ ಕಾರಿನ ಬೆಲೆ ಎಷ್ಟು?

ನಿಮಗೆಲ್ಲರಿಗೂ ತಿಳಿದಿರುವಂತೆಯೇ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಎರಡು ವರ್ಷಕ್ಕೊಮ್ಮೆ ನಡೆಯುವ ಅತಿ ದೊಡ್ಡ ವಾಹನ ಮೇಳವಾದ 2018ರ ಆಟೋ ಎಕ್ಸ್‌ಪೋ ಫೆಬ್ರುವರಿ 7ರಿಂದ ಆರಂಭವಾಗಲಿದ್ದು, ಭಾರೀ ನೀರಿಕ್ಷೆ ಹುಟ್ಟುಹಾಕಿರುವ 2018ರ ಸ್ವಿಫ್ಟ್ ಕಾರುಗಳು ಈ ವೇಳೆ ಪ್ರದರ್ಶನವಾಗಲಿವೆ.

ಬಿಡುಗಡೆಯಾಗಲಿರುವ 2018ರ ಸ್ವಿಫ್ಟ್ ಸ್ಪೆಷಲ್ ಏನು? ಹೊಸ ಕಾರಿನ ಬೆಲೆ ಎಷ್ಟು?

ಸುಧಾರಿತ ತಂತ್ರಜ್ಞಾನಗಳ ತಳಹದಿಯಲ್ಲಿ ನಿರ್ಮಾಣವಾಗಿರುವ 2018 ಸ್ವಿಫ್ಟ್ ಮಾದರಿಯು ಭಾರತೀಯ ಕಾರು ವಿಭಾಗದಲ್ಲಿ ಹೊಸ ಕ್ರಾಂತಿಯನ್ನು ಸೃಷ್ಟಿಸಲಿದ್ದು, ಯುವ ಹಾಗೂ ಹಿರಿಯ ವಾಹನ ಪ್ರೇಮಿಗಳು ಒಂದೇ ರೀತಿಯಲ್ಲಿ ಇಷ್ಟಪಡುವ ಕಾರು ಇದಾಗಿದೆ.

ಬಿಡುಗಡೆಯಾಗಲಿರುವ 2018ರ ಸ್ವಿಫ್ಟ್ ಸ್ಪೆಷಲ್ ಏನು? ಹೊಸ ಕಾರಿನ ಬೆಲೆ ಎಷ್ಟು?

ಐದನೇ ತಲೆಮಾರಿನ ಹರ್ಟೆಕ್ಟ್ (Heartect) ತಳಹದಿಯಲ್ಲಿ ನೂತನ ಸ್ವಿಫ್ಟ್ ನಿರ್ಮಾಣ ಮಾಡಲಾಗಿದ್ದು, ಇದು ಹೆಚ್ಚು ಶಕ್ತಿಶಾಲಿ, ಬಿಗಿತವನ್ನು ಪಡೆಯಲಿದೆ. ಜೊತೆಗೆ ಅತ್ಯುತ್ತಮ ಚಾಲನಾ ಅನುಭವದೊಂದಿಗೆ ಗರಿಷ್ಠ ಇಂಧನ ಕ್ಷಮತೆಯನ್ನು ಕಾಪಾಡಿಕೊಳ್ಳಲಿದೆ.

ಬಿಡುಗಡೆಯಾಗಲಿರುವ 2018ರ ಸ್ವಿಫ್ಟ್ ಸ್ಪೆಷಲ್ ಏನು? ಹೊಸ ಕಾರಿನ ಬೆಲೆ ಎಷ್ಟು?

ಕಾರಿನ ಬೆಲೆಗಳು

ಹ್ಯಾಚ್‌ಬ್ಯಾಕ್ ಕಾರು ಪ್ರಿಯರ ಹಾಟ್ ಫೇವರಿಟ್ ಎಂದೇ ಬಿಂಬಿತವಾಗಿರುವ ಥರ್ಡ್ ಜನರೇಷನ್ ಸ್ವಿಫ್ಟ್ ಕಾರಿನ ಬೆಲೆಗಳನ್ನು ಕೂಡಾ ರಿವಿಲ್ ಮಾಡಲಾಗಿದ್ದು, ಹೊಸ ಕಾರಿನ ಆರಂಭಿಕ ಬೆಲೆ 4.99 ಲಕ್ಷ ಮತ್ತು ಟಾಪ್ ವೆರಿಯಂಟ್ ಬೆಲೆಯು 7.99 ಲಕ್ಷ ಇರಲಿದೆ ಎಂಬ ಮಾಹಿತಿಯಿದೆ.

ಬಿಡುಗಡೆಯಾಗಲಿರುವ 2018ರ ಸ್ವಿಫ್ಟ್ ಸ್ಪೆಷಲ್ ಏನು? ಹೊಸ ಕಾರಿನ ಬೆಲೆ ಎಷ್ಟು?

ಈ ಬಗ್ಗೆ ಖಾಸಗಿ ಸುದ್ದಿವಾಹಿನಿಯ ಸಂದರ್ಶನವೊಂದರಲ್ಲಿ ಈ ಹಿಂದೆಯೇ ಮಾತನಾಡಿದ್ದ ಮಾರುತಿ ಸುಜುಕಿ ಹಿರಿಯ ಕಾರ್ಯನಿರ್ವಾಹಕ ನಿರ್ದೇಶಕರಾದ ಆರ್.ಎಸ್. ಕೈಲಾಸಿ ಅವರೇ ಹೊಸ ಕಾರಿನ ಬೆಲೆಯನ್ನು ಬಹಿರಂಗಗೊಳಿಸಿದ್ದರು.

ಬಿಡುಗಡೆಯಾಗಲಿರುವ 2018ರ ಸ್ವಿಫ್ಟ್ ಸ್ಪೆಷಲ್ ಏನು? ಹೊಸ ಕಾರಿನ ಬೆಲೆ ಎಷ್ಟು?

ಈ ಮೂಲಕ ಮಧ್ಯಮ ವರ್ಗದ ಗ್ರಾಹಕರನ್ನು ತನ್ನತ್ತ ಸೆಳೆಯುವ ತಂತ್ರರೂಪಿಸಿರುವ ಮಾರುತಿ ಸುಜುಕಿ, ಹ್ಯುಂಡೈ ಗ್ರ್ಯಾಂಡ್ ಐ10, ಫೋರ್ಕ್ಸ್‌ವ್ಯಾಗನ್ ಪೊಲೊ ಮತ್ತು ಫೋರ್ಡ್ ಫಿಗೊ ಕಾರುಗಳಿಗೆ ತ್ರೀವ ಹೊಡೆತ ನೀಡುವ ಬಗ್ಗೆ ಸುಳಿವು ನೀಡಿದೆ.

ಬಿಡುಗಡೆಯಾಗಲಿರುವ 2018ರ ಸ್ವಿಫ್ಟ್ ಸ್ಪೆಷಲ್ ಏನು? ಹೊಸ ಕಾರಿನ ಬೆಲೆ ಎಷ್ಟು?

ಇನ್ನು ಬಿಡುಗಡೆಗೊಳ್ಳಲಿರುವ 2018ರ ಸ್ವಿಫ್ಟ್ ಆವೃತ್ತಿಯು ಪ್ರಸಕ್ತ ಮಾರುಕಟ್ಟೆಯಲ್ಲಿರುವ ಸ್ವಿಫ್ಟ್ ಆವೃತ್ತಿಗಿಂತಲೂ ಸಾಕಷ್ಟು ಬದಲಾವಣೆಗಳನ್ನು ಪಡೆದುಕೊಂಡಿದ್ದು, ಗ್ರಾಹರಕ ಆದ್ಯತೆಯಂತೆ ಕಾರಿನ ವಿನ್ಯಾಸಗಳು ಸಿದ್ದಗೊಂಡಿವೆ.

ಬಿಡುಗಡೆಯಾಗಲಿರುವ 2018ರ ಸ್ವಿಫ್ಟ್ ಸ್ಪೆಷಲ್ ಏನು? ಹೊಸ ಕಾರಿನ ಬೆಲೆ ಎಷ್ಟು?

ಎಂಜಿನ್ ಸಾಮರ್ಥ್ಯ

1.2-ಲೀಟರ್ ಪೆಟ್ರೋಲ್ ಹಾಗೂ 1.3-ಲೀಟರ್ ಡೀಸೆಲ್ ಎಂಜಿನ್ ಪಡೆದುಕೊಳ್ಳಲಿರುವ ಮಾರುತಿ ಸುಜುಕಿ ಸ್ವಿಫ್ಟ್ ಹೊಸ ಆವೃತ್ತಿಯು, ಡೀಸೆಲ್ ಮಾದರಿಯಲ್ಲಿ 82-ಬಿಎಚ್‌ಪಿ ಹಾಗೂ 75-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿ ಒದಗಿಸಲಾಗಿದೆ.

ಬಿಡುಗಡೆಯಾಗಲಿರುವ 2018ರ ಸ್ವಿಫ್ಟ್ ಸ್ಪೆಷಲ್ ಏನು? ಹೊಸ ಕಾರಿನ ಬೆಲೆ ಎಷ್ಟು?

ಬಿಡುಗಡೆ ಯಾವಾಗ?

ಮುಂದಿನ ತಿಂಗಳು ಫೆಬ್ರುವರಿ7ರಿಂದ ಆರಂಭಗೊಳ್ಳಲಿರುವ 2018ರ ಆಟೋ ಎಕ್ಸ್‌ಪೋ ಪ್ರದರ್ಶನದ ಜೊತೆಗೆ ಬಿಡುಗಡೆ ಮಾಡಲಾಗುತ್ತಿದ್ದು, ತದನಂತರ ಸ್ವಿಫ್ಟ್ ಕಾರುಗಳು ಫೆಬ್ರುವರಿ ತಿಂಗಳಾಂತ್ಯಕ್ಕೆ ಖರೀದಿಗೆ ಲಭ್ಯವಿರಲಿವೆ.

Article Published On: Tuesday, January 30, 2018, 19:02 [IST]
English summary
New Maruti Swift 2018: Launch Date And Expected Price.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+