ಭಾರತಕ್ಕೆ ಬರಲಿದೆ ಮಾರುತಿ ಸುಜುಕಿ ಸಂಸ್ಥೆಯ ವಿಟಾರಾ ಎಸ್‌ಯುವಿ ಕಾರುಗಳು..

ಮಾರುತಿ ಸುಜುಕಿ ಸಂಸ್ಥೆಯು ಭಾರತೀಯ ಮಾರುಕಟ್ಟೆಗಾಗಿ ಮತ್ತಷ್ಟು ಹೊಸ ಕಾರು ಉತ್ಪನ್ನಗಳನ್ನು ಪರಿಚಯಿಸಲು ಮುಂದಾಗಿದೆ.

By Rahul Ts

ಮಾರುತಿ ಸುಜುಕಿ ಸಂಸ್ಥೆಯು ಭಾರತೀಯ ಮಾರುಕಟ್ಟೆಗಾಗಿ ಮತ್ತಷ್ಟು ಹೊಸ ಕಾರು ಉತ್ಪನ್ನಗಳನ್ನು ಪರಿಚಯಿಸಲು ಮುಂದಾಗಿದ್ದು, ಸದ್ಯ ಮಾರುಕಟ್ಟೆಲ್ಲಿರುವ ಮಧ್ಯಮ ಗಾತ್ರದ ಪ್ರಮುಖ ಎಸ್‌ಯುವಿಗಳಿಗೆ ವಿಟಾರಾ ಕಾರುಗಳು ತೀವ್ರ ಪೈಪೋಟಿ ನೀಡುವ ಎಲ್ಲಾ ಗುಣಲಕ್ಷಣಗಳನ್ನು ಹೊಂದಿದೆ.

ಭಾರತಕ್ಕೆ ಬರಲಿದೆ ಮಾರುತಿ ಸುಜುಕಿ ಸಂಸ್ಥೆಯ ವಿಟಾರಾ ಎಸ್‌ಯುವಿ ಕಾರುಗಳು..

ಮಿಡ್ ರೇಂಜ್ ಎಸ್‍ಯುವಿ ಕಾರು ಮಾದರಿ ಇದಾಗಿದ್ದು, 2019ರ ವೇಳೆಗೆ ಬಿಡುಗಡೆಗೊಳಿಸಲು ನಿರ್ಧರಿಸುವ ಮಾರುತಿ ಸುಜುಕಿಯ ಹೊಸ ಎಸ್‍ಯುವಿ ಕಾರು ಅನ್ನು ಈಗಾಗಲೇ ದೇಶದ ವಿವಿಧ ಕಡೆಗಳಲ್ಲಿ ಸ್ಪಾಟ್ ಟೆಸ್ಟಿಂಗ್ ವೇಳೆ ಕೂಡಾ ನಡೆಸಲಾಗಿದೆ.

ಭಾರತಕ್ಕೆ ಬರಲಿದೆ ಮಾರುತಿ ಸುಜುಕಿ ಸಂಸ್ಥೆಯ ವಿಟಾರಾ ಎಸ್‌ಯುವಿ ಕಾರುಗಳು..

ಸುಜುಕಿ ವಿಟಾರಾ ಈಗಾಗಲೆೇ ಯೂರೋಪ್‍ನ ಮಾರುಕಟ್ಟೆಯಲ್ಲಿ ಯಶಸ್ವಿಯಾಗಿ ಮಾರಾಟಗೊಳ್ಳುತ್ತಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಮಾದರಿಗಳಲ್ಲಿ ದೊರೆಯುತ್ತಿದೆ. ಇನ್ನು ಈ ಕಾರು ಹ್ಯುಂಡೈ ಕ್ರೆಟಾ ಮತು ಮಹಿಂದ್ರಾ ಎಕ್ಸ್ ಯುವಿ ಕಾರುಗಳ ಬೆಲೆಗಳನ್ನು ಹೋಲಲಿದೆ.

ಭಾರತಕ್ಕೆ ಬರಲಿದೆ ಮಾರುತಿ ಸುಜುಕಿ ಸಂಸ್ಥೆಯ ವಿಟಾರಾ ಎಸ್‌ಯುವಿ ಕಾರುಗಳು..

ವಿಟಾರಾ ಕಾರಿನ ಪೆಟ್ರೋಲ್ ಆವೃತ್ತಿಯು 1.4 ಲೀಟರ್ ಟರ್ಬೋಚಾರ್ಜ್ಡ್ ಎಂಜಿನ್ ಹೊಂದಿದ್ದು, 140-ಬಿಹೆಚ್‍ಪಿ ಮತ್ತು 230-ಎನ್ಎಂ ಟಾರ್ಕ್ಅನ್ನು ಉತ್ಪಾದಿಸಲಿದೆ. ಹಾಗೆಯೇ ಈ ಎಂಜಿನ್ ಅನ್ನು 6 ಸ್ಪೀಡ್ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್‍‍‍ಬಾಕ್ಸ್ ಆಯ್ಕೆಯಲ್ಲಿ ಬರಲಿದೆ ಎನ್ನಲಾಗಿದೆ.

ಭಾರತಕ್ಕೆ ಬರಲಿದೆ ಮಾರುತಿ ಸುಜುಕಿ ಸಂಸ್ಥೆಯ ವಿಟಾರಾ ಎಸ್‌ಯುವಿ ಕಾರುಗಳು..

ವಿಟಾರಾ ಕಾರಿನ ಡೀಸೆಲ್ ಆವೃತ್ತಿಯು 1.6 ಲೀಟರ್ ಫಿಯೆಟ್ ಮಲ್ಟಿಜೆಟ್ ಟರ್ಬೋಚಾರ್ಜ್ಡ್ ಎಂಜಿನ್ ಎಂಜಿನ್ ಹೊಂದಿದ್ದು, 120-ಬಿಹೆಚ್‍ಪಿ ಮತ್ತು 320-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಲಿದ್ದು, 6 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಗೆ ಜೋಡಿಸಲಾಗಿದೆ ಎನ್ನಲಾಗಿದೆ.

ಭಾರತಕ್ಕೆ ಬರಲಿದೆ ಮಾರುತಿ ಸುಜುಕಿ ಸಂಸ್ಥೆಯ ವಿಟಾರಾ ಎಸ್‌ಯುವಿ ಕಾರುಗಳು..

ಭಾರತದ ಮಾರುಕಟ್ಟೆಯಲ್ಲಿ ಹೊಸ ಮಾರುತಿ ವಿಟಾರಾ ಫ್ರಂಟ್ ವೀಲ್ ಡ್ರೈವ್ ಎಸ್‍ಯುವಿ ರೂಪದಲ್ಲಿ ಬರಬಹುದು ಎಂದು ಅಂದಾಜಿಸಲಾಗಿದ್ದು, ಗ್ಲೋಬಲ್ ಮಾರುಕಟ್ಟೆಯಲ್ಲಿನ ವಿಟಾರಾಗಳು ಆಲ್ ವೀಲ್ ಡ್ರೈವ್ ರೂಪದಲ್ಲಿ ದೊರೆಯುತ್ತಿದೆ.

ಭಾರತಕ್ಕೆ ಬರಲಿದೆ ಮಾರುತಿ ಸುಜುಕಿ ಸಂಸ್ಥೆಯ ವಿಟಾರಾ ಎಸ್‌ಯುವಿ ಕಾರುಗಳು..

ಇದಲ್ಲದೇ ಹೊಸ ರೂಪದ ವಿಟಾರಾ ಕಾರುಗಳು ಎಸ್‌ಯುವಿ ಕಾರುಗಳಲ್ಲೇ ವಿಶೇಷ ಗುಣಲಕ್ಷಣಗಳನ್ನು ಹೊಂದಿದ್ದು, 5 ಸೀಟರ್ ವಿನ್ಯಾಸದೊಂದಿಗೆ ಪ್ರಯಾಣಿಕರ ಸುರಕ್ಷತೆಗಾಗಿ ಎಬಿಎಸ್ ಮತ್ತು 4 ಏರ್‍‍ಬ್ಯಾಗ್ ಗಳನ್ನು ಬಳಸಲಾಗಿದೆ.

ಭಾರತಕ್ಕೆ ಬರಲಿದೆ ಮಾರುತಿ ಸುಜುಕಿ ಸಂಸ್ಥೆಯ ವಿಟಾರಾ ಎಸ್‌ಯುವಿ ಕಾರುಗಳು..

ಹೊಸ ವಿಟಾರಾ ಕಾರುಗಳು ಪ್ರೀಮಿಯಂ ಮುಖಾಂತರ ಮಾರಾಟಗೊಳ್ಳುವುದಾಗಿ ಹೇಳಲಾಗುತ್ತಿದ್ದು, ನೆಕ್ಸಾನ್ ಡೀಲರ್‍‍ಶಿಪ್ ನೆಟ್ವರ್ಕ್ ಮುಖಾಂತರ ಮಾರಾಟಗೊಳ್ಳಬೇಕು ಎಂದು ನಿರೀಕ್ಷೆಯಿದೆ. ಹಾಗೆಯೇ ಕಾರಿನ ಬೆಲೆಯು ರೂ. 9 ಲಕ್ಷದಿಂದ ರೂ. 10 ಲಕ್ಷದವರೆಗು ಇರಬಹುದೆಂದು ಅಂದಾಜಿಸಲಾಗಿದೆ.

ಭಾರತಕ್ಕೆ ಬರಲಿದೆ ಮಾರುತಿ ಸುಜುಕಿ ಸಂಸ್ಥೆಯ ವಿಟಾರಾ ಎಸ್‌ಯುವಿ ಕಾರುಗಳು..

ಈಗಾಗಲೇ ವಿಟಾರಾ ಬ್ರೆಝಾ ಕಾರುಗಳು ಭಾರತದಲ್ಲಿ ಹೆಚ್ಚು ಜನಪ್ರಿಯತೆಯನ್ನು ಕಂಡಿದ್ದು, ಈ ಹಿನ್ನೆಲೆ ಕಾಂಪ್ಯಾಕ್ಟ್ ಎಸ್‍ಯುವಿ ಕಾರನ್ನು ಬಿಡುಗಡೆ ಮಾಡುವ ನಿರ್ಧಾರವನ್ನು ಮಾಡಲಾಗಿದೆ. ಒಮ್ಮೆ ಈ ಕಾರು ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡಲ್ಲಿ ಹ್ಯುಂಡೈ ಕ್ರೆಟಾ, ಮಹಿಂದ್ರಾ ಎಕ್ಸ್ ಯುವಿ 500 ಮತ್ತು ರೆನಾಲ್ಟ್ ಕ್ಯಾಪ್ಚರ್ ಕಾರಿಗೆ ಪೈಪೋಟಿಯನ್ನು ನೀಡಲಿದೆ.

Most Read Articles

Kannada
Read more on maruti suzuki suv
English summary
New Maruti Vitara India Launch Details Revealed — Expected Price, Specs And Features.
Story first published: Thursday, March 22, 2018, 18:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X