ಹ್ಯುಂಡೈ ಕ್ರೇಟಾ ಮಾದರಿಯಲ್ಲಿ ಬರಲಿದೆ ಮಾರುತಿ ಸುಜುಕಿ ವಿಟಾರಾ ಸ್ಪೈಡ್
ಮಾರುತಿ ಸುಜುಕಿ ಸಂಸ್ಥೆಯು ಇದೀಗ ಮತ್ತೊಂದು ಎಸ್‌ಯುವಿ ಮಾದರಿಯನ್ನು ಹೊರತರಲು ಸಿದ್ದತೆ ನಡೆಸಿದ್ದು, ಕ್ರೇಟಾ ಮಾದರಿಯಲ್ಲಿರುವ ವಿಟಾರಾ ಸ್ಪೈಡ್ ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿದೆ.
ವಿಟಾರಾ ಬ್ರೇಝಾ ಎಸ್‌ಯುವಿ ಮಾದರಿಗಳ ಮಾರಾಟದಲ್ಲಿ ಈಗಾಗಲೇ ದಾಖಲೆ ನಿರ್ಮಿಸಿರುವ ಮಾರುತಿ ಸುಜುಕಿ ಸಂಸ್ಥೆಯು ಇದೀಗ ಮತ್ತೊಂದು ಎಸ್‌ಯುವಿ ಮಾದರಿಯನ್ನು ಹೊರತರಲು ಸಿದ್ದತೆ ನಡೆಸಿದ್ದು, ಕ್ರೇಟಾ ಮಾದರಿಯಲ್ಲಿರುವ ವಿಟಾರಾ ಸ್ಪೈಡ್ ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿದೆ.

ಸದ್ಯ ದೇಶಿಯ ಮಾರುಕಟ್ಟೆಯಲ್ಲಿನ ಕಾರು ಮಾರಾಟದಲ್ಲಿ ನಂ.1 ಸ್ಥಾನ ಕಾಯ್ದುಕೊಂಡಿರುವ ಮಾರುತಿ ಸುಜುಕಿ ಸಂಸ್ಥೆಯ ಹ್ಯುಂಡೈ ಕ್ರೇಟಾಗೆ ಪ್ರಬಲ ಪೈಪೋಟಿ ನೀಡಬಲ್ಲ ವಿಟಾರಾ ಸ್ಪೈಡ್ ಎಸ್‌ಯುವಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸುವ ಸುಳಿವು ನೀಡಿದೆ.
Recommended Video


ವಿಟಾರಾ ಬ್ರೇಝಾ ಮಾದರಿಯಲ್ಲೇ ವಿನ್ಯಾಸ ಹೊಂದಿದ್ದರು ಗಾತ್ರದಲ್ಲಿ ದೊಡ್ಡದಾಗಿರುವ ವಿಟಾರಾ ಸ್ಪೈಡ್ ಕಾರುಗಳು, ಸದ್ಯ ಯುರೋಪಿನ ಮಾರುಕಟ್ಟೆಯಲ್ಲಿ 1.6-ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ 116 ಬಿಎಚ್‌ಪಿ ಉತ್ಪಾದನಾ ಸಾಮರ್ಥ್ಯ ಹೊಂದಿವೆ.

ಜೊತೆಗೆ 1.4 ಬೂಸ್ಟರ್ ಜೆಟ್ ಪೆಟ್ರೋಲ್ ಎಂಜಿನ್ ಮಾದರಿಯಲ್ಲೂ ಈಗಾಗಲೇ ವಿದೇಶಿ ಮಾರುಕಟ್ಟೆಗಳಲ್ಲಿ ಲಭ್ಯವಿರುವ ವಿಟಾರಾ ಸ್ಪೈಡ್ ಕಾರುಗಳು, 6 ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಖರೀಸಬಹುದಾಗಿದೆ.

ಹೀಗಾಗಿ ಭಾರತಕ್ಕೆ ಬರಲಿರುವ ವಿಟಾರಾ ಸ್ಪೈಡ್ ಕಾರುಗಳಲ್ಲಿ 1.5-ಲೀಟರ್ ಡಿಸೇಲ್ ಎಂಜಿನ್ ಮತ್ತು 1.5-ಲೀಟರ್ ಪೆಟ್ರೋಲ್ ಎಂಜಿನ್‌ಗಳನ್ನು ಪಡೆಯುವ ಸಾಧ್ಯತೆಗಳಿದ್ದು, ಇವು ಹ್ಯುಂಡೈ ಕ್ರೇಟಾ ಮಾರಾಟಕ್ಕೆ ನೇರ ಪೈಪೋಟಿ ನೀಡಲಿದೆ.

ವಿಟಾರ್ ಸ್ಪೈಡ್ ಕಾರುಗಳು 4,175ಎಂಎಂ ಉದ್ದ, 1,775ಎಂಎಂ ಅಗಲ, 1,610ಎಂಎಂ ಎತ್ತರ ಮತ್ತು 2,500ಎಂಎಂ ವೀಲ್ ಬೇಸ್ ಹೊಂದಿದ್ದು, ಎಸ್‌ಯುವಿ ಪ್ರಿಯರನ್ನು ಸೆಳೆಯುವುದರಲ್ಲಿ ಯಾವುದೇ ಅನುಮಾನವಿಲ್ಲ.

ಇನ್ನು ಕಾರಿನ ವಿನ್ಯಾಸಗಳು ಸದ್ಯದ ವಿಟಾರಾ ಬ್ರೇಝಾಗಿಂತ ತುಸು ಗುಣಮಟ್ಟ ಹೊಂದಿರಲಿದ್ದು, ಕಾರಿನ ಬೆಲೆಗಳು ದೆಹಲಿ ಎಕ್ಸ್‌ಶೋರಂ ಪ್ರಕಾರ 10ಲಕ್ಷದಿಂದ 15 ಲಕ್ಷದ ತನಕ ಇರಬಹುದೆಂದು ಅಂದಾಜಿಸಲಾಗಿದೆ.

ಆದರೇ ಹೊಸ ಕಾರನ್ನು ಭಾರತದಲ್ಲಿ ಬಿಡುಗಡೆ ಮಾಡುವ ಬಗ್ಗೆ ಯಾವುದೇ ಸುಳಿವು ನೀಡದ ಮಾರುತಿ ಸುಜುಕಿ ಸಂಸ್ಥೆಯು ಹ್ಯುಂಡೈ ಕ್ರೇಟಾಗೆ ಯಾವೇಲ್ಲಾ ಹಂತದಲ್ಲಿ ಸ್ಪರ್ಧಿ ಒಡ್ಡಬೇಕು ಎನ್ನುವುದನ್ನು ಪರೀಕ್ಷಿಸಿ ತದನಂತರವಷ್ಟೇ ವಿಟಾರಾ ಸ್ಪೈಡ್ ಬಗ್ಗೆ ಸ್ಪಷ್ಟನೆ ನೀಡಲಿದೆ.


Click it and Unblock the Notifications