ಭಾರತದಲ್ಲಿ ಹೊಸ ಮಾರುತಿ ಸುಜುಕಿ ವ್ಯಾಗನಾರ್ ಕಾರಿನ ಉತ್ಪಾದನೆ ಶುರು..

ದೇಶಿಯ ವಾಹನ ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿಯು ತಮ್ಮ ಜನಪ್ರಿಯ ವ್ಯಾಗನಾರ್ ಕಾರಿನ ಮೂರನೆ ತಲೆಮಾರಿನ ಮಾದರಿಯನ್ನು ಬಿಡುಗಡೆಗೊಳಿಸುವ ಯೋಜನೆಯಲಿದ್ದು, ಮಾಹಿತಿಗಳ ಪ್ರಕರಾ ಹೊಸ ವ್ಯಾಗನಾರ್ ಕಾರುಗಳ ಉತ್ಪಾದನೆಯನ್ನು ಭಾರತದಲ್ಲಿ ಈಗಾಗಲೆ ಶುರು ಮಾಡಲಾಗಿದೆ ಎನ್ನಲಾಗಿದೆ.

ಭಾರತದಲ್ಲಿ ಹೊಸ ಮಾರುತಿ ಸುಜುಕಿ ವ್ಯಾಗನಾರ್ ಕಾರಿನ ಉತ್ಪಾದನೆ ಶುರು..

ಇದಲ್ಲದೇ ಮಾರುತಿ ಸುಜುಕಿ ಸಂಸ್ಥೆಯು ವ್ಯಾಗನಾರ್ ಕಾರನ್ನು ಇದೇ ಡಿಸೆಂಬರ್ ಅಥವಾ 2019ರ ಜನರಿ ತಿಂಗಳಿನಲ್ಲಿ ಬಿಡುಗಡೆಗೊಳಿಸಲಿದೆ. ವ್ಯಾಗನಾರ್ ಕಾರು ಹ್ಯಾಚ್‍‍ಬ್ಯಾಕ್ ಕಾರುಗಳಾ ಸರಣಿಯಲ್ಲಿ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಈ ನಿಟ್ಟಿನಲ್ಲಿ ಸಂಸ್ಥೆಯು ಈ ಕಾರಿನ ಎಲೆಕ್ಟ್ರಿಕ್ ಮಾದರಿಯನ್ನು ಕೂಡಾ ಶೀಘ್ರವೇ ಪರಿಚಯಿಸಲಿದೆ.

ಭಾರತದಲ್ಲಿ ಹೊಸ ಮಾರುತಿ ಸುಜುಕಿ ವ್ಯಾಗನಾರ್ ಕಾರಿನ ಉತ್ಪಾದನೆ ಶುರು..

ಹೊಸದಾಗಿ ಬಿಡುಗಡೆಗೊಳ್ಳಲಿರುವ ಮಾರುತಿ ಸುಜುಕಿ ವ್ಯಾಗನಾರ್ ಕಾರು ಪ್ರಸ್ಥುತ ತಲೆಮಾರಿನ ಸ್ಥಾನವನ್ನು ಭರ್ತಿ ಮಾಡಲಿದೆ. ಈ ಕಾರು ಇನ್ನಿತರೆ ದೇಶಗಳಲ್ಲಿ ಈಗಾಗಲೆ ಮಾರಾಟಗೊಳ್ಳುತ್ತಿರುವ ಮಾದರಿಯನ್ನು ಆಧರಿಸಲಿದ್ದು, ಸುಜುಕಿ ಸಂಸ್ಥೆಯ ಹಾರ್ಟ್‍‍ಟೆಕ್ಟ್ ಪ್ಲಾಟ್‍‍ಫಾರ್ಮ್ ಅನ್ನು ಬಳಸಲಿದೆ.

ಭಾರತದಲ್ಲಿ ಹೊಸ ಮಾರುತಿ ಸುಜುಕಿ ವ್ಯಾಗನಾರ್ ಕಾರಿನ ಉತ್ಪಾದನೆ ಶುರು..

ಜಪಾನ್ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಟಾಲ್-ಬಾಯ್ ವಿನ್ಯಾವನ್ನು ಭಾರತದಲ್ಲಿ ಬಿಡುಗಡೆಗೊಳ್ಳಲಿರುವ ವ್ಯಾಗನಾರ್ ಕಾರು ಕೂಡಾ ಪಡೆದುಕೊಳ್ಳಾಲಿದೆ. ಈ ಕಾರಿನಲ್ಲಿ ಹೊಸ ಕ್ರೋಮ್ ಗ್ರಿಲ್, ಪ್ರೊಜೆಕ್ಟರ್ ಹೆಡ್‍‍ಲ್ಯಾಂಪ್ಸ್, ಅಗಲವಾದ ಬಂಪರ್‍‍ಗಳು ಮತ್ತು ಅಲಾಯ್ ವ್ಹೀಲ್‍‍ಗಳನ್ನು ಅಳವಡಿಸಲಾಗಿದೆ.

ಭಾರತದಲ್ಲಿ ಹೊಸ ಮಾರುತಿ ಸುಜುಕಿ ವ್ಯಾಗನಾರ್ ಕಾರಿನ ಉತ್ಪಾದನೆ ಶುರು..

ಇದು ಕಾರಿನ ಹೊರ ವಿನ್ಯಾಸವಾದರೆ ಒಳವಿನ್ಯಾಸದಲ್ಲಿ ಪ್ರಸ್ಥುತ ತಲೆಮಾರಿನ ಕಾರಿಗಿಂತಾ ವಿಭಿನ್ನವಾದ ಅಪ್ಡೇಟ್‍ ಅನ್ನು ಪಡೆದುಕೊಳ್ಳಲಿದೆ. ಕಾರಿನ ಒಳಭಾಗದ ಬಹುತೇಕ ಭಾಗಗಳನ್ನು ಕಪ್ಪು ಬಣ್ಣದಿಂದ ಸಜ್ಜುಗೊಳಿಸಲಾಗಿದ್ದು, ಪ್ರೀಮಿಯಮ್ ಅನುಭವವನ್ನು ನೀಡಲು ಡ್ಯಾಶ್‍‍ಬೋರ್ಡ್‍‍ನಲ್ಲಿ ಟಚ್‍‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ ಅನ್ನು ಒದಗಿಸಲಾಗಿದೆ.

ಭಾರತದಲ್ಲಿ ಹೊಸ ಮಾರುತಿ ಸುಜುಕಿ ವ್ಯಾಗನಾರ್ ಕಾರಿನ ಉತ್ಪಾದನೆ ಶುರು..

ಅಷ್ಟೆ ಅಲ್ಲದೆ ಕೀಲೆಸ್ ಎಂಟ್ರಿ, ಟಿಲ್ಟ್ ಟೆಲಿಸ್ಕೋಪಿಕ್ ಅಡ್ಜಸ್ಟಬಲ್ ಸ್ಟೀರಿಂಗ್ ವ್ಹೀಲ್, ಆಟೋಮ್ಯಾಟಿಕ್ ಕಂಟ್ರೋಲ್ ಮತ್ತು ಕ್ಯಾಮೆರಾದೊಂದಿಗೆ ಪಾರ್ಕಿಂಗ್ ಸೆನ್ಸಾರ್‍‍ಗಳನ್ನು ಪಡೆದುಕೊಳ್ಳಲಿದ್ದು, ಪ್ರಯಾಣಿಕರ ಸುರಕ್ಷತೆಗಾಗಿ ಡ್ಯುಯಲ್ ಏರ್‍‍ಬ್ಯಾಗ್ಸ್, ಎಬಿಎಸ್, ಇಬಿಡಿ ಮತ್ತು ಐಎಸ್ಒಫಿಕ್ಸ್ ಚೈಲ್ಡ್ ಸೀಟ್ ಮೌಂಟ್‍‍ಗಳನ್ನು ನೀಡಲಾಗಿದೆ.

ಭಾರತದಲ್ಲಿ ಹೊಸ ಮಾರುತಿ ಸುಜುಕಿ ವ್ಯಾಗನಾರ್ ಕಾರಿನ ಉತ್ಪಾದನೆ ಶುರು..

ಎಂಜಿನ್ ಸಾಮರ್ಥ್ಯ

ಬಿಡಗಡೆಗೊಳ್ಳಲಿರುವ ಹೊಸ ಮಾರುತಿ ಸುಜುಕಿ ವ್ಯಾಗನಾರ್ ಕಾರುಗಳು ಪ್ರಸ್ತುತ ತಲೆಮಾರಿನ ಕಾರಿನಲ್ಲಿ ಬಳಸಲಾದ ಎಂಜಿನ್ ಆನ್ನೆ ಅಳಾವಡಿಸಲಾಗಿದ್ದು, 1.0 ಕೆ ಸಿರೀಸ್ ಎಂಜಿನ್ ಸಹಾಯದಿಂದ 67ಬಿಹೆಚ್‍‍ಪಿ ಮತ್ತು 91ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದೆ.

ಭಾರತದಲ್ಲಿ ಹೊಸ ಮಾರುತಿ ಸುಜುಕಿ ವ್ಯಾಗನಾರ್ ಕಾರಿನ ಉತ್ಪಾದನೆ ಶುರು..

ಎಂಜಿನ್ ಅನ್ನು 5 ಸ್ಪೀಡ್ ಮ್ಯಾನುವಲ್ ಅಥವಾ ಎಎಂಟಿ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದ್ದು, ಪ್ರತೀ ಲೀಟರ್‍‍ಗೆ ನಗರ ಪ್ರದೇಶದಲ್ಲಿ 16 ಮತ್ತು ಹೆದ್ದಾರಿಗಳಲ್ಲಿ 22 ಕಿಲೋಮೀಟರ್ ಮೈಲೇಜ್ ಅನ್ನು ನೀಡಲಿದೆ ಎಂದು ಹೇಳಲಾಗಿದೆ.

ಭಾರತದಲ್ಲಿ ಹೊಸ ಮಾರುತಿ ಸುಜುಕಿ ವ್ಯಾಗನಾರ್ ಕಾರಿನ ಉತ್ಪಾದನೆ ಶುರು..

ಪ್ರಸ್ಥುತ ತಲೆಮಾರಿನ ವ್ಯಾಗನಾರ್ ಕಾರು ರೂ. 4.1 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದ್ದು, ಬಿಡುಗಡೆಗೊಳ್ಳಲಿರುವ ಹೊಸ ಕಾರು ಇನ್ನು ಕೊಂಚ ಅಧಿಕ ಬೆಲೆಯನ್ನು ಪಡೆಯಲಿದೆ ಎನ್ನಲಾಗಿದೆ. ಇನ್ನು ಈ ಕಾರು ಒಮ್ಮೆ ಮಾರುಕಟ್ಟೆಗೆ ಲಗ್ಗೆಯಿಟ್ಟಲ್ಲಿ ಟಾಟಾ ಟಿಯಾಗೊ, ರೆನಾಲ್ಟ್ ಕ್ವಿಡ್ ಮತ್ತು ಹೊಸ ಹುಂಡೈಸ್ಯಾಂಟ್ರೊ ಕಾರುಗಳಿಗೆ ಪೈಪೋಟಿ ನೀಡಲಿದೆ.

Kannada
English summary
New Maruti WagonR Production Begins In India.
Story first published: Friday, October 19, 2018, 18:00 [IST]
X

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more