ಭಾರತಕ್ಕೂ ಬರಲಿದೆ ಮರ್ಸಿಡಿಸ್ ಬೆಂಜ್ ಸಿ-ಕ್ಲಾಸ್ ಫೇಸ್‍ಲಿಫ್ಟ್ ಕಾರು.. ಬಿಡುಗಡೆ ಯಾವಾಗ..??
ಜರ್ಮನ್ ಮೂಲದ ಐಷಾರಾಮಿ ವಾಹನ ತಯಾರಕ ಸಂಸ್ಥೆಯಾದ ಮರ್ಸಿಡಿಸ್ ಬೆಂಜ್ ತಮ್ಮ ಸಿ ಕ್ಲಾಸ್ ಕಾರಿನ ಫೇಸ್‍ಲಿಫ್ಟ್ ಮಾದರಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸುವ ಸುಳಿವು ನೀಡಿದೆ.
ಜರ್ಮನ್ ಮೂಲದ ಐಷಾರಾಮಿ ವಾಹನ ತಯಾರಕ ಸಂಸ್ಥೆಯಾದ ಮರ್ಸಿಡಿಸ್ ಬೆಂಜ್ ತಮ್ಮ ಸಿ ಕ್ಲಾಸ್ ಕಾರಿನ ಫೇಸ್‍ಲಿಫ್ಟ್ ಮಾದರಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸುವ ಸುಳಿವು ನೀಡಿದ್ದು, ಇದೇ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ.

ಬಿಡುಗಡೆಗೊಳ್ಳಲ್ಲಿರುವ ಮರ್ಸಿಡಿಸ್ ಬೆಂಜ್ ಸಿ-ಕ್ಲಾಸ್ ಫೇಸ್‍ಲಿಫ್ಟ್ ಕಾರು ಮೊದಲ ಬಾರಿಗೆ 2018ರ ಜೆನೆವಾ ಮೋಟಾರ್ ಶೋನಲ್ಲಿ ಪ್ರದರ್ಶಿಸಲಾಗಿತ್ತು. ಯಾಂತ್ರಿಕತೆಯಲ್ಲಿ ಮತ್ತು ತಾಂತ್ರಿಕವಾಗಿ ಕೂಡಾ ಅಪ್ಡೇಟ್ ಅನ್ನು ಪಡೆದಿದ್ದು, ಕಾರಿನ ಒಳಭಾಗದಲ್ಲಿ ಮತ್ತು ಹೊರಭಾಗದ ವಿನ್ಯಾಸದಲ್ಲಿ ಗುರುತರ ಬದಲಾವಣೆಗಳನ್ನು ಪಡೆದುಕೊಂಡಿದೆ.

ವಿದೇಶದ ಮಾರುಕಟ್ಟೆಯಲ್ಲಿ ಮಾರಾಟಗೊಳ್ಳುತ್ತಿರುವ ಮರ್ಸಿಡಿಸ್ ಬೆಂಜ್ ಸಿ-ಕ್ಲಾಸ್ ಫೇಸ್‍ಲಿಫ್ಟ್ ಕಾರಿನ ಬಂಪರ್ ಮತ್ತು ವ್ಹೀಲ್‍ಗಳಲ್ಲಿ ಬದಲಾವಣೆಯನ್ನು ಪಡೆದಿದ್ದು, ಪೂರ್ಣ ಎಲ್ಇಡಿ ಹೆಡ್‍ಲ್ಯಾಂಪ್ಸ್ ಮತ್ತು ಟೈಲ್‍ಲ್ಯಾಂಪ್‍ನಲ್ಲಿ ಎಲ್ಇಡಿ ಪ್ಯಾಟರ್ನ್ ಅನ್ನು ಅಳವಡಿಸಲಾಗಿದೆ.

ಇನ್ನು ಕಾರಿನ ಒಳಭಾಗದಲ್ಲಿ ಡಿಜಿಟಲ್ ಡಿಯಾಜ್ ಮತ್ತು ಕಮಾಂಡ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಯೂನಿಟ್ ಅನ್ನು ಅಳವಡಿಸಲಾಗಿದ್ದು, ಇ ಮತ್ತು ಎಸ್ ಕ್ಲಾಸ್ ಫೇಸ್‍ಲಿಫ್ಟ್ ಕಾರುಗಳಲ್ಲಿ ಬಳಸಲಾದ ಡ್ಯುಯಲ್ ಟಚ್‍ಪ್ಯಾಡ್ ಯೂನಿಟ್ ಅನ್ನು ಕೂಡ ಪಡೆದುಕೊಂಡಿರಲಿದೆ.

ಇದಲ್ಲದೆ ಮರ್ಸಿಡಿಸ್ ಬೆಂಜ್ ಸಿ-ಕ್ಲಾಸ್ ಫೇಸ್‍ಲಿಫ್ಟ್ ಕಾರು ಪ್ಯಾನಾರಾಮಿಕ್ ಸನ್‍ರೂಫ್, 5 ಡ್ರೈವಿಂಗ್ ಮೋಡ್ಸ್, ಡ್ಯುಯಲ್ ಜೋನ್ ಕ್ಲೈಮೇಟ್ ಕಂಟ್ರೋಲ್ ಮತ್ತು ಬರ್ಮೆಸ್ಟರ್ ಆಡಿಯೊ ಸಿಸ್ಟಮ್ ಅನ್ನು ಪಡೆದುಕೊಂಡಿದೆ.

ಪ್ರಯಾಣಿಕರ ಸುರಕ್ಷತೆಗಾಗಿ 7 ಏರ್‍ಬ್ಯಾಗ್‍ಗಳು, ಆಡಾಪ್ಟೀವ್ ಬ್ರೇಕಿಂಗ್, ಅಟೆಂಶನ್ ಅಸ್ಸಿಸ್ಟ್, ಪಾರ್ಕಿಂಗ್ ಅಸ್ಸಿಸ್ಟ್ ಮತ್ತು ರೆವರ್ಸ್ ಕ್ಯಾಮೆರಾ ಅನ್ನು ಅಳವಡಿಸಲಾಗಿದೆ.

ಮರ್ಸಿಡಿಸ್ ಬೆಂಜ್ ಸಿ-ಕ್ಲಾಸ್ ಫೇಸ್‍ಲಿಫ್ಟ್ ಕಾರು ಸಿ 200 ಪೆಟ್ರೋಲ್, ಸಿ 220ಡಿ ಡೀಸೆಲ್ ಮತ್ತು ಸಿ 250ಡಿ ಟ್ವಿನ್-ಟರ್ಬೊ ಡೀಸೆಲ್ ಎಂಜಿನ್ ಅನ್ನು ಪಡೆದುಕೊಂಡಿದೆ. ಈ ಕಾರು 1.5 ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಸಹಾಯದಿಂದ 184ಬಿಹೆಚ್‍ಪಿ ಮತ್ತು 280ಎನ್ಎಮ್ ಟಾರ್ಕ್ ಅನ್ನು ಅಳವಡಿಸಲಾಗಿದೆ.

ಇನ್ನು ಕಾರಿನ ಡೀಸೆಲ್ ಮಾದರಿಗಳು 2.0 ಲೀಟರ್ 4 ಸಿಲೆಂಡರ್ ಪಡೆದಿದ್ದು, ಈ ಎಂಜಿನ್ ಎರಡು ಪವರ್ ಔಟ್‍ಪುಟ್‍ನಲ್ಲಿ ದೊರೆಯಲಿದೆ. ಮೊದಲಿಗೆ ಸಿ 200ಡಿ ಎಂಜಿನ್ 194 ಬಿಹೆಚ್‍ಪಿ ಮತ್ತು 400ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸಲಿದ್ದು ಮತ್ತೊಂದು ಟ್ವಿನ್ ಟರ್ಬೊ ಸಿ 250ಡಿ ಎಂಜಿನ್ 254 ಬಿಹೆಸ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ.

ಕಾರಿನಲ್ಲಿ ಬಳಸಲಾಗಿರುವ ಎಲ್ಲಾ ಎಂಜಿನ್‍ಗಳನ್ನು 9ಜಿ ಟ್ರೋನಿಕ್ ಗೇರ್‍ಬಾಕ್ಸ್ ನೊಂದಿಗೆ ಜೋಡಿಸಲಾಗಿದ್ದು, ಮಾರುಕಟ್ಟೆಯಲ್ಲಿ ಬಿಎಮ್‍ಡಬ್ಲ್ಯೂ 3 ಸಿರೀಸ್, ಆಡಿ ಎ4 ಮತ್ತು ಜಾಗ್ವಾರ್ ಎಕ್ಸ್ಇ ಕಾರುಗಳಿಗೆ ಪೈಪೋಟಿ ನೀಡಲಿದೆ.


Click it and Unblock the Notifications








