ಹೊಸ ಮೈಕ್ರಾ ಮತ್ತು ಮೈಕ್ರಾ ಆಕ್ಟೀವ್ ಕಾರುಗಳನ್ನು ಬಿಡುಗಡೆಗೊಳಿಸಿದ ನಿಸ್ಸಾನ್..
ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ನಿಸ್ಸಾನ್ ತಮ್ಮ ಹೊಸ ಮೈಕ್ರಾ ಮತ್ತು ಮೈಕ್ರಾ ಆಕ್ಟೀವ್ ಕಾರುಗಳನ್ನು ಬಿಡುಗಡೆಗೊಳಿಸಿದ್ದು, ಮೈಕ್ರಾ ಕಾರುಗಳು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 6.19 ಮತ್ತು ಮೈಕ್ರಾ ಆಕ್ಟೀವ್ ಕಾರುಗಳು ರೂ. 5.03 ಆರಂಭ
ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ನಿಸ್ಸಾನ್ ತಮ್ಮ ಹೊಸ ಮೈಕ್ರಾ ಮತ್ತು ಮೈಕ್ರಾ ಆಕ್ಟೀವ್ ಕಾರುಗಳನ್ನು ಬಿಡುಗಡೆಗೊಳಿಸಿದ್ದು, ಮೈಕ್ರಾ ಕಾರುಗಳು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 6.19 ಮತ್ತು ಮೈಕ್ರಾ ಆಕ್ಟೀವ್ ಕಾರುಗಳು ರೂ. 5.03 ಆರಂಭಿಕ ಬೆಲೆಯನ್ನು ಪಡೆದುಕೊಂಡಿದೆ.

ಬಿಡುಗಡೆಗೊಂಡ ನಿಸ್ಸಾನ್ ಮೈಕ್ರಾ ಮತ್ತು ಮೈಕ್ರಾ ಆಕ್ಟೀವ್ ಕಾರುಗಳು ಈ ಬಾರಿ ನೂತನ ಸೇಫ್ಟಿ ಫೀಚರ್‍ಗಳನ್ನು ಪಡೆದುಕೊಂಡಿದ್ದು, ನಿಸ್ಸಾನ್ ಮೈಕ್ರಾ ಕಾರುಗಳಲ್ಲಿ ಡ್ಯುಯಲ್ ಏರ್‍ಬ್ಯಾಗ್ಸ್ ಅನ್ನು ಕಾರಿನ ಎಲ್ಲಾ ವೇರಿಯಂಟ್‍ಗಳಲ್ಲಿ ಅಳವಡಿಸಲಾಗಿದ್ದು, ಬೇಸ್ ವೇರಿಯಂಟ್‍ನ ಮೈಕ್ರಾ ಕಾರಿನಲ್ಲಿ ಎಬಿಎಸ್ ಅಲಭ್ಯವಾಗಿದೆ. ಇದಲ್ಲದೇ ರಿಯರ್ ಪಾರ್ಕಿಂಗ್ ಸೆನ್ಸಾರ್ ಕ್ಯಾಮೆರಾಗಳನ್ನು ಕೂಡಾ ಅಳವಡಿಸಲಾಗಿದೆ.

ಇನ್ನು ನಿಸ್ಸಾನ್ ಮೈಕ್ರಾ ಕಾರಿನ ಒಳಭಾಗದಲ್ಲಿ ಮಿರರ್‍ಲಿಂಕ್‍ನೊಂದಿಗೆ 6.2 ಇಂಚಿನ ಟಚ್‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಆನ್ನು ಹೊಸದಾಗಿ ಒದಗಿಸಲಾಗಿದೆ. ಹೊಸ ನಿಸ್ಸಾನ್ ಮೈಕ್ರಾ ಕಾರಿನ ಹೊರಭಾಗದಲ್ಲಿ ಒಆರ್‍ವಿಎಮ್ ಅನ್ನು ಹೊರತು ಪಡಿಸಿ ಬೇರಾವ ಬದಲಾವಣೆಗಳನ್ನು ಪಡೆದಿರುವುದಿಲ್ಲ.

ನಿಸ್ಸಾನ್ ಮೈಕ್ರಾ ಆಕ್ಟೀವ್ ಕಾರಿನಲ್ಲಿಯು ಕೂಡಾ ಡ್ಯುಯಲ್ ಏರ್‍ಬ್ಯಾಗ್‍ಗಳನ್ನು ಒದಗಿಸಲಾಗಿದ್ದು, ಎಬಿಎಸ್ ಅನ್ನು ಕೇವಲ ಕಾರಿನ ಟಾವ್ ಸ್ಪೆಕ್ ಎಕ್ಸ್ ವಿ ಮಾಡಲ್‍ನಲ್ಲಿ ಮಾತ್ರ ಲಭ್ಯವಿರಲಿದೆ. ನಿಸ್ಸಾನ್ ಮೈಕ್ರಾ ಆಟೀವ್ ಕಾರಿನ ಒಳಭಾಗದಲ್ಲಿ 6.2 ಇಂಚಿನ ಇನ್ಫೋಟೈನೆಂಟ್ ಸಿಸ್ಟಮ್ ಮತ್ತು ಹೊಸದಾಗಿ ಪಾರ್ಕಿಂಗ್ ಸೆನ್ಸಾರ್ ಅನ್ನು ಪಡೆದುಕೊಂಡಿದೆ.

ಇದಲ್ಲದೆ 2018ರ ಹೊಸ ನಿಸ್ಸಾನ್ ಮೈಕ್ರಾ ಕಾರಿನಲ್ಲಿ ಆಟೋಮ್ಯಾತಿಕ್ ಕ್ಲೇಮೇಟ್ ಕಂಟ್ರೋಲ್, ಆಟೋಮ್ಯಾಟಿಕ್ ಹೆಡ್‍ಲ್ಯಾಂಪ್ಸ್, ರೈನ್ ಸೆನ್ಸಿಂಗ್ ಹೆಡ್‍ಲ್ಯಾಂಪ್ಸ್, ರೈನ್ ಸೆನ್ಸಿಂಗ್ ವೈಪರ್ ಮತ್ತು ಇನ್ನಿತರೆ ವೈಶಿಷ್ಟ್ಯತೆಗಳನ್ನು ಅಳವಡಿಸಲಾಗಿದೆ. ಹೊಸ ಮೈಕ್ರಾ ಆಕ್ಟೀವ್ ಕಾರುಗಳು ಇವುಗಳೊಂದಿಗೆ ಕೀ ಲೆಸ್ ಎಂಟ್ರಿ, ಹೈಟ್ ಅಡ್ಜಸ್ಟಬಲ್ ಡ್ರೈವರ್ ಸೀಟ್ ಮತ್ತು ಸ್ಟೀರಿಂಗ್ ಮೌಂಟೆಡ್ ಆಟಿಯೊ ಕಂಟ್ರೋಲ್‍ಗಳನ್ನು ಪಡೆದುಕೊಂಡಿರಲಿದೆ.

ಎಂಜಿನ್ ಸಾಮರ್ಥ್ಯ
2018ರ ಹೊಸ ನಿಸ್ಸಾನ್ ಮೈಕ್ರಾ ಕಾರು 1.2 ಲೀಟರ್ ಪೆಟ್ರೋಲ್ ಮತ್ತು 1.5 ಲೀಟರ್ ಡೀಸೆಲ್ ಎಂಜಿನ್ ಅನ್ನು ಪಡೆದುಕೊಂಡಿದೆ. ಪೆಟ್ರೋಲ್ ಎಂಜಿನ್ ಅಧಾರಿತ ಕಾರುಗಳು 76 ಬಿಹೆಚ್‍ಪಿ ಮತ್ತು 104ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸಿದಲ್ಲಿ, ಇನ್ನು ಡೀಸೇಲ್ ಆಧಾರಿತ ಕಾರುಗಳು 63ಬಿಹೆಚ್‍ಪಿ ಮತ್ತು 160ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದೆ. ಮತ್ತು ಎರಡೂ ಎಂಜಿನ್‍ಗಳನ್ನು 5 ಸ್ಪೀಡ್ ಮ್ಯಾನುವಲ್ ಅಥವಾ ಸಿವಿಟಿ ಗೇರ್‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಇನ್ನು ನಿಸಾನ್ ಮೈಕ್ರಾ ಆಕ್ಟೀವ್ ಕಾರುಗಳು 1.2 ಲೀಟರ್ ಪೆಟ್ರೋಲ್ ಎಂಜಿನ್ ಸಹಾಯದಿಂದ 67ಬಿಹೆಚ್‍ಪಿ ಮತ್ತು 104ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಎಂಜಿನ್ ಅನ್ನು 5 ಸ್ಪೀಡ್ ಮ್ಯಾನುವಲ್ ಗೇರ್‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ
ನಿಸ್ಸಾನ್ ಸಂಸ್ಥೆಯು ಮೈಕ್ರಾ ಮತ್ತು ಮೈಕ್ರಾ ಆಕ್ಟೀವ್ ಕಾರುಗಳನ್ನು ದೇಶಿಯ ಮಾರುಕಟ್ಟೆಗೆ ಪರಿಚಯಿಸಿದೆ. ಗುರುತರ ಬದಲಾವಣೆಗಳನ್ನು ಪಡೆದುಕೊಂಡ ಈ ಕಾರುಗಳು, ಮಾರುಕಟ್ಟೆಯಲ್ಲಿ ಟಾಟಾ ಟಿಯಾಗೊ, ಹೋಂಡಾ ಬ್ರಿಯೊ ಮತ್ತು ಮಾರುತಿ ಸ್ವಿಫ್ಟ್ ಕಾರುಗಳಿಗೆ ಪೈಪೋಟಿ ನೀಡಲಿದೆ.


Click it and Unblock the Notifications








