ಆಡಿ ಕ್ಯೂ5 ಕಾರಿಗೆ ಪೈಪೋಟಿ ನೀಡಲು ಭಾರತಕ್ಕೆ ಕಾಲಿಟ್ಟ ಪೋರ್ಷೆ ಕಯೆನ್ನೆ..
ಜರ್ಮನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಪೋರ್ಷೆ ತನ್ನ ಎಸ್‍ಯುವಿ ಸರಣಿಯ ಮುಂದಿನ ತಲೆಮಾರಿನ ಕಯೆನ್ನೆ ಕಾರನ್ನು ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿವ ಸುಳಿವು ನೀಡಿತ್ತು.
ಜರ್ಮನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಪೋರ್ಷೆ ತನ್ನ ಎಸ್‍ಯುವಿ ಸರಣಿಯ ಮುಂದಿನ ತಲೆಮಾರಿನ ಕಯೆನ್ನೆ ಕಾರನ್ನು ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿವ ಸುಳಿವು ನೀಡಿತ್ತು. ಇದೀಗ ಪೋರ್ಷೆ ಕಯೆನ್ನೆ ಎಸ್‍ಯುವಿ ಕಾರು ಭಾರತಕ್ಕೆ ಆಗಮಿಸಿದ್ದು, ಬಿಡುಗಡೆಗೆ ಸಜ್ಜುಗೊಳ್ಳುತ್ತಿದೆ.

ಹಿಂದಿನ ತಲೆಮಾರಿನ ಪೋರ್ಷೆ ಕಯೆನ್ನೆ ಕಾರಿಗಿಂತ ಹೊಸ ತಲೆಮಾರಿನ ಕಾರಿನಲ್ಲಿ ತಾಂತ್ರಿಕವಾಗಿ ಮತ್ತು ಯಾಂತ್ರಿಕವಾಗಿ ನವೀಕರಿಸಲಾಗಿದೆ.

ಹೊಸ ತಲೆಮಾರಿನ ಪೋರ್ಷೆ ಕಯೆನ್ನೆ ಎಸ್‍ಯುವಿ ಕಾರು 3.0 ಲೀಟರ್ ಟರ್ಬೋಚಾರ್ಜ್ಡ್ ವಿ6 ಎಂಜಿನ್ ಅನ್ನು ಹೊಂದಿದ್ದು, 335ಬಿಹೆಚ್‍ಪಿ ಮತ್ತು 450ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದೆ.

3.0 ಲೀಟರ್ ಎಂಜಿನ್ ಅಲ್ಲದೆ, ಪೋರ್ಷೇ ಸಂಸ್ಥೆಯು ಕಯೆನ್ನೆ ಎಸ್ ಮತ್ತು ಕಯೆನ್ನೆ ಇ-ಹೈಬ್ರಿಡ್ ಕಾರುಗಳನ್ನು ಕೂಡ ಪರಿಚಯಿಸಲಿದೆ. ಕಯೆನ್ನೆ ಎಸ್ 2.9 ಲೀಟರ್, ಟ್ವಿನ್ ಟರ್ಬೊ ವಿ6 ಎಂಜಿನ್ ಸಹಾಯದಿಂದ 434 ಬಿಹೆಚ್‍ಪಿ ಮತ್ತು 550ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿರಲಿದೆ.

ಪೋರ್ಷೇ ಕಯೆನ್ನೆ ಇ-ಹೈಬ್ರಿಡ್ ಕಾರು ಕೂಡಾ 3.0 ಲೀಟರ್ ವಿ6 ಎಂಜಿನ್ ಅನ್ನು ಆಯ್ಕೆಯಾಗಿ ಪಡೆದಿರಲಿದ್ದು, ಎಲೆಕ್ಟ್ರಿಕ್ ಮೋಟಾರ್ ಅನ್ನು ಕೂಡಾ ಅಳವಡಿಸಲಾಗಿದೆ. ಈ ಕಾರು 455ಬಿಹೆಚ್‍ಪಿ ಮತ್ತು 700ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದೆ.

ಹೊಸ ತಲೆಮಾರಿನ ಪೋರ್ಷೆ ಕಯೆನ್ನೆ ಕಾರುಗಳು ಗುರುತರ ಬದಲಾವಣೆಗಳನ್ನು ಪಡೆದುಕೊಂಡಿದ್ದು, ಹೊಸ ಹಾರಿಜಾಂಟಲ್ ಲೈಟ್ ಎಡ್ಜೆಸ್ ಮತ್ತು ಮುಂಭಾಗದಲ್ಲಿ ದೊಡ್ಡದಾದ ಏರ್ ಇಂಟೇಕ್ ಅನ್ನು ಅಳವಡಿಸಲಾಗಿದೆ.

ಹೊಸ ಪೋರ್ಷೆ ಕಯೆನ್ನೆ ಕಾರು ಎಲ್ಇಡಿ ಹೆಡ್‍ಲ್ಯಾಂಪ್ಸ್ ಅನ್ನು ಪಡೆದಿದ್ದು, ಪೋರ್ಷೇ ಸಂಸ್ಥೆಯ ಡೈನಾಮಿನ್ ಲೈಟ್ಸ್ ಸಿಸ್ಟಮ್ ಅಥವ ಮ್ಯಾಟ್ರಿಕ್ಸ್ ಬೀಮ್ ಹೆಡ್‍ಲ್ಯಾಂಪ್‍ಗಳನ್ನು ಆಯ್ಕೆಯಾಗಿ ಪಡೆದುಕೊಳ್ಳಲಿದೆ.

ಇದಲ್ಲದೆ ಪೋರ್ಷೆ ಕಯೆನ್ನೆ ಕಾರು ಹೆಡ್ಸ್ ಅಪ್ ಡಿಸ್ಪ್ಲೇ, ಮಸಾಜ್ ಸೀಟ್ಸ್, ಹೀಟೆಡ್ ವಿಂಡ್‍ಸ್ಕ್ರೀನ್ ಮತ್ತು ಅಡಾಪ್ಟೀವ್ ಕ್ರೂಸ್ ಕಂಟ್ರೋಲ್‍ನೊಂದಿಗೆ ಪೋರ್ಷೇ ಇನ್ನೊಡ್ರೈವ್ ಎಂಬ ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿದೆ.

ಪೋರ್ಷೆ ಸಂಸ್ಥೆಯು ಇದೇ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ ಕಯೆನ್ನೆ ಕಾರಿನ ಜೊತೆಗೆ ಇನ್ನಿತರೆ ಎರಡು ಕಯೆನ್ನೆ ಎಸ್‍ಯುವಿ ಕಾರಿನ ವೇರಿಯಂಟ್ ಅನ್ನು ಬಿಡುಗಡೆಗೊಳಿಸಲಿದೆ ಎನ್ನಗಾಗಿದೆ.

ಹೊಸ ತಲೆಮಾರಿನ ಪೋರ್ಷೆ ಕಯೆನ್ನೆ ಎಸ್‍ಯುವಿ ಕಾರು ಭಾರತಕ್ಕೆ ಆಗಮಿಸಿದ್ದು, ಈ ಕಾರು ಒಮ್ಮೆ ಮಾರುಕಟ್ಟೆಗೆ ಲಗ್ಗೆಯಿಟ್ಟಲ್ಲಿ ಮರ್ಸಿಡಿಸ್ ಬೆಂಜ್ ಜಿಎಲ್ಎಕ್ಸ್, ಆಡಿ ಕ್ಯೂ7 ಮತ್ತು ಬಿಎಮ್‍ಡಬ್ಲ್ಯೂ ಎಕ್ಸ್5 ಕಾರುಗಳಿಗೆ ತೀವ್ರ ಪೈಪೋಟಿ ನೀಡಲಿದೆ.


Click it and Unblock the Notifications








