ಭಾರತದಲ್ಲೂ ಕಮಾಲ್ ಮಾಡುತ್ತಾ ಸ್ಕೋಡಾ ಹೊಚ್ಚ ಹೊಸ ಸ್ಕಾಲಾ ಹ್ಯಾಚ್‌ಬ್ಯಾಕ್?

ಫೋಕ್ಸ್‌ವ್ಯಾಗನ್ ಸಂಸ್ಥೆಯೊಂದಿಗೆ ಕೈ ಜೋಡಿಸಿರುವ ಸ್ಕೋಡಾ ಸಂಸ್ಥೆಯು ಭಾರತ ಸೇರಿದಂತೆ ಜಾಗತಿಕ ಮಾರುಕಟ್ಟೆಗಾಗಿ ಕೆಲವು ಮಹತ್ವದ ಯೋಜನೆಗಳಿಗೆ ಒಪ್ಪಿಗೆ ಸೂಚಿಸಿದ್ದು, ಹೊಸ ಮಾರ್ಗಸೂಚಿಯೆಂತೆ ಸ್ಕೋಡಾ ಸಂಸ್ಥೆಯೇ ಫೋಕ್ಸ್‌ವ್ಯಾಗನ್ ಕಾರುಗಳನ್ನು ಅಭಿವೃದ್ಧಿ ಮಾಡುವ ಹೊಣೆ ಹೊತ್ತಿದೆ.

ಭಾರತದಲ್ಲೂ ಕಮಾಲ್ ಮಾಡುತ್ತಾ ಸ್ಕೋಡಾ ಹೊಚ್ಚ ಹೊಸ ಸ್ಕಾಲಾ ಹ್ಯಾಚ್‌ಬ್ಯಾಕ್?

ಫೋಕ್ಸ್‌ವ್ಯಾಗನ್ ಸಂಸ್ಥೆಯು ಭಾರತೀಯ ಮಾರುಕಟ್ಟೆ ಸೇರಿದಂತೆ ವಿಶ್ವದ ಪ್ರಮುಖ ಮಾರುಕಟ್ಟೆಗಳಿಗಾಗಿ ವಿವಿಧ ಕಾರು ಮಾದರಿಗಳನ್ನು ಪರಿಚಯಿಸುವ ಇರಾದೆಯಲ್ಲಿದ್ದು, 'ಇಂಡಿಯಾ 2.0 ಪ್ರೋಜೆಕ್ಟ್' ಎನ್ನುವ ಬೃಹತ್ ಯೋಜನೆ ಒಂದನ್ನು ಸಿದ್ದಪಡಿಸಿದೆ. ಇದರ ಜವಾಬ್ದಾರಿಯನ್ನು ಸ್ಕೋಡಾ ಸಂಸ್ಥೆಗೆ ವಹಿಸಿಕೊಟ್ಟಿದ್ದು, ಮುಂಬರುವ ಫೋಕ್ಸ್‌ವ್ಯಾಗನ್ ಸಂಸ್ಥೆಯ ಪ್ರತಿಯೊಂದು ಕಾರು ಮಾದರಿಯು ಸಹ ಸ್ಕೋಡಾ ತಂತ್ರಜ್ಞಾನ ಪ್ರೇರಣೆಯೊಂದಿಗೆ ಮಾರುಕಟ್ಟೆಗೆ ಪ್ರವೇಶಿಸಲಿವೆ.

ಭಾರತದಲ್ಲೂ ಕಮಾಲ್ ಮಾಡುತ್ತಾ ಸ್ಕೋಡಾ ಹೊಚ್ಚ ಹೊಸ ಸ್ಕಾಲಾ ಹ್ಯಾಚ್‌ಬ್ಯಾಕ್?

ಸ್ಕೋಡಾ ಸಂಸ್ಥೆಯು ಭಾರತದಲ್ಲಿ ತನ್ನ ಕಾರು ಉತ್ಪನ್ನಗಳ ಬೆಲೆ ತಗ್ಗಿಸಿ ಮಾರಾಟ ಹೆಚ್ಚಿಸುವ ಉದ್ದೇಶದಿಂದ MQB ಎನ್ನುವ ಪ್ಲ್ಯಾಟ್‌ಫಾರ್ಮ್ ಒಂದನ್ನು ತೆರಿದಿದ್ದು, ಇಲ್ಲಿ ನಿರ್ಮಾಣವಾಗುವ ಕಾರುಗಳು ಸದ್ಯ ಮಾರುಕಟ್ಟೆಯಲ್ಲಿರುವ ಕಾರುಗಳಿಂತ ಕಡಿಮೆ ಬೆಲೆ ಮತ್ತು ಗುಣಮಟ್ಟದ ಉತ್ಪನ್ನಗಳ ತಯಾರಿಕೆಗೆ ಸಹಕಾರಿಯಾಗಲಿದೆ.

ಭಾರತದಲ್ಲೂ ಕಮಾಲ್ ಮಾಡುತ್ತಾ ಸ್ಕೋಡಾ ಹೊಚ್ಚ ಹೊಸ ಸ್ಕಾಲಾ ಹ್ಯಾಚ್‌ಬ್ಯಾಕ್?

ಇದೇ ಕಾರಣಕ್ಕೆ ಸ್ಕೋಡಾ ಸಂಸ್ಥೆಗೆ ತನ್ನ ಹೊಸ ಕಾರು ಮಾದರಿಗಳ ಅಭಿವೃದ್ಧಿ ಯೋಜನೆಯನ್ನು ವಹಿಸಿಕೊಂಡಿರುವ ಫೋಕ್ಸ್‌ವ್ಯಾಗನ್ ಸಂಸ್ಥೆಯು ಕಡಿಮೆ ಬೆಲೆಯಲ್ಲಿ ಕಾರುಗಳನ್ನು ತಯಾರಿಸಿ ಭಾರೀ ಪ್ರಮಾಣದ ಆದಾಯ ಗಳಿಕೆಯ ತವಕದಲ್ಲಿದ್ದು, ಇದು ಸ್ಕೋಡಾ ಸಂಸ್ಥೆಗೂ ಸಾಕಷ್ಟು ಮನ್ನಣೆ ಸಿಗಲಿದೆ.

ಭಾರತದಲ್ಲೂ ಕಮಾಲ್ ಮಾಡುತ್ತಾ ಸ್ಕೋಡಾ ಹೊಚ್ಚ ಹೊಸ ಸ್ಕಾಲಾ ಹ್ಯಾಚ್‌ಬ್ಯಾಕ್?

ಇದೀಗ ಪ್ಯಾರಿಸ್ ಆಟೋ ಮೇಳದಲ್ಲಿ ಪ್ರದರ್ಶನ ಮಾಡಲಾದ ಸ್ಕೋಡಾ ನಿರ್ಮಾಣದ ಸ್ಕಾಲಾ ಹ್ಯಾಚ್‌ಬ್ಯಾಕ್ ಮಾದರಿಯು ಭಾರೀ ಆಕರ್ಷಣೆಗೆ ಕಾರಣವಾಗಿದ್ದು, ಫೋರ್ಕ್ಸ್‌ವ್ಯಾಗನ್ MQB A0 ಎನ್ನುವ ಫ್ಯಾಟ್‌ಫಾರ್ಮ್ ಅಡಿಯಲ್ಲಿ ಈ ಕಾರನ್ನು ನಿರ್ಮಾಣ ಮಾಡಲಾಗಿದೆ.

ಭಾರತದಲ್ಲೂ ಕಮಾಲ್ ಮಾಡುತ್ತಾ ಸ್ಕೋಡಾ ಹೊಚ್ಚ ಹೊಸ ಸ್ಕಾಲಾ ಹ್ಯಾಚ್‌ಬ್ಯಾಕ್?

ಸ್ಕೋಡಾ ಸಂಸ್ಥೆಯ ಆರ್‌ಎಸ್ ಕಾರುಗಳ ತಾಂತ್ರಿಕ ಅಂಶಗಳನ್ನು ಹೊಂದಿರುವ ಸ್ಕಾಲಾ ಕಾರುಗಳು ಸ್ಪೋರ್ಟಿ ಡಿಸೈನ್‌ನೊಂದಿಗೆ ಆಕಾರದಲ್ಲೂ ಸಾಕಷ್ಟು ದೊಡ್ದದಾಗಿದ್ದು, 4,362ಎಂಎಂ ಉದ್ದ, 1,793ಎಂಎಂ ಅಗಲ, 1,471ಎಂಎಂ ಎತ್ತರ ಮತ್ತು 2,649ಎಂಎಂ ವೀಲ್‌ಬೆಸ್ ಪಡೆದುಕೊಂಡಿದೆ.

ಭಾರತದಲ್ಲೂ ಕಮಾಲ್ ಮಾಡುತ್ತಾ ಸ್ಕೋಡಾ ಹೊಚ್ಚ ಹೊಸ ಸ್ಕಾಲಾ ಹ್ಯಾಚ್‌ಬ್ಯಾಕ್?

ಜೊತೆಗೆ ಫುಲ್-ಎಲ್ಇಡಿ ಹೆಡ್‌ಲೈಟ್ಸ್ ಮತ್ತು ಟೈಲ್‌ಲೈಟ್ಸ್, ಹ್ಯಾಚ್‌ಬ್ಯಾಕ್ ವರ್ಷನ್‌ಗಳಲ್ಲಿ ಮೊದಲ ಬಾರಿಗೆ ಹಿಂಬದಿಯ ಡೈನಾಮಿಕ್ ಇಂಡಿಕೇಟರ್, ಆಟೋನೊಮಸ್ ಎರ್ಮಜೆನ್ಸಿ ಬ್ರೇಕಿಂಗ್ ಸಿಸ್ಟಂ, ಲೇನ್ ಕಿಪ್ ಅಸಿಸ್ಟ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಆಟೋಮ್ಯಾಟಿಕ್ ಪಾರ್ಕ್ ಅಸಿಸ್ಟ್ ಮತ್ತು ರಿಯರ್ ವ್ಯೂ ಕ್ಯಾಮೆರಾ ಹೊಂದಿದೆ.

ಭಾರತದಲ್ಲೂ ಕಮಾಲ್ ಮಾಡುತ್ತಾ ಸ್ಕೋಡಾ ಹೊಚ್ಚ ಹೊಸ ಸ್ಕಾಲಾ ಹ್ಯಾಚ್‌ಬ್ಯಾಕ್?

ಎಂಜಿನ್ ಸಾಮರ್ಥ್ಯ

ಸ್ಕೋಡಾ ಸ್ಕಾಲಾ ಕಾರು ಪೆಟ್ರೋಲ್ ಮತ್ತು ಡಿಸೇಲ್ ಎರಡು ಆಯ್ಕೆ ಹೊಂದಿದ್ದು, ಪೆಟ್ರೋಲ್ ಎಂಜಿನ್ ಮಾದರಿಯ 1.5-ಲೀಟರ್‌ನೊಂದಿಗೆ 150ಬಿಎಚ್‌ಪಿ ಉತ್ಪಾದನೆ ಮಾಡಿದಲ್ಲಿ ಡಿಸೇಲ್ ಎಂಜಿನ್ ಮಾದರಿಯು 1.6-ಲೀಟರ್‌ನೊಂದಿಗೆ 115-ಬಿಎಚ್‌ಪಿ ಉತ್ಪಾದನೆ ಮಾಡಬಲ್ಲವು.

ಭಾರತದಲ್ಲೂ ಕಮಾಲ್ ಮಾಡುತ್ತಾ ಸ್ಕೋಡಾ ಹೊಚ್ಚ ಹೊಸ ಸ್ಕಾಲಾ ಹ್ಯಾಚ್‌ಬ್ಯಾಕ್?

ಇದರೊಂದಿಗೆ ಹ್ಯಾಚ್‌ಬ್ಯಾಕ್ ಮಾದರಿಯೊಂದರಲ್ಲಿ ಗರಿಷ್ಠ ಮಟ್ಟದ ತಾಂತ್ರಿಕ ಅಂಶಗಳನ್ನು ಸೇರ್ಪಡಿಸಲು ಯತ್ನಿಸಿರುವ ಸ್ಕೋಡಾ ಸಂಸ್ಥೆಯು ಎಸ್, ಎಸ್ಇ ಮತ್ತು ಎಸ್ಇ ಎಲ್ ಎನ್ನುವ ಮೂರು ವೆರಿಯೆಂಟ್‌ಗಳನ್ನು ಪರಿಚಯಿಸುವುದಾಗಿ ಹೇಳಿಕೊಂಡಿದೆ.

MOST READ: ಭಾರತದಲ್ಲಿ ಬಿಡುಗಡೆಯಾಗಲಿರುವ ಕಿಯಾ ಎಲೆಕ್ಟ್ರಿಕ್ ಕಾರಿನ ಮೈಲೇಜ್ ಎಷ್ಟು ಗೊತ್ತಾ?

ಭಾರತದಲ್ಲೂ ಕಮಾಲ್ ಮಾಡುತ್ತಾ ಸ್ಕೋಡಾ ಹೊಚ್ಚ ಹೊಸ ಸ್ಕಾಲಾ ಹ್ಯಾಚ್‌ಬ್ಯಾಕ್?

ಕಾರಿನ ಬೆಲೆಗಳು(ಅಂದಾಜು)

ಸ್ಪೋರ್ಟಿ ವರ್ಷನ್ ಜೊತೆ ಗರಿಷ್ಠ ಮಟ್ಟದ ತಾಂತ್ರಿಕ ಅಂಶಗಳನ್ನು ಹೊಂದಿರುವ ಸ್ಕಾಲಾ ಕಾರುಗಳ ಬೆಲೆಯು ರೂ. 22 ಲಕ್ಷದಿಂದ ರೂ. 26 ಲಕ್ಷ ಇರಬಹುದೆಂದು ಅಂದಾಜಿಸಲಾಗಿದ್ದು,ಸದ್ಯ ಹೊಸ ಕಾರು ಮುಂದಿನ ಕೆಲವೇ ದಿನಗಳಲ್ಲಿ ಯುರೋಪ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಾಗಲಿದೆ.

ಭಾರತದಲ್ಲೂ ಕಮಾಲ್ ಮಾಡುತ್ತಾ ಸ್ಕೋಡಾ ಹೊಚ್ಚ ಹೊಸ ಸ್ಕಾಲಾ ಹ್ಯಾಚ್‌ಬ್ಯಾಕ್?

ಆದ್ರೆ ಹೊಸ ಸ್ಕಾಲಾ ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸುವ ಬಗ್ಗೆ ಯಾವುದೇ ಮಾಹಿತಿ ನೀಡದಿದ್ದರೂ ಫೋಕ್ಸ್‌ವ್ಯಾಗನ್ ಕಾರು ನಿರ್ಮಾಣದ ಪ್ಲ್ಯಾಟ್‌ಫಾರ್ಮ್ ಬಳಕೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಈ ಕಾರು ಭಾರತದಲ್ಲೂ ಮುಂದಿನ 2 ವರ್ಷಗಳಲ್ಲಿ ಬಿಡುಗಡೆಯಾಗುವ ಎಲ್ಲಾ ನೀರಿಕ್ಷೆಗಳಿವೆ.

MOST READ: ಅಯ್ಯೋ ದೇವರೇ.. ಜಿಪಿಎಸ್ ನಂಬಿಕೊಂಡು ಹೋದ್ರೆ ಹೀಗಾ ಆಗೋದು..!

ಭಾರತದಲ್ಲೂ ಕಮಾಲ್ ಮಾಡುತ್ತಾ ಸ್ಕೋಡಾ ಹೊಚ್ಚ ಹೊಸ ಸ್ಕಾಲಾ ಹ್ಯಾಚ್‌ಬ್ಯಾಕ್?

ಇದಲ್ಲದೇ ಮಧ್ಯಮ ವರ್ಗಗಳ ಗ್ರಾಹಕರನ್ನು ಸೆಳೆಯುವ ನಿಟ್ಟಿನಲ್ಲಿ ವಿಶೇಷ ಯೋಜನೆ ರೂಪಿಸಿರುವ ಸ್ಕೋಡಾ ಇಂಡಿಯಾ ಸಂಸ್ಥೆಯು ಮುಂಬರುವ ದಿನಗಳಲ್ಲಿ ಹೊಸ ಮಾದರಿಯ ಕಾರುಗಳನ್ನು ಸ್ಥಳೀಯವಾಗಿಯೇ ಅಭಿವೃದ್ಧಿ ಮಾಡಿ ಬಿಡುಗಡೆಗೊಳಿಸುವ ಬಗ್ಗೆ ಸುಳಿವು ನೀಡಿದೆ.

ಭಾರತದಲ್ಲೂ ಕಮಾಲ್ ಮಾಡುತ್ತಾ ಸ್ಕೋಡಾ ಹೊಚ್ಚ ಹೊಸ ಸ್ಕಾಲಾ ಹ್ಯಾಚ್‌ಬ್ಯಾಕ್?

ಭಾರತದಲ್ಲಿ ಜನಪ್ರಿಯವಾಗುತ್ತಿರುವ ಹ್ಯುಂಡೈ ಕ್ರೇಟಾಗೆ ಪ್ರತಿಸ್ಪರ್ಧಿಯಾಗಿ ವಿಷನ್ ಎಕ್ಸ್ ಸಬ್ ಕಂಪ್ಯಾಕ್ಟ್ ಎಸ್‌ಯುವಿ ಮತ್ತು ಟಿ-ಕ್ರಾಸ್ ಎಸ್‌ಯುವಿ ಮಾದರಿಯನ್ನು ಹಾಗೂ ಹೋಂಡಾ ಸಿಟಿಗೆ ಪ್ರತಿಸ್ಪರ್ಧಿಯಾಗಿ ವರ್ಚಸ್ ಸೆಡಾನ್ ಮತ್ತು ಪೊಲೊ ಕಾರಿಗೆ ಬದಲಾಗಿ ಮತ್ತೊಂದು ಹೊಸ ಕಾರು ಹೊರತರವುದಾಗಿ ಫೋಕ್ಸ್‌ವ್ಯಾಗನ್ ಹೇಳಿಕೊಂಡಿದೆ.

More from DriveSpark

Article Published On: Monday, December 10, 2018, 10:57 [IST]
English summary
New Skoda Scala Unveiled. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+