ಹಬ್ಬಕ್ಕೆ ಹೊಸ ಕಾರು ಖರೀದಿಸುವವರಿಗೆ ಮಾರುತಿ ಸುಜುಕಿ ಇಂದ ಭಾರೀ ರಿಯಾಯಿತಿ..
ಹಬ್ಬದ ಋತುವಿನಲ್ಲಿ ನಿಮ್ಮ ಮನೆಗೆ ಹೊಸ ಕಾರನ್ನು ಕೊಂಡೊಯ್ಯುವ ಯೋಜನೆ ಇದ್ದರೆ, ಮಾರುತಿ ಸುಜುಕಿ ಸಂಸ್ಥೆಯು ತಮ್ಮ ಈ ಕಾರುಗಳ ಮೇಲೆ ಭಾರೀ ರಿಯಾಯಿತಿಯನ್ನು ನೀಡುತ್ತಿದೆ. ಈ ನಿಟ್ಟಿನಲ್ಲಿ ಮಾರುತಿ ಸುಜುಕಿ ಸಂಸ್ಥೆಯು ತಮ್ಮ ಮಾರಾಟವನ್ನು ಹೆಚ್ಚಿಸಲು ಯಾವ ಕಾರುಗಳ ಮೇಲೆ ಎಷ್ಟು ರಿಯಾಯಿತಿ ನೀಡುತ್ತಿದೆ ಎಂಬುದರ ಬಗ್ಗೆ ಈ ಲೇಖನದಲ್ಲಿ ತಿಳಿಯಿರಿ.

ಮಾರುತಿ ಸುಜುಕಿ ಆಲ್ಟೋ 800
ಮಾರುತಿ ಆಲ್ಟೋ 800 ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ನಿಂದ ಕಡಿಮೆ ಬೆಲೆಗೆ ಮಾರಾಟವಾಗುತ್ತಿರುವ ಆಲ್ಟೋ 800 ಕಾರಿನ ಮೇಲೆ ಸುಮಾರು ರೂ.75,000 ಸಾವಿರದಷ್ಟು ರಿಯಾಯಿತಿಯನ್ನು ನೀಡುತ್ತಿದೆ. ರೂ. 20,000 ಸಾವಿರದ ನಗದು ರಿಯಾಯಿತಿಯೊಂದಿಗೆ 7 ವರ್ಷದ ಒಳಗಿನ ಆಲ್ಟೋ 800 ಕಾರುಗಳ ಮೇಲೆ ರೂ. 25,000 ಸಾವಿರದ ವಿನಿಮಯ ಬೋನಸ್ ಅನ್ನು ಕೂಡಾ ನೀಡುತ್ತಿದೆ. ಇದಲ್ಲದೆ 7 ವರ್ಷ ದಾಟಿದ ಕಾರುಗಳ ಮೇಲೆ ರೂ. 20,000 ಮೌಲ್ಯದ ವಿನಿಮಯ ಬೋನಸ್ ಅನ್ನು ಸಹ ನೀಡುತ್ತಿದೆ.

ಮಾರುತಿ ಆಲ್ಟೋ ಕೆ10
ಆಲ್ಟೊ ಕಾರಿಗಿಂತ ಆಲ್ಟೋ ಕೆ10 ಹೆಚ್ಚು ಸಾಮರ್ಥ್ಯವನ್ನು ಪಡೆದಿದ್ದು, ಈ ಕಾರು ಇದೀಗ ಎಎಮ್‍ಟಿ ಆಯ್ಕೆಯಲ್ಲಿಯೂ ಲಭ್ಯವಿದೆ. ಮ್ಯಾನುವಲ್ ಗೇರ್‍ಬಾಕ್ಸ್ ಆಧಾರಿತ ಕಾರುಗಳು ರೂ. 20,000 ಸಾವಿರದಷ್ಟು ನಗದು ರಿಯಾಯಿತಿಯಲ್ಲಿ ದೊರೆಯಲಿದ್ದು, ಇನ್ನು ಎಎಮ್‍ಟಿ ಆಧಾರಿತ ಕಾರುಗಳ ಮೇಲೆ ರೂ. 27,000 ಸಾವಿರದ ನಗದು ರಿಯಾಯಿತಿಯನ್ನು ನೀಡುತ್ತಿದೆ.

ಮಾರುತಿ ವ್ಯಾಗನಾರ್
ಪ್ರಸ್ಥುತ ತಲೆಮಾರಿನ ಮಾರುತಿ ವ್ಯಾಗಾನಾರ್ ಮ್ಯನುವಲ್ ವೇರಿಯಂಟ್ ಕಾರುಗಳ ಮೇಲೆ ರೂ.40,000 ನಗದು ರಿಯಾಯಿತಿ ಮತ್ತು ಸಿಎನ್‍ಜಿ ವೇರಿಯಂಟ್ ಕಾರುಗಳ ಮೇಲೆ ರೂ.25,000 ನಗದು ರಿಯಾಯಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಅದಲ್ಲದೇ ಪೆಟ್ರೋಲ್ ಮ್ಯಾನುವಲ್ ಗೇರ್‍ಬಾಕ್ಸ್ ಕಾರಿನ ಮೇಲೆ ರೂ.30,000 ಹಾಗು ಸಿಎನ್‍ಜಿ ವೇರಿಯಂಟ್‍ನ ಮೇಲೆ ರೂ.40,000 ಸಾವಿರದ ವಿನಿಮಯ ಬೋನಸ್ ಅನ್ನು ಪಡೆದುಕೊಳ್ಳಬಹುದಾಗಿದೆ.

ಮಾರುತಿ ಸೆಲೆರಿಯೊ
ಮಾರುತಿ ಸೆಲೆರಿಯೊ ಮ್ಯಾನುವಲ್ ಗೇರ್‍ಬಾಕ್ಸ್ ಪೆಟ್ರೋಲ್ ಮತ್ತು ಸಿಎನ್‍ಜಿ ವೇರಿಯಂಟ್ ಕಾರುಗಳ ಮೇಲೆ ರೂ. 35,000 ಸಾವಿರ ಮತ್ತು ರೂ. 25,000 ಸಾವಿರದಷ್ಟು ನಗದು ರಿಯಾಯಿತಿಯನ್ನು ಪಡೆಯಬಹುದಾಗಿದೆ. ಇದಲ್ಲದೆ ಮ್ಯಾನುವಲ್ ಗೇರ್‍ಬಾಕ್ಸ್ ಮಾರುತಿ ಸೆಲೆರಿಯೊ ಕಾರುಗಳ ಮೇಲೆ ರೂ. 25,000 ಸಾವಿರದ ವರೆಗಿನ ವಿನಿಮಯ ಬೋನಸ್ ಹಾಗು ಎಎಮ್‍ಟಿ ಮಾಡಲ್ ಕಾರುಗಳ ಮೇಲೆ ರೂ. 30,000 ಸಾವಿರದ ವರೆಗಿನ ವಿನಿಮಯ ಬೋನಸ್ ಅನ್ನು ಪಡೆಯಬಹುದಾಗಿದೆ.

ಮಾರುತಿ ಎರ್ಟಿಗಾ
ಪ್ರಸ್ಥುತ ತಲೆಮಾರಿನ ಮಾರುತಿ ಎರ್ಟಿಗಾ ಕಾರನ್ನು ಹೊಸ್ ತಲೆಮಾರಿನ ಎರ್ಟಿಗಾ ಕಾರು ಸ್ಥಳಾಂತಿಸರಿಲಿದ್ದು, ಸಂಸ್ಥೆತು ಇದೀಗ ಎಮ್‍ಪಿವಿ ಕಾರುಗಳ ಮೇಲೆ ರಿಯಾಯಿತಿಯನ್ನು ನೀಡುತ್ತಿದೆ. ಈ ಕಾರಿನ ಪೆಟ್ರೋಲ್ ವೇರಿಯಂಟ್‍ಗಳ ಮೇಲೆ ರೂ. 15.0000 ಸಾವಿರ ಮತ್ತು ಡೀಸೆಲ್ ವೇರಿಯಂಟ್ ಕಾರುಗಳಾ ಮೇಲೆ ರೂ.30,000 ಸಾವಿರದಷ್ಟು ರಿಯಾಯಿತಿಯನ್ನು ಪಡೆದುಕೊಳ್ಳಬಹುದಾಗಿದೆ.

ಮಾರುತಿ ಸಿಯಾಜ್
ಮಾರುಕಟ್ಟೆಯಲ್ಲಿ ಶೀಘ್ರವೆ ಸಿಯಾಜ್ ಕಾರಿನ ಫೇಸ್‍ಲಿಫ್ಟ್ ಕಾರುಗಳು ಎಂಟ್ರಿ ನೀಡಲಿದೆ. ಪ್ರಸ್ಥುತ ಮಾರಾಟಕ್ಕಿರುವ ಸಿಯಾಜ್ ಕಾರುಗಳ ಮೇಲೆ ಸಂಸ್ಥೆಯು ರೂ.10,000 ಸವಿರದಷ್ಟು ರಿಯಾಯಿತನ್ನು ನೀಡುತ್ತಿದೆ.

ಮಾರುತಿ ಡಿಜೈರ್
ಮಾರುತಿ ಡಿಜೈರ್ ಕಾರಿನ ರೆಗ್ಯುಲರ್ ಪೆಟ್ರೋಲ್ ವೇರಿಯಂಟ್ ಕಾರುಗಳ ಮೇಲೆ ರೂ. 20,000 ನಗದು ರಿಯಾಯಿತಿ ನೀಡುತ್ತಿದ್ದು, ಇನ್ನು ಡೀಸೆಲ್ ವೇರಿಯಂಟ್ ಡಿಜೈರ್ ಕಾರುಗಳ ಮೇಲೆ ರೂ. 27,000 ಸಾವಿರದ ವರೆಗಿನ ನಗದು ರಿಯಾಯಿತಿ ಮತ್ತು ಡೀಸೆಲ್ ವೇರಿಯಂಟ್ ಕಾರುಗಳ ಮೇಲೆ ರೂ.30,000 ಹಾಗು ಪೆಟ್ರೋಲ್ ವೇರಿಯಂಟ್ ಕಾರುಗಳ ಮೇಲೆ ರೂ.20,000 ಸಾವಿರದ ವಿನಿಮಯ ಬೋನಸ್ ಅನ್ನು ನೀಡುತ್ತಿದೆ.

ಮಾರುತಿ ಸ್ವಿಫ್ಟ್
ಮಾರುತಿ ಸ್ವಿಫ್ಟ್ ಕಾರಿನ ವಿಎಕ್ಸ್ಐ, ಜೆಡ್ಎಕ್ಸ್ಐ ಮತ್ತು ಜೆಡ್ಎಕ್ಸ್ಐ+ ಪೆಟ್ರೋಲ್ ವೇರಿಯಂಟ್ ಕಾರುಗಳ ಮೇಲೆ ನಗದು ರಿಯಾಯಿತಿಯನ್ನು ನೀಡುತ್ತಿದ್ದು, ಸ್ಪೆಷಲ್ ಎಡಿಷನ್ ಕಾರುಗಳ ಮೇಲೆ ಗ್ರಾಹಕರು ರೂ.27,500 ರಿಯಾಯಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಅಲ್ಲದೇ ವಿಡಿಐ, ಜೆಡ್‍ಡಿಐ ಮತ್ತು ಜೆಡ್‍ಡಿಐ+ ವೇರಿಯಂಟ್ ಕಾರುಗಳ ಮೇಲೆ ರೂ.10,000 ಸಾವಿರದ ನಗದು ರಿಯಾಯಿತಿಯನ್ನು ಪಡೆದುಕೊಳ್ಳಬಹುದಾಗಿದೆ.

ಮಾರುತಿ ಸುಜುಕಿ ಬಲೆನೊ
ಮಾರುತಿ ಸುಜುಕಿ ಸಂಸ್ಥೆಯಲ್ಲಿನ ಜನಪ್ರಿಯ ಪ್ರೀಮಿಯಮ್ ಹ್ಯಾಚ್‍ಬ್ಯಾಕ್ ಕಾರು ಬಲೆನೊ ಮೇಲೆ ಸಂಸ್ಥೆಯು ರೂ.10,000 ರಿಯಾಯಿತಿ ಮತ್ತು ರೂ.17,000 ಕಾರ್ಪೊರೇಟ್ ರಿಯಾಯಿತಿಯನ್ನು ನೀಡುತ್ತಿದೆ. ಇನ್ನು ನಿಮ್ಮ ಹಳೆಯ ಕಾರಿನೊಂದಿಗೆ ಬದಲಾಯಿಸಲು ಇಚ್ಛಿಸುವಲ್ಲಿ ರೂ.15,000 ಸಾವಿರದ ಬೈಬ್ಯಾಕ್ ವ್ಯಾಲ್ಯುವನ್ನು ಕೂಡಾ ನೀವು ಪಡೆದುಕೊಳ್ಳಬಹುದಾಗಿದೆ.

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ
ಈ ಮೇಲೆ ಹೇಳಿರುವ ರಿಯಾಯಿತಿ ಮತ್ತು ವಿನಿಮಯದ ಆಫರ್‍ಗಳಲ್ಲದೆ ಗ್ರಾಹಕರು ಚೌಕಾಸಿ ಮಾಡಿ ಇನ್ನು ಹೆಚ್ಚಿನ ರಿಯಾಯಿತಿಯನ್ನು ಪಡೆಯಬಹುದಾಗಿದ್ದು, ಡೀಲರ್‍ಗಳು ಕಡಿಮೆ ಹಾಗು ನಿಧಾನವಾಗಿ ಮಾರಾಟಗೊಳ್ಲುತ್ತಿರುವ ಕಾರುಗಳ ಮೇಲೆ ಖಚಿತವಾಗಿ ರಿಯಾಯಿತಿ ನೀಡಲಿದ್ದಾರೆ ಎಂದು ಊಹಿಸಲಾಗಿದೆ.


Click it and Unblock the Notifications








