ಹೋಂಡಾ ಸಿಟಿ ಕಾರುಗಳಿಗೆ ಟಾಂಗ್ ನೀಡುತ್ತಾ ಟಾಟಾ ನಿರ್ಮಾಣದ ಈ ಹೊಸ ಸೆಡಾನ್ ಕಾರು?

By Praveen Sannamani

ಟಾಟಾ ಮೋಟಾರ್ಸ್ ಸಂಸ್ಥೆಯು ಸದ್ಯ ಹ್ಯಾರಿಯರ್ ಮತ್ತು 45ಎಕ್ಸ್ ಹೆಸರಿನ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರುಗಳ ಬಿಡುಗಡೆಗೆ ಸಜ್ಜಾಗುತ್ತಿದ್ದು, ಈ ಮಧ್ಯೆ ಮತ್ತೊಂದು ವಿನೂತನ ಮಾದರಿಯ ಸೆಡಾನ್ ಕಾರಿನ ಬಿಡುಗಡೆಯ ಸುಳಿವು ನೀಡಿರುವುದು ಹೋಂಡಾ ಸಿಟಿ ಸೇರಿದಂತೆ ಮಧ್ಯಮ ಗಾತ್ರದ ಹಲವು ಸೆಡಾನ್ ಕಾರುಗಳಿಗೆ ತೀವ್ರ ಪೈಪೋಟಿ ನೀಡಲು ತವಕದಲ್ಲಿದೆ.

ಹೋಂಡಾ ಸಿಟಿ ಕಾರುಗಳಿಗೆ ಟಾಂಗ್ ನೀಡುತ್ತಾ ಟಾಟಾ ನಿರ್ಮಾಣದ ಈ ಹೊಸ ಸೆಡಾನ್ ಕಾರು?

2020ರ ಆಟೋ ಎಕ್ಸ್‌ಪೋದಲ್ಲಿ ತನ್ನ ಹೊಸ ಸೆಡಾನ್ ಕಾರನ್ನ ಪ್ರದರ್ಶನ ಮಾಡಲು ನಿರ್ಧರಿಸಿರುವ ಟಾಟಾ ಸಂಸ್ಥೆಯ ತದನಂತರವಷ್ಟೇ ಬಿಡುಗಡೆ ಮಾಹಿತಿಯನ್ನ ಹೊರಹಾಕಲಿದೆಯೆಂತೆ. ಅದುವರೆಗೆ ತನ್ನ ಹೊಸ ಉತ್ಪನ್ನಗಳಾದ ಹ್ಯಾರಿಯರ್ ಮತ್ತು 45ಎಕ್ಸ್ ಸೇರಿದಂತೆ ಕೆಲವು ಎಲೆಕ್ಟ್ರಿಕ್ ವರ್ಷನ್‌ಗಳನ್ನು ಸಹ ಬಿಡುಗಡೆ ಮಾಡಲಿದ್ದು, ಹೊಸ ಕಾರು ಉತ್ಪನ್ನಗಳನ್ನು ಪ್ರೀಮಿಯಂ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆ ಮಾಡುತ್ತಿರುವುದು ಹಲವು ವಿಶೇಷಗಳಿಗೆ ಕಾರಣವಾಗಿದೆ.

ಹೋಂಡಾ ಸಿಟಿ ಕಾರುಗಳಿಗೆ ಟಾಂಗ್ ನೀಡುತ್ತಾ ಟಾಟಾ ನಿರ್ಮಾಣದ ಈ ಹೊಸ ಸೆಡಾನ್ ಕಾರು?

ಇನ್ನೊಂದು ಪ್ರಮುಖ ವಿಚಾರ ಅಂದ್ರೆ, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಮುಂದಿನ 5 ವರ್ಷಗಳಲ್ಲಿ ಹೊಸ ಹೊಸ ಡಿಸೈನ್ ಆಧಾರಿತ ಉತ್ಪನ್ನಗಳನ್ನು ಪರಿಚಯಿಸಲಿರುವ ಟಾಟಾ ಸಂಸ್ಥೆಯು ಗೇಮ್‌ಚೇಂಜರ್ ಕಾರುಗಳನ್ನು ಅಭಿವೃದ್ಧಿಗೊಳಿಸುವ ಸುಳಿವು ನೀಡಿದೆ.

ಹೋಂಡಾ ಸಿಟಿ ಕಾರುಗಳಿಗೆ ಟಾಂಗ್ ನೀಡುತ್ತಾ ಟಾಟಾ ನಿರ್ಮಾಣದ ಈ ಹೊಸ ಸೆಡಾನ್ ಕಾರು?

ಪಿಟಿಐ ಸುದ್ದಿ ಸಂಸ್ಥೆ ಜೊತೆ ಸಂದರ್ಶನವೊಂದರಲ್ಲಿ ಹೊಸ ಕಾರುಗಳ ಬಿಡುಗಡೆ ಕುರಿತಂತೆ ಮಾತನಾಡಿರುವ ಟಾಟಾ ಮೋಟಾರ್ಸ್ ಹಿರಿಯ ಅಧಿಕಾರಿಯೊಬ್ಬರು ಆಟೋ ಉದ್ಯಮದಲ್ಲಿ ತ್ರೀವ ಬೆಳವಣಿಗೆ ಕಾಣುತ್ತಿರುವ ಭಾರತದಲ್ಲಿ ಮುಂದಿನ 5 ವರ್ಷಗಳಲ್ಲಿ 15 ವಿನೂತನ ಕಾರುಗಳು ರಸ್ತೆಗಿಳಿಸುವ ಬೃಹತ್ ಯೋಜನೆಯಲ್ಲಿದ್ದೇವೆ ಎಂದಿದ್ದಾರೆ.

ಹೋಂಡಾ ಸಿಟಿ ಕಾರುಗಳಿಗೆ ಟಾಂಗ್ ನೀಡುತ್ತಾ ಟಾಟಾ ನಿರ್ಮಾಣದ ಈ ಹೊಸ ಸೆಡಾನ್ ಕಾರು?

ಹೀಗಾಗಿ ಪ್ಯಾಸೆಂಜರ್ ವಿಭಾಗದಲ್ಲಿ ಬಹುದೊಡ್ಡ ಬದಲಾವಣೆಗಾಗಿ ಯೋಜನೆ ರೂಪಿಸಿರುವ ಟಾಟಾ ಸಂಸ್ಥೆಯು ಸಾಮಾನ್ಯ ಕಾರುಗಳ ಜೊತೆಗೆ ಕೆಲವು ಐಷಾರಾಮಿ ಕಾರುಗಳನ್ನು ಅಭಿವೃದ್ಧಿ ಮಾಡಲು ಗುರಿಹೊಂದಿರುವುದು ಸ್ಪಷ್ಟವಾಗಿದೆ.

ಹೋಂಡಾ ಸಿಟಿ ಕಾರುಗಳಿಗೆ ಟಾಂಗ್ ನೀಡುತ್ತಾ ಟಾಟಾ ನಿರ್ಮಾಣದ ಈ ಹೊಸ ಸೆಡಾನ್ ಕಾರು?

ಇವುಗಳಲ್ಲಿ ಪುಲ್ಮಾ ಹೆಸರಿನ ಸೆಡಾನ್ ಆವೃತ್ತಿಯು ಸಾಕಷ್ಟು ವಿಭಿನ್ನತೆಯೊಂದಿಗೆ ಅಭಿವೃದ್ಧಿ ಹೊಂದಿದ್ದು, ಮಾರುತಿ ಸುಜುಕಿ ಸಿಯಾಜ್, ಹೋಂಡಾ ಸಿಟಿ, ಹ್ಯುಂಡೈ ವೆರ್ನಾ ಮಾದರಿಗಳಿಂತಲೂ ಬಲಿಷ್ಠ ಎಂಜಿನ್ ಆಯ್ಕೆಯನ್ನು ಪಡೆಯುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಹೋಂಡಾ ಸಿಟಿ ಕಾರುಗಳಿಗೆ ಟಾಂಗ್ ನೀಡುತ್ತಾ ಟಾಟಾ ನಿರ್ಮಾಣದ ಈ ಹೊಸ ಸೆಡಾನ್ ಕಾರು?

ಇದಲ್ಲದೇ ಟಾಟಾ ಸಂಸ್ಥೆಯು ಸದ್ಯ ಹೊಸ ಉತ್ಪನ್ನಗಳ ಅಭಿವೃದ್ಧಿಯಾಗಿ ಜೆಎಲ್ಆರ್ ಸಂಸ್ಥೆಯೊಂದಿಗೆ ಕೈಜೋಡಿಸಿದ್ದು, ಅಲ್ಫಾ ಮತ್ತು ಒಮೇಗಾ ಎನ್ನುವ ಕಾರು ಉತ್ಪಾದನಾ ಪ್ಲ್ಯಾಟ್‌ಫಾರ್ಮ್ ಅಡಿಯಲ್ಲಿ ಹೊಸ ಕಾರುಗಳನ್ನು ಸಿದ್ದಗೊಳಿಸುತ್ತಿರುವ ಪ್ರೀಮಿಯಂ ವೈಶಿಷ್ಟ್ಯತೆಗೆ ಕಾರಣವಾಗಿದೆ.

ಹೋಂಡಾ ಸಿಟಿ ಕಾರುಗಳಿಗೆ ಟಾಂಗ್ ನೀಡುತ್ತಾ ಟಾಟಾ ನಿರ್ಮಾಣದ ಈ ಹೊಸ ಸೆಡಾನ್ ಕಾರು?

ಇದಲ್ಲದೇ ಭಾರತದಲ್ಲಿ ಸದ್ಯ ಪ್ಯಾಸೆಂಜರ್ ಕಾರು ವಿಭಾಗದಲ್ಲಿ ಮಾರುತಿ ಸುಜುಕಿ ಮತ್ತು ಹ್ಯುಂಡೈ ಸಂಸ್ಥೆಗಳು ಶೇ.75ರಷ್ಟು ಕಾರು ಮಾರಾಟ ಪಾಲನ್ನು ತಮ್ಮದಾಗಿಸಿಕೊಂಡಿದ್ದು, ಮುಂಬರುವ ದಿನಗಳಲ್ಲಿ ಟಾಟಾ ಹೊಸ ಕಾರುಗಳು ಹೊಸ ಸಂಚಲನಕ್ಕೆ ಕಾರಣವಾಗಲಿದೆ.

ಹೋಂಡಾ ಸಿಟಿ ಕಾರುಗಳಿಗೆ ಟಾಂಗ್ ನೀಡುತ್ತಾ ಟಾಟಾ ನಿರ್ಮಾಣದ ಈ ಹೊಸ ಸೆಡಾನ್ ಕಾರು?

ಜೆಎಲ್ಆರ್ ಸಂಸ್ಥೆಯು ಟಾಟಾ ಸಂಸ್ಥೆಗೆ ತಂತ್ರಜ್ಞಾನ ಅಭಿವೃದ್ದಿ ಜೊತೆ ಡಿಸೈನ್ ವಿಭಾಗದಲ್ಲಿ ಸಹಾಯ ಮಾಡುವ ಹೊಸ ಒಪ್ಪಂದ ಸಹಿ ಹಾಕಿದ್ದು, ಇದರಿಂದ ಜೆಎಲ್ಆರ್ ಸಂಸ್ಥೆಯು ಟಾಟಾ ಹೊಸ ಕಾರುಗಳ ಅಭಿವೃದ್ಧಿ ಪ್ರಮುಖ ಪಾತ್ರ ವಹಿಸಲಿದೆ ಎನ್ನಬಹುದು.

ಹೋಂಡಾ ಸಿಟಿ ಕಾರುಗಳಿಗೆ ಟಾಂಗ್ ನೀಡುತ್ತಾ ಟಾಟಾ ನಿರ್ಮಾಣದ ಈ ಹೊಸ ಸೆಡಾನ್ ಕಾರು?

ವಿಶೇಷ ಅಂದ್ರೆ, ಇದೀಗ ಮಾರುಕಟ್ಟೆಗೆ ಲಗ್ಗೆಯಿಡಲು ಸಜ್ಜಾಗುತ್ತಿರುವ ಟಾಟಾ ಹೊಸ ಕಾರುಗಳನ್ನು ಗಮನಿಸಿದ್ದಲ್ಲಿ ಈ ಹಿಂದಿಗಿಂತಲೂ ಹೆಚ್ಚಿನ ಬದಲಾವಣೆ ಪಡೆದುಕೊಂಡಿದ್ದು, ಇದು ಜೆಎಲ್ಆರ್ ಸಂಸ್ಥೆಯ ಹೊಸ ಪ್ರಯೋಗ ಅಂದ್ರೆ ತಪ್ಪಾಗುವುದಿಲ್ಲ.

ಹೋಂಡಾ ಸಿಟಿ ಕಾರುಗಳಿಗೆ ಟಾಂಗ್ ನೀಡುತ್ತಾ ಟಾಟಾ ನಿರ್ಮಾಣದ ಈ ಹೊಸ ಸೆಡಾನ್ ಕಾರು?

ಇದರಿಂದ ಮುಂದಿನ 5 ವರ್ಷಗಳ ಅವಧಿಯಲ್ಲಿ ಶೇ.70ರಷ್ಟು ಕಾರು ಮಾರಾಟ ಪಾಲನ್ನ ತನ್ನದಾಗಿಸಿಕೊಳ್ಳುವ ಯೋಜನೆಯಲ್ಲಿರುವ ಟಾಟಾ ಸಂಸ್ಥೆಯು ಕಾರುಗಳ ವಿನ್ಯಾಸ ಮತ್ತು ಸುರಕ್ಷತೆಗೆ ಸಂಬಂಧಿಸಿದಂತೆ ಸಾಕಷ್ಟು ಬದಲಾಣೆ ತರುತ್ತಿರುವುದು ಕಾರು ಆಯ್ಕೆಯ ಮೌಲ್ಯವನ್ನ ಹೆಚ್ಚಿಸಲಿದೆ.

Source: IndiaCarNews

More from DriveSpark

Article Published On: Saturday, August 25, 2018, 17:08 [IST]
English summary
New Tata Premium Sedan Under Development.
Read more on tata motors sedan
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+