ಬಿಡುಗಡೆಗೆ ಸಜ್ಜಾದ ಹ್ಯುಂಡೈ ಗ್ರಾಂಡ್ ಐ10 ನೆಕ್ಸ್ಟ್ ಜನರೇಷನ್ ಕಾರು

ಹ್ಯುಂಡೈ ಮೋಟಾರ್ಸ್ ಸಂಸ್ಥೆಯು 2020ರ ವೇಳೆಗೆ 8 ಹೊಸ ಕಾರುಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವ ಯೋಜನೆಯಲ್ಲಿದ್ದು, ಅವುಗಳಲ್ಲಿ 5 ಹೊಸ ತಲೆಮಾರಿನ ಕಾರುಗಳು ಈಗಾಗಲೇ ಬಿಡುಗಡೆಯಾಗಿ ಸಿದ್ದಗೊಂಡಿವೆ. ಇದರಲ್ಲಿ ಮಾರುತಿ ಸ್ವಿಫ್ಟ್ ಹ್ಯಾಚ್‍ಬ್ಯಾಕ್ ಕಾರಿಗೆ ಪೈಪೋಟಿಯಾಗಿ ನೆಕ್ಸ್ಟ್ ಜನರೇಷನ್ ಗ್ರಾಂಡ್ ಐ10 ಕಾರನ್ನು ಕೂಡಾ ಮಾರುಕಟ್ಟೆಗೆ ಲಗ್ಗೆಯಿಡುತ್ತಿದೆ.

ಬಿಡುಗಡೆಗೆ ಸಜ್ಜಾದ ಹ್ಯುಂಡೈ ಗ್ರಾಂಡ್ ಐ10 ನೆಕ್ಸ್ಟ್ ಜನರೇಷನ್ ಕಾರು

ಬಿಡುಗಡೆಯ ಹೊಸ್ತಿಯಲ್ಲಿರುವ ಹ್ಯುಂಡೈ ಗ್ರಾಂಡ್ ಐ10 ಕಾರುಗಳು ಮೊದಲ ಬಾರಿಗೆ ಪುಣೆ ನಗರದ ರಸ್ತೆಗಳಲ್ಲಿ ಸ್ಪಾಟ್ ಟೆಸ್ಟಿಂಗ್‍‍ನ ವೇಳೆ ಕಾಣಿಸಿಕೊಂಡಿದ್ದು, 2013ರಲ್ಲಿ ಬಿಡುಗಡೆಗೊಂಡ ಈ ಕಾರು ಎರಡು ವರ್ಷಗಳ ಹಿಂದೆ ಜಾಗತಿಕವಾಗಿ ನವೀಕರಣ ಪಡೆದುಕೊಂಡಿತ್ತು. ಇದೀಗ ಸಂಸ್ಥೆಯು ಈ ಕಾರಿಗೆ ಹೊಸ ಫ್ಲಾಟ್‍‍ಫಾರ್ಮ್ ಸಿದ್ದಗೊಳಿಸಿದ್ದು, ವಿನೂತನ ಮಾದರಿಯ ಚಾಸಿಸ್‍‍ನ ಅಡಿಯಲ್ಲಿ ನಿರ್ಮಾಣಗೊಳ್ಳುತ್ತಿದೆ.

ಬಿಡುಗಡೆಗೆ ಸಜ್ಜಾದ ಹ್ಯುಂಡೈ ಗ್ರಾಂಡ್ ಐ10 ನೆಕ್ಸ್ಟ್ ಜನರೇಷನ್ ಕಾರು

ಸ್ಪಾಟ್ ಟೆಸ್ಟಿಂಗ್‍ ವೇಳೆ ಕಾಣಿಸಿಕೊಂಡ ಹ್ಯುಂಡೈ ಗ್ರಾಂಡ್ ಐ10 ಕಾರು ಪ್ರೊಟೊ ಟೈಪ್ ಉತ್ಪಾದನಾ ಸಿದ್ಧ ಮಾದರಿಯಂತೆ ಕಂಡುಬಂದಿದ್ದು, ಪ್ರಸ್ತುತ ಗ್ರಾಂಡ್ ಐ10 ಗೆ ಹೋಲಿಸಿದರೆ ಹೊಸ ಗ್ರ್ಯಾಂಡ್ ಐ10 ಸ್ಪೋರ್ಟಿ ವಿನ್ಯಾಸವನ್ನು ಪಡೆದುಕೊಂಡಿರುವುದಲ್ಲದೆ ಈ ಹಿಂದಿನ ತಲೆಮಾರಿನ ಗ್ರಾಂಡ್ ಐ10 ಕಾರಿಗಿಂತ ಅಧಿಕ ಸುತ್ತಳತೆಯನ್ನು ಹೊಂದಿರಲಿದೆ.

ಬಿಡುಗಡೆಗೆ ಸಜ್ಜಾದ ಹ್ಯುಂಡೈ ಗ್ರಾಂಡ್ ಐ10 ನೆಕ್ಸ್ಟ್ ಜನರೇಷನ್ ಕಾರು

ಹೊಸ ಗ್ರಾಂಡ್ ಐ10 ಕಾರಿನ ಮುಂಭಾಗದಲ್ಲೂ ಸಹ ಗುರುತರ ಬದಲಾವಣೆಗಳನ್ನು ಕಾಣಬಹುದಾಗಿದ್ದು, ಹೆಕ್ಸಾಗನಲ್ ಗ್ರಿಲ್, ಕ್ರೋಮ್ ಅಕ್ಕ್ಸೆಂಟ್ ಮತ್ತು ಸ್ಪೋರ್ಟಿ ಬಂಪರ್‍‍‍ಗಳನ್ನು ನೀಡಲಾಗಿದೆ. ಆದರೆ ಕೊರಿಯಾ ದೇಶದಲ್ಲಿ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಕಾರಿನ ಹೊರಭಾಗದಲ್ಲಿ ಎಲ್ಇಡಿ ಡಿಆರ್‍ಎಲ್ ಅನ್ನು ಪಡೆದುಕೊಂಡಿದೆ.

ಬಿಡುಗಡೆಗೆ ಸಜ್ಜಾದ ಹ್ಯುಂಡೈ ಗ್ರಾಂಡ್ ಐ10 ನೆಕ್ಸ್ಟ್ ಜನರೇಷನ್ ಕಾರು

ಪುಣೆಯಲ್ಲಿ ಕಾಣಿಸಿಕೊಂಡ ಕಾರಿನಲ್ಲಿ ಹ್ಯಾಲೊಜನ್ ಹೆಡ್‍‍ಲ್ಯಾಂಪ್ಸ್ ಅನ್ನು ಪಡೆದುಕೊಂಡಿದ್ದು, ಅಲ್ಲದೇ ಹಿಂಭಾಗದಲ್ಲಿಯೂ ಕೂಡಾ ಕೊಂಚ ಬದಲಾವಣೆಯನ್ನು ಕಾಣಬಹುದಾಗಿದೆ, ಅಗಲವಾದ ಟೈಲ್‍‍ಲ್ಯಾಂಪ್ಸ್, ಹೊಸ ಬಾಗಿಲುಗಳು ಮತ್ತು ಕಾರಿನ ಟಾಪ್ ಸ್ಪೆಕ್ಸ್ ಮಾಡೆಲ್‍‍ನಲ್ಲಿ 15 ಇಂಚಿನ ಡೈಮಂಡ್ ಕಟ್ ಅಲಾಯ್ ಚಕ್ರಗಳನ್ನು ಅಳವಡಿಸಲಾಗಿದೆ.

ಬಿಡುಗಡೆಗೆ ಸಜ್ಜಾದ ಹ್ಯುಂಡೈ ಗ್ರಾಂಡ್ ಐ10 ನೆಕ್ಸ್ಟ್ ಜನರೇಷನ್ ಕಾರು

ಕಾರಿನ ಹೊರ ಭಾಗವು ಈ ಬಾರಿ ವಿಶಾಲವಾಗಿರಲಿದ್ದು, ಅನೂಕಲಕರವಾದ ಲೆಗ್‍ರೂಂ ಮತ್ತು ಹೆಡ್‍‍ರೂಂ ಅನ್ನು ನೀಡಲಾಗಿದೆ. ಇದಲ್ಲದೇ ಲೆದರ್‍‍ನಿಂದ ಸಜ್ಜುಗೊಂಡ ಸ್ಟೀರಿಂಗ್ ವ್ಹೀಲ್, ಹೊಸ ಇನ್ಸ್ಟ್ರೂಮೆಂಟ್ ಕ್ಲಸ್ಟರ್‍‍ನೊಂಡಿಗೆ ಮಲ್ಟಿ ಇನ್ಫಾರ್ಮೆಷನ್ ಡಿಸ್ಪ್ಲೆ, ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಆಯ್ಕೆಯನ್ನು ಸಪೋರ್ಟ್ ಮಾಡಬಲ್ಲ ಟಚ್‍‍‍ಸ್ಕ್ರೀನ್ ಇನ್ಫೋ‍‍ಟೈನ್ಮೆಂಟ್ ಸಿಸ್ಟಮ್ ಅನ್ನು ನೀಡಲಿದೆ ಎಂಬ ಭರವಸೆ ಇದೆ.

ಬಿಡುಗಡೆಗೆ ಸಜ್ಜಾದ ಹ್ಯುಂಡೈ ಗ್ರಾಂಡ್ ಐ10 ನೆಕ್ಸ್ಟ್ ಜನರೇಷನ್ ಕಾರು

ಎಂಜಿನ್ ಸಾಮರ್ಥ್ಯ

ಬಿಡುಗಡೆಗೊಳ್ಳಲಿರುವ ನೆಕ್ಸ್ಟ್ ಜನರೇಷನ್ ಹೊಸ ಹ್ಯುಂಡೈ ಗ್ರಾಂಡ್ ಐ10 ಕಾರುಗಳು ತಾಂತ್ರಿಕ ಅಂಶಗಳ ಬಗ್ಗೆ ಮಾಹಿತಿ ಇನ್ನು ಬಹಿರಂಗಗೊಂಡಿಲ್ಲವಾದರೂ ಈ ಹಿಂದಿನ ತಲೆಮಾರಿನ ಕಾರಿನಲ್ಲಿ ಬಳಸಲಾದ ಎಂಜಿನ್ ಮಾದರಿಯನ್ನೇ ಹೊಸ ಕಾರಿನಲ್ಲೂ ಬಳಕೆ ಮಾಡಿರಬಹುದು ಎನ್ನಲಾಗಿದೆ.

ಬಿಡುಗಡೆಗೆ ಸಜ್ಜಾದ ಹ್ಯುಂಡೈ ಗ್ರಾಂಡ್ ಐ10 ನೆಕ್ಸ್ಟ್ ಜನರೇಷನ್ ಕಾರು

ಹಳೆಯ ತಲೆಮಾರಿನ ಹ್ಯುಂಡೈ ಗ್ರಾಂಡ್ ಐ10 ಕಾರುಗಳಲ್ಲಿ 1.2 ಲೀಟರ್ 4 ಸಿಲಿಂಡರ್ ಕಪ್ಪಾ ಪೆಟ್ರೋಲ್ ಎಂಜಿನ್‍‍ಗಳು, 83 ಬಿಹೆಚ್‍‍ಪಿ ಮತ್ತು 113.6 ಎಂಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಎಂಜಿನ್ ಅನ್ನು 4 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಬಿಡುಗಡೆಗೆ ಸಜ್ಜಾದ ಹ್ಯುಂಡೈ ಗ್ರಾಂಡ್ ಐ10 ನೆಕ್ಸ್ಟ್ ಜನರೇಷನ್ ಕಾರು

ಅಲ್ಲದೇ 1.2 ಲೀಟರ್ ಯು2 ಸಿಆರ್‍‍ಡಿಐ ಡೀಸೆಲ್ ಎಂಜಿನ್‍‍ಗಳು 75ಬಿಹೆಚ್‍ಪಿ ಮತ್ತು 190ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸಲಿದ್ದು, ಎಂಜಿನ್ ಅನ್ನು 5 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಬಿಡುಗಡೆಗೆ ಸಜ್ಜಾದ ಹ್ಯುಂಡೈ ಗ್ರಾಂಡ್ ಐ10 ನೆಕ್ಸ್ಟ್ ಜನರೇಷನ್ ಕಾರು

ಕಾರು ಬಿಡುಗಡೆ ಯಾವಾಗ?

ಸದ್ಯ ಸ್ಯಾಂಟ್ರೋ ಹೊಸ ಕಾರುಗಳನ್ನು ಬಿಡುಗಡೆಯ ಯೋಜನೆಯಲ್ಲಿರುವ ಹ್ಯುಂಡೈ ಸಂಸ್ಥೆಯು ನೆಕ್ಸ್ಟ್ ಜನರೇಷನ್ ಐ10 ಕಾರುಗಳನ್ನು 2019 ಮಧ್ಯಂತರದಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿದ್ದು, ಹೊಸ ಕಾರಿನ ಬೆಲೆಗಳು ದೆಹಲಿಯ ಎಕ್ಸ್ ಶೋರೂಂ ಪ್ರಕಾರ ರೂ.5 ಲಕ್ಷದಿಂದ ಪ್ರಾರಂಭಿಕ ಬೆಲೆ ಇರಬಹುದು ಎಂದು ಅಂದಾಜಿಸಲಾಗಿದೆ.

Most Read Articles

ಟಾಟಾ ಮೋಟಾರ್ಸ್ ಟಿಯಾಗೊ ಎನ್ಆರ್‌ಜಿ ಕಾರಿನ ಫೋಟೋ ಗ್ಯಾಲರಿ.!

Kannada
Read more on hyundai new car
English summary
Next-Gen Hyundai Grand i10 Launch Details Revealed.
Story first published: Saturday, October 6, 2018, 17:19 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X