2020ರ ವೇಳೆಗೆ ಹೊಸ ತಲೆಮಾರಿನ ಹ್ಯುಂಡೈ ಎಕ್ಸ್‌ಸೆಂಟ್ ಬಿಡುಗಡೆ ಪಕ್ಕಾ..!

ಹ್ಯುಂಡೈ ಮೋಟಾರ್ಸ್ ಸಂಸ್ಥೆಯು 2020ರ ವೇಳೆಗೆ 8 ಹೊಸ ಕಾರುಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವ ಯೋಜನೆಯಲ್ಲಿದ್ದು, ಅವುಗಳಲ್ಲಿ 5 ಹೊಸ ತಲೆಮಾರಿನ ಕಾರುಗಳು ಈಗಾಗಲೇ ಬಿಡುಗಡೆಯಾಗಿ ಸಿದ್ದಗೊಂಡಿವೆ. ಇದರಲ್ಲಿ ಮಾರುತಿ ಸ್ವಿಫ್ಟ್ ಹ್ಯಾಚ್‍ಬ್ಯಾಕ್ ಕಾರಿಗೆ ಪೈಪೋಟಿಯಾಗಿ ನೆಕ್ಸ್ಟ್ ಜನರೇಷನ್ ಗ್ರಾಂಡ್ ಐ10 ಕಾರು ಹಾಗೂ ಡಿಜೈರ್‌ಗೆ ಪೊಪೈಟೆಯಾಗಿ ಎಕ್ಸ್‌ಸೆಂಟ್ ಕೂಡಾ ಮಾರುಕಟ್ಟೆಗೆ ಲಗ್ಗೆಯಿಡುತ್ತಿದೆ.

2020ರ ವೇಳೆಗೆ ಹೊಸ ತಲೆಮಾರಿನ ಹ್ಯುಂಡೈ ಎಕ್ಸ್‌ಸೆಂಟ್ ಬಿಡುಗಡೆ ಪಕ್ಕಾ..!

ಬಿಡುಗಡೆಯ ಹೊಸ್ತಿಯಲ್ಲಿರುವ ಹ್ಯುಂಡೈ ಗ್ರಾಂಡ್ ಐ10 ಮತ್ತು ಎಕ್ಸ್‌ಸೆಂಟ್ ಕಾರುಗಳು ಈಗಾಗಲೇ ಸ್ಪಾಟ್ ಟೆಸ್ಟಿಂಗ್‍‍ನ ವೇಳೆ ಕಾಣಿಸಿಕೊಂಡಿದ್ದು, 2013ರಲ್ಲಿ ಬಿಡುಗಡೆಗೊಂಡ ಗ್ರಾಂಡ್ ಐ10 ಈ ಕಾರು ಎರಡು ವರ್ಷಗಳ ಹಿಂದೆ ಜಾಗತಿಕವಾಗಿ ನವೀಕರಣ ಪಡೆದುಕೊಂಡಿತ್ತು. ಇದೀಗ ಸಂಸ್ಥೆಯು ಈ ಕಾರಿಗೆ ಹೊಸ ಫ್ಲಾಟ್‍‍ಫಾರ್ಮ್ ಸಿದ್ದಗೊಳಿಸಿದ್ದು, ವಿನೂತನ ಮಾದರಿಯ ಚಾಸಿಸ್‍‍ನ ಅಡಿಯಲ್ಲಿ ನಿರ್ಮಾಣಗೊಳ್ಳುತ್ತಿದೆ.

2020ರ ವೇಳೆಗೆ ಹೊಸ ತಲೆಮಾರಿನ ಹ್ಯುಂಡೈ ಎಕ್ಸ್‌ಸೆಂಟ್ ಬಿಡುಗಡೆ ಪಕ್ಕಾ..!

ಹಾಗೆಯೇ ಎಕ್ಸ್‌ಸೆಂಟ್ ಕಾರು ಕೂಡಾ ಹೊಸತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ಮಾರುಕಟ್ಟೆ ಪ್ರವೇಶ ಪಡೆಯಲಿದ್ದು, ಪ್ರಯಾಣಿಕರ ಅನುಕೂಲಕತೆಗಾಗಿ ಕ್ಯಾಬಿನ್ ಸ್ಥಳವನ್ನು ಹೊಸ ಕಾರುಗಳಲ್ಲಿ ವಿಸ್ತರಣೆಗೊಳಿಸಲಾಗಿದೆ.

2020ರ ವೇಳೆಗೆ ಹೊಸ ತಲೆಮಾರಿನ ಹ್ಯುಂಡೈ ಎಕ್ಸ್‌ಸೆಂಟ್ ಬಿಡುಗಡೆ ಪಕ್ಕಾ..!

ಹಾಗೆಯೇ ಸ್ಪಾಟ್ ಟೆಸ್ಟಿಂಗ್‍ ವೇಳೆ ಕಾಣಿಸಿಕೊಂಡ ಹ್ಯುಂಡೈ ಗ್ರಾಂಡ್ ಐ10 ಕಾರು ಪ್ರೊಟೊ ಟೈಪ್ ಉತ್ಪಾದನಾ ಸಿದ್ಧ ಮಾದರಿಯಂತೆ ಕಂಡುಬಂದಿದ್ದು, ಪ್ರಸ್ತುತ ಗ್ರಾಂಡ್ ಐ10 ಗೆ ಹೋಲಿಸಿದರೆ ಹೊಸ ಗ್ರ್ಯಾಂಡ್ ಐ10 ಸ್ಪೋರ್ಟಿ ವಿನ್ಯಾಸವನ್ನು ಪಡೆದುಕೊಂಡಿರುವುದಲ್ಲದೆ ಈ ಹಿಂದಿನ ತಲೆಮಾರಿನ ಗ್ರಾಂಡ್ ಐ10 ಕಾರಿಗಿಂತ ಅಧಿಕ ಸುತ್ತಳತೆಯನ್ನು ಹೊಂದಿರಲಿದೆ.

2020ರ ವೇಳೆಗೆ ಹೊಸ ತಲೆಮಾರಿನ ಹ್ಯುಂಡೈ ಎಕ್ಸ್‌ಸೆಂಟ್ ಬಿಡುಗಡೆ ಪಕ್ಕಾ..!

ಹೀಗಾಗಿ ಹೊಸ ಗ್ರಾಂಡ್ ಐ10 ಮತ್ತು ಎಕ್ಸ್‌ಸೆಂಟ್ ಕಾರಿನ ಮುಂಭಾಗದಲ್ಲೂ ಸಹ ಗುರುತರ ಬದಲಾವಣೆಗಳನ್ನು ಕಾಣಬಹುದಾಗಿದ್ದು, ಹೆಕ್ಸಾಗನಲ್ ಗ್ರಿಲ್, ಕ್ರೋಮ್ ಅಕ್ಕ್ಸೆಂಟ್ ಮತ್ತು ಸ್ಪೋರ್ಟಿ ಬಂಪರ್‍‍‍ಗಳನ್ನು ನೀಡಲಾಗಿದೆ. ಆದರೆ ಕೊರಿಯಾ ದೇಶದಲ್ಲಿ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಕಾರಿನ ಹೊರಭಾಗದಲ್ಲಿ ಎಲ್ಇಡಿ ಡಿಆರ್‍ಎಲ್ ಅನ್ನು ಪಡೆದುಕೊಂಡಿದೆ.

2020ರ ವೇಳೆಗೆ ಹೊಸ ತಲೆಮಾರಿನ ಹ್ಯುಂಡೈ ಎಕ್ಸ್‌ಸೆಂಟ್ ಬಿಡುಗಡೆ ಪಕ್ಕಾ..!

ಪುಣೆಯಲ್ಲಿ ಕಾಣಿಸಿಕೊಂಡ ಗ್ರಾಂಡ್ ಐ10 ಕಾರಿನಲ್ಲಿ ಹ್ಯಾಲೊಜನ್ ಹೆಡ್‍‍ಲ್ಯಾಂಪ್ಸ್ ಅನ್ನು ಪಡೆದುಕೊಂಡಿದ್ದು, ಅಲ್ಲದೇ ಹಿಂಭಾಗದಲ್ಲಿಯೂ ಕೂಡಾ ಕೊಂಚ ಬದಲಾವಣೆಯನ್ನು ಕಾಣಬಹುದಾಗಿದೆ, ಅಗಲವಾದ ಟೈಲ್‍‍ಲ್ಯಾಂಪ್ಸ್, ಹೊಸ ಬಾಗಿಲುಗಳು ಮತ್ತು ಕಾರಿನ ಟಾಪ್ ಸ್ಪೆಕ್ಸ್ ಮಾಡೆಲ್‍‍ನಲ್ಲಿ 15 ಇಂಚಿನ ಡೈಮಂಡ್ ಕಟ್ ಅಲಾಯ್ ಚಕ್ರಗಳನ್ನು ಅಳವಡಿಸಲಾಗಿದೆ.

2020ರ ವೇಳೆಗೆ ಹೊಸ ತಲೆಮಾರಿನ ಹ್ಯುಂಡೈ ಎಕ್ಸ್‌ಸೆಂಟ್ ಬಿಡುಗಡೆ ಪಕ್ಕಾ..!

ಕಾರಿನ ಹೊರ ಭಾಗವು ಈ ಬಾರಿ ವಿಶಾಲವಾಗಿರಲಿದ್ದು, ಅನೂಕಲಕರವಾದ ಲೆಗ್‍ರೂಂ ಮತ್ತು ಹೆಡ್‍‍ರೂಂ ಅನ್ನು ನೀಡಲಾಗಿದೆ. ಇದಲ್ಲದೇ ಲೆದರ್‍‍ನಿಂದ ಸಜ್ಜುಗೊಂಡ ಸ್ಟೀರಿಂಗ್ ವ್ಹೀಲ್, ಹೊಸ ಇನ್ಸ್ಟ್ರೂಮೆಂಟ್ ಕ್ಲಸ್ಟರ್‍‍ನೊಂಡಿಗೆ ಮಲ್ಟಿ ಇನ್ಫಾರ್ಮೆಷನ್ ಡಿಸ್ಪ್ಲೆ, ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಆಯ್ಕೆಯನ್ನು ಸಪೋರ್ಟ್ ಮಾಡಬಲ್ಲ ಟಚ್‍‍‍ಸ್ಕ್ರೀನ್ ಇನ್ಫೋ‍‍ಟೈನ್ಮೆಂಟ್ ಸಿಸ್ಟಮ್ ಅನ್ನು ನೀಡಲಿದೆ ಎಂಬ ಭರವಸೆ ಇದೆ.

2020ರ ವೇಳೆಗೆ ಹೊಸ ತಲೆಮಾರಿನ ಹ್ಯುಂಡೈ ಎಕ್ಸ್‌ಸೆಂಟ್ ಬಿಡುಗಡೆ ಪಕ್ಕಾ..!

ಎಂಜಿನ್ ಸಾಮರ್ಥ್ಯ

ಬಿಡುಗಡೆಗೊಳ್ಳಲಿರುವ ನೆಕ್ಸ್ಟ್ ಜನರೇಷನ್ ಹೊಸ ಹ್ಯುಂಡೈ ಗ್ರಾಂಡ್ ಐ10 ಕಾರುಗಳು ತಾಂತ್ರಿಕ ಅಂಶಗಳ ಬಗ್ಗೆ ಮಾಹಿತಿ ಇನ್ನು ಬಹಿರಂಗಗೊಂಡಿಲ್ಲವಾದರೂ ಈ ಹಿಂದಿನ ತಲೆಮಾರಿನ ಕಾರಿನಲ್ಲಿ ಬಳಸಲಾದ ಎಂಜಿನ್ ಮಾದರಿಯನ್ನೇ ಹೊಸ ಕಾರಿನಲ್ಲೂ ಬಳಕೆ ಮಾಡಿರಬಹುದು ಎನ್ನಲಾಗಿದೆ. ಹಾಗೆಯೇ ಎಕ್ಸೆಸೆಂಟ್ ಕಾರಿನಲ್ಲೂ ಕೂಡಾ 1.2 -ಲೀಟರ್ ಡೀಸೆಲ್ ಎಂಜಿನ್ ಜೊತೆ 4-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಪರಿಚಯಿಸಲಿದೆ.

2020ರ ವೇಳೆಗೆ ಹೊಸ ತಲೆಮಾರಿನ ಹ್ಯುಂಡೈ ಎಕ್ಸ್‌ಸೆಂಟ್ ಬಿಡುಗಡೆ ಪಕ್ಕಾ..!

ಇನ್ನು ಹಳೆಯ ತಲೆಮಾರಿನ ಹ್ಯುಂಡೈ ಗ್ರಾಂಡ್ ಐ10 ಕಾರುಗಳಲ್ಲಿ 1.2 ಲೀಟರ್ 4 ಸಿಲಿಂಡರ್ ಕಪ್ಪಾ ಪೆಟ್ರೋಲ್ ಎಂಜಿನ್‍‍ಗಳು, 83 ಬಿಹೆಚ್‍‍ಪಿ ಮತ್ತು 113.6 ಎಂಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಎಂಜಿನ್ ಅನ್ನು 4 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

2020ರ ವೇಳೆಗೆ ಹೊಸ ತಲೆಮಾರಿನ ಹ್ಯುಂಡೈ ಎಕ್ಸ್‌ಸೆಂಟ್ ಬಿಡುಗಡೆ ಪಕ್ಕಾ..!

ಅಲ್ಲದೇ 1.2 ಲೀಟರ್ ಯು2 ಸಿಆರ್‍‍ಡಿಐ ಡೀಸೆಲ್ ಎಂಜಿನ್‍‍ಗಳು 75ಬಿಹೆಚ್‍ಪಿ ಮತ್ತು 190ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸಲಿದ್ದು, ಎಂಜಿನ್ ಅನ್ನು 5 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಜೊತೆಗೆ ಕಾರಿನಲ್ಲಿ ಗುಣಮಟ್ಟದ ಏರ್‌ಬ್ಯಾಗ್, ಎಬಿಎಸ್ ಮತ್ತು ಪಾರ್ಕಿಂಗ್ ಸೆನ್ಸಾರ್, ಆ್ಯಂಟಿ ಥೆಪ್ಟ್ ವಾರ್ನಿಂಗ್ ಸೌಲಭ್ಯ ಸಹ ಸಿಗಲಿದೆ.

2020ರ ವೇಳೆಗೆ ಹೊಸ ತಲೆಮಾರಿನ ಹ್ಯುಂಡೈ ಎಕ್ಸ್‌ಸೆಂಟ್ ಬಿಡುಗಡೆ ಪಕ್ಕಾ..!

ಕಾರು ಬಿಡುಗಡೆ ಯಾವಾಗ?

ಸದ್ಯ ಸ್ಯಾಂಟ್ರೋ ಹೊಸ ಕಾರುಗಳನ್ನು ಬಿಡುಗಡೆಯ ಯೋಜನೆಯಲ್ಲಿರುವ ಹ್ಯುಂಡೈ ಸಂಸ್ಥೆಯು ನೆಕ್ಸ್ಟ್ ಜನರೇಷನ್ ಐ10 ಕಾರುಗಳನ್ನು 2019 ಮಧ್ಯಂತರದಲ್ಲಿ ಹಾಗುೂ ಹೊಸ ಎಕ್ಸ್‌ಸೆಂಟ್ ಕಾರುಗಳನ್ನು 20202ರ ಆರಂಭದಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ.

Article Published On: Monday, October 22, 2018, 10:28 [IST]
English summary
Next-Gen Hyundai Xcent Launch Details Revealed.
Read more on hyundai new car
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+