ಬಿಎಸ್ 6 ವೈಶಿಷ್ಟ್ಯತೆಗಳೊಂದಿಗೆ ಬರಲಿದೆ ನೆಕ್ಸ್ಟ್ ಜನರೇಷನ್ ಮಹೀಂದ್ರಾ ಥಾರ್
ಮಹೀಂದ್ರಾ ಥಾರ್ ಆಪ್ ರೋಡ್ ಎಸ್‌ಯುವಿ ಕಾರುಗಳು ಕಾಲಕ್ಕೆ ತಕ್ಕಂತೆ ಬದಲಾವಣೆ ಹೊಂದುತ್ತಲೇ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಇದೀಗ ಸುಧಾರಿತ ತಂತ್ರಜ್ಞಾನಗಳ ಪ್ರೇರಣೆಯೊಂದಿಗೆ ಮತ್ತೆ ಸದ್ದು ಮಾಡುವ ನೀರಿಕ್ಷೆಯಲ್ಲಿದೆ.
2010ರಲ್ಲಿ ಮೊದಲ ಬಾರಿಗೆ ಮಾರುಕಟ್ಟೆ ಪ್ರವೇಶ ಮಾಡಿದ್ದ ಮಹೀಂದ್ರಾ ಥಾರ್ ಆಪ್ ರೋಡ್ ಎಸ್‌ಯುವಿ ಕಾರುಗಳು ಕಾಲಕ್ಕೆ ತಕ್ಕಂತೆ ಬದಲಾವಣೆ ಹೊಂದುತ್ತಲೇ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಇದೀಗ ಸುಧಾರಿತ ತಂತ್ರಜ್ಞಾನಗಳ ಪ್ರೇರಣೆಯೊಂದಿಗೆ ಮತ್ತೆ ಸದ್ದು ಮಾಡುವ ನೀರಿಕ್ಷೆಯಲ್ಲಿದೆ.

ಮೊದಲ ಬಾರಿಗೆ ಬಿಡುಗಡೆಯಾದ ನಂತರ 2015ರಲ್ಲಿ ಬದಲಾವಣೆಗಳೊಂದಿಗೆ ಮಾರುಕಟ್ಟೆಗೆ ಪ್ರವೇಶಿಸಿದ್ದ ಥಾರ್ ಎಸ್‌ಯುವಿಗಳು ಇದೀಗ ಮತ್ತಷ್ಟು ಹೊಸ ಸೌಲಭ್ಯಗಳನ್ನು ಹೊತ್ತು ಬರುತ್ತಿದೆ. ಬರಲಿರುವ ಬಿಎಸ್ 6 ಮತ್ತು ಸುಧಾರಿತ ತಂತ್ರಜ್ಞಾನ, ವಿಸ್ತರಿತ ಕ್ಯಾಬಿನ್ ಸ್ಪೆಸ್, ಹೊರ ಭಾಗದ ವಿನ್ಯಾಸದಲ್ಲಿ ಗುರುತರ ಬದಲಾಣೆಗಳು ಗ್ರಾಹಕರನ್ನು ಸೆಳೆಯುವ ತವಕದಲ್ಲಿವೆ.

ಆಪ್ ರೋಡ್ ಪ್ರಿಯರನ್ನು ಸೆಳೆಯುವ ಉದ್ದೇಶದಿಂದ ಥಾರ್ ಉತ್ಪಾದನಾ ತಂತ್ರಗಳನ್ನು ಬದಲಾವಣೆ ಮಾಡಿರುವ ಮಹೀಂದ್ರಾ ಸಂಸ್ಥೆಯು ಹೊಸ ಪ್ಯಾಟ್‌ಫಾರ್ಮ್ ಅಡಿಯಲ್ಲಿ ಮುಂಬರುವ ಥಾರ್‌ಗಳನ್ನು ಉತ್ಪಾದನೆ ಮಾಡುತ್ತಿದೆ.

ಇದಕ್ಕಾಗಿಯೇ ಹೊಸ ಥಾರ್ ಕಾರಿನ ಎಂಜಿನ್ ಕಾರ್ಯಕ್ಷಮತೆ ಮತ್ತು ಕ್ರ್ಯಾಶ್ ಟೆಸ್ಟ್‌ಗಳನ್ನು ಕೈಗೊಂಡಿರುವ ಮಹೀಂದ್ರಾ ಸಂಸ್ಥೆಯು ಗ್ರಾಹಕರಿಗೆ ಗರಿಷ್ಠ ಮಟ್ಟದ ಸುರಕ್ಷಾ ಸೌಲಭ್ಯಗಳನ್ನು ಒದಗಿಸುವ ಇರಾದೆಯಲ್ಲಿದೆ ಎನ್ನಲಾಗಿದೆ.

ಜೊತೆಗೆ ಹೊಸ ಕಾರುಗಳನ್ನು ಸಾಮಾನ್ಯ ಮತ್ತು ಆಪ್ ರೋಡ್ ಎರಡಲ್ಲೂ ಉತ್ತಮ ಚಾಲನಾ ಸೌಲಭ್ಯ ಹೊಂದಲಿದ್ದು, ಮುಂಬರುವ ದಿನಗಳಲ್ಲಿ ಕಡ್ಡಾಯವಾಗಲಿರುವ ಬಿಎಸ್ 6 ವೈಶಿಷ್ಟ್ಯತೆಗಳನ್ನು ಸಹ ಹೊಸ ಥಾರ್ ಪಡೆದುಕೊಳ್ಳುವುದು ಖಚಿತವಾಗಿದೆ. ಇದರಿಂದ ಹೆಚ್ಚುತ್ತಿರುವ ಮಾಲಿನ್ಯಕ್ಕೆ ಪರಿಣಾಮಕಾರಿ ಬ್ರೇಕ್ ಹಾಕಬಹುದಾಗಿದ್ದು, ಪರಿಸರ ಸ್ನೇಹಿ ವಾಹನ ಮಾದರಿ ಕೂಡಾ ಆಗಲಿದೆ.

ಇನ್ನು ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿರುವ ಥಾರ್ ಎಸ್‌ಯುವಿಗಳು ಸದ್ಯಕ್ಕೆ ಜೀಪ್ ಸಿಜೆ ಡಿಸೈನ್ ಆಧಾರದ ಅಭಿವೃದ್ಧಿಯಾಗುತ್ತಿದ್ದು, ನೆಕ್ಸ್ಟ್ ಜನರೇಷನ್ ಥಾರ್‌ಗಳನ್ನು ಇದಕ್ಕಿಂತಲೂ ಭಿನ್ನವಾಗಿರುವ ಹೊಸ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ಎಲ್ಇಡಿ ಹೆಡ್‌ಲೈಟ್ಸ್, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೊಲರ್ ಸೇರಿ ಹಲವಾರು ಸೌಲಭ್ಯ ಪಡೆದುಕೊಂಡಿರಲಿದೆ.

ಎಂಜಿನ್ ಸಾಮರ್ಥ್ಯ
ಸದ್ಯ ಮಾರುಕಟ್ಟೆಯಲ್ಲಿರುವ ಥಾರ್ ಎಂಜಿನ್ ಮಾದರಿಯೇ ಹೊಸ ಕಾರಿನಲ್ಲೂ ಅಳವಡಿಸುವ ಸಾಧ್ಯತೆಗಳಿದ್ದು, 2.5-ಲೀಟರ್ ಮತ್ತು 2.6-ಲೀಟರ್ ಡೀಸೆಲ್ ಎಂಜಿನ್ ಮಾದರಿಯಲ್ಲಿ ಹೊಸ ಥಾರ್ ಸಿದ್ದಗೊಳ್ಳಲಿದೆ. ಇವುಗಳಲ್ಲಿ 2.5-ಲೀಟರ್ ಡೀಸೆಲ್ ಎಂಜಿನ್‌ಗಳು 105ಬಿಎಚ್‌ಪಿ, 247ಎನ್ಎಂ ಟಾರ್ಕ್ ಉತ್ಪಾದಿಸಿದ್ದಲ್ಲಿ 2.6-ಲೀಟರ್ ಡಿಸೇಲ್ ಎಂಜಿನ್ ಮಾದರಿಯು 63-ಬಿಎಚ್‌ಪಿ, 195ಎನ್ಎಂ ಟಾರ್ಕ್ ಉತ್ಪಾದಿಸುತ್ತವೆ.

ಇದಲ್ಲದೇ ಜೀಪ್ ಸಿಜೆ ಮಾದರಿಯಲ್ಲೇ ಹೊಸ ವಿನ್ಯಾಸಗಳನ್ನು ಪಡೆದುಕೊಳ್ಳಲಿರುವ ನೆಕ್ಸ್ಟ್ ಜನರೇಷನ್ ಥಾರ್ ಎಸ್‌ಯುವಿಗಳು ಹೊಸ ಬಂಪರ್, ವೀಲ್ಹ್ ಆರ್ಚ್ ಕ್ಯಾಡಿಂಗ್, ಕ್ಲಾಸಿ ಲುಕ್ ಮತ್ತು ಹೊಸ ಇಂಟಿರಿಯರ್ ವಿನ್ಯಾಸಗಳನ್ನು ಹೊಂದಿರಲಿದೆ.

ಡ್ರೈವ್ ಸ್ಪಾರ್ಕ್ ಅಭಿಪ್ರಾಯ
ಕಡಿಮೆ ಬೆಲೆಗಳಲ್ಲಿ ಆಪ್ ರೋಡ್ ಎಸ್‌ಯುವಿ ಖರೀದಿಸುವ ಪ್ರಿಯರನ್ನು ತನ್ನತ್ತ ಸೆಳೆಯಲು ಹೊಸ ತಂತ್ರ ರೂಪಿಸಿರುವ ಮಹೀಂದ್ರಾ ಸಂಸ್ಥೆಯು ಸದ್ಯ ಮಾರುಕಟ್ಟೆಯಲ್ಲಿರುವ ಥಾರ್‌ಗಿಂತಲೂ ನೆಕ್ಸ್ಟ್ ಜನರೇಷನ್ ಥಾರ್ ಕಾರುಗಳನ್ನು ಹೆಚ್ಟಿನ ಗುಣಮಟ್ಟ ಮತ್ತು ಎಂಜಿನ್ ಕಾರ್ಯಕ್ಷಮತೆಯೊಂದಿಗೆ ಬಿಡುಗಡೆಗೊಳಿಸುತ್ತಿದ್ದು, 2019ರ ಮೊದಲ ತ್ರೈಮಾಸಿಕ ಅವಧಿಯಲ್ಲಿ ಹೊಸ ಕಾರುಗಳು ಮಾರುಕಟ್ಟೆಗೆ ಲಗ್ಗೆಯಿಡುವ ನೀರಿಕ್ಷೆಯಿದೆ.


Click it and Unblock the Notifications