ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿರುವ ಮುಂದಿನ ತಲೆಮಾರಿನ ಮಹೀಂದ್ರಾ ಥಾರ್

ದೇಶಿಯ ವಾಹನ ತಯಾರಕ ಸಂಸ್ಥೆಯಾದ ಮಹೀಂದ್ರಾ ಸಂಸ್ಥೆಯು 2010ರಲ್ಲಿ ತಮ್ಮ ಮೊದಲ ತಲೆಮಾರಿನ ಥಾರ್ ಕಾರನ್ನು ಬಿಡುಗಡೆಗೊಳಿಸಿದ್ದು, ಅಂದಿನಿಂದಲೂ ಈ ಕಾರು ಯಾವುದೇ ಬದಲಾವಣೆಯನ್ನು ಪಡೆದಿಲ್ಲ. ಈ ನಿಟ್ಟಿನಲ್ಲಿ ಮಹೀಂದ್ರಾ ಸಂಸ್ಥೆಯು ಇದೀಗ ಮುಂದಿನ ತಲೆಮಾರಿನ ಥಾರ್ ಕಾರಿನಲ್ಲಿ ಹೆಚ್ಚಿನ ನವೀಕರಣಗಳನ್ನು ನೀಡಲು ತೀರ್ಮಾನಿಸಿದೆ.

ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿರುವ ಮುಂದಿನ ತಲೆಮಾರಿನ ಮಹೀಂದ್ರಾ ಥಾರ್

ಮಹೀಂದ್ರಾ ಸಂಸ್ಥೆಯು ಬಿಡುಗಡೆಗೊಳಿಸಲಿರುವ ಹೊಸ ತಲೆಮಾರಿನ ಥಾರ್ ಕಾರಿನ ಚಿಕ್ರಗಳು ಸೋರಿಕೆಯಾಗಿದ್ದು, ಈ ಚಿತ್ರಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಟೀಂ ಬಿಹೆಚ್‍ಪಿ ಪ್ರಕಾರ ಸೋರಿಕೆಯಾದ ಚಿತ್ರಗಳಲ್ಲಿ ಥಾರ್ ಕಾರನ್ನು ಸಂಪೂರ್ಣವಾಗಿ ಮುಸುಕಿನಿಂದ ಮುಚ್ಚಲ್ಪಟ್ತಿದ್ದು, ಹೊಸ ಥಾರ್ ಹಿಂದಿನ ತಲೆಮಾರಿನ ಕಾರಿಗಿಂತಾ ಹೆಚ್ಚಿನ ಗಾತ್ರವನ್ನು ಪಡೆದುಕೊಂಡಿದೆ.

ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿರುವ ಮುಂದಿನ ತಲೆಮಾರಿನ ಮಹೀಂದ್ರಾ ಥಾರ್

ಹೊಸ ತಲೆಮಾರಿನ ಥಾರ್ ಕಾರಿನಲ್ಲಿ ಮಹೀಂದ್ರಾ ಸಂಸ್ಥೆಯು ಇತ್ತೀಚೆಗೆ ಬಿಡುಗಡೆಗೊಳಿಸಿದ ಮರಾಜೊ ಕಾರಿನಲ್ಲಿ ಬಳಸಲಾದ ಅಗಲವಾದ ಲಾಡರ್ ಫ್ರೇಮ್ ಅನ್ನು ಈ ಕಾರಿನಲ್ಲಿಯು ಬಳಸಲಾಗಿದ್ದು, ಹೆಚ್ಚಿನದಾಗಿ ಆಧೂನಿಕ ಲುಕ್ ಮತ್ತು ಮರುವಿನ್ಯಾಸಗೊಳಿಸಲಾದ ವಿನ್ಯಾಸವನ್ನು ಪಡೆದುಕೊಂಡಿರಲಿದೆ.

ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿರುವ ಮುಂದಿನ ತಲೆಮಾರಿನ ಮಹೀಂದ್ರಾ ಥಾರ್

ಹೊಸ ಮಹೀಂದ್ರಾ ಥಾರ್ ಕಾರನ್ನು ಪ್ರಸ್ತುತ ಅದರ ಆಫ್‍-ರೋಡಿಂಗ್ ಕೌಶಲ್ಯವನ್ನು ಪರೀಕ್ಷಿಸಲು ಪ್ಲಾಂಟ್‍ನಿಂದ ಹೊರ ಬಂದಾಗ ಕಾಣಿಸಿಕೊಂಡಿದ್ದು, 2020ರಲ್ಲಿ ನಡೆಯಲಿರುವ ಆಟೋ ಎಕ್ಸ್ ಪೋ ಮೇಳದಲ್ಲಿ ಬಹಿರಂಗಗೊಳ್ಳಲಿದೆ.

ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿರುವ ಮುಂದಿನ ತಲೆಮಾರಿನ ಮಹೀಂದ್ರಾ ಥಾರ್

ಎಂಜಿನ್ ಸಮಾರ್ಥ್ಯ

ಹೊಸ ತಲೆಮಾರಿನ ಮಹೀಂದ್ರಾ ಥಾರ್ ಕಾರು ಹೊಸ ಡೀಸೆಲ್ ಎಂಜಿನ್ ಅನ್ನು ಪಡೆಯಬಹುದಾಗಿದ್ದು, ಪ್ರಸ್ಥುತ ಇರುವ 2.5 ಲೀಟರ್ ಡೀಸೆಲ್ ಎಂಜಿನ್ 2020ರ ಏಪ್ರಿಲ್1 ರಿಂದ ಜಾರಿಯಾಗಲಿರುವ ಹೊಸ ಎಮಿಷನ್ ನಿಬಂಧನೆಗಳನ್ನು ಪೂರೈಸಲು ಅಸಂಭವವಾಗಿದೆ.

ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿರುವ ಮುಂದಿನ ತಲೆಮಾರಿನ ಮಹೀಂದ್ರಾ ಥಾರ್

ಪ್ರಯಾಣಿಕರ ಸುರಕ್ಷತೆಗಾಗಿ ಹೊಸ ತಲೆಮಾರಿನ ಥಾರ್ ಕಾರಿನಲ್ಲಿ ಈ ಬಾರಿ ಎರಡು ಏರ್‍‍ಬ್ಯಾಗ್‍ಗಳು, ಬ್ರೇಕ್ ಅಸಿಸ್ಟ್, ಆಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ (ಎಬಿಎಸ್), ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಷನ್ (ಎಬಿಡಿ)ಯನ್ನು ಸ್ಟ್ಯಾಂಡರ್ಡ್ ಆಗಿ ನೀಡಿರಲಿದೆ.

ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿರುವ ಮುಂದಿನ ತಲೆಮಾರಿನ ಮಹೀಂದ್ರಾ ಥಾರ್

ಇದರ ಜೊತೆಗೆ ರಿವರ್ಸ್ ಪಾರ್ಕಿಂಗ್ ಸೆನ್ಸಾರ್ಸ್, ಐಎಸ್ಒಫಿಕ್ಸ್ ಚೈಲ್ಡ್ ಸೀಟ್ ಮೌಂಟ್ಸ್, ಕ್ರಂಪಲ್ ಜೋನ್ ಮತ್ತು ಸೀಟ್ ಬೆಲ್ಟ್ ರಿಮೈಂಡರ್ ಎಂಬ ಸೇಫ್ಟಿ ಫೀಚರ್‍‍ಗಳನ್ನು ವಿಶೇಷವಾಗಿ ನೀಡಲಿದೆ ಎನ್ನಲಾಗಿದೆ. ಸುಗಮ ಸವಾರಿಗೆ ಸಂಬಂಧಿಸಿರುವ ನಾಲ್ಕು ಚಕ್ರಗಳಲ್ಲಿ ಸುರುಳಿಯ ವಸಂತ ಅಮಾನತುಗೊಳಿಸುವಿಕೆಯೊಂದಿಗೆ ಒಟ್ಟಾರೆ ಕಾರ್ಯಕ್ಷಮತೆ ಸುಧಾರಣೆಗೊಳ್ಳುತ್ತದೆ.

ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿರುವ ಮುಂದಿನ ತಲೆಮಾರಿನ ಮಹೀಂದ್ರಾ ಥಾರ್

ಮತ್ತು ಮಹೀಂದ್ರಾ ಥಾರ್ ಕಾರಿನಲ್ಲಿ ಎಂದಿನಂತೆಯೆ 4ಡಬ್ಲ್ಯೂಡಿ ಸಿಸ್ಟಂ ಅನ್ನು ಹೊಂದಿರಲಿದ್ದು, ಮಾರುಕಟ್ಟೆ ಇಂದ ಹೊರ ಹೋಗಲಿರುವ ಥಾರ್ ಕಾರಿಗಿಂತಾ ಹೊಸ ಥಾರ್ ಕಾರಿನ ಬೆಲೆಯಲ್ಲಿ ಮಾರ್ಪಾಡುಗಳನ್ನು ಕೂಡಾ ಮಾಡಲು ಮಹೀಂದ್ರಾ ಸಂಸ್ಥೆಯು ಚಿಂತಿಸುತ್ತಿದೆ.

ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿರುವ ಮುಂದಿನ ತಲೆಮಾರಿನ ಮಹೀಂದ್ರಾ ಥಾರ್

ಪ್ರಸ್ಥುತ ತಲೆಮಾರಿನ ಥಾರ್ ಕಾರು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 9.29 ಲಕ್ಷದ ಮಾರಾಟವನ್ನು ಪಡೆದುಕೊಂಡಿದ್ದು, ಇನ್ನು ಹೊಸ ತಲೆಮಾರಿನ ಥಾರ್ ಕಾರು ಬಿಡುಗದೆಗೊಂಡಲ್ಲಿ ಮಾರುಕಟ್ಟೆಯಲ್ಲಿರುವ ಫೋರ್ಸ್ ಗೂರ್ಖಾ ಮತ್ತು ಮಾರುತಿ ಸುಜುಕಿ ಸಂಸ್ಥೆಯು ಪರಿಚಯಿಸಲಿರುವ ಹೊಸ ಜಿಮ್ನಿ ಕಾರುಗಳಿಗೆ ಪೈಪೋಟಿ ನೀಡಲಿದೆ.

More from DriveSpark

Article Published On: Thursday, December 20, 2018, 10:13 [IST]
English summary
Next-gen Mahindra Thar Read In Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+