ಇಂಡೋನೇಷ್ಯಾ ಮೋಟಾರ್ ಶೋನಲ್ಲಿ ಭಾಗಿಯಾಗಲಿದೆ ನೆಕ್ಸ್ಟ್ ಜನರೇಷನ್ ಎರ್ಟಿಗಾ

Written By:

ದೇಶಿಯ ಮಾರುಕಟ್ಟೆಯ ನಂ.1 ಕಾರು ಉತ್ಪಾದನಾ ಮತ್ತು ಮಾರಾಟ ಸಂಸ್ಥೆಯಾಗಿರುವ ಮಾರುತಿ ಸುಜುಕಿಯು ಸದ್ಯ ಎರ್ಟಿಗಾ ನೆಕ್ಸ್ಟ್ ಎಂಪಿವಿ ಕಾರು ಮಾದರಿಯನ್ನು ಬಿಡುಗಡೆಗೊಳ್ಳುತ್ತಿದ್ದು, ಇದರ ಮಧ್ಯೆಹೊಸ ಎರ್ಟಿಗಾ ಮಾದರಿಯನ್ನು ಇಂಡೋನೇಷ್ಯಾ ಮೋಟಾರ್ ಶೋನಲ್ಲೂ ಪ್ರದರ್ಶನ ಮಾಡುತ್ತಿದೆ.

ಇಂಡೋನೇಷ್ಯಾ ಮೋಟಾರ್ ಶೋನಲ್ಲಿ ಭಾಗಿಯಾಗಲಿದೆ ನೆಕ್ಸ್ಟ್ ಜನರೇಷನ್ ಎರ್ಟಿಗಾ

ನೆಕ್ಸ್ಟ್ ಜನರೇಷನ್ ವೈಶಿಷ್ಟ್ಯತೆಗಳೊಂದಿಗೆ ಅಭಿವೃದ್ಧಿಯಾಗಿರುವ ಎರ್ಟಿಗಾ ಕಾರು ಮಾದರಿಗಳು ಈ ಹಿಂದೆ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಳ್ಳುವ ಮೂಲಕ ಎಂಪಿವಿ ಕಾರುಗಳ ಪ್ರಿಯರಲ್ಲಿ ಕುತೂಹಲ ಹುಟ್ಟುಹಾಕಿದ್ದಲ್ಲೇ ಇದೀಗ ಬಿಡುಗಡೆಗಾಗಿ ಸಿದ್ದಗೊಳ್ಳುತ್ತಿದ್ದು, ಜಾಗತಿಕ ಮಾರುಕಟ್ಟೆಯಲ್ಲೂ ಸದ್ದು ಮಾಡುವ ತವಕದಲ್ಲಿವೆ.

ಈ ಹಿಂದಿನ ಮಾದರಿಗಿಂತ ಉದ್ದಳತೆಯಲ್ಲಿ ಹೆಚ್ಚಿನ ಬದಲಾವಣೆಯೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿರುವ ಎರ್ಟಿಗಾ ನೆಕ್ಸ್ಟ್ ಜನರೇಷನ್ ಕಾರುಗಳ ಕ್ಯಾಬಿನ್ ಸ್ಪೆಸ್ ಕೂಡಾ ಮೂಲ ಮಾದರಿಗಿಂತ ಹೆಚ್ಚಿರಲಿವೆ ಎನ್ನಲಾಗಿದೆ.

ಇಂಡೋನೇಷ್ಯಾ ಮೋಟಾರ್ ಶೋನಲ್ಲಿ ಭಾಗಿಯಾಗಲಿದೆ ನೆಕ್ಸ್ಟ್ ಜನರೇಷನ್ ಎರ್ಟಿಗಾ

ಜೊತೆಗೆ ಕಾರಿನ ವಿಂಡ್‌ಸ್ಕ್ರೀನ್ ಅಳತೆಯಲ್ಲೂ ಬದಲಾವಣೆ ತರಲಾಗಿದ್ದು, ಹೊಸ ವಿನ್ಯಾಸದ ಅಲಾಯ್ ಚಕ್ರಗಳು ಮತ್ತು ಗುರುತರ ಬಾಡಿ ವಿನ್ಯಾಸಗಳು ಎರ್ಟಿಗಾ ನೆಕ್ಸ್ಟ್ ಜನರೇಷನ್ ಎಂಪಿವಿ ಕಾರಿನ ಲುಕ್ ಹೆಚ್ಚಿಸಿವೆ.

ಇಂಡೋನೇಷ್ಯಾ ಮೋಟಾರ್ ಶೋನಲ್ಲಿ ಭಾಗಿಯಾಗಲಿದೆ ನೆಕ್ಸ್ಟ್ ಜನರೇಷನ್ ಎರ್ಟಿಗಾ

ಇನ್ನು ಕಾರಿನ ಮುಂಭಾಗದ ಡಿಸೈನ್‌ಗಳ ಬಗೆಗೆ ಹೇಳುವುದಾದರೇ, ಶಾರ್ಪ್ ಲುಕ್, ಆಕರ್ಷಕ ಗ್ರಿಲ್ ಮತ್ತು ಪರಿಷ್ಕರಿಸಿದ ಬಂಪರ್‌ಗಳನ್ನು ಪಡೆದಿದ್ದು, ತಾಂತ್ರಿಕವಾಗಿಯು ಭಾರೀ ಬದಲಾವಣೆ ಹೊಂದಿರುವ ಮಾಹಿತಿ ಲಭ್ಯವಾಗಿದೆ.

ಇಂಡೋನೇಷ್ಯಾ ಮೋಟಾರ್ ಶೋನಲ್ಲಿ ಭಾಗಿಯಾಗಲಿದೆ ನೆಕ್ಸ್ಟ್ ಜನರೇಷನ್ ಎರ್ಟಿಗಾ

ಎಂಜಿನ್ ಸಾಮರ್ಥ್ಯ

ಸದ್ಯ ಎರ್ಟಿಗಾ ಮಾದರಿಗಳು 1.4-ಲೀಟರ್ ಪೆಟ್ರೋಲ್ ಮತ್ತು 1.3-ಲೀಟರ್ ಡೀಸೆಲ್ ಎಂಜಿನ್‌ನಲ್ಲಿ ಲಭ್ಯವಿದ್ದು, ಎರ್ಟಿಗಾ ನೆಕ್ಸ್ಟ್ ಜನರೇಷನ್ ಮಾದರಿಗಳು ಹೊಸ ಟೆಕ್ನಾಲಜಿ ಪ್ರೇರಿತ 1.5-ಲೀಟರ್ ನ್ಯಾಚುರಲ್ ಆಸ್ಪರೆಟೆಡ್ ಪೆಟ್ರೋಲ್ ಎಂಜಿನ್ ಪಡೆಯಲಿವೆ.

ಇಂಡೋನೇಷ್ಯಾ ಮೋಟಾರ್ ಶೋನಲ್ಲಿ ಭಾಗಿಯಾಗಲಿದೆ ನೆಕ್ಸ್ಟ್ ಜನರೇಷನ್ ಎರ್ಟಿಗಾ

ಹೀಗಾಗಿ ಹೊಲ ಟೆಕ್ನಾಲಜಿ ಬಳಕೆಯಿಂದಾಗಿ ಇಂಧನ ದಕ್ಷತೆ ಹೆಚ್ಚಲಿದ್ದು, 7 ಸೀಟರ್ ಎಂಪಿವಿ ಮಾದರಿಗಳನ್ನು ಪ್ಯಾಸೆಂಜರ್ ಕಾರುಗಳನ್ನಾಗಿ ಬಳಕೆ ಮಾಡುವ ಗ್ರಾಹಕರಿಗೆ ಹಾಗೂ ಕುಟುಂಬ ಸದಸ್ಯರು ಒಟ್ಟಾಗಿ ಹೊರಹೊಗಲು ಇನ್ನೊಂದು ಉತ್ತಮ ಆಯ್ಕೆ ಎನ್ನಬಹುದು.

ಬೆಲೆಗಳು (ಅಂದಾಜು)

ಹೊಸ ತಂತ್ರಜ್ಞಾನ ಬಳಕೆ ಹಿನ್ನೆಲೆ ಸಾಮಾನ್ಯ ಎರ್ಟಿಗಾ ಕಾರುಗಳಿಂತ ನೆಕ್ಸ್ಟ್ ಜನರೇಷನ್ ಆವೃತ್ತಿಗಳು ಹೆಚ್ಚುವರಿಯಾಗಿ 1 ರಿಂದ 2 ಲಕ್ಷದವರೆಗೆ ಬೆಲೆ ಹೆಚ್ಚುವ ನೀರಿಕ್ಷೆಗಳಿವೆ.

ಇಂಡೋನೇಷ್ಯಾ ಮೋಟಾರ್ ಶೋನಲ್ಲಿ ಭಾಗಿಯಾಗಲಿದೆ ನೆಕ್ಸ್ಟ್ ಜನರೇಷನ್ ಎರ್ಟಿಗಾ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಸದ್ಯ ಎಂಪಿವಿ ಮಾರಾಟದಲ್ಲಿ ಟೊಯೊಟಾ ಕ್ರಿಸ್ಟಾ ನಂತರದ ಸ್ಥಾನದಲ್ಲಿರುವ ಎರ್ಟಿಗಾ ಕಾರುಗಳು ಇದೀಗ ನೆಕ್ಸ್ಟ್ ಜನರೇಷನ್ ವೈಶಿಷ್ಟ್ಯತೆಗಳೊಂದಿಗೆ ಮಾರುಕಟ್ಟೆಗೆ ಪ್ರವೇಶಿಸುತ್ತಿದ್ದು, ಇಂಡೋನೇಷ್ಯಾ ಮೋಟಾರ್ ಶೋನಲ್ಲಿ ಭಾಗಿಯಾಗುವ ಮೂಲಕ ಜಾಗತಿಕವಾಗಿ ಮತ್ತಷ್ಟು ಸದ್ದು ಮಾಡುವ ಭರವಸೆಯಲ್ಲಿದೆ.

Read more on maruti suzuki
English summary
Next-Gen Maruti Ertiga To Debut At 2018 Indonesia Motor Show.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark