ತನ್ನ ಕಾರುಗಳ ಬೆಲೆಗಳನ್ನು ಹೆಚ್ಚಿಸಿದ ನಿಸ್ಸಾನ್ ಇಂಡಿಯಾ...

ಎಪ್ರಿಲ್ 1ರಿಂದಲೇ ಅನ್ವಯವಾಗುವಂತೆ ತನ್ನ ಕಾರುಗಳ ಬೆಲೆಯನ್ನು ನಿಸ್ಸಾನ್ ಇಂಡಿಯಾ ಮತ್ತು ಡಟ್ಸನ್ ಸಂಸ್ಥೆಗಳು ಹೆಚ್ಚಳ ಮಾಡಲು ತೀರ್ಮಾನಿಸಿದ್ದು, ಕಾರುಗಳ ಬೆಲೆಯು ಶೇಕಡಾ 2ರಷ್ಟು ಏರಿಕೆಯಾಗಲಿವೆ ಎನ್ನಲಾಗಿದೆ.

By Rahul Ts

ಕಾರುಗಳ ಉತ್ಪಾದನಾ ವೆಚ್ಚವು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಿಸ್ಸಾನ್ ಇಂಡಿಯಾ ಸಂಸ್ಥೆಯು ಕಾರುಗಳ ಬೆಲೆ ಹೆಚ್ಚಳಕ್ಕೆ ಮುಂದಾಗಿದ್ದು, ಈ ಮೂಲಕ ಉತ್ಪಾದನಾ ವೆಚ್ಚಗಳ ಸಮತೋಲನಕ್ಕೆ ಬೆಲೆ ಹೆಚ್ಚಳ ಮಾಡಲಾಗುತ್ತಿದೆ ಎನ್ನಲಾಗಿದೆ.

ತನ್ನ ಕಾರುಗಳ ಬೆಲೆಗಳನ್ನು ಹೆಚ್ಚಿಸಿದ ನಿಸ್ಸಾನ್ ಇಂಡಿಯಾ...

ಪ್ರಸ್ತುತ ಭಾರತೀಯ ಮಾರುಕಟ್ಟೆಯಲ್ಲಿ ನಿಸ್ಸಾನ್ ಇಂಡಿಯಾ ತನ್ನ ಮೈಕ್ರಾ ಹ್ಯಾಚ್‍ಬ್ಯಾಕ್, ಸನ್ನಿ ಸೆಡಾನ್ ಮತ್ತು ಟೆರ್ರಾನೊ ಕಾಂಪ್ಯಾಕ್ಟ್ ಎಸ್‍ಯುವಿ ಜೊತೆಗೆ ಸಹಸಂಸ್ಥೆಯಾದ ಡಟ್ಸನ್ ಬ್ರಾಂಡ್‌ನ ಗೋ ಮತ್ತು ರೆಡಿ ಗೋ ಹ್ಯಾ‍ಚ್‍ಬ್ಯಾಕ್ ಮತ್ತು ಗೋ ಪ್ಲಸ್ ಕಾಂಪ್ಯಾಕ್ಟ್ ಸೆಡಾನ್ ಕಾರುಗಳನ್ನು ಸಹ ಮಾರಾಟ ಮಾಡುತ್ತಿದೆ.

ತನ್ನ ಕಾರುಗಳ ಬೆಲೆಗಳನ್ನು ಹೆಚ್ಚಿಸಿದ ನಿಸ್ಸಾನ್ ಇಂಡಿಯಾ...

ಕಳೆದ ವರ್ಷವೇ ನಿಸ್ಸಾನ್ ಸಂಸ್ಥೆಯು ಕಾರುಗಳ ಬೆಲೆ ಹೆಚ್ಚಳದ ಬಗ್ಗೆ ಸುಳಿವು ನೀಡಿತ್ತು. ಜೊತೆಗೆ ಕಾರುಗಳ ಬೆಲೆಗಳಿಗೆ ಅನುಗುಣವಾಗಿ ರೂ.15,000 ಸಾವಿರ ಬೆಲೆ ಹೆಚ್ಚಿಸುವುದಾಗಿ ಹೇಳಿಕೊಂಡಿತ್ತು. ಇದಕ್ಕೆ ಕಾರಣ ಕಾರು ಉತ್ಪಾದನೆಗೆ ಬೇಕಾಗಿರುವ ಕಚ್ಚಾ ವಸ್ತುಗಳ ಬೆಲೆಗಳು ಹೆಚ್ಚಳವೇ ಪ್ರಮುಖ ಕಾರಣವಾಗಿದೆ.

ತನ್ನ ಕಾರುಗಳ ಬೆಲೆಗಳನ್ನು ಹೆಚ್ಚಿಸಿದ ನಿಸ್ಸಾನ್ ಇಂಡಿಯಾ...

ಈ ಬಗ್ಗೆ ಮಾತನಾಡಿರುವ ನಿಸ್ಸಾನ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಜೆರೋಮ್ ಸೈಗೋಟ್, ಏಪ್ರಿಲ್ 1 ರಿಂದ ನಿಸ್ಸಾನ್ ಮತ್ತು ಡಟ್ಸನ್ ಕಾರುಗಳ ಬೆಲೆ ಹೆಚ್ಚಿಸಲಾಗಲಿದ್ದು, ಗ್ರಾಹಕರು ಇದನ್ನು ಗಮನಿಸಿ ಕಾರಿನ ಖರೀದಿ ವೇಳೆಯಲ್ಲಿ ಇದನ್ನು ಸ್ವೀಕರಿಸುತ್ತಾರೆಂದು ನಮಗೆ ಪೂರ್ಣ ವಿಶ್ವಾಸವಿದೆ ಎಂದಿದ್ದಾರೆ.

ತನ್ನ ಕಾರುಗಳ ಬೆಲೆಗಳನ್ನು ಹೆಚ್ಚಿಸಿದ ನಿಸ್ಸಾನ್ ಇಂಡಿಯಾ...

ನಿಸ್ಸಾನ್ ಮತ್ತು ಡಟ್ಸನ್ ಮಾತ್ರವಲ್ಲದೇ ಟಾಟಾ ಮೋಟಾರ್ಸ್ ಹಾಗೂ ಆಡಿ ಸಂಸ್ಥೆಗಳು ಕೂಡಾ ಏಪ್ರಿಲ್ 1 ರಿಂದಲೇ ತಮ್ಮ ಕಾರುಗಳ ಬೆಲೆಯನ್ನು ಏರಿಕೆ ಬಗ್ಗೆ ಅಧಿಕೃತ ಮಾಹಿತಿ ಹೊರಹಾಕಿದ್ದು, ಇದರಿಂದ ಏಪ್ರಿಲ್ ನಂತರ ಕಾರು ಖರೀದಿಸುವ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟಲಿದೆ.

ತನ್ನ ಕಾರುಗಳ ಬೆಲೆಗಳನ್ನು ಹೆಚ್ಚಿಸಿದ ನಿಸ್ಸಾನ್ ಇಂಡಿಯಾ...

ಕೊನೆಯದಾಗಿ ನಿಸ್ಸಾನ್ ಸಂಸ್ಥೆಯು 2018ರಲ್ಲೇ ಇದು ಎರಡನೇ ಬಾರಿ ತಮ್ಮ ವಾಹನಗಳ ಮೇಲೆ ಬೆಲೆ ಏರಿಕೆ ಮಾಡುತ್ತಿದ್ದು, ಕಾರಣ ಬೆಲೆ ಏರಿಕೆಯಿಂದಾಗ ಮಾರಾಟ ಪ್ರಕ್ರಿಯೆ ಮೇವೆ ತೀವ್ರ ಪರಿಣಾಮ ಬೀರುವ ಸಾಧ್ಯತೆಗಳಿವೆ ಎನ್ನಬಹುದು.

Article Published On: Wednesday, March 21, 2018, 13:42 [IST]
English summary
Nissan And Datsun Announce Price Hike Across The Range By Up To Two Percent.
Read more on nissan
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+