ಬೆಂಗಳೂರು ನಗರದಲ್ಲಿ ಹೆಚ್ಚುತ್ತಿರುವ ಟ್ಯಾಕ್ಸಿ ಸಂಖ್ಯೆ - ಇದಕ್ಕೆ ಕಾರಣ.?

ಬೆಂಗಳೂರು: ನಮ್ಮ ಬೆಂಗಳೂರು ನಗರಕ್ಕೆ ತಮ್ಮ ಜೀನವನ್ನು ಉತ್ತೀರ್ಣಗೊಳಿಸಲು ದಿನಕ್ಕೆ ಅದೆಷ್ಟೊ ಮಂದಿ ಕಾಲಿಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಅವರಿಗೆ ಹೊಸ ಪ್ರದೇಶದಲ್ಲಿ ಪ್ರಯಾಣಿಸಲು ಹಲವಾರು ಸ್ಥಳದ ಹೆಸರುಗಳು ಸಹ ತಿಳಿದಿರುದಿಲ್ಲ. ಇಂತಹವರಿಗೆ ಹೆಚ್ಚು ಉಪಯುಕ್ತಕಾರಿಯಾದ ಸೇವೆ ಎಂದರೆ ಅವು ಟ್ಯಾಕ್ಸಿಗಳು.

ಬೆಂಗಳೂರು ನಗರದಲ್ಲಿ ಹೆಚ್ಚುತ್ತಿರುವ ಟ್ಯಾಕ್ಸಿ ಸಂಖ್ಯೆ - ಇದಕ್ಕೆ ಕಾರಣ.?

ಕೇವಲ ನಗರಕ್ಕೆ ಆಗಮಿಸುತ್ತಿರುವವರು ಮಾತ್ರವಲ್ಲದೇ ನಗರದ ನಾಗರೀಕರು ಕೂಡಾ ತಮ್ಮ ದಿನನಿತ್ಯದ ಪ್ರಯಾಣಕ್ಕಾಗಿ ಟ್ಯಾಕ್ಸಿಯ ಮೊರೆ ಹೋಗಿದ್ದಾರೆ ಎಂದರೇ ನೀವು ನಂಬಲೇಬೇಕು. ಈ ನಿಟ್ಟಿನಲ್ಲಿ ಇಂದಿನ ಲೇಖನದಲ್ಲಿ ನಮ್ಮ ಬೆಂಗಳೂರು ನಗರದಲ್ಲಿ ಎಷ್ಟರ ಮಟ್ಟಿಗೆ ಟ್ಯಾಕಿ ಸಂಖ್ಯೆಯು ಹೆಚ್ಚಳವಾಗಿದೆ ಎಂಬುದರ ಬಗ್ಗೆ ಚರ್ಚಿಸಲಾಗಿದೆ.

ಬೆಂಗಳೂರು ನಗರದಲ್ಲಿ ಹೆಚ್ಚುತ್ತಿರುವ ಟ್ಯಾಕ್ಸಿ ಸಂಖ್ಯೆ - ಇದಕ್ಕೆ ಕಾರಣ.?

ಶೇಕಡ 30ರಷ್ಟು ಹೆಚ್ಚಿದ ಟ್ಯಾಕ್ಸಿ ಸಂಖ್ಯೆ

ಮಾರ್ಚ್ 2015 ಬೆಂಗಳೂರು ನಗರದಲ್ಲಿ ಸುಮಾರು 80,000 ಸಾವಿರದ ಟ್ಯಾಕ್ಸಿಗಳು ನೋಂದಣಿಯಾಗಿದ್ದರೆ, ಇನ್ನು ಸೆಪ್ಟೆಂಬರ್ 2018ರ ಹೊತ್ತಿಗೆ ಸುಮಾರು 1.66 ಲಕ್ಷದ ಟ್ಯಾಕ್ಸಿಗಳು ನೋದಣಿಯಾಗಿದೆ. ಇದೆಲ್ಲವು ಸಧ್ಯ ಬೆಂಗಳೂರು ಮಾತ್ರವಲ್ಲದೇ ಇನ್ನಿತರೆ ನಗರಗಳಲ್ಲಿ ಆನ್‍‍ಲೈನ್ ಆಧಾರಿತ ಟ್ಯಾಕ್ಸಿ ಸೇವೆಗಳು ಎಂದೇ ಹೇಳಬಹುದು.

ಬೆಂಗಳೂರು ನಗರದಲ್ಲಿ ಹೆಚ್ಚುತ್ತಿರುವ ಟ್ಯಾಕ್ಸಿ ಸಂಖ್ಯೆ - ಇದಕ್ಕೆ ಕಾರಣ.?

ಸಾರಿಗೆ ಇಲಾಖೆಯ ಲೆಕ್ಕಾಚಾರದ ಪ್ರಕಾರ ಮಾರ್ಚ್ 2015ರಲ್ಲಿ 80,204 ಟ್ಯಾಕ್ಸಿ ವಾಹನಗಳು ರಿಜಿಸ್ಟರ್ ಆಗಿದೆ. ಅದರಲ್ಲಿ 45,425 ವಾಹನಗಳು ನಾಲ್ಕು ಮತ್ತು 6 ಆಸನವುಳ್ಳ ವಾಹನಗಳಾದರೆ ಇನ್ನುಳಿದ 28,641 ವಾಹನಗಳು 6 ಕ್ಕಿಂತಾ ಹೆಚ್ಚು ಆಸನಗಳುಳ್ಳ ವಾಹನಗಳು ರಿಜಿಸ್ಟರ್ ಆಗಿವೆಯಂತೆ.

ಬೆಂಗಳೂರು ನಗರದಲ್ಲಿ ಹೆಚ್ಚುತ್ತಿರುವ ಟ್ಯಾಕ್ಸಿ ಸಂಖ್ಯೆ - ಇದಕ್ಕೆ ಕಾರಣ.?

ಸ್ವಂತ ಬಳಕೆಯ ಕಾರುಗಳ ಸಂಖ್ಯೆ ಕೂಡಾ ಹೆಚ್ಚು

ಇದಲ್ಲದೆ ಬೆಂಗಳೂರಿನಲ್ಲಿ 2015 ರಿಂದ 2018ರ ವರೆಗು ಲೆಕ್ಕ ಹಾಕಿದರೆ ಸ್ವಂತ ಬಳಕೆಯ ಕಾರುಗಳು ಶೇಕಡ 35ರಷ್ಟು ಹೆಚ್ಚಳವಾಗಿದೆ. ಅಂದರೇ 2015ರಲ್ಲಿ ಸುಮಾರು 10.88 ಲಕ್ಷ ಸ್ವಂತ ಬಳಕೆಯ ಕಾರುಗಳಾದರೆ ಇನ್ನು 2018ರಲಿ ಅದು 14.85 ಲಕ್ಷಕ್ಕೆ ಏರಿಕೆಯಾಗಿದೆ ಎಂದು ವರದಿಯೊಂದು ಹೇಳುತ್ತದೆ.

ಬೆಂಗಳೂರು ನಗರದಲ್ಲಿ ಹೆಚ್ಚುತ್ತಿರುವ ಟ್ಯಾಕ್ಸಿ ಸಂಖ್ಯೆ - ಇದಕ್ಕೆ ಕಾರಣ.?

ಮೇಲೆ ಹೇಳಿರುವ ಹಾಗೆ ಹೊಸದಾಗಿ ನಗರಕ್ಕೆ ಬಂದ ಜನರಿಗೆ ಹೊಸ ಭಾಷೆ ಮತ್ತು ಹೊಸ ಸ್ಥಳ ಆಗಿರುವುದರಿಂದ ಬಿಎಮ್‍ಟಿಸಿ ಮತ್ತು ಮೆಟೋ ಸಂಚಾರದಲ್ಲಿ ಕಷ್ಟಕರವಾಗುತ್ತಿದ್ದು, ಅಂತವರು ಹೆಚ್ಚಿನದಾಗಿ ನಗರದ ಪ್ರದೇಶಗಳಲ್ಲಿ ಪ್ರಯಾಣಿಸಲು ಟ್ಯಾಕ್ಸಿಗಳನ್ನೇ ಆಧಾರವಾಗಿಸುಕೊಳ್ಳುತ್ತಿರುವ ಕಾರಣ ಟ್ಯಾಕ್ಸಿ ಸಂಖ್ಯೆಗಳು ಕೂಡಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ಬೆಂಗಳೂರು ನಗರದಲ್ಲಿ ಹೆಚ್ಚುತ್ತಿರುವ ಟ್ಯಾಕ್ಸಿ ಸಂಖ್ಯೆ - ಇದಕ್ಕೆ ಕಾರಣ.?

ವರದಿಯ ಪ್ರಕಾರ ಓಲಾ ಮತ್ತು ಊಬರ್‍‍ನಂತಹ ಟ್ಯಾಕ್ಸಿ ಕಂಪೆನಿಗಳಿಗೆ ಭಾರತದಲ್ಲಿ ಬೆಂಗಳೂರು ನಗರವು ಅತಿ ಹೆಚ್ಚಿನ ಆದಾಯವನ್ನು ನೀಡುತ್ತಿರುವ ಕಾರಣ ಇಲ್ಲಿಯೆ ಹಲವಾರು ಯೋಜನೆಗಳನ್ನು ಮತ್ತು ಹೆಚ್ಚಿನ ಬಂಡವಾಳವನ್ನು ಹಾಗು ಗ್ರಾಹಕರನ್ನು ಇನ್ನಷ್ಟು ಸೆಳೆಯಲು ವಿಶೇಷ ಆಫರ್‍‍ಗಳನ್ನು ನೀಡುತ್ತಿದ್ದಾರೆ.

ಬೆಂಗಳೂರು ನಗರದಲ್ಲಿ ಹೆಚ್ಚುತ್ತಿರುವ ಟ್ಯಾಕ್ಸಿ ಸಂಖ್ಯೆ - ಇದಕ್ಕೆ ಕಾರಣ.?

ಹೆಚ್ಚುತ್ತಿರುವ ಟ್ಯಾಕ್ಸಿಗಳ ಸಂಖ್ಯೆಯನ್ನು ಕಡಿತಗೊಳಿಸಲು ಆಟೋ ರಿಕ್ಷಾಗಳಿಗೆ ನಿಯಮಿತ ನೋಂದಣಿಯನ್ನು ವಿಧಿಸುವಲ್ಲಿ ಯಾವುದೇ ಅವಕಾಶವಿಲ್ಲವೆಂದು ಸಾರಿಗೆ ಇಲಾಖೆಯು ಹೇಳಲಾಗಿದ್ದು, ನಗರದಲ್ಲಿನ ಆಟೋಗಳಿಗೆ ಪ್ರತ್ಯೇಕ ಪರ್ಮಿಟ್ ಅನ್ನು ನೀಡಲಾಗುತ್ತಿದೆ.

ಬೆಂಗಳೂರು ನಗರದಲ್ಲಿ ಹೆಚ್ಚುತ್ತಿರುವ ಟ್ಯಾಕ್ಸಿ ಸಂಖ್ಯೆ - ಇದಕ್ಕೆ ಕಾರಣ.?

ಇದರ ಬಗ್ಗೆ ಸಾರಿಗೆ ಇಲಾಖೆಯ ಅಭಿಪ್ರಾಯ.?

ಇಲಾಖೆಯು ಹೊಸ ವಾಹನಗಳ ನೋಂದಣಿ ವಿಚಾರದಲ್ಲಿ ಯಾವುದೇ ಕ್ರಮವನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ, ಆದರೆ ಇವುಗಳ ಬಗ್ಗೆ ವಿಶೇಷವಾದ ನಿರ್ಣಯವನ್ನು ತೆದುಕೊಳ್ಳಲು ಸರ್ಕಾರದಿಂದ ಮಾತ್ರ ಸಾಧ್ಯವೆಂದು ಸಾರಿಗೆ ಕಮಿಷನರ್ ಆದ ವಿಪಿ ಇಕ್ಕೇರಿಯವರು ಹೇಳಿಕೊಂಡಿದ್ದಾರೆ.

ಸರ್ಕಾರವು ಅದರ ಯೋಜನೆಗಳನ್ನು ಕಾರ್ಯಗತಗೊಳಿಸಲು ವಾಹನ ನೋಂದಣಿ ಇಂದ ಸಂಗ್ರಹಿಸಿದ ಆದಾಯವನ್ನು ಅವಲಂಬಿಸಿದೆ. "ವಾಹನ ನೋಂದಣಿ ಬಗ್ಗೆ ಯಾವುದೇ ನಿರ್ಭಂದನೆಯ ನಿರ್ಣವನ್ನು ತೆಗೆದುಕೊಂಡರೆ ಅದು ಸರ್ಕಾರದ ಅದಾಯವನ್ನು ಕಡಿಮೆಗೊಳಿಸುತ್ತದೆ.

ಬೆಂಗಳೂರು ನಗರದಲ್ಲಿ ಹೆಚ್ಚುತ್ತಿರುವ ಟ್ಯಾಕ್ಸಿ ಸಂಖ್ಯೆ - ಇದಕ್ಕೆ ಕಾರಣ.?

ಆದುದರಿಂದ ಸರ್ಕರಾವೇ ಇದರ ಬಗ್ಗೆ ಸೂಕ್ತ ನಿರ್ಣಯವನ್ನು ತೆದುಕೊಳ್ಳಬೇಕು ಎಂದು ಸಾರಿಗೆ ಇಲಾಖೆಯ ಪ್ರಿನ್ಸಿಪಲ್ ಸೆಕ್ರೇಟರಿಯಾದ ಡಾ. ಬಿ ಬಸವರಾಜು ಅವರು ಹೇಳಿಕೊಂಡಿದ್ದಾರೆ. ಮತ್ತು ಭಾವಿಷ್ಯದಲ್ಲಿ ಸರ್ಕಾರವು ಇದರ ಬಗ್ಗೆ ಉತ್ತಮವಾದ ನಿರ್ಣಯವನ್ನು ಸಹ ತೆಗೆದುಕೊಳ್ಳಲಿದೆ ಎಂದು ಐಎಎಸ್ ಅಧಿಕಾರಿಗಳು ಹೇಳಿದ್ದಾರೆ.

ಬೆಂಗಳೂರು ನಗರದಲ್ಲಿ ಹೆಚ್ಚುತ್ತಿರುವ ಟ್ಯಾಕ್ಸಿ ಸಂಖ್ಯೆ - ಇದಕ್ಕೆ ಕಾರಣ.?

ಸಂಕಷ್ಟದಲ್ಲಿ ಸಿಲುಕಿದ ಟ್ಯಾಕ್ಸಿ ಡ್ರೈವರ್‍‍ಗಳು

ಕ್ಯಾಬ್ ಸೇವೆಗಳನ್ನು ಒದಗಿಸುವಲ್ಲಿ ಮುಂಚೂಣಿಯಲ್ಲಿ ಓಲಾ ಮತ್ತು ಉಬರ್ ಸಂಸ್ಥೆಗಳು ಸದ್ಯ ಲಾಭದ ಹಾದಿಯಲ್ಲಿದ್ದರೂ, ಕ್ಯಾಬ್ ಮಾಲೀಕರ ಕಷ್ಟ ಹೇಳತಿರದು. ಇಂಧನಗಳ ಬೆಲೆ ಏರಿಕೆ ಸೇರಿದಂತೆ ಹಲವು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿರುವ ಕ್ಯಾಬ್ ಮಾಲೀಕರು ಓಲಾ ಮತ್ತು ಉಬರ್ ಸಂಸ್ಥೆಯ ಕಠಿಣ ನಿಲುವಿನ ವಿರುದ್ಧ ತಿರುಗಿಬಿದ್ದಿದ್ದಾರೆ.

ಬೆಂಗಳೂರು ನಗರದಲ್ಲಿ ಹೆಚ್ಚುತ್ತಿರುವ ಟ್ಯಾಕ್ಸಿ ಸಂಖ್ಯೆ - ಇದಕ್ಕೆ ಕಾರಣ.?

ಮೊದಮೊದಲು ಕ್ಯಾಬ್ ಸೇವೆಗಳ ಮೂಲಕ ಕೈತುಂಬ ಹಣ ಸಂಪಾದನೆ ಮಾಡುತ್ತಿದ್ದ ಚಾಲಕರು ಇಂದು ದುಡಿದ ಹಣವನ್ನು ಓಲಾ ಮತ್ತು ಉಬರ್ ಸಂಸ್ಥೆಗಳನ್ನು ಉದ್ಧಾರ ಮಾಡಲು ಹೆಣಗಾಡುವಂತಾಗಿದ್ದು, ಬಂದ ಲಾಭಾಂಶದಲ್ಲಿ ಸಮಪಾಲು ನೀಡುವಂತೆ ಕ್ಯಾಬ್ ಚಾಲಕರು ಬೀದಿಗಿಳಿದಿದ್ದಾರೆ.

ಬೆಂಗಳೂರು ನಗರದಲ್ಲಿ ಹೆಚ್ಚುತ್ತಿರುವ ಟ್ಯಾಕ್ಸಿ ಸಂಖ್ಯೆ - ಇದಕ್ಕೆ ಕಾರಣ.?

ಕೆಳೆದ 2016ರ ಹಿಂದಷ್ಟೇ ಓಲಾ ಮತ್ತು ಉಬರ್ ಕ್ಯಾಬ್ ಸೇವೆಗಳಲ್ಲಿ ಪ್ರತಿ ಕಿಲೋ ಮೀಟರ್‌ಗೆ ರೂ.15ರಿಂದ ರೂ.20 ಆದಾಯ ಗಳಿಸುತ್ತಿದ್ದ ಚಾಲಕರು ಇಂದು ಪ್ರತಿ ಕಿಲೋ ಮೀಟರ್‌ಗೆ ರೂ. 4.30 ಪೈಸೆಯಿಂದ ರೂ. 6 ತನಕ ಮಾತ್ರವೇ ಲಾಭಂಶ ತೆಗದುಕೊಳ್ಳುತ್ತಿದ್ದಾರೆ.

ಬೆಂಗಳೂರು ನಗರದಲ್ಲಿ ಹೆಚ್ಚುತ್ತಿರುವ ಟ್ಯಾಕ್ಸಿ ಸಂಖ್ಯೆ - ಇದಕ್ಕೆ ಕಾರಣ.?

ಕೇವಲ 2 ವರ್ಷಗಳ ಅಂತರದಲ್ಲಿ ಶೇ. 50 ರಿಂದ ಶೇ.80 ರಷ್ಟು ಲಾಭಾಂಶ ಕಡಿತಗೊಂಡಿದ್ದು, ಇದರ ಮಧ್ಯೆ ಇಂಧನಗಳ ಬೆಲೆ ಏರಿಕೆ, ಹೆಚ್ಚಿರುವ ವಿಮಾ ಮೊತ್ತಗಳು ಮತ್ತು ಸಾರಿಗೆ ಸಂಸ್ಥೆಯ ತೆರಿಗೆಗಳು ಸೇರಿ ಕ್ಯಾಬ್ ಚಾಲಕರನ್ನು ಮತ್ತಷ್ಟು ಹೈರಾಣಾಗಿಸಿವೆ.

ಬೆಂಗಳೂರು ನಗರದಲ್ಲಿ ಹೆಚ್ಚುತ್ತಿರುವ ಟ್ಯಾಕ್ಸಿ ಸಂಖ್ಯೆ - ಇದಕ್ಕೆ ಕಾರಣ.?

ಇದರೊಂದಿಗೆ ಪ್ರೋತ್ಸಾಹಧನದ ಮೇಲೂ ಹಲವು ಕಠಿಣ ನಿಯಮಗಳನ್ನು ಜಾರಿ ತರುತ್ತಿರುವ ಓಲಾ ಮತ್ತು ಉಬರ್ ಸಂಸ್ಥೆಗಳು ಕ್ಯಾಬ್ ಚಾಲಕರ ಆದಾಯದ ಮೇಲೆ ವ್ಯತರಿಕ್ತ ಪರಿಣಾಮ ಬೀರಲು ಕಾರಣವಾಗಿದ್ದು, ಇದನ್ನು ಸರಿಪಡಿಸುವಂತೆ ಕ್ಯಾಬ್ ಚಾಲಕರು ಕಳೆದ ಹಲವು ದಿನಗಳಿಂದ ದೇಶದ ಪ್ರಮುಖ ನಗರಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

Source: ETAuto

Most Read Articles

Kannada
English summary
Number of cabs in Bengaluru doubles in 3.5 years to 1.66 lakh.
Story first published: Friday, November 2, 2018, 13:20 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X