ಲೀಟರ್‌ಗೆ 100 ರೂ. ಬೆಲೆಯಿರುವ ಹೈ-ಆಕ್ಟೇನ್ ಪೆಟ್ರೋಲ್‌ಗೂ ಭಾರತದಲ್ಲಿ ಭಾರೀ ಬೇಡಿಕೆಯೆಂತೆ.!
ದೇಶದ ಪರಿಸ್ಥಿತಿ ಸದ್ಯಕ್ಕೆ ಹೇಗಿದೆ ಅಂದ್ರೆ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ಸ್ಪಲ್ಪವೇ ಹೆಚ್ಚಾದ್ರೂ ಆಡಳಿತ ಪಕ್ಷಗಳ ಕುರ್ಚಿಗಳೇ ಅಲಗಾಡುವ ಸನ್ನಿವೇಶ ಉಂಟಾಗಬಹುದು. ಹೀಗಿರುವ ಭಾರತದಲ್ಲಿ ಪ್ರಿಮಿಯಂ ಪೆಟ್ರೋಲ್ ಉತ್ಪನ್ನಗಳ ಮಾರಾಟ ಇದೀಗ ಭಾರೀ ಜನಪ್ರಿಯತೆ ಪಡೆದುಕೊಳ್ಳುತ್ತಿದ್ದು, ಪ್ರತಿ ಲೀಟರ್‌ಗೆ ರೂ.100 ಹೊಂದಿರುವ ಈ ಇಂಧನ ಜನಮುಗಿಬಿದ್ದು ಖರೀದಿ ಮಾಡ್ತಾ ಇದಾರೆ ಅಂದ್ರೆ ನೀವು ನಂಬಲೇಬೇಕು.

ಹೌದು, ಭಾರತದಲ್ಲಿ ಸಾಮಾನ್ಯ ಪೆಟ್ರೋಲ್, ಡಿಸೇಲ್ ಮಾರಾಟವನ್ನು ಹೊರತುಪಡಿಸಿ ಇನ್ನು ಅನೇಕ ಮಾದರಿಯ ಇಂಧನಗಳು ಖರೀದಿ ಲಭ್ಯವಿದ್ದು, ಇದರಲ್ಲಿ ಪ್ರಿಮಿಯಂ ಪೆಟ್ರೋಲ್ ಮಾದರಿಗೆ ಇದೀಗ ಎಲ್ಲಿಲ್ಲ ಬೇಡಿಕೆಯೆಂತೆ. ಸಾಮಾನ್ಯ ಇಂಧನಕ್ಕಿಂತಲೂ ದುಬಾರಿ ಎನ್ನಿಸುವ ಈ ಇಂಧನವು ದೇಶದ ಪ್ರಮುಖ ಮೆಟ್ರೋ ಸಿಟಿಗಳಲ್ಲಿ ಲಭ್ಯವಿದ್ದು, ಸಾಮಾನ್ಯಕ್ಕಿಂತ ಪೆಟ್ರೋಲ್‌ಗಿಂತ ಪ್ರಿಮಿಯಂ ಪೆಟ್ರೋಲ್ ಉತ್ಪನ್ನವು ವಾಹನಗಳಿಗೆ ಹೇಗೆ ಸಹಕಾರಿ ಎನ್ನುವುದನ್ನು ತಿಳಿದುಕೊಂಡರೇ ಅಚ್ಚರಿಪಡುವಿರಿ..

ಪ್ರಿಮಿಯಂ ಪೆಟ್ರೋಲ್ ಮಾದರಿಯನ್ನ ಸದ್ಯ ಭಾರತದಲ್ಲಿ ಆಕ್ಟೇನ್ ರೇಟಿಂಗ್ ಆಧಾರದ ಮೇಲೆ ಮಾರಾಟ ಮಾಡಲಾಗುತ್ತಿದ್ದು, ಆಕ್ಟೇನ್-87, ಆಕ್ಟೇನ್-91, ಆಕ್ಟೇನ್-97 ಮತ್ತು ಆಕ್ಟೇನ್-99 ಎಂಬ ಮಾದರಿಯಲ್ಲಿ ಪ್ರಿಮಿಯಂ ಪೆಟ್ರೋಲ್ ಮಾದರಿಯನ್ನ ಮಾರಾಟ ಮಾಡಲಾಗುತ್ತಿದೆ.

ಇದರಲ್ಲಿ ಆಕ್ಟೇನ್-99 ರೇಟಿಂಗ್ ಹೊಂದಿರುವ ಪೆಟ್ರೋಲ್ ಮಾದರಿಯ ಹೆಚ್ಚಿನ ದರ ಹೊಂದಿದ್ದು, ಇದು ಪ್ರತಿ ಲೀಟರ್‌ಗೆ ರೂ. 100 ಬೆಲೆ ಪಡೆದಿದೆ. ಹಾಗೆಯೇ ಇನ್ನುಳಿದ ಆಕ್ಟೇನ್ ರೇಟಿಂಗ್‌ನಲ್ಲಿ ಹೊಂದಿರುವ ಪೆಟ್ರೋಲ್ ಮಾದರಿಗಳು ಗುಣಮಟ್ಟಕ್ಕೆ ತಕ್ಕಂತೆ ವಿವಿಧ ಬೆಲೆ ಹೊಂದಿವೆ.

ಸೂಪರ್ ಕಾರುಗಳು, ಸೂಪರ್ ಬೈಕ್‌ಗಳ ಎಂಜಿನ್ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಸಲುವಾಗಿ ಇಷ್ಟು ದಿನಗಳ ಕಾಲ ವಿದೇಶಿ ಮಾರುಕಟ್ಟೆಗಳಲ್ಲಿ ಮಾತ್ರ ಮಾರಾಟಗೊಳ್ಳುತ್ತಿದ್ದ ಹೈ ಆಕ್ಟೇನ್( 99-ಆಕ್ಟೇನ್) ಪೆಟ್ರೋಲ್ ಮಾದರಿಯನ್ನು ಇದೀಗ ದೇಶಿಯ ಮಾರುಕಟ್ಟೆಗೂ ಪರಿಚಯಿಸಲಾಗಿದ್ದು, ಇಂಧನ ದಕ್ಷತೆ ಹೆಚ್ಚಿಸುವ ಹೈ ಆಕ್ಟೇನ್-99 ಪೆಟ್ರೋಲ್ ಮಾದರಿಯ ನಿಮ್ಮ ಕಾರಿನ ಆರೋಗ್ಯದಲ್ಲಿ ವ್ಯತ್ಯಾಸವಾಗದಂತೆ ನೋಡಿಕೊಳ್ಳುತ್ತದೆ.

ಹಿಂದೂಸ್ತಾನ್ ಪೆಟ್ರೋಲಿಯಂ ಸಂಸ್ಥೆಯು ಮುಂಬೈನ ಪ್ರಮುಖ ಕಡೆಗಳಲ್ಲಿ ಹೈ-ಆಕ್ಟೇನ್ ಪೆಟ್ರೋಲ್ ಮಾದರಿಯ ಚಿಲ್ಲರೆ ವ್ಯಾಪರಕ್ಕೆ ಅಧಿಕೃತವಾಗಿ ಚಾಲನೆ ನೀಡಿದ್ದು, ಸಾಮಾನ್ಯ ಮಾದರಿಯ ಪೆಟ್ರೋಲ್‌ಗಿಂತ ಹೆಚ್ಚಿನ ಗುಣಮಟ್ಟ ಹೊಂದಿರುವ ಈ ಪೆಟ್ರೋಲ್ ಮಾದರಿಯ ಕಾರಿನ ಎಂಜಿನ್ ಕಾರ್ಯಕ್ಷಮತೆಗೆ ಸಹಕಾರಿಯಾಗಲಿದೆ ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ.

ಹೈ-ಆಕ್ಟೇನ್ ಪೆಟ್ರೋಲ್ ಮಾದರಿಯು ಆಟೋ ಮೊಬೈಲ್ ಉದ್ಯಮದಲ್ಲಿ 'ಪವರ್ 99' ಎಂದೇ ಜನಪ್ರಿಯವಾಗಿದ್ದು, ಬೆಂಗಳೂರು ಮತ್ತು ಪುಣೆಯಲ್ಲಿ ಈಗಾಗಲೇ ಹೈ-ಆಕ್ಟೇನ್ ಪೆಟ್ರೋಲ್ ಮಾದರಿಯು ಆಯ್ದ ಹಿಂದೂಸ್ತಾನ್ ಪೆಟ್ರೋಲ್ ಬಂಕ್‌ಗಳಲ್ಲಿ ಖರೀದಿಗೆ ಲಭ್ಯವಿದೆ.

ಇಷ್ಟು ದಿನಗಳ ಕಾಲ ಬೇಡಿಕೆಯ ಆಧಾರದ ಮೇಲೆ ಹೈ-ಆಕ್ಟೇನ್ ಫ್ಯೂಲ್ ಮಾದರಿಯನ್ನು ಮಾರಾಟ ಮಾಡುತ್ತಿದ್ದ ಹಿಂದೂಸ್ತಾನ್ ಪೆಟ್ರೋಲಿಯಂ ಸಂಸ್ಥೆಯು ಇದೀಗ ಚಿಲ್ಲರೆ ಮಾರಾಟಕ್ಕೆ ಅಧಿಕೃತ ಚಾಲನೆ ನೀಡಿರುವುದು ಸೂಪರ್ ಕಾರುಗಳು ಮತ್ತು ಸೂಪರ್ ಬೈಕ್ ಪ್ರಿಯರಿಗೆ ಖುಷಿಯ ವಿಚಾರವೇ ಸರಿ.

ಇದಕ್ಕೆ ಕಾರಣ ಹೈ-ಆಕ್ಟೇನ್ ಫ್ಯೂಲ್ ಮಾದರಿಯು ದುಬಾರಿ ಬೆಲೆಯ ಕಾರುಗಳ ಮತ್ತು ದುಬಾರಿ ಬೆಲೆಯ ಬೈಕ್‌ಗಳ ಎಂಜಿನ್ ಕಾರ್ಯಕ್ಷಮತೆಯನ್ನು ಕಾಯ್ದುಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸಲಿದ್ದು, ಎಂಜಿನ್ ಆಯಸ್ಸು ಹೆಚ್ಚಿಸಲು ಇದು ಸಹಕರಿಸಲಿದೆ.

ಹೈ-ಆಕ್ಟೇನ್ ಪೆಟ್ರೋಲ್ ಮಾದರಿಯನ್ನು ಬಳಕೆ ಮಾಡುತ್ತಾ ಬಂದಲ್ಲಿ ಎಂಜಿನ್ ಡ್ಯಾಮೇಜ್ ಸಮಸ್ಯೆಯಿಂದ ಮುಕ್ತಿ ಸಿಗಲಿದ್ದು, ವಾಹನಗಳಿಂದ ಇಂಗಾಲದ ಹೊರಸೂಸುವಿಕೆಯ ಪ್ರಮಾಣವು ಸಾಮಾನ್ಯ ಪೆಟ್ರೋಲ್‌ಗಿಂತ ಅಧಿಕ ಮಟ್ಟದಲ್ಲಿ ಇಳಿಕೆ ಇರುತ್ತೆ.

ಇನ್ನು ದೇಶಾದ್ಯಂತ ದಿನದಿಂದ ದಿನಕ್ಕೆ ಸೂಪರ್ ಕಾರುಗಳು ಮತ್ತು ಸೂಪರ್ ಬೈಕ್‌ಗಳ ಸಂಖ್ಯೆ ಏರುತ್ತೆ ಇದ್ದು, ಕಾರು ಮಾಲೀಕರ ಒತ್ತಾಯದ ಮೆರೆಗೆ ಹೈ-ಆಕ್ಟೇನ್ ಫ್ಯೂಲ್ ಮಾದರಿಯ ಚಿಲ್ಲರೆ ಮಾರಾಟಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಗಿದೆ.

ಸದ್ಯಕ್ಕೆ ಆಯ್ದ ಕಡೆಗಳಲ್ಲಿ ಮಾತ್ರವೇ ಪ್ರಿಮಿಯಂ ಪೆಟ್ರೋಲ್ ಮಾದರಿಯು ಮಾರಾಟಕ್ಕಿದ್ದು, ಹಿಂದೂಸ್ತಾನ್ ಪೆಟ್ರೋಲಿಯಂ, ಇಂಡಿಯನ್ ಆಯಿಲ್ ಕಾರ್ಪೊರೇಷನ್, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್, ಶೆಲ್ ಪೆಟ್ರೋಲ್ ಬಂಕ್‌ಗಳಲ್ಲಿ ನೀವು ಈ ಬಗ್ಗೆ ವಿಚಾರಿಸಬಹುದು.

ಇನ್ನೊಂದು ಪ್ರಮುಖ ವಿಚಾರ ಅಂದ್ರೆ, ದುಬಾರಿ ಬೆಲೆಯಲ್ಲಿ ಮಾರಾಟವಾಗುತ್ತಿರುವ ಹೈ-ಆಕ್ಟೇನ್ ಪೆಟ್ರೋಲ್ ಮಾದರಿಯಿಂದ ಕಾರಿನ ಮೈಲೇಜ್ ಪ್ರಮಾಣದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಬದಲಾಗಿ ಕಾರಿನ ಎಂಜಿನ್ ಪರ್ಫಾಮೆನ್ಸ್ ಇತರೆ ಕಾರುಗಳಿಂತಲೂ ಉತ್ತಮವಾಗಿತ್ತೆ.

ಜೊತೆಗೆ ಹೈ-ಆಕ್ಟೇನ್ ಪೆಟ್ರೋಲ್ ಮಾದರಿಯನ್ನು ಕೇವಲ ಸೂಪರ್ ಕಾರುಗಳಿಗೆ ಮಾತ್ರವಲ್ಲದೇ ಇತರೆ ಸಾಮಾನ್ಯ ಪೆಟ್ರೋಲ್ ಕಾರುಗಳಲ್ಲೂ ಸಹ ಬಳಕೆ ಮಾಡಬಹುದಾಗಿದ್ದು, ಕುತೂಹಲ ಇದ್ದಲ್ಲಿ ನೀವು ಕೂಡಾ ಒಂದು ಬಾರಿ ಹೈ-ಆಕ್ಟೇನ್ ಪೆಟ್ರೋಲ್ ಬಳಕೆ ಮಾಡಿ ನಮ್ಮೊಂದಿಗೆ ಅನುಭವ ಹಂಚಿಕೊಳ್ಳಿ....


Click it and Unblock the Notifications








