ಇಂಧನಗಳ ಬೆಲೆ ಏರಿಳಿತದಲ್ಲಿ ಪ್ರಧಾನಿ ಮೋದಿ ಆಟ ಬಲ್ಲವರಾರು?
ದೇಶದಲ್ಲಿ ಸತತ 30 ದಿನಗಳಿಂದ ಇಂಧನ ಬೆಲೆಯಲ್ಲಿ ಭಾರೀ ಇಳಿಕೆ ಕಂಡುಬಂದಿರುವುದು ವಾಹನ ಸವಾರರಿಗೆ ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ. ಆದ್ರೆ ಕೇಂದ್ರ ಸರ್ಕಾರವು ಇಂಧನ ಬೆಲೆಗಳಲ್ಲಿ ತೆಗೆದುಕೊಳ್ಳುತ್ತಿರುವ ನಿರ್ಧಾರದ ಹಿಂದಿನ ಅಸಲಿಯತ್ತು ನಿಜಕ್ಕೂ ನಿಮ್ಮನ್ನು ಬೆರಗಾಗಿಸುತ್ತೆ.

ಹೌದು, ಸುಮಾರು 3 ತಿಂಗಳುಗಳಿಂದ ಜನ ಸಾಮಾನ್ಯರಿಗೆ ತೊಂದರೆ ಉಂಟು ಮಾಡುತ್ತಿರುವ ಈ ಇಂಧನ ಬೆಲೆಗೆ ನಿಜವಾದ ಕಾರಣ ಎಂದರೆ ಅದು ಯುಎಸ್ ಡಾಲರ್‍ಗೆ ಭಾರತೀಯ ರುಪಾಯಿ ಮೌಲ್ಯವು ಕಡಿಮೆಯಾಗುತ್ತಿದೆ ಮತ್ತು ಪಾಶ್ಚಾತ್ಯ ದೇಶಗಳಲ್ಲಿ ಕ್ರೂಡ್ ಆಯಿಲ್‍ನ ಬೆಲೆಯು ಕೂಡ ಇದಕ್ಕೆ ಕಾರಣ ಎನ್ನಲಾಗಿದೆ. ಹೀಗಿರುವಾಗಲೂ ಸದ್ಯ ಭಾರತದಲ್ಲಿ ಇಂಧನಗಳ ಬೆಲೆ ಇಳಿಕಮುಖವಾಗುತ್ತೆದೆ.

ಈ ಹಿಂದೆ ಇಂಧನ ಬೆಲೆಗಳ ಏರಿಕೆಯಿಂದಾಗಿ ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿಲ್ಲದಲ್ಲದೇ ಅವರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಆಗ ಜನಸಾಮಾನ್ಯರ ನೋವನ್ನು ಕೇಳಿಯು ಕೇಳದಿರುವ ಹಾಗಿದ್ದ ಕೇಂದ್ರ ಸರ್ಕಾರವು ಇಂಧನ ಬೆಲೆಯನ್ನು ಇಳಿಸಲು ಯಾವುದೇ ಕ್ರಮವನ್ನು ಕೈಗೊಳ್ಳಲಿಲ್ಲ.

ಜನಸೇವಕ ಎಂದು ಕರೆಸಿಕೊಳ್ಳುವ ನರೇಂದ್ರ ಮೋದಿಯವರು ಸಹ ತಮ್ಮನ್ನು ನಂಬಿ ಮತ ಹಾಕಿದ ಜನಸಾಮಾನ್ಯರು ಇಂಧನ ಬೆಲೆಯ ಏರಿಕೆ ಇಂದಾಗಿ ಕಷ್ಟ ಪಡುತ್ತಿದ್ದರೂ ಸಹ ಸುಮಾರು ದಿನಗಳ ಕಾಲ ಇಂಧನ ಬೆಲೆಗಳ ಇಳಿಕೆಯ ಬಗ್ಗೆ ಯಾವುದೇ ಚರ್ಚೆಯನ್ನೇ ಮಾಡಲಿಲ್ಲ.

ಆದ್ರೆ ಅಕ್ಟೋಬರ್ 16ರಂದು ದಸರಾ ಹಬ್ಬದ ಪ್ರಯುಕ್ತ ಇಂಧನ ಬೆಲೆಯು ಕಡಿಮೆ ಆಗಿದೆ. ಅಂದಿನಿಂದಲೂ ನವೆಂಬರ್ 10ರ ವರೆಗು ಇಂಧನದ ಬೆಲೆಯಲ್ಲಿ ಯಾವುದೇ ರೀತಿಯ ಏರಿಕೆಯು ಆಗದಿರುವುದನ್ನು ನೀವು ಕಾಣಬಹುದಾಗಿದೆ.

ಸತತ 30 ದಿನದಿಂದ ದೇಶದಲ್ಲಿನ ಹಲವು ನಗರಗಳಲ್ಲಿ ಪೆಟ್ರೋಲ್‍ನ ಬೆಲೆಯಲ್ಲಿ ಏರಿಕೆಯಾಗಲಿಲ್ಲ. (ಇದು ಅಕ್ಟೋಬರ್ 10 ರಿಂದ ನವೆಂಬರ್ 10ರ ವರೆಗು ಆಗಿದ್ದು, 10ನೇ ತಾರೀಕಿನಿಂದ ಬೆಲೆಯಲ್ಲಿ ಯಾವುದೇ ವ್ಯತ್ಯಾಸಗಳಾಗಲಿಲ್ಲ) ಅಂದ್ರೆ ಇದಕ್ಕೆ ಅಸಲಿ ಕಾರಣ ಏನು?

ಅಕ್ಟೋಬರ್ 10ರಂದು ಬರೋಬ್ಬರಿ ರೂ.86ಕ್ಕು ಹೆಚ್ಚಿನ ಬೆಲೆಯಲ್ಲಿ ಪೆಟ್ರೋಲ್ ಮಾರಾಟವಾಗಿದ್ದಲ್ಲದೆ ಇದೀಗ ನವೆಂಬರ್ 12ರಂದು ರೂ. 78.18 ಕ್ಕೆ ಇಳಿದಿದೆ. ಅಂದ್ರೆ ಪೆಟೋಲ್‍ನ ಬೆಲೆಯಲ್ಲಿ ರೂ.7.82 ಕಡಿಮೆ ಆಗಿದೆ.

ಅದೇ ರೀತಿಯಾಗಿ ಅಕ್ಟೋಬರ್ 10ರಂದು ಡೀಸೆಲ್ ಪ್ರತಿ ಲೀಟರ್‍ಗೆ ರೂ.76.08ಗೆ ಮಾರಾಟವಾಗಿದ್ದು, ನವೆಂಬರ್ 12ರಂದು ಪ್ರತಿ ಲೀಟರ್ ಡೀಸೆಲ್‍ಗೆ ರೂ. 72.70ಕ್ಕೆ ಮಾರಾಟವಾಗುತ್ತಿದೆ. ಅಂದರೆ ಇಲ್ಲಿಯ ವರೆಗು ಕೇವಲ ರೂ.3.38 ಮಾತ್ರ ಕಡಿಮೆಯಾಗಿದೆ.

ಬೆಲೆ ರಾಜಕೀಯ ಶುರುವಾಯ್ತು?
ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸುವ ಒಂದೇ ಉದ್ದೇಶದಿಂದ ಕೇಂದ್ರ ಸರ್ಕಾರವು ಇಂತಹ ಮಹತ್ವದ ನಿರ್ಧಾರ ಕೈಗೊಂಡಿರುವುದಾಗಿ ಹಲವರು ಟೀಕೆ ಮಾಡುತ್ತಿದ್ದು, ಇದು ಕೇವಲ ಇಂಧನ ಬೆಲೆಗಳಲ್ಲಿ ಅಷ್ಟೇ ಅಲ್ಲಾ ಎಲ್ಲಾ ಕ್ಷೇತ್ರಗಳಲ್ಲು ಬದಲಾವಣೆಯಾಗಲಿವೆ ಎನ್ನುತ್ತಿದ್ದಾರೆ.

ಇನ್ನು 2019ರಲ್ಲಿ ತೆಲಂಗಾಣ, ಮಧ್ಯಪ್ರದೇಶ, ರಾಜಸ್ತಾನ, ಛತ್ತೀಸ್‍ಘಡ್ ಮತ್ತು ಸಿಕ್ಕಿಂ ರಾಜ್ಯಗಳಲ್ಲಿ ನಡೆಯುವ ವಿಧಾನಸಭೆ ಎಲೆಕ್ಷನ್‍ನಲ್ಲಿ ಬಿಜೆಪಿ ಸರ್ಕಾರವು ತಮ್ಮ ಸ್ಥಾವನವನ್ನು ಪಡೆಯಲು ಕೇಂದ್ರ ಸರ್ಕಾರವು ಇಂಧನ ಬೆಲೆಗಳನ್ನು ಕಡಿಮೆ ಮಾಡುತ್ತಿದೆ ಎನ್ನುವುದು ಸದ್ಯದ ಹಲವರ ಆರೋಪ.

ಇನ್ನು 2018 ಮೇ ತಿಂಗಳಿನಲ್ಲಿ ಸಹ ಕರ್ನಾಟಕದಲ್ಲಿ ನಡೆದ ಎಲೆಕ್ಷನ್ ಸಮಯದಲ್ಲೂ ಸಹ ಕೆಂದ್ರ ಸರ್ಕಾರವು ಕರ್ನಾಟಕದಲ್ಲಿ ತಮ್ಮ ಸ್ಥಾನವನ್ನು ಗಿಟ್ಟಿಸಿಕೊಳ್ಳಲು ಇಂಧನ ಬೆಲೆ ಕಡಿಮೆ ಮಾಡಲಾಗಿತ್ತು. ಆದ್ರೆ ಮೈತ್ರಿ ಸರ್ಕಾರವು ಆಡಳಿತಕ್ಕೆ ಬಂದ ಮೇಲೆ ಕೆಂದ್ರವು ಸರ್ಕಾರವು ಇಂಧನದ ಬೆಲೆಯನ್ನು ಏರಿಕೆ ಮಾಡಲಾಗಿತ್ತು.

ಹಾಗಾದ್ರೆ 2019ರಲ್ಲಿ ಲೋಕಸಭಾ ಎಲೆಕ್ಷನ್ ಆಗುವ ವರೆಗು ಇಂಧನ ಬೆಲೆಯು ಮತ್ತೆ ಏರಿಕೆ ಆಗುವುದಿಲ್ಲವೇ ಅಥವಾ ಎಲೆಕ್ಷನ್‍ನ ಬಳಿಕ ಮತ್ತೆ ಇಂಧನದ ಬೆಲೆ ಏರಿಕೆ ಆಗುತ್ತದೆಯೆ.? ಎನ್ನುವ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿದೆ.

ಇದರ ಮಧ್ಯೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಜಿಎಸ್‍ಟಿ ವ್ಯಾಪ್ತಿಯಲ್ಲಿ ತರುವ ಬಗ್ಗೆ ಮಹತ್ವದ ನಿರ್ಣಯ ಕೈಗೊಳ್ಳುತ್ತಿದ್ದು, ಇಂಧನ ಬೆಲೆ ರೂ. 20 ರಿಂದ ರೂ. 30ಕ್ಕೆ ಇಳಿಕೆಯಾಗುವ ಸಾಧ್ಯತೆಗಳಿವೆ. ಇದರಿಂದ ರಾಷ್ಟ್ರದಲ್ಲಿರುವ ಮಧ್ಯಮ ವರ್ಗದ ಜನರಿಗೆ ಮತ್ತು ಜನಸಾಮಾನ್ಯರಿಗೆ ಬಹಳ ಸೌಕರ್ಯವಾಗುತ್ತದೆ ಎಂದು ಮಾಹಾರಾಷ್ಟ್ರ ರಾಜ್ಯ ಸಭೆಯ ಸದಸ್ಯ ರಾಮ್‍ದಾಸ್ ಹೇಳಿಕೊಂಡಿದ್ದಾರೆ.

ಇಷ್ಟೇ ಅಲ್ಲದೆ ಇಂಧನ ಬೆಲೆಗಳನ್ನು ಕಡಿಮೆ ಮಾಡಲು ಕೆಂದ್ರ ಸರ್ಕಾರದ ಕೈವಾಡ ಹೇಗಿರುತ್ತದೆಯೋ ಹಾಗೆಯೆ ರಾಜ್ಯ ಸರ್ಕಾರವು ಇಂಧನ ಬೆಲೆಯಲ್ಲಿ ಅಳವಡಿಸಲಾಗಿರುವ ತೆರಿಗೆಯನ್ನು ಕಡಿಮೆ ಮಾಡಿದಲ್ಲಿ ಜನಸಾಮಾನ್ಯರಿಗೆ ಅನುಕೂಲವಾಗುತ್ತದೆ ಎಂದು ಅವರು ಹೇಳಿದ್ದಾರೆ.

ಹಲವಾರು ಪ್ರಯತ್ನಗಳ ನಂತರ ಕೆಲ ದಿನಗಳಿಂದ ಪೆಟ್ರೋಲ್ ಹಾಗು ಡೀಸೆಲ್‍ನ ಬೆಲೆಯು ಕಡಿಮೆ ಆಗಿದ್ದು, ಪೆಟ್ರೋಲ್ ಮತ್ತು ಡೀಸೆಲ್‍ನ ಮಾರಾಟದಲ್ಲಿ ಕೇಂದ್ರ ಸರ್ಕಾರವು ಜಿಎಸ್‍ಟಿಯನ್ನು ಅಳವಡಿಸಿದ್ದೇ ಆದಲ್ಲಿ ಇನ್ನೂ ಅನುಕೂಲಕರ ಆಗಲಿದೆ ಎನ್ನಬಹುದು.


Click it and Unblock the Notifications








