ಮತ್ತೆ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಹೆಚ್ಚಳ- ಕಂಗಾಲಾದ ವಾಹನ ಸವಾರರು..!!

ಪೆಟ್ರೋಲ್ ಬೆಲೆಯಲ್ಲಿ ದಾಖಲೆ ಪ್ರಮಾಣ ಏರಿಕೆಯಾಗಿದ್ದು, ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಪೆಟ್ರೋಲ್ ಬೆಲೆ ಎಷ್ಟು ಎನ್ನುವ ಮಾಹಿತಿ ಇಲ್ಲಿದೆ ನೋಡಿ..

By Praveen Sannamani

ಮೇ 14ರ ನಂತರ ತೈಲ ಕಂಪೆನಿಗಳು ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ದಿನಂಪ್ರತಿ ಪ್ರತಿ ಲೀಟರ್‌ಗೆ ಕನಿಷ್ಠ 25 ರಿಂದ 35 ಪೈಸೆ ಹೆಚ್ಚಳ ಮಾಡುತ್ತಲೇ ಇದ್ದು, ಇದು ವಾಹನ ಸವಾರರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಇಂದು ಕೂಡಾ ಪೆಟ್ರೋಲ್ ಬೆಲೆಯಲ್ಲಿ ದಾಖಲೆ ಪ್ರಮಾಣ ಏರಿಕೆಯಾಗಿದ್ದು, ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಪೆಟ್ರೋಲ್ ಬೆಲೆ ಎಷ್ಟು ಎನ್ನುವ ಮಾಹಿತಿ ಇಲ್ಲಿದೆ ನೋಡಿ...

ಮತ್ತೆ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಹೆಚ್ಚಳ- ಕಂಗಾಲಾದ ವಾಹನ ಸವಾರರು..!!

ಬೆಂಗಳೂರಿನಲ್ಲಿ ಇಂದಿನ ಪೆಟ್ರೋಲ್‌ ದರದಲ್ಲಿ ಪ್ರತಿ ಲೀಟರ್‌ಗೆ 33 ಪೈಸೆ ಹಾಗೂ ಡೀಸೆಲ್‌ ದರದಲ್ಲಿ ಲೀಟರ್‌ಗೆ 25 ಪೈಸೆ ಏರಿಕೆಯಾಗಿದ್ದು, ಕ್ರಮವಾಗಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ ರೂ. 77.81 ಪೈಸೆ ಹಾಗೂ ಡೀಸೆಲ್ ಬೆಲೆ ರೂ.68.98 ಪೈಸೆ ಬೆಲೆ ನಿಗದಿ ಮಾಡಲಾಗಿದೆ.

ಮತ್ತೆ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಹೆಚ್ಚಳ- ಕಂಗಾಲಾದ ವಾಹನ ಸವಾರರು..!!

ಇದು ನಿನ್ನೆಗಿಂತ ಇಂದಿನ ದರದಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 33 ಪೈಸೆ ಮತ್ತು ಡಿಸೇಲ್ ಬೆಲೆಯಲ್ಲಿ 25 ಪೈಸೆ ಏರಿಕೆಯಾಗಿದ್ದು, ಕಳೆದ 8 ದಿನಗಳ ಅವಧಿಯಲ್ಲಿ ಪೆಟ್ರೋಲ್ ಬೆಲೆಯು ಪ್ರತಿ ಲೀಟರ್ ರೂ. 1.99 ಪೈಸೆ ಮತ್ತು ಡಿಸೇಲ್ ಬೆಲೆಯು ಪ್ರತಿ ಲೀಟರ್‌ಗೆ ರೂ. 1.93 ಪೈಸೆ ಏರಿಕೆಯಾಗಿದೆ.

ಮತ್ತೆ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಹೆಚ್ಚಳ- ಕಂಗಾಲಾದ ವಾಹನ ಸವಾರರು..!!

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಏರಿಕೆಯಾಗಿರುವುದರಿಂದ, ಅದರ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸಲು ಸಾರ್ವಜನಿಕ ತೈಲ ಕಂಪನಿಗಳು ಆರಂಭಿಸಿರುವುದೇ ಬೆಲೆ ಏರಿಕೆಗೆ ಪ್ರಮುಖ ಕಾರಣ ಎನ್ನಲಾಗಿದೆ.

ಮತ್ತೆ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಹೆಚ್ಚಳ- ಕಂಗಾಲಾದ ವಾಹನ ಸವಾರರು..!!

ಅದೇ ರೀತಿಯಾಗಿ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್‌ ದರ ಲೀಟರ್‌ಗೆ ರೂ. 76.57 ಪೈಸೆ ಹಾಗೂ ಡೀಸೆಲ್‌ ದರ ರೂ. 67.82 ಪೈಸೆಗಳಿಗೆ ಪರಿಷ್ಕೃತವಾಗಿದೆ. ಇದರೊಂದಿಗೆ ಡೀಸೆಲ್‌ ದರ ದಾಖಲೆಯ ಗರಿಷ್ಠ ಮಟ್ಟ ಹಾಗೂ ಪೆಟ್ರೋಲ್‌ 56 ತಿಂಗಳಿನಲ್ಲಿಯೇ ಗರಿಷ್ಠ ದರ ದಾಖಲಿಸಿದೆ. ಕರ್ನಾಟಕ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಕಳೆದ ಮೂರು ವಾರಗಳಿಂದ ತೈಲ ದರ ಏರಿಕೆ ತಡೆ ಹಿಡಿಯಲಾಗಿತ್ತು.

ಮತ್ತೆ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಹೆಚ್ಚಳ- ಕಂಗಾಲಾದ ವಾಹನ ಸವಾರರು..!!

ಆದ್ರೆ ಇದೀಗ ಇಂಧನ ಬೆಲೆಗಳು ದಿನಂಪ್ರತಿ 25 ರಿಂದ 35 ಪೈಸೆ ಸರಾಸರಿಯಂತೆ ತೈಲ ಬೆಲೆ ಏರಿಕೆಯಾಗುತ್ತಲೇ ಇದ್ದು, ಇದು ವಾಹನ ಸವಾರರನ್ನು ಚಿಂತೆಗಿಡಾಗುವಂತೆ ಮಾಡಿರುವುದು ಮಾತ್ರ ಸುಳ್ಳಲ್ಲ. ಅದರಲ್ಲೂ ಮುಂಬೈನಲ್ಲಿ ಏರಿಕೆಯಾಗುತ್ತಿರುವ ತೈಲ ಬೆಲೆ ಪ್ರಮಾಣ ಸಾರ್ವಕಾಲಿಕ ದಾಖಲೆ ಸೃಷ್ಠಿಸಿದೆ.

ಮತ್ತೆ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಹೆಚ್ಚಳ- ಕಂಗಾಲಾದ ವಾಹನ ಸವಾರರು..!!

ಮುಂಬೈನಲ್ಲಿ ಇಂದಿನ ಪೆಟ್ರೋಲ್ ಬೆಲೆಯು ಪ್ರತಿ ಲೀಟರ್‌ಗೆ ರೂ. 84.40 ಪೈಸೆ ಮತ್ತು ಡೀಸೆಲ್ ಬೆಲೆಯು ಪ್ರತಿ ಲೀಟರ್‌ಗೆ ರೂ. 72.21 ಪೈಸೆ ಏರಿಕೆಯಾಗಿದ್ದು, ಇದು ಕಳೆದ 8 ದಿನಗಳ ಹಿಂದಷ್ಟೇ ಪ್ರತಿ ಲೀಟರ್ ಪೆಟ್ರೋಲ್‌ಗೆ 82.48 ಪೈಸೆ ಮತ್ತು ಪ್ರತಿ ಲೀಟರ್ ಡೀಸೆಲ್‌‌ಗೆ ರೂ.70.43 ಪೈಸೆ ಇತ್ತು.

ಮತ್ತೆ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಹೆಚ್ಚಳ- ಕಂಗಾಲಾದ ವಾಹನ ಸವಾರರು..!!

ಕೇವಲ ಎಂಟು ದಿನಗಳ ಅಂತರದಲ್ಲಿ ಪೆಟ್ರೋಲ್ ಬೆಲೆಯು ಪ್ರತಿ ಲೀಟರ್‌ಗೆ ರೂ. 1.92 ಪೈಸೆ ಮತ್ತು ಡೀಸೆಲ್ ಪ್ರತಿ ಲೀಟರ್‌ಗೆ ರೂ. 2.01 ಪೈಸೆ ಏರಿಕೆ ಕಾಣುವ ಮೂಲಕ ಬೆಲೆ ಏರಿಕೆಯಲ್ಲಿ ದಾಖಲೆ ನಿರ್ಮಿಸಿದೆ.

ಮತ್ತೆ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಹೆಚ್ಚಳ- ಕಂಗಾಲಾದ ವಾಹನ ಸವಾರರು..!!

ಇನ್ನು ಹೈದ್ರಾಬಾದ್‌ನಲ್ಲೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ದಾಖಲೆಯ ಏರಿಕೆ ಕಂಡಿದ್ದು, ಪ್ರತಿ ಲೀಟರ್ ಪೆಟ್ರೋಲ್‌ಗೆ ರೂ. 81.11 ಪೈಸೆ ಮತ್ತು ಡೀಸೆಲ್ ರೂ.73.72 ಪೈಸೆ ದರ ಹೊಂದಿರುವುದು ದೇಶದಲ್ಲೇ ಗರಿಷ್ಠ ಮಟ್ಟವಾಗಿದೆ.

ಮತ್ತೆ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಹೆಚ್ಚಳ- ಕಂಗಾಲಾದ ವಾಹನ ಸವಾರರು..!!

ದರ ಹೆಚ್ಚಳಕ್ಕೆ ಬಾಹ್ಯ ಕಾರಣ

ನವೆಂಬರ್ 2014ರ ಬಳಿಕ ಇದೇ ಮೊದಲ ಬಾರಿಗೆ ಜಾಗತಿಕ ಇಂಧನ ದರ ಒಂದು ಬ್ಯಾರೆಲ್‌ಗೆ 80 ಡಾಲರ್‌ಗೆ ಹೆಚ್ಚಾಗಿದೆ. ಈ ಹಿನ್ನೆಲೆ, ಬೆಲೆ ಹೆಚ್ಚಳವನ್ನು ಕೇಂದ್ರ ಸರಕಾರ ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ತಿಳಿದುಬಂದಿದೆ. ಆದರೆ, ಅಬಕಾರಿ ಸುಂಕ ಇಳಿಕೆ ಬಗ್ಗೆ ಪ್ರಶ್ನೆ ಮಾಡಿದಾಗ, ಇದು ಇನ್ನು ಕೆಲವು ದಿನಗಳ ಕಾಲ ಹೀಗೆ ಮುಂದುವರಿಯುವ ಸಾಧ್ಯತಗಳಿವೆ ಎಂದಿದ್ದಾರೆ.

ಮತ್ತೆ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಹೆಚ್ಚಳ- ಕಂಗಾಲಾದ ವಾಹನ ಸವಾರರು..!!

ಒಟ್ಟಿನಲ್ಲಿ ಇಂಧನ ಬೆಲೆಗಳು ಏರಿಕೆಯಾಗುತ್ತಿರುವುದು ವಾಹನ ಸವಾರರಿಗೆ ಮಾತ್ರವಲ್ಲದೇ ದಿನಬಳಕೆಯ ವಸ್ತುಗಳ ಬೆಲೆ ಮೇಲೂ ಪರಿಣಾಮ ಬೀರುತ್ತಿದ್ದು, ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕುರಿತಾದ ಸಂಪೂರ್ಣ ಮಾಹಿತಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ..

ಇಂದಿನ ಪೆಟ್ರೋಲ್ ಬೆಲೆಗಳು

ಇಂದಿನ ಡೀಸೆಲ್ ಬೆಲೆಗಳು

More from DriveSpark

Article Published On: Monday, May 21, 2018, 15:44 [IST]
English summary
Petrol And Diesel Prices Hit Record High — Petrol Price In Mumbai Stands At Rs 84.40 Per Litre.
Read more on auto news petrol diesel
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+