ಪೆಟ್ರೋಲ್‍ನ ಬೆಲೆ ರೂ.99.99 ದಾಟುವುದೇ ಇಲ್ಲ. ಏಕೆ ಗೊತ್ತಾ.?

ದೇಶದೆಲ್ಲೆಡೆ ಹೆಚ್ಚಳವಾಗುತ್ತಿರುವ ಪೆಟ್ರೋಲ್ ಹಾಗು ಡೀಸೆಲ್ ಬೆಲೆಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಪ್ರಸ್ತುತ ಮುಂಬೈನಲ್ಲಿ ಪೆಟ್ರೋಲ್‍ನ ಬೆಲೆಯು ಲೀಟರ್‌ಗೆ ಗರಿಷ್ಠ ರೂ. 89.29 ಮತ್ತು ರಾಜಧಾನಿ ನವದೆಹಲಿಯಲ್ಲಿ ಲೀಟರ್‍‍ಗೆ ಕನಿಷ್ಠ ರೂ. 82.06 ಇದೆ. ಹಾಗೆಯೇ ಡೀಸೆಲ್ ಬೆಲೆಯು ಕೂಡಾ ಹೆಚ್ಚಳವಾಗುತ್ತಿದ್ದು, ಪೆಟ್ರೋಲ್ ಬೆಲೆಗಳ ಕುರಿತು ನಾವಿಂದು ಮಹತ್ವದ ವಿಚಾರವನ್ನು ತಿಳಿಸಲಿದ್ದೇವೆ.

ಪೆಟ್ರೋಲ್‍ನ ಬೆಲೆ ರೂ.99.99 ದಾಟುವುದೇ ಇಲ್ಲ. ಏಕೆ ಗೊತ್ತಾ.?

ಕೆಲದಿನಗಳಿಂದ ಇಂಧನ ಬೆಲೆಗಳಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಗಮನಿಸಿದರೆ ಭವಿಷ್ಯದ ದಿನಗಳಲ್ಲಿ ಇಂಧನದ ಬೆಲೆಯು ರೂ.100 ದಾಟಿದರೂ ಆಶ್ಚರ್ಯವಿಲ್ಲ. ಆದರೆ ಇಂಧನ ವಿತರಣಾ ಯಂತ್ರಗಳು ರೂ 99.99 ವರೆಗೆ ಮಾತ್ರ ಪ್ರದರ್ಶಿಸಲು ಶಕ್ತವಾಗಿ ಅಂದ್ರೆ ನೀವು ನಂಬಲೇಬೇಕು.

ಪೆಟ್ರೋಲ್‍ನ ಬೆಲೆ ರೂ.99.99 ದಾಟುವುದೇ ಇಲ್ಲ. ಏಕೆ ಗೊತ್ತಾ.?

ಪೆಟ್ರೋಲ್ ಬೆಲೆಯು 100 ರೂಪಾಯಿಗೆ ತಲುಪಿದರೆ, ಯಂತ್ರಗಳು ಬೆಲೆಯನ್ನು ಪ್ರದರ್ಶಿಸಲು ಸಾಧ್ಯವಾಗುವುದಿಲ್ಲ ಈ ನಿಟ್ಟಿನಲ್ಲಿ ಪೆಟ್ರೋಲ್ ಬಂಕ್ ಹಸ್ತಚಾಲಿತವಾಗಿ ವೆಚ್ಚವನ್ನು ಲೆಕ್ಕಾಚಾರ ಮಾಡುವ ಕೆಲಸವನ್ನು ಮಾಡಬೇಕಾಗುತ್ತದೆ.

ಪೆಟ್ರೋಲ್‍ನ ಬೆಲೆ ರೂ.99.99 ದಾಟುವುದೇ ಇಲ್ಲ. ಏಕೆ ಗೊತ್ತಾ.?

ಹಾಗಿದ್ದರೂ ಪೆಟ್ರೋಲ್ ಬೆಲೆಗಳು 100.ರೂ ದಾಟಿದರೆ, ಬಂಕ್‍‍ಗಳಲ್ಲಿನ ಯಂತ್ರಗಳನ್ನು ಬದಲಾಯಿಸಲೇ ಬೇಕಾಗಿದ್ದು, ಇದು ಅಷ್ಟು ಸುಲಭದ ಕೆಲಸವಲ್ಲ ಎಂದೇ ಹೇಳಬಹುದು. ಆದ್ದರಿಂದ, ಪೆಟ್ರೋಲ್ ಬೆಲೆಯು 100ರೂಕ್ಕಿಂತ ಹೆಚ್ಚು ದಾಟುವ ಅವಕಾಶಗಳು ತುಂಬಾನೆ ಕಡಿಮೆ.

ಪೆಟ್ರೋಲ್‍ನ ಬೆಲೆ ರೂ.99.99 ದಾಟುವುದೇ ಇಲ್ಲ. ಏಕೆ ಗೊತ್ತಾ.?

ಪ್ರಸ್ತುತ, ಹೈ ಆಕ್ಟೇನ್ ಪೆಟ್ರೋಲ್ ಬೆಲೆಯು ಪ್ರತಿ ಲೀಟರ್‌ಗೆ ರೂ. 100.33 ಇದ್ದು, ಪೆಟ್ರೋಲ್ ಬಂಕ್‍‍ನಲ್ಲಿನ ಯಂತ್ರಗಳು ಕೇವಲ 0.33 ಪೈಸೆ ತೋರಿಸುತ್ತಿದೆ. ಆದ್ದರಿಂದ, ಪೆಟ್ರೋಲ್ ಬಂಕ್‍‍ನಲ್ಲಿನ ಸಿಬ್ಬಂದಿಯು ಆಕ್ಟೇನ್ ಪೆಟ್ರೋಲ್ ಬೆಲೆಗಳನ್ನು ಲೆಕ್ಕಾಚಾರ ಹಾಕಲು ಹರಸಾಹಸ ಪಡುತ್ತಿದ್ದಾರೆ.

ಪೆಟ್ರೋಲ್‍ನ ಬೆಲೆ ರೂ.99.99 ದಾಟುವುದೇ ಇಲ್ಲ. ಏಕೆ ಗೊತ್ತಾ.?

ಹಿಂದುಸ್ತಾನ್ ಪೆಟ್ರೋಲ್‍ನಿಂದ ವಿಕ್ರಯವಾಗುತ್ತಿರುವ 99 ಆಕ್ಟೇನ್ ಪೆಟ್ರೋಲ್ ಸಾಧಾರಣ ಪೆಟ್ರೋಲ್ ಬೆಲೆಗಿಂತಾ 20ರೂ ಹೆಚ್ಚಿನ ಬೆಲೆಯನ್ನು ಪಡೆದುಕೊಂಡಿರುತ್ತದೆ. ಪೆಟ್ರೋಲ್ ಬೆಲೆಯ ಹೆಚ್ಚಳದಿಂದ ಕೆಲ ಪೆಟ್ರೋಲ್ ಬಂಕ್‍‍ಗಳು ಹೈ ಆಕ್ಟೇನ್ ಪೆಟ್ರೋಲ್‍ನ ಮಾರಾಟವನ್ನು ಸ್ಥಗಿತಗೊಳಿಸಿದ್ದಾರೆ.

ಪೆಟ್ರೋಲ್‍ನ ಬೆಲೆ ರೂ.99.99 ದಾಟುವುದೇ ಇಲ್ಲ. ಏಕೆ ಗೊತ್ತಾ.?

ಹಾಗಾಗಿ ಪೆಟ್ರೋಲ್ ಬಂಕ್‍ನಲ್ಲಿನ ಯಂತ್ರಗಳು ಲೀಟರ್‍‍ಗೆ 99.99 ರೂ.ಗಿಂತಾ ಹೆಚ್ಚು ಬೆಲೆಯನ್ನು ತೋರಿಸುವಂತೆ ಅವು ಸಜ್ಜುಗೊಂಡಿಲ್ಲ. ಹೀಗಾಗಿ ಶೀಘ್ರವಾಗಿ ಹೆಚ್ಚುತ್ತಿರುವ ಇಂಧನ ಬೆಲೆ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ರೂ 99.99 ಆದ್ರು ಕೂಡಾ ಅಚ್ಚರಿಯಿಲ್ಲ.

MOST READ: ವಾಹನ ಸವಾರರಿಗೆ ಸಿಹಿಸುದ್ದಿ- ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಮಾಡಿದ ರಾಜ್ಯ ಸರ್ಕಾರ..!

ಪೆಟ್ರೋಲ್‍ನ ಬೆಲೆ ರೂ.99.99 ದಾಟುವುದೇ ಇಲ್ಲ. ಏಕೆ ಗೊತ್ತಾ.?

ಇಂಧನದ ಬೆಲೆಗಳು ರೂ 100ಕ್ಕಿಂತ ಹೆಚ್ಚು ಆಗಿದ್ದೇ ಆದಲ್ಲಿ, ಸಾರ್ವಜನಿಕರಿಗಿಂತಾ ಹೆಚ್ಚು ತೊಂದರೆಯಾಗುವುದು ಪೆಟ್ರೋಲ್ ಬಂಕ್‍‍ನಲ್ಲಿನ ಮಾಲೀಕರಿಗೆ ಎಂದೇ ಹೇಳಬಹುದು. ಏಕೆಂದರೆ ಅವರಲ್ಲಿ ಬಳಸಲಾದ ಯಂತ್ರಗಳು ಮೂರು ಅಂಕಿಯನ್ನು ತೋರಿಸುವ ಹಾಗೆ ತಯಾರು ಮಾಡಿಲ್ಲ.

ಪೆಟ್ರೋಲ್‍ನ ಬೆಲೆ ರೂ.99.99 ದಾಟುವುದೇ ಇಲ್ಲ. ಏಕೆ ಗೊತ್ತಾ.?

ಹೈ ಆಕ್ಟೇನ್ ಇಂಧನದ ಉಪಯೋಗ ಏನು..?

ಪ್ರಿಮಿಯಂ ಪೆಟ್ರೋಲ್ ಮಾದರಿಯನ್ನ ಸದ್ಯ ಭಾರತದಲ್ಲಿ ಆಕ್ಟೇನ್ ರೇಟಿಂಗ್ ಆಧಾರದ ಮೇಲೆ ಮಾರಾಟ ಮಾಡಲಾಗುತ್ತಿದ್ದು, ಆಕ್ಟೇನ್-87, ಆಕ್ಟೇನ್-91, ಆಕ್ಟೇನ್-97 ಮತ್ತು ಆಕ್ಟೇನ್-99 ಎಂಬ ಮಾದರಿಯಲ್ಲಿ ಪ್ರಿಮಿಯಂ ಪೆಟ್ರೋಲ್ ಮಾದರಿಯನ್ನ ಮಾರಾಟ ಮಾಡಲಾಗುತ್ತಿದೆ.

ಪೆಟ್ರೋಲ್‍ನ ಬೆಲೆ ರೂ.99.99 ದಾಟುವುದೇ ಇಲ್ಲ. ಏಕೆ ಗೊತ್ತಾ.?

ಇದರಲ್ಲಿ ಆಕ್ಟೇನ್-99 ರೇಟಿಂಗ್ ಹೊಂದಿರುವ ಪೆಟ್ರೋಲ್ ಮಾದರಿಯ ಹೆಚ್ಚಿನ ದರ ಹೊಂದಿದ್ದು, ಇದು ಪ್ರತಿ ಲೀಟರ್‌ಗೆ ರೂ. 100 ಬೆಲೆ ಪಡೆದಿದೆ. ಹಾಗೆಯೇ ಇನ್ನುಳಿದ ಆಕ್ಟೇನ್ ರೇಟಿಂಗ್‌ನಲ್ಲಿ ಹೊಂದಿರುವ ಪೆಟ್ರೋಲ್ ಮಾದರಿಗಳು ಗುಣಮಟ್ಟಕ್ಕೆ ತಕ್ಕಂತೆ ವಿವಿಧ ಬೆಲೆ ಹೊಂದಿವೆ.

MOST READ: ಬೈಕ್ ಮೂಲಕವೇ ಬೆಂಗಳೂರು ಟು ಸಿಡ್ನಿಗೆ ಹೊರಟಿರುವ ಹುಬ್ಬಳ್ಳಿ ಹುಡುಗಿಯ ಕನಸು ಏನು?

ಪೆಟ್ರೋಲ್‍ನ ಬೆಲೆ ರೂ.99.99 ದಾಟುವುದೇ ಇಲ್ಲ. ಏಕೆ ಗೊತ್ತಾ.?

ಸೂಪರ್ ಕಾರುಗಳು, ಸೂಪರ್ ಬೈಕ್‌ಗಳ ಎಂಜಿನ್ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಸಲುವಾಗಿ ಇಷ್ಟು ದಿನಗಳ ಕಾಲ ವಿದೇಶಿ ಮಾರುಕಟ್ಟೆಗಳಲ್ಲಿ ಮಾತ್ರ ಮಾರಾಟಗೊಳ್ಳುತ್ತಿದ್ದ ಹೈ ಆಕ್ಟೇನ್( 99-ಆಕ್ಟೇನ್) ಪೆಟ್ರೋಲ್ ಮಾದರಿಯನ್ನು ಇದೀಗ ದೇಶಿಯ ಮಾರುಕಟ್ಟೆಗೂ ಪರಿಚಯಿಸಲಾಗಿದ್ದು, ಇಂಧನ ದಕ್ಷತೆ ಹೆಚ್ಚಿಸುವ ಹೈ ಆಕ್ಟೇನ್-99 ಪೆಟ್ರೋಲ್ ಮಾದರಿಯು ನಿಮ್ಮ ಕಾರಿನ ಆರೋಗ್ಯದಲ್ಲಿ ವ್ಯತ್ಯಾಸವಾಗದಂತೆ ನೋಡಿಕೊಳ್ಳುತ್ತದೆ.

ಪೆಟ್ರೋಲ್‍ನ ಬೆಲೆ ರೂ.99.99 ದಾಟುವುದೇ ಇಲ್ಲ. ಏಕೆ ಗೊತ್ತಾ.?

ಹಿಂದೂಸ್ತಾನ್ ಪೆಟ್ರೋಲಿಯಂ ಸಂಸ್ಥೆಯು ಮುಂಬೈನ ಪ್ರಮುಖ ಕಡೆಗಳಲ್ಲಿ ಹೈ-ಆಕ್ಟೇನ್ ಪೆಟ್ರೋಲ್ ಮಾದರಿಯ ಚಿಲ್ಲರೆ ವ್ಯಾಪರಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಗಿದ್ದು, ಸಾಮಾನ್ಯ ಮಾದರಿಯ ಪೆಟ್ರೋಲ್‌ಗಿಂತ ಹೆಚ್ಚಿನ ಗುಣಮಟ್ಟ ಹೊಂದಿರುವ ಈ ಪೆಟ್ರೋಲ್ ಮಾದರಿಯ ಕಾರಿನ ಎಂಜಿನ್ ಕಾರ್ಯಕ್ಷಮತೆಗೆ ಸಹಕಾರಿಯಾಗಲಿದೆ ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ.

ಪೆಟ್ರೋಲ್‍ನ ಬೆಲೆ ರೂ.99.99 ದಾಟುವುದೇ ಇಲ್ಲ. ಏಕೆ ಗೊತ್ತಾ.?

ಹೈ-ಆಕ್ಟೇನ್ ಪೆಟ್ರೋಲ್ ಮಾದರಿಯು ಆಟೋ ಮೊಬೈಲ್ ಉದ್ಯಮದಲ್ಲಿ 'ಪವರ್ 99' ಎಂದೇ ಜನಪ್ರಿಯವಾಗಿದ್ದು, ಬೆಂಗಳೂರು ಮತ್ತು ಪುಣೆಯಲ್ಲಿ ಈಗಾಗಲೇ ಹೈ-ಆಕ್ಟೇನ್ ಪೆಟ್ರೋಲ್ ಮಾದರಿಯು ಆಯ್ದ ಹಿಂದೂಸ್ತಾನ್ ಪೆಟ್ರೋಲ್ ಬಂಕ್‌ಗಳಲ್ಲಿ ಖರೀದಿಗೆ ಲಭ್ಯವಿದೆ.

ಪೆಟ್ರೋಲ್‍ನ ಬೆಲೆ ರೂ.99.99 ದಾಟುವುದೇ ಇಲ್ಲ. ಏಕೆ ಗೊತ್ತಾ.?

ಇದಕ್ಕೆ ಕಾರಣ ಹೈ-ಆಕ್ಟೇನ್ ಫ್ಯೂಲ್ ಮಾದರಿಯು ದುಬಾರಿ ಬೆಲೆಯ ಕಾರುಗಳ ಮತ್ತು ದುಬಾರಿ ಬೆಲೆಯ ಬೈಕ್‌ಗಳ ಎಂಜಿನ್ ಕಾರ್ಯಕ್ಷಮತೆಯನ್ನು ಕಾಯ್ದುಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸಲಿದ್ದು, ಎಂಜಿನ್ ಆಯಸ್ಸು ಹೆಚ್ಚಿಸಲು ಇದು ಸಹಕರಿಸಲಿದೆ.

ಪೆಟ್ರೋಲ್‍ನ ಬೆಲೆ ರೂ.99.99 ದಾಟುವುದೇ ಇಲ್ಲ. ಏಕೆ ಗೊತ್ತಾ.?

ಹೈ-ಆಕ್ಟೇನ್ ಪೆಟ್ರೋಲ್ ಮಾದರಿಯನ್ನು ಬಳಕೆ ಮಾಡುತ್ತಾ ಬಂದಲ್ಲಿ ಎಂಜಿನ್ ಡ್ಯಾಮೇಜ್ ಸಮಸ್ಯೆಯಿಂದ ಮುಕ್ತಿ ಸಿಗಲಿದ್ದು, ವಾಹನಗಳಿಂದ ಇಂಗಾಲದ ಹೊರಸೂಸುವಿಕೆಯ ಪ್ರಮಾಣವು ಸಾಮಾನ್ಯ ಪೆಟ್ರೋಲ್‌ಗಿಂತ ಅಧಿಕ ಮಟ್ಟದಲ್ಲಿ ಇಳಿಕೆ ಇರುತ್ತೆ.

ಪೆಟ್ರೋಲ್‍ನ ಬೆಲೆ ರೂ.99.99 ದಾಟುವುದೇ ಇಲ್ಲ. ಏಕೆ ಗೊತ್ತಾ.?

ಇನ್ನು ದೇಶಾದ್ಯಂತ ದಿನದಿಂದ ದಿನಕ್ಕೆ ಸೂಪರ್ ಕಾರುಗಳು ಮತ್ತು ಸೂಪರ್ ಬೈಕ್‌ಗಳ ಸಂಖ್ಯೆ ಏರುತ್ತೆ ಇದ್ದು, ಕಾರು ಮಾಲೀಕರ ಒತ್ತಾಯದ ಮೆರೆಗೆ ಹೈ-ಆಕ್ಟೇನ್ ಫ್ಯೂಲ್ ಮಾದರಿಯ ಚಿಲ್ಲರೆ ಮಾರಾಟಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಗಿದೆ.

ಪೆಟ್ರೋಲ್‍ನ ಬೆಲೆ ರೂ.99.99 ದಾಟುವುದೇ ಇಲ್ಲ. ಏಕೆ ಗೊತ್ತಾ.?

ಸದ್ಯಕ್ಕೆ ಆಯ್ದ ಕಡೆಗಳಲ್ಲಿ ಮಾತ್ರವೇ ಪ್ರಿಮಿಯಂ ಪೆಟ್ರೋಲ್ ಮಾದರಿಯು ಮಾರಾಟಕ್ಕಿದ್ದು, ಹಿಂದೂಸ್ತಾನ್ ಪೆಟ್ರೋಲಿಯಂ, ಇಂಡಿಯನ್ ಆಯಿಲ್ ಕಾರ್ಪೊರೇಷನ್, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್, ಶೆಲ್ ಪೆಟ್ರೋಲ್ ಬಂಕ್‌ಗಳಲ್ಲಿ ನೀವು ಈ ಬಗ್ಗೆ ವಿಚಾರಿಸಬಹುದು.

ಪೆಟ್ರೋಲ್‍ನ ಬೆಲೆ ರೂ.99.99 ದಾಟುವುದೇ ಇಲ್ಲ. ಏಕೆ ಗೊತ್ತಾ.?

ಹೈ ಆಕ್ಟೇನ್ ಪೆಟ್ರೋಲ್ ಬಳಕೆ ಇಂದ ಮೈಲೇಜ್ ಜಾಸ್ತಿ ಆಗುತ್ತಾ.?

ಇನ್ನೊಂದು ಪ್ರಮುಖ ವಿಚಾರ ಅಂದ್ರೆ, ದುಬಾರಿ ಬೆಲೆಯಲ್ಲಿ ಮಾರಾಟವಾಗುತ್ತಿರುವ ಹೈ-ಆಕ್ಟೇನ್ ಪೆಟ್ರೋಲ್ ಮಾದರಿಯಿಂದ ಕಾರಿನ ಮೈಲೇಜ್ ಪ್ರಮಾಣದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಬದಲಾಗಿ ಕಾರಿನ ಎಂಜಿನ್ ಪರ್ಫಾಮೆನ್ಸ್ ಇತರೆ ಕಾರುಗಳಿಂತಲೂ ಉತ್ತಮವಾಗಿರುತ್ತೆ.

ಪೆಟ್ರೋಲ್‍ನ ಬೆಲೆ ರೂ.99.99 ದಾಟುವುದೇ ಇಲ್ಲ. ಏಕೆ ಗೊತ್ತಾ.?

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ದೇಶದೆಲ್ಲೆಡೆ ಪೆಟ್ರೋಲ್ ಹಾಗು ಡೀಸೆಲ್ ಬೆಲೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಡೀಸೆಲ್‍‍ನ ಬೆಲೆಯು ದೇಶದ ಪ್ರಮುಖ ನಗರಗಳಲ್ಲಿ ಅಧಿಕ ಬೆಲೆಯನ್ನು ಪಡೆದುಕೊಂಡಿದ್ದು, ಪೆಟ್ರೋಲ್‍‍ನ ಬೆಲೆಯು ಕೂಡಾ ಅಧಿಕವಾಗಿದ್ದು, ಸಾರ್ವಜನಿಕರು ಕಷ್ಟ ಪಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರವು ಮುಂದಿನ ದಿನಗಳಲ್ಲಿ ಇಂಧನದ ಬೆಲೆಯನ್ನು ತಪ್ಪದೇ ಕಡಿಮೆ ಮಾಡಲೇಬೇಕಾಗಿದೆ.

ದಿನದಿಂದ ದಿನಕ್ಕೆ ಏರಿಕೆಯಾಗಿತ್ತಿರುವ ಇಂಧನದ ಬೆಲೆಯ ತಲೆನೋವಿನಿಂದ ಹೊರಬರಲು ಒಂದೇ ಮಾರ್ಗವೆಂದರೇ ವಿದ್ಯುತ್ ವಾಹನಗಳನ್ನು ಬಳಸುವುದು. ಹಾಗಾಗಿ ಬೆಂಗಳೂರಿನ ಮೂಲದ ಅಥೆರ್ ಸಂಸ್ಥೆಯು ಬಿಡುಗಡೆಗೊಳಿಸಿದ ಹೊಸ ಎಲೆಕ್ಟ್ರಿಕ್ ಸ್ಕೂಟರ್‍‍ಗಳ ಚಿತ್ರಗಳು ಇಲ್ಲಿದೆ ನೋಡಿ...

Most Read Articles

Kannada
Read more on auto news petrol diesel
English summary
Petrol Price Cannot Go Over Rs 99.99 Per Litre.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more