ಭಾರತೀಯ ಮಾರುಕಟ್ಟೆಗೆ ಎಂಟ್ರಿ ನೀಡಲಿದೆ ಪಿಎಸ್‌ಎ ಗ್ರೂಪ್‌ನ ಮೊದಲ ಎಸ್‌ಯುವಿ

Written By:

ವಾಹನಗಳ ಉತ್ಪಾದನೆ ಮತ್ತು ಮಾರಾಟದಲ್ಲಿ ವಿಫುಲ ಅವಕಾಶಗಳನ್ನು ತೆರೆದುಕೊಳ್ಳುತ್ತಿರುವ ದೇಶಿಯ ಮಾರುಕಟ್ಟೆಯಲ್ಲಿ ಇದೀಗ ಫ್ರೆಂಚ್ ಕಾರು ಉತ್ಪಾದಕರು ಹೊಸ ಸಂಚಲಯನ ಸೃಷ್ಠಿಸಲು ತಮ್ಮ ವಿನೂತನ ಕಾರು ಮಾದರಿಗಳನ್ನು ಬಿಡುಗಡೆಗೊಳಿಸುವತ್ತ ಚಿಂತನೆಯಲ್ಲಿದ್ದು, ಜನಪ್ರಿಯ ಪಿಎಸ್ಎ ಗ್ರೂಪ್ ಸಹ ವಿನೂತನ ವಿನ್ಯಾಸದ ಎಸ್‌ಯುವಿ ಕಾರುಗಳನ್ನು ಭಾರತಕ್ಕೆ ಪರಿಚಯಿಸುವ ಇರಾದೆಯಲ್ಲಿದೆ.

ಭಾರತೀಯ ಮಾರುಕಟ್ಟೆಗೆ ಎಂಟ್ರಿ ನೀಡಲಿದೆ ಪಿಎಸ್‌ಎ ಗ್ರೂಪ್‌ನ ಮೊದಲ ಎಸ್‌ಯುವಿ

ಈ ಸಂಬಂಧ ಭಾರತೀಯ ಮಾರುಕಟ್ಟೆಯಲ್ಲಿ ಈಗಾಗಲೇ ಹಲವು ಸುತ್ತಿನ ಮಾರುಕಟ್ಟೆ ಅಧ್ಯಯನ ನಡೆಸಿರುವ ಪಿಎಸ್ಎ ಗ್ರೂಪ್, ಮೊದಲ ಹಂತದಲ್ಲೇ ಎಸ್‌ಯುವಿ ಕಾರುಗಳನ್ನು ಪರಿಚಯಿಸುವ ಬಗ್ಗೆ ಮಾತುಕತೆ ನಡೆಸಿದೆ. ಹೀಗಾಗಿ ಎಲ್ಲವೂ ಅಂದುಕೊಂಡಂತೆ ಆದಲ್ಲಿ ಪಿಎಸ್ಎ ಗ್ರೂಪ್ ನಿರ್ಮಾಣದ ಸಿಟ್ರೊಯಿನ್ ಎಸ್‌ಯುವಿ ಕಾರುಗಳು ದೇಶಿಯ ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ.

ಭಾರತೀಯ ಮಾರುಕಟ್ಟೆಗೆ ಎಂಟ್ರಿ ನೀಡಲಿದೆ ಪಿಎಸ್‌ಎ ಗ್ರೂಪ್‌ನ ಮೊದಲ ಎಸ್‌ಯುವಿ

ಇದಕ್ಕಾಗಿಯೇ ಮೊದಲ ಹಂತವಾಗಿ ಬ್ರಾಂಡ್ ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಭಾರತೀಯ ಗ್ರಾಹಕರನ್ನು ಸೆಳೆಯಲು ಸಿಟ್ರೊಯಿನ್ ಕಾರುಗಳನ್ನು ಆಮದು ಮಾಡಿಕೊಳ್ಳುತ್ತಿರುವ ಪಿಎಸ್ಎ ಗ್ರೂಪ್, ಜಾಹೀರಾತು ಮತ್ತು ಆಸಕ್ತ ಗ್ರಾಹಕರಿಗೆ ಟೆಸ್ಟ್ ಡ್ರೈವ್‌ಗಳನ್ನು ಕಲ್ಪಿಸಿ ಬ್ರಾಂಡ್ ಪರಿಚಯಿಸಲು ಯೋಜನೆ ರೂಪಿಸಿದೆ.

ಭಾರತೀಯ ಮಾರುಕಟ್ಟೆಗೆ ಎಂಟ್ರಿ ನೀಡಲಿದೆ ಪಿಎಸ್‌ಎ ಗ್ರೂಪ್‌ನ ಮೊದಲ ಎಸ್‌ಯುವಿ

ಮೂಲಗಳ ಪ್ರಕಾರ ಪಿಎಸ್ಎ ಗ್ರೂಪ್‌ನ ಸಿಟ್ರೊಯಿನ್ ಸಿ84 ಮತ್ತು ಸಿಟ್ರೊಯಿನ್ ಸಿ5-ಏರೋಕ್ರಾಸ್ ಎಸ್‌ಯುವಿಗಳನ್ನು ಮೊದಲ ಹಂತದಲ್ಲಿ ಬಿಡುಗಡೆ ಮಾಡಲಿದ್ದು, ಮಧ್ಯಮ ಗಾತ್ರದ ಐಷಾರಾಮಿ ಮಾದರಿಗಳಾದ ಜೀಪ್ ಕಂಪಾಸ್, ಹ್ಯುಂಡೈ ಟಕ್ಸನ್ ಮತ್ತು ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಲಿರುವ ಸ್ಕೋಡಾ ಕರೋಕ್ ಎಸ್‌ಯುವಿ ತ್ರೀವ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದೆ.

ಭಾರತೀಯ ಮಾರುಕಟ್ಟೆಗೆ ಎಂಟ್ರಿ ನೀಡಲಿದೆ ಪಿಎಸ್‌ಎ ಗ್ರೂಪ್‌ನ ಮೊದಲ ಎಸ್‌ಯುವಿ

ಜೊತೆಗೆ ಹೊಸ ಕಾರುಗಳನ್ನು ಪರಿಚಯಿಸುವುದಕ್ಕೂ ಮುನ್ನ ದೇಶದ 80 ಪ್ರಮುಖ ನಗರಗಳಲ್ಲಿ 'ಎಕ್ಸ್‌ಪಿರೆನ್ಸ್ ಸ್ಟೋರ್'ಗಳನ್ನು ತೆರೆಯಲಿದ್ದು, ಈ ಮೂಲಕ ಗ್ರಾಹಕರನ್ನು ಹೊಸ ಕಾರ್ ಬ್ರಾಂಡ್‌ನತ್ತ ಸೆಳೆಯುವ ಮಾರುಕಟ್ಟೆ ತಂತ್ರಗಳನ್ನು ಬಳಸುತ್ತಿದೆ.

ಭಾರತೀಯ ಮಾರುಕಟ್ಟೆಗೆ ಎಂಟ್ರಿ ನೀಡಲಿದೆ ಪಿಎಸ್‌ಎ ಗ್ರೂಪ್‌ನ ಮೊದಲ ಎಸ್‌ಯುವಿ

ಇದಲ್ಲದೇ ಬೆಲೆಗಳಲ್ಲಿ ತುಸು ದುಬಾರಿ ಎನ್ನಿಸಲಿರುವ ಪಿಎಸ್ಎ ಗ್ರೂಪ್ ಕಾರುಗಳ ಬೆಲೆ ತಗ್ಗಿಸುವ ಉದ್ದೇಶದಿಂದ ಚೆನ್ನೈನಲ್ಲಿ ಅಸೆಂಬ್ಲಿ ಯೂನಿಟ್ ತೆರೆಯಲು ನಿರ್ಧರಿಸಿದ್ದು, ಸ್ಥಳೀಯ ಲಭ್ಯವಾಗುವ ತಾಂತ್ರಿಕ ಬಿಡಿಭಾಗಗಳನ್ನು ಬಳಕೆ ಮಾಡಿಕೊಂಡು ಲಾಭಾಂಶ ಮತ್ತು ಕಾರಿನ ಬೆಲೆ ಇಳಿಕೆಗೆ ಸಹಕಾರಿಯಾಗುವಂತೆ ಯೋಜನೆ ಹಮ್ಮಿಕೊಂಡಿದೆ.

ಭಾರತೀಯ ಮಾರುಕಟ್ಟೆಗೆ ಎಂಟ್ರಿ ನೀಡಲಿದೆ ಪಿಎಸ್‌ಎ ಗ್ರೂಪ್‌ನ ಮೊದಲ ಎಸ್‌ಯುವಿ

ಇನ್ನು ಭಾರತದಲ್ಲಿ ಪಿಎಸ್‌ಎ ಗ್ರೂಪ್‌ನ ಮತ್ತೊಂದು ಅಂಗಸಂಸ್ಥೆಯಾದ ಪ್ಯೂಜೊ ಕೂಡಾ ಭಾರತದಲ್ಲಿ ಈಗಾಗಲೇ ತನ್ನ ವಾಣಿಜ್ಯ ಚಟುವಟಿಕೆಗಳನ್ನು ಆರಂಭಗೊಳಿಸಿದ್ದು, 2019ರ ಆರಂಭದಲ್ಲಿ ಹೊಸ ಕಾರುಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಎಂಜಿನ್ ಕಾರ್ಯಕ್ಷಮತೆ ಕುರಿತಂತೆ ಸ್ಪಾಟ್ ಟೆಸ್ಟಿಂಗ್ ನಡೆಸುವ ಮೂಲಕ ಗ್ರಾಹಕರನ್ನು ಸೆಳೆಯುವ ಪ್ರಯತ್ನದಲ್ಲಿದೆ.

ಭಾರತೀಯ ಮಾರುಕಟ್ಟೆಗೆ ಎಂಟ್ರಿ ನೀಡಲಿದೆ ಪಿಎಸ್‌ಎ ಗ್ರೂಪ್‌ನ ಮೊದಲ ಎಸ್‌ಯುವಿ

ಒಟ್ಟಿನಲ್ಲಿ ಫ್ರೆಂಚ್ ಆಟೋ ಉತ್ಪಾದಕರು ದೇಶದಲ್ಲಿ ವಿನೂತನ ಕಾರುಗಳನ್ನು ಪರಿಚಯಿಸುವ ತವಕದಲ್ಲಿದ್ದು, ಪಿಎಸ್ಎ ಗ್ರೂಪ್ ಕಾರುಗಳು ತುಸು ದುಬಾರಿ ಎನ್ನಿಸಿದರೂ ತಾಂತ್ರಿಕವಾಗಿ ಬಲಿಷ್ಠ ಕಾರು ಉತ್ಪನ್ನ ಎನ್ನಬಹುದು.

ಭಾರತೀಯ ಮಾರುಕಟ್ಟೆಗೆ ಎಂಟ್ರಿ ನೀಡಲಿದೆ ಪಿಎಸ್‌ಎ ಗ್ರೂಪ್‌ನ ಮೊದಲ ಎಸ್‌ಯುವಿ

ಆದರೂ, ದೇಶಿಯ ಮಾರುಕಟ್ಟೆಯಲ್ಲಿ ಮಧ್ಯಮ ವರ್ಗಗಳನ್ನು ಗಮನದಲ್ಲಿಟ್ಟು ನಿರ್ಮಾಣ ಮಾಡಲಾಗುವ ಕಾರುಗಳಿಗೆ ಉತ್ತಮ ಮಾರುಕಟ್ಟೆಯಿದ್ದು, ಪಿಎಸ್ಎ ಗ್ರೂಪ್ ಕಾರುಗಳ ಎಷ್ಟರ ಮಟ್ಟಿಗೆ ಜನಪ್ರಿಯತೆ ಸಾಧಿಸಲಿವೆ ಎನ್ನುವುದು 2019ರ ಆರಂಭದಲ್ಲಿ ಗೊತ್ತಾಗಲಿದೆ.

Read more on auto news
English summary
PSA Group To Enter India Soon With A Citroen SUV.

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more