ಮಾರುತಿ ಸುಜುಕಿ ಮತ್ತು ಟೊಯೊಟಾ ನಂತರ ಬೆಲೆ ಏರಿಕೆಯ ಶಾಕ್ ಕೊಟ್ಟ ರೆನಾಲ್ಟ್

ಹೊಸ ವರ್ಷದ ಆರಂಭದಲ್ಲೇ ಬಹುತೇಕರು ತಮ್ಮ ಇಷ್ಟದ ವಸ್ತುಗಳನ್ನು ಖರೀದಿಸುವ ಯೋಜನೆಯಲ್ಲಿ ಇರುತ್ತಾರೆ. ಹೀಗಿರುವಾಗ ಹೊಸ ವಾಹನ ಖರೀದಿ ಮಾಡ್ಬೇಕು ಎಂದುಕೊಂಡಿರುವ ಜನತೆಗೆ ವಾಹನ ಉತ್ಪಾದನಾ ಸಂಸ್ಥೆಗಳು ಶಾಕಿಂಗ್ ಸುದ್ದಿ ನೀಡುತ್ತಿವೆ.

ಮಾರುತಿ ಸುಜುಕಿ ಮತ್ತು ಟೊಯೊಟಾ ನಂತರ ಬೆಲೆ ಏರಿಕೆಯ ಶಾಕ್ ಕೊಟ್ಟ ರೆನಾಲ್ಟ್

ಹೌದು, ವಿದೇಶಿ ಮಿನಿಮಯ ಮತ್ತು ಬಿಡಿಭಾಗಗಳ ಆಮದು ಮೇಲಿನ ಆಮದು ಸುಂಕಗಳು ಹೆಚ್ಚಳಗೊಂಡಿರುವ ಹಿನ್ನೆಲೆಯಲ್ಲಿ ಬಹುತೇಕ ವಾಹನ ಉತ್ಪಾದನಾ ಸಂಸ್ಥೆಗಳು ತಮ್ಮ ಉತ್ಪನ್ನಗಳ ಮೇಲಿನ ಬೆಲೆ ಏರಿಕೆಗೆ ನಿರ್ಧರಿಸಿದ್ದು, ಜನವರಿ 1 ರಿಂದಲೇ ಬೆಲೆ ಹೆಚ್ಚಳವಾಗುವುದು ಬಹುತೇಕ ಖಚಿತವಾಗಿದೆ.

ಮಾರುತಿ ಸುಜುಕಿ ಮತ್ತು ಟೊಯೊಟಾ ನಂತರ ಬೆಲೆ ಏರಿಕೆಯ ಶಾಕ್ ಕೊಟ್ಟ ರೆನಾಲ್ಟ್

ಮಾಹಿತಿಗಳ ಪ್ರಕಾರ, ಹೊಸ ಕಾರುಗಳ ಬೆಲೆಯಲ್ಲಿ ಶೇ. 3 ರಿಂದ ಶೇ.4 ರಷ್ಟು ಹೆಚ್ಚಳ ಮಾಡುವ ಸುಳಿವು ನೀಡಿದ್ದು, ಎಂಟ್ರಿ ಲೆವಲ್ ಕಾರುಗಳ ಬೆಲೆಯಲ್ಲಿ ರೂ. 10 ಸಾವಿರದಿಂದ 30 ಸಾವಿರ ಮತ್ತು ಮಧ್ಯಮ ಗಾತ್ರದ ಕಾರುಗಳ ಬೆಲೆಯಲ್ಲಿ 20 ಸಾವಿರದಿಂದ 40 ಸಾವಿರ ಹಾಗೂ 30 ಲಕ್ಷಕ್ಕೂ ಮೇಲ್ಪಟ್ಟ ಐಷಾರಾಮಿ ಕಾರುಗಳ ಬೆಲೆಯಲ್ಲಿ ರೂ. 50 ಸಾವಿರದಿಂದ ರೂ. 3 ಲಕ್ಷ ಬೆಲೆ ಹೆಚ್ಚಳವಾಗುವ ಸಾಧ್ಯತೆಗಳಿವೆ.

ಮಾರುತಿ ಸುಜುಕಿ ಮತ್ತು ಟೊಯೊಟಾ ನಂತರ ಬೆಲೆ ಏರಿಕೆಯ ಶಾಕ್ ಕೊಟ್ಟ ರೆನಾಲ್ಟ್

ಕಾರುಗಳ ಉತ್ಪಾದನೆ ಮತ್ತು ಮಾರಾಟ ಪ್ರಕ್ರಿಯೆಯಲ್ಲಿ ಹೆಚ್ಚುತ್ತಿರುವ ಖರ್ಚುಗಳನ್ನು ನಿಭಾಯಿಸಲು ಬೆಲೆ ಏರಿಕೆ ಅನಿವಾರ್ಯ ಎಂದಿರುವ ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು, ಹೊಸ ವರ್ಷದ ಆರಂಭದಲ್ಲಿ ವಾಹನ ಖರೀದಿಯ ಯೋಜನೆಯಲ್ಲಿರುವ ಗ್ರಾಹಕರಿಗೆ ಬೆಲೆ ಏರಿಕೆಯ ಶಾಕ್ ನೀಡುತ್ತಿವೆ.

ಮಾರುತಿ ಸುಜುಕಿ ಮತ್ತು ಟೊಯೊಟಾ ನಂತರ ಬೆಲೆ ಏರಿಕೆಯ ಶಾಕ್ ಕೊಟ್ಟ ರೆನಾಲ್ಟ್

ರೆನಾಲ್ಟ್ ಸಂಸ್ಥೆಯು ಕೂಡಾ ಶೇ.1.50 ರಿಂದ ಶೇ.2 ರಷ್ಟು ಬೆಲೆ ಹೆಚ್ಚಳ ಮಾಡುವ ಸುಳಿವು ನೀಡಿದ್ದು, ಇದರಲ್ಲಿ ಕ್ವಿಡ್, ಡಸ್ಟರ್ ಕಾರುಗಳ ಮೇಲೆ ಶೇ.2ರಷ್ಟು ಬೆಲೆ ಹೆಚ್ಚಳವಾಗಲಿದ್ದರೆ ಕ್ಯಾಪ್ಚರ್ ಮತ್ತು ಲೊಡ್ಜಿ ಕಾರುಗಳ ಬೆಲೆಯಲ್ಲಿ ಶೇ.1.50ರಷ್ಟು ಬೆಲೆ ದುಬಾರಿಯಾಗಲಿವೆ.

ಮಾರುತಿ ಸುಜುಕಿ ಮತ್ತು ಟೊಯೊಟಾ ನಂತರ ಬೆಲೆ ಏರಿಕೆಯ ಶಾಕ್ ಕೊಟ್ಟ ರೆನಾಲ್ಟ್

ಇನ್ನು ಮಾರುತಿ ಸುಜುಕಿ ಸಂಸ್ಥೆಯು ಕಾರಿನ ಬೆಲೆಯಲ್ಲಿ ಶೇ. 3 ರಿಂದ ಶೇ.4 ರಷ್ಟು ಹೆಚ್ಚಳ ಮಾಡುವ ಸುಳಿವು ನೀಡಿದ್ದು, ಎಂಟ್ರಿ ಲೆವಲ್ ಕಾರು ಮಾದರಿಯಾದ ಆಲ್ಟೋ 800 ಬೆಲೆಯಲ್ಲಿ ರೂ. 10 ಸಾವಿರದಿಂದ 12 ಸಾವಿರ ಮತ್ತು ಟಾಪ್ ಎಂಡ್ ಮಾದರಿಯಾದ ಎಸ್-ಕ್ರಾಸ್ ಎಸ್‌ಯುವಿ ಬೆಲೆಯಲ್ಲಿ ರೂ. 30 ಸಾವಿರದಿಂದ ರೂ. 40 ಸಾವಿರ ಬೆಲೆ ಏರಿಕೆಯಾಗಲಿದೆ.

ಮಾರುತಿ ಸುಜುಕಿ ಮತ್ತು ಟೊಯೊಟಾ ನಂತರ ಬೆಲೆ ಏರಿಕೆಯ ಶಾಕ್ ಕೊಟ್ಟ ರೆನಾಲ್ಟ್

ಹಾಗೆಯೇ ಕ್ಯಾಬ್ ಸೇವೆಗಳಿಗಾಗಿ ಹೆಚ್ಚಾಗಿ ಬಳಕೆಯಾಗುವ ಡಿಜೈರ್ ಟೂರ್ ಕಾರುಗಳ ಬೆಲೆಯು ರೂ. 25 ಸಾವಿರ ಹೆಚ್ಚಳವಾಗಲಿದ್ದರೆ, ಸ್ವಿಫ್ಟ್ ಬೆಲೆಯಲ್ಲಿ 20 ಸಾವಿರ, ವ್ಯಾಗನ್ ಆರ್, ಬಲೆನೊ, ಇಗ್ನಿಸ್, ಸೆಲೆರಿಯೊ ಬೆಲೆಗಳಲ್ಲಿ 15 ಸಾವಿರದಿಂದ 20 ಸಾವಿರ ಮತ್ತು ಸಿಯಾಜ್ ಕಾರುಗಳ ಬೆಲೆಯಲ್ಲಿ ರೂ.20 ಸಾವಿರದಿಂದ ರೂ.25 ಸಾವಿರ ಹೆಚ್ಚಳವಾಗುವುದು ಖಚಿತವಾಗಿದೆ.

ಮಾರುತಿ ಸುಜುಕಿ ಮತ್ತು ಟೊಯೊಟಾ ನಂತರ ಬೆಲೆ ಏರಿಕೆಯ ಶಾಕ್ ಕೊಟ್ಟ ರೆನಾಲ್ಟ್

ಟೊಯೊಟಾ ಸಂಸ್ಥೆಯು ಸಹ ಕಾರಿನ ಬೆಲೆಯಲ್ಲಿ ಶೇ. 4ರಷ್ಟು ಹೆಚ್ಚಳ ಮಾಡುವ ಸುಳಿವು ನೀಡಿದ್ದು, ಎಂಟ್ರಿ ಲೆವಲ್ ಕಾರು ಮಾದರಿಯ ಇಟಿಯಾಸ್ ಲಿವಾ ಬೆಲೆಯಲ್ಲಿ ರೂ. 22 ಸಾವಿರ ಹೆಚ್ಚಳವಾಗಲಿದ್ದರೇ, ಹೈ ಎಂಡ್ ಮಾದರಿಯಾದ ಲ್ಯಾಂಡ್ ಕ್ರೂಸರ್ ಪ್ರಾಡೋ ಮಾದರಿಯ ಬೆಲೆಯಲ್ಲಿ ರೂ. 3.60 ಲಕ್ಷ ಹೆಚ್ಚಳಲಾಗಲಿದೆ.

MOST READ: 23 ವರ್ಷಗಳ ಹಿಂದಿನ ದೇವೇಗೌಡರ ಕನಸಿನ ಯೋಜನೆಗೆ ಕೊನೆಗೂ ಮುಕ್ತಿ ಕೊಟ್ಟಿದ್ದು ಪ್ರಧಾನಿ ಮೋದಿ..!

ಮಾರುತಿ ಸುಜುಕಿ ಮತ್ತು ಟೊಯೊಟಾ ನಂತರ ಬೆಲೆ ಏರಿಕೆಯ ಶಾಕ್ ಕೊಟ್ಟ ರೆನಾಲ್ಟ್

ಇದಲ್ಲದೇ, ಸ್ಕೋಡಾ ಇಂಡಿಯಾ, ಬಿಎಂಡಬ್ಲ್ಯು, ಇಸುಝು ಮೋಟಾರ್ಸ್ ಸಂಸ್ಥೆಗಳು ಸಹ ಈಗಾಗಲೇ ಪ್ರತಿಶತ 3ರಿಂದ 4ರಷ್ಟು ಬೆಲೆ ಹೆಚ್ಚಳ ಮಾಡುವ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಿದ್ದು, ಕಾರಿನ ಬೆಲೆಗಳಿಗೆ ಅನುಗುಣವಾಗಿ ಪರಿಷ್ಕೃತ ದರ ಪಟ್ಟಿಗಳು ನಿಗದಿಯಾಗಲಿವೆ.

ಮಾರುತಿ ಸುಜುಕಿ ಮತ್ತು ಟೊಯೊಟಾ ನಂತರ ಬೆಲೆ ಏರಿಕೆಯ ಶಾಕ್ ಕೊಟ್ಟ ರೆನಾಲ್ಟ್

ಒಟ್ಟಿನಲ್ಲಿ ಹೊಸ ವರ್ಷದ ವೇಳೆ ಕಾರು ಖರೀದಿ ಯೋಜನೆಯಲ್ಲಿರುವ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟುವುದು ಖಚಿತವಾಗಿದ್ದು, ಒಂದು ವೇಳೆ ನೀವು ಕೂಡಾ ಹೊಸ ವರ್ಷದ ಹೊತ್ತಿಗೆ ಕಾರು ಖರೀದಿಸುವ ಯೋಜನೆಯಲ್ಲಿದ್ದರೆ ಈಗಲೇ ಖರೀದಿ ಮಾಡಿ ಬೆಲೆ ಹೆಚ್ಚಳ ಹೊಡೆತದಿಂದ ತಪ್ಪಿಸಿಕೊಳ್ಳಬಹುದು.

Article Published On: Wednesday, December 12, 2018, 20:01 [IST]
English summary
Renault Price Hike — Joins The List Of Car Brands To Increase Prices From January 2019. Read in kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+