2018ರ ಸ್ಕೋಡಾ ಆಕ್ಟೇವಿಯಾ ಆರ್‍ಎಸ್ ಖರೀದಿಗಾಗಿ ಬುಕ್ಕಿಂಗ್ ಪ್ರಾರಂಭ..
ಸ್ಕೋಡಾ ಆಟೋ ಸಂಸ್ಥೆಯು ತಮ್ಮ ಆಕ್ಟೇವಿಯಾ ಆರ್‍ಎಸ್ ಕಾರಿನ ಬುಕ್ಕಿಂಗ್ ಪ್ರಕ್ರಿಯೆಯನ್ನು ಮತ್ತೆ ಶುರು ಮಾಡಿದ್ದು, ಬುಕ್ಕಿಂಗ್ ಮಾಡಿಸ ಗಾರಹಕರಿಗೆ ಇದೇ ವರ್ಷದ ಕೊನೆಯ ತ್ರೈಮಾಸಿಕ ಅವಧಿಯಲ್ಲಿ ಡೆಲಿವರಿ ಮಾಡಲಿದೆ.
ಸ್ಕೋಡಾ ಆಟೋ ಸಂಸ್ಥೆಯು ತಮ್ಮ ಆಕ್ಟೇವಿಯಾ ಆರ್‍ಎಸ್ ಕಾರಿನ ಬುಕ್ಕಿಂಗ್ ಪ್ರಕ್ರಿಯೆಯನ್ನು ಮತ್ತೆ ಶುರು ಮಾಡಿದ್ದು, ಬುಕ್ಕಿಂಗ್ ಮಾಡಿಸ ಗಾರಹಕರಿಗೆ ಇದೇ ವರ್ಷದ ಕೊನೆಯ ತ್ರೈಮಾಸಿಕ ಅವಧಿಯಲ್ಲಿ ಡೆಲಿವರಿ ಮಾಡಲಿದೆ. ಸೆಪ್ಟೆಂಬರ್ 2017ರಲ್ಲಿ ಬಿಡುಗಡೆಗೊಂಡ ಈ ಕಾರು, ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 26.78ಕ್ಕೆ ಮಾರಾಟವಾಗುತ್ತಿದೆ.

2018ರ ಸ್ಕೋಡಾ ಆಕ್ಟೇವಿಯಾ ಆರ್‍ಎಸ್ ಕಾರು 2.0 ಲೀಟರ್, 4 ಸಿಲೆಂಡರ್, ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಸಹಾಯದಿಂಡ 230ಬಿಹೆಚ್‍ಪಿ ಮತ್ತು 350ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಎಂಜಿನ್ ಅನ್ನು 6 ಸ್ಪೀಡ್ ಡಿಎಸ್‍ಜಿ ಗೇರ್‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಕಳೆದ ವರ್ಷ ಬಿಡುಗಡೆಗೊಂಡ ಈ ಕಾರು ಸಾಮಾನ್ಯ ಆಕ್ಟೇವಿಯಾ ಮಾದರಿಗೆ ಹೋಲಿಸಿದರೆ ಉನ್ನತ ಕಾರ್ಯಕ್ಷಮತೆ ಹೊಂದಿದೆ ಹಾಗು ಆರ್‌ಎಸ್ ಲಾಂಛನದೊಂದಿಗೆ ಹಲವಾರು ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿರುವ ಈ ಕಾರು, ವೇಗವಾಗಿ ಚಲಿಸಲು ಅನುವು ಮಾಡಿಕೊಡುತ್ತದೆ.

ಹೊಸ ಸ್ಕೋಡಾ ಆಕ್ಟೇವಿಯಾ ಆರ್‍ಎಸ್ ಕಾರು ಸ್ಪೋರ್ಟಿ ಲುಕ್ ಅನ್ನು ಹೊಂದಿದ್ದು, ಜೊತೆಗೆ ಹೆಚ್ಚಿನ ಸಾಮರ್ಥ್ಯವನ್ನು ನೀಡುವ ಬಾಡಿ ಕಿಟ್ ಪಡೆದುಕೊಂಡಿದೆ.

17 ಇಂಚಿನ ದೊಡ್ಡದಾದ ಮಿಶ್ರಲೋಹದ ಚಕ್ರಗಳು, ಹೊಸ ಸ್ಪೋರ್ಟ್ಸ್ ಬಾಡಿ ಕಿಟ್ ಮತ್ತು ಸ್ಟೇನ್ಲೆಸ್ ಸ್ಟೀಲ್‌ನಿಂದ ಮಾಡಿದ ಹೋಗೆ ಉಗುಳುವ ಕೊಳವೆಯನ್ನು ಈ ಸೆಡಾನ್ ಕಾರು ಒಳಗೊಂಡಿರಲಿದೆ.

ಸ್ಪೋರ್ಟ್ಸ್ ಸ್ಟೀರಿಂಗ್ ವೀಲ್, ಗೇರ್ ನಾಬ್, ಮತ್ತು ಸ್ಪೋರ್ಟಿ ಸೀಟುಗಳ ಮೇಲೆ ಕೆಂಪು ಬಣ್ಣದ ಹೊಲಿಗೆ ಹಾಕಲಾಗಿದ್ದು, ಕಾರಿನ ಕೆಲವು ಸ್ಥಳಗಳ ಮೇಲೆ ಆರ್‌ಎಸ್ ಲಾಂಛನವನ್ನು ಕಾಣಬಹುದಾಗಿದೆ.

ಸ್ಕೋಡಾ ಮೀಡಿಯಾ ಕಮಾಂಡ್ ಅಪ್ಲಿಕೇಶನ್ ಮೂಲಕ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಸಂಪರ್ಕಿಸಬಹುದಾಗಿದ್ದು, ಮೊಬೈಲ್ ಮೂಲಕ ಅಮುಂಡ್ಸೆನ್ ನ್ಯಾವಿಗೇಶನ್ ಸಿಸ್ಟಮ್ ನಿಯಂತ್ರಿಸಬಹುದಾಗಿದೆ ಹಾಗು ಈ ಕಾರು ಎಸ್‌ಡಿ ಕಾರ್ಡ್ ರೀಡರ್, ಸ್ಮಾರ್ಟ್ ಲಿಂಕ್, ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೊ ಸಂಪರ್ಕ ಮತ್ತು ಯುಎಸ್‌ಬಿ ಸೌಲಭ್ಯ ಪಡೆದುಕೊಂಡಿದೆ.

ಈ ಕಾರು ಕೇವಲ 6.7 ಸೆಕೆಂಡುಗಳಲ್ಲಿ 100 ಕಿ.ಮೀ ವೇಗ ತಲುಪುವಷ್ಟು ಬಲಿಷ್ಠವಾಗಿದೆ ಹಾಗು 250 ಕಿ.ಮೀ ಗರಿಷ್ಠ ವೇಗ ಮಿತಿ ಹೊಂದಿದೆ ಹಾಗು ಲಿಟರಿಗೆ 14.45 ಕಿಲೋಮೀಟರ್ ಮೈಲೇಜ್ ನೀಡಲಿದೆ ಎನ್ನಲಾಗಿದೆ.

ಪ್ರಯಾಣಿಕರ ಸುರಕ್ಷತೆಗಾಗಿ ಈ ಕಾರಿನಲ್ಲಿ 9 ಏರ್‍ಬ್ಯಾಗ್‍ಗಳು, ಇಎಸ್‍ಪಿ, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಬ್ಲೈಂಡ್ ಸ್ಪಾಟ್ ಡಿಟೆಕ್ಷನ್, ಡನಾಮಿಕ್ ಚಾಸ್ಸಿಸ್ ಕಂಟ್ರೋಲ್ ಮತ್ತು ಪ್ರೆಡಿಕ್ಟಿವ್ ಪೆಡೆಸ್ಟ್ರೈನ್ ಪ್ರೊಟೆಕ್ಷನ್ ಎಂಬ ವೈಶಿಷ್ಟ್ಯತೆಗಳನ್ನು ಅಳವಡಿಸಲಾಗಿದೆ.


Click it and Unblock the Notifications








