ಮಾರುತಿ ಸುಜುಕಿ ಕಾರುಗಳನ್ನು ನಿರ್ಮಾಣ ಮಾಡಲಿದೆ ಟೊಯೊಟಾ

ಅರೇ ಏನಿದು? ಮಾರುತಿ ಸುಜುಕಿ ಸಂಸ್ಥೆಯ ಕಾರುಗಳನ್ನು ಟೊಯೊಟಾ ಸಂಸ್ಥೆ ನಿರ್ಮಾಣ ಮಾಡುವುದು ಅಂದ್ರೆ ಏನ್ ಅರ್ಥ ಅಂತಾ ಕನ್ಫ್ಯೂಷನ್ ಆಗಬೇಡಿ. ಮೊದಲಿಗೆ ಇದು ಎಲ್ಲರಿಗೂ ತುಸು ಕನ್ಫ್ಯೂಷನ್ ಅಂತಾ ಅನ್ನಿಸಿದರೂ ಅಸಲಿಗೆ ಮಾರುತಿ ಸುಜುಕಿ ಮತ್ತು ಟೊಯೊಟಾ ಸಂಸ್ಥೆಗಳು ಹೊಸ ಕಾರುಗಳ ನಿರ್ಮಾಣಕ್ಕಾಗಿ ಪರಸ್ಪರ ಸಹಕರಿಸಲು ಬೃಹತ್ ಯೋಜನೆ ರೂಪಿಸಿರುವುದು ಇದೀಗ ಭಾರತೀಯ ಆಟೋ ಉದ್ಯಮದಲ್ಲಿ ದೊಡ್ಡ ಸಂಚಲನಕ್ಕೆ ಕಾರಣವಾಗಿದೆ.

ಮಾರುತಿ ಸುಜುಕಿ ಕಾರುಗಳನ್ನು ನಿರ್ಮಾಣ ಮಾಡಲಿದೆ ಟೊಯೊಟಾ

ಜಪಾನ್ ಮೂಲದ ವಾಹನ ಉತ್ಪಾದನಾ ದಿಗ್ಗಜರಾದ ಸುಜುಕಿ ಮೋಟಾರ್ಸ್ ಮತ್ತು ಟೊಯೊಟಾ ಮೋಟಾರ್ಸ್ ಸಂಸ್ಥೆಗಳು ಹೊಸ ಕಾರುಗಳ ಉತ್ಪಾದನೆಗಾಗಿ ಕೈಜೋಡಿಸಿದ್ದು, ಸಹಭಾಗಿತ್ವ ಆಧಾರದ ಮೇಲೆ ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ಹೊಸ ಕಾರು ಉತ್ಪನ್ನಗಳನ್ನು ತಯಾರಿಸಲು ಬೃಹತ್ ಬಂಡವಾಳ ಹೂಡಿಕೆ ಮಾಡುತ್ತಿವೆ.

ಮಾರುತಿ ಸುಜುಕಿ ಕಾರುಗಳನ್ನು ನಿರ್ಮಾಣ ಮಾಡಲಿದೆ ಟೊಯೊಟಾ

ಕಳೆದ ವರ್ಷ ಫೆಬ್ರುವರಿಯಲ್ಲಿಯೇ ಟೊಯೊಟಾ ಮತ್ತು ಸುಜುಕಿ ಮೋಟಾರ್ಸ್ ಜಂಟಿಯಾಗಿ ಕಾರು ಉತ್ಪಾದಿಸುವ ಬಗ್ಗೆ ಮಾತುಕತೆ ನಡೆಸಿದ್ದವು. ಆದ್ರೆ ಕಾರಣಾಂತರಗಳಿಂದ ಹೊಸ ಯೋಜನೆ ಬಗ್ಗೆ ತಟಸ್ಥವಾಗಿದ್ದ ಎರಡು ಸಂಸ್ಥೆಗಳು ಇದೀಗ ಮಹತ್ವದ ನಿರ್ಣಯಕ್ಕೆ ಬಂದಿದ್ದು, ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಗಾಗಿ ಹೊಸ ಒಪ್ಪಂದ ಮಾಡಿಕೊಂಡಿವೆ.

ಮಾರುತಿ ಸುಜುಕಿ ಕಾರುಗಳನ್ನು ನಿರ್ಮಾಣ ಮಾಡಲಿದೆ ಟೊಯೊಟಾ

ಹೊಸ ಒಪ್ಪಂದದ ಪ್ರಕಾರ ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆ ಮಾಡುವುದಷ್ಟೇ ಅಲ್ಲದೇ ಕಾರುಗಳ ಮಾರಾಟಕ್ಕೂ ಪರಸ್ಪರ ಸಹಾಯ ಮಾಡುವ ಮಹತ್ವದ ಕಾರ್ಯ ಯೋಜನೆಗೂ ಟೊಯೊಟಾ ಮತ್ತು ಸುಜುಕಿ ಸಂಸ್ಥೆಗಳು ಒಪ್ಪಿಗೆ ಸೂಚಿಸಿವೆ.

ಮಾರುತಿ ಸುಜುಕಿ ಕಾರುಗಳನ್ನು ನಿರ್ಮಾಣ ಮಾಡಲಿದೆ ಟೊಯೊಟಾ

ಹೀಗಾಗಿ ಸುಜುಕಿ ಡೀಲರ್ಸ್‌ಗಳಲ್ಲಿ ಟೊಯೊಟಾ ಉತ್ಪನ್ನಗಳು ಮತ್ತು ಟೊಯೊಟಾ ಡೀಲರ್ಸ್‌ಗಳಲ್ಲಿ ಸುಜುಕಿ ಕಾರು ಉತ್ಪನ್ನಗಳು ದೊರೆಯಲಿದ್ದು, ಇದು ಕಾರು ಮಾರಾಟ ಜಾಲವನ್ನು ವಿಸ್ತರಿಸುವ ಉದ್ದೇಶದಿಂದ ಇಂತದೊಂದು ಒಪ್ಪಂದ ಮಾಡಿಕೊಂಡಿವೆ.

ಮಾರುತಿ ಸುಜುಕಿ ಕಾರುಗಳನ್ನು ನಿರ್ಮಾಣ ಮಾಡಲಿದೆ ಟೊಯೊಟಾ

ಮತ್ತಷ್ಟು ವಿಸ್ತರಣೆಯಾಗಲಿದೆ ಬಿಡದಿ ಘಟಕ..!

ಸದ್ಯ ಭಾರತದಲ್ಲಿ ಮೂರು ಕಾರು ಉತ್ಪಾದನಾ ಘಟಕಗಳನ್ನ ಹೊಂದಿರುವ ಸುಜುಕಿ ಸಂಸ್ಥೆಯು ಹರಿಯಾಣದಲ್ಲಿ ಎರಡು ಮತ್ತು ಗುಜರಾತ್‌ನಲ್ಲಿ ಒಂದು ಉತ್ಪಾದನಾ ಘಟಕವನ್ನ ಹೊಂದಿದೆ. ಹೀಗಾಗಿ ದಕ್ಷಿಣ ಭಾರತದಲ್ಲಿ ಯಾವುದೇ ಉತ್ಪಾದನಾ ಘಟಕ ಇಲ್ಲದಿರುವುದು ಸುಜುಕಿ ಸಂಸ್ಥೆಗೆ ಕಾರುಗಳ ಸರಬರಾಜು ಒಂದು ಸವಾಲಿನ ವಿಚಾರವೇ ಸರಿ.

ಮಾರುತಿ ಸುಜುಕಿ ಕಾರುಗಳನ್ನು ನಿರ್ಮಾಣ ಮಾಡಲಿದೆ ಟೊಯೊಟಾ

ಹೀಗಿರುವಾಗ ಬೆಂಗಳೂರು ಬಳಿ ಇರುವ ಬಿಡದಿಯಲ್ಲಿ ನೆಲೆಗೊಂಡಿರುವ ಟೊಯೊಟಾ ಸಂಸ್ಥೆಯ ಕಾರು ಉತ್ಪಾದನಾ ಘಟಕದಿಂದ ಸುಜುಕಿ ಸಂಸ್ಥೆಯು ತನ್ನ ಜನಪ್ರಿಯ ಕಾರುಗಳಾದ ವಿಟಾರಾ ಬ್ರೆಝಾ ಮತ್ತು ಬಲೆನೊ ಕಾರುಗಳನ್ನು ಇಲ್ಲಿಯೇ ಉತ್ಪಾದನೆ ಮಾಡುವ ಮೂಲಕ ದಕ್ಷಿಣ ಭಾರತದಲ್ಲಿನ ಡೀಲರ್ಸ್‌ಗಳಿಗೆ ಸರಬರಾಜು ಮಾಡಲು ನಿರ್ಧರಿಸಿದೆ.

MOST READ: ಜಾಗ್ವಾರ್ ಕಾರು ಖರೀದಿಸಿದ ರೈತನ ಅಸಲಿ ಕಥೆ ಏನು.?

ಮಾರುತಿ ಸುಜುಕಿ ಕಾರುಗಳನ್ನು ನಿರ್ಮಾಣ ಮಾಡಲಿದೆ ಟೊಯೊಟಾ

ಇದಕ್ಕೆ ಸುಜುಕಿ ಮತ್ತು ಟೊಯೊಟಾ ಸಂಸ್ಥೆಗಳು ಪರಸ್ಪರ ಒಪ್ಪಿಗೆ ಸೂಚಿಸಿದ್ದು, ಕಳೆದ ತಿಂಗಳು ಬಿಡದಿಗೆ ಭೇಟಿ ನೀಡಿದ್ದ ಸುಜುಕಿ ಸಂಸ್ಥೆಯ ಹಿರಿಯ ಅಧಿಕಾರಿಗಳ ತಂಡವು ಕಾರು ಉತ್ಪಾದನೆಯ ಸಾಮರ್ಥ್ಯವನ್ನ ಹೆಚ್ಚಿಸಲು ಅಗತ್ಯ ಸೌಲಭ್ಯಗಳನ್ನ ಪೂರೈಕೆ ಮಾಡುವುದಾಗಿ ಸಮ್ಮತಿ ಸೂಚಿಸಿದೆ.

ಮಾರುತಿ ಸುಜುಕಿ ಕಾರುಗಳನ್ನು ನಿರ್ಮಾಣ ಮಾಡಲಿದೆ ಟೊಯೊಟಾ

7 ಸಾವಿರ ಕೋಟಿ ಹೂಡಿಕೆ

ಸದ್ಯ ಮಾರುಕಟ್ಟೆಯಲ್ಲಿ ಅತಿಹೆಚ್ಚು ಮಾರಾಟವಾಗುತ್ತಿರುವ ಬಲೆನೊ ಮತ್ತು ಬ್ರೆಝಾ ಕಾರುಗಳನ್ನು ಉತ್ಪಾದನೆ ಮಾಡಲು ಸಾಕಷ್ಟು ಸ್ಥಳಾವಕಾಶ ಬೇಕಿದ್ದು, ಇದಕ್ಕಾಗಿ ಟೊಯೊಟಾ ಘಟಕವನ್ನು ವಿಸ್ತರಣೆ ಮಾಡಲು ಸುಜುಕಿ ಸಂಸ್ಥೆಯು 1 ಬಿಲಿಯನ್ ಯುಎಸ್‌ ಡಾಲರ್( ಸುಮಾರು 7 ಸಾವಿರ ಕೋಟಿ) ಹೂಡಿಕೆ ಮಾಡಲು ನಿರ್ಧರಿಸಿದೆ.

ಮಾರುತಿ ಸುಜುಕಿ ಕಾರುಗಳನ್ನು ನಿರ್ಮಾಣ ಮಾಡಲಿದೆ ಟೊಯೊಟಾ

ಜೊತೆಗೆ ಸುಜುಕಿ ಕಾರುಗಳನ್ನು ಉತ್ಪಾದನೆ ಮಾಡಲು ಪ್ರತ್ಯೇಕ ಪ್ಲ್ಯಾಟ್‌ಫಾರ್ಮ್ ಸಿದ್ದಗೊಳಿಸಲಿರುವ ಟೊಯೊಟಾ ಸಂಸ್ಥೆಯು ಸುಜುಕಿ ಸಂಸ್ಥೆಯ ಉದ್ಯೋಗಿಗಳ ಜೊತೆಗೂಡಿ ಕಾರ್ಯನಿರ್ವಹಣೆ ಮಾಡಲಿದೆ.

ಮಾರುತಿ ಸುಜುಕಿ ಕಾರುಗಳನ್ನು ನಿರ್ಮಾಣ ಮಾಡಲಿದೆ ಟೊಯೊಟಾ

ಇದಕ್ಕೆ ಪ್ರತಿಯಾಗಿ ಸುಜುಕಿ ಸಂಸ್ಥೆಯು ತನ್ನ ಅಧಿಕೃತ ಡೀಲರ್ಸ್‌ಗಳಲ್ಲಿ ಟೊಯಾಟೊ ಕಾರುಗಳ ಮಾರಾಟಕ್ಕೆ ಅವಕಾಶ ನೀಡಲಿದ್ದು, ಹೈಬ್ರಿಡ್ ತಂತ್ರಜ್ಞಾನ ಅಭಿವೃದ್ಧಿಗೂ ಸಹಕಾರ ನೀಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಮಾರುತಿ ಸುಜುಕಿ ಕಾರುಗಳನ್ನು ನಿರ್ಮಾಣ ಮಾಡಲಿದೆ ಟೊಯೊಟಾ

ಇದಲ್ಲದೇ ಕಾರುಗಳ ಇಂಧನ ಕಾರ್ಯಕ್ಷಮತೆ ಮತ್ತು ಕಾರುಗಳ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಕಾರುಗಳ ಬಿಡಿಭಾಗಗಳನ್ನು ಸಹ ಒದಗಿಸುವ ಒಪ್ಪಂದಕ್ಕೂ ಉಭಯ ಸಂಸ್ಥೆಗಳು ಮುಂದಾಗಿದ್ದು, ಭಾರತದಲ್ಲಿ ಆರಂಭಗೊಂಡಿರುವ 'ಮೆಕ್ ಇನ್ ಇಂಡಿಯಾ' ಯೋಜನೆ ಅಡಿ ಹೊಸ ಕಾರುಗಳ ಉತ್ಪಾದನೆಯನ್ನು ಆರಂಭಿಸಲಿವೆ.

MOST READ: ಪ್ರವಾಹ ಸಂತ್ರಸ್ತರ ಪಾಲಿನ ಹೀರೋ ಆಗಿದ್ದ ಮೀನುಗಾರನಿಗೆ ಮಹೀಂದ್ರಾ ಕಡೆಯಿಂದ ಭರ್ಜರಿ ಉಡುಗೊರೆ

ಮಾರುತಿ ಸುಜುಕಿ ಕಾರುಗಳನ್ನು ನಿರ್ಮಾಣ ಮಾಡಲಿದೆ ಟೊಯೊಟಾ

ಈ ಮೂಲಕ 2020ರ ವೇಳೆಗೆ ಹೊಸ ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ಕಾರುಗಳನ್ನು ಸಹ ಬಿಡುಗಡೆಗೊಳಿಸುವ ಸಾಧ್ಯತೆಗಳಿದ್ದು, ಮಧ್ಯಮ ಗಾತ್ರದ ಬಜೆಟ್‌ನಲ್ಲಿ ಉತ್ತಮ ಎಲೆಕ್ಟ್ರಿಕ್ ಕಾರುಗಳನ್ನು ಅಭಿವೃದ್ಧಿಗೊಳಿಸುವ ಬಗ್ಗೆಯು ಹೊಸ ಸಂಶೋಧನೆಗಳನ್ನು ನಡೆಸಲಿದೆ.

ಮಾರುತಿ ಸುಜುಕಿ ಕಾರುಗಳನ್ನು ನಿರ್ಮಾಣ ಮಾಡಲಿದೆ ಟೊಯೊಟಾ

ಒಟ್ಟಿನಲ್ಲಿ ಕಾರು ಉತ್ಪಾದಕ ದಿಗ್ಗಜರು ಇದೀಗ ಒಂದಾಗಿದ್ದು, ಹೊಸ ಉತ್ಪನ್ನಗಳ ಮೂಲಕ ಭಾರತೀಯ ಮಾರುಕಟ್ಟೆಯಲ್ಲಿ ಮತ್ತೊಮ್ಮೆ ಸದ್ದು ಮಾಡಲಿವೆ. ಜೊತೆಗೆ ಭಾರತೀಯ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಮತ್ತಷ್ಟು ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ಕಾರುಗಳು ರಸ್ತೆಗಿಳಿಯಲಿವೆ.

More from DriveSpark

Article Published On: Friday, September 21, 2018, 13:46 [IST]
English summary
Maruti Cars To Be Manufactured By Toyota — To make Use Of Idle Capacity In Their Bangalore Factory.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+