ಟಾಟಾ ಬಹುನೀರಿಕ್ಷಿತ ಹ್ಯಾರಿಯರ್ ಜೊತೆ ಸ್ಪಾಟ್ ಟೆಸ್ಟಿಂಗ್ ನಡೆಸಿದ ಮತ್ತೊಂದು ಹೊಸ ಕಾರು..!

ಟಾಟಾ ಮೋಟಾರ್ಸ್ ಸಂಸ್ಥೆಯು ಮುಂಬರುವ ದಿನಗಳಲ್ಲಿ ಹಲವು ಬಗೆಯ ಗೇಮ್ ಚೇಂಜರ್ ಕಾರುಗಳನ್ನು ಬಿಡುಗಡೆಗೊಳಿಸುತ್ತಿದ್ದು, ಇದರಲ್ಲಿ ಹ್ಯಾರಿಯರ್ ಹೆಸರಿನ ವಿನೂತನ ಎಸ್‌ಯುವಿ ಮತ್ತು 45ಎಕ್ಸ್ ಹೆಸರಿನ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರುಗಳು ಸಾಕಷ್ಟು ನೀರಿಕ್ಷೆ ಹುಟ್ಟುಹಾಕಿವೆ.ಸದ್ಯ ಬಿಡುಗಡೆ ಹೊಸ್ತಿನಲ್ಲಿರುವ ಹ್ಯಾರಿಯರ್ ಕಾರುಗಳು ಮೊದಲ ಬಾರಿಗೆ ನಮ್ಮ ಬೆಂಗಳೂರಿನಲ್ಲೂ ಸ್ಪಾಟ್ ಟೆಸ್ಟಿಂಗ್ ನಡೆಸಿದ್ದು ವಿಶೇಷವಾಗಿತ್ತು.

ಟಾಟಾ ಬಹುನೀರಿಕ್ಷಿತ ಹ್ಯಾರಿಯರ್ ಜೊತೆ ಸ್ಪಾಟ್ ಟೆಸ್ಟಿಂಗ್ ನಡೆಸಿದ ಮತ್ತೊಂದು ಹೊಸ ಕಾರು..!

ಎಸ್‌ಯುವಿ ವಿಭಾಗಕ್ಕೆ ವಿನೂತನ ಕಾರು ಮಾದರಿಯನ್ನು ಪರಿಚಯಿಸಲು ಸಿದ್ದವಾಗುತ್ತಿರುವ ಟಾಟಾ ಮೋಟಾರ್ಸ್ ಸಂಸ್ಥೆಯು ತನ್ನ ಬಹುನೀರಿಕ್ಷಿತ ಕಾರನ್ನು ಹಲವು ಸುತ್ತಿನ ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿದ್ದು, ಕಳೆದ ವಾರವಷ್ಟೇ ಕಾರಿನ ಅಧಿಕೃತ ಹೆಸರನ್ನು ಬಹಿರಂಗ ಪಡಿಸಿರುವುದಲ್ಲದೇ ಇದೀಗ ಕಾರಿನಲ್ಲಿ ಒದಗಿಸಲಾಗಿರುವ ಗುಣಮಟ್ಟದ ತಾಂತ್ರಿಕ ಸೌಲಭ್ಯಗಳು ಎಸ್‌ಯುವಿ ಕಾರು ಪ್ರಿಯರ ಆಕರ್ಷಣೆಗೆ ಕಾರಣವಾಗಿವೆ.

ಟಾಟಾ ಬಹುನೀರಿಕ್ಷಿತ ಹ್ಯಾರಿಯರ್ ಜೊತೆ ಸ್ಪಾಟ್ ಟೆಸ್ಟಿಂಗ್ ನಡೆಸಿದ ಮತ್ತೊಂದು ಹೊಸ ಕಾರು..!

ಅದೇ ರೀತಿಯಾಗಿ ಟಾಟಾ ಮೋಟಾರ್ಸ್ ಸಂಸ್ಥೆಯು ಪ್ರಿಯಿಯಂ ಹ್ಯಾಚ್‌ಬ್ಯಾಕ್ ವಿಭಾಗದಲ್ಲಿ ಬಹುದೊಡ್ಡ ಬದಲಾವಣೆ ತರುತ್ತಿದ್ದು, ಭಾರತೀಯ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಸದ್ಯದಲ್ಲೇ 45ಎಕ್ಸ್ ಕಾನ್ಸೆಪ್ಟ್ ಮಾದರಿಯನ್ನು ಅಭಿವೃದ್ದಿಗೊಳಿಸುವ ಯೋಜನೆಗೆ ಚಾಲನೆ ನೀಡಲಿದೆ.

ಟಾಟಾ ಬಹುನೀರಿಕ್ಷಿತ ಹ್ಯಾರಿಯರ್ ಜೊತೆ ಸ್ಪಾಟ್ ಟೆಸ್ಟಿಂಗ್ ನಡೆಸಿದ ಮತ್ತೊಂದು ಹೊಸ ಕಾರು..!

ಕಾರಿನ ಎಂಜಿನ್ ವೈಶಿಷ್ಟ್ಯತೆ, ಕಾರಿನ ವಿನ್ಯಾಸಗಳ ಆಧಾರದ ಮೇಲೆ ಟಾಟಾ ಹೊಸ ಎಸ್‌ಯುವಿ ಕಾರಿಗೆ ಹ್ಯಾರಿಯರ್ ಎಂದು ನಾಮಕರಣ ಮಾಡಲಾಗಿದ್ದು, ಹೆಸರಿಗೆ ತಕ್ಕಂತೆ ಹೊಸ ಕಾರುಗಳಲ್ಲಿ ವಿಶ್ವದರ್ಜೆಯ ಸೌಲಭ್ಯಗಳನ್ನ ಒದಗಿಸುವ ಬಗ್ಗೆ ಟಾಟಾ ಸುಳಿವು ನೀಡಿದೆ.

ಟಾಟಾ ಬಹುನೀರಿಕ್ಷಿತ ಹ್ಯಾರಿಯರ್ ಜೊತೆ ಸ್ಪಾಟ್ ಟೆಸ್ಟಿಂಗ್ ನಡೆಸಿದ ಮತ್ತೊಂದು ಹೊಸ ಕಾರು..!

ಕಳೆದ ಫೆಬ್ರುವರಿಯಲ್ಲಿ ನಡೆದಿದ್ದ 2018ರ ಆಟೋ ಎಕ್ಸ್ ಪೋದಲ್ಲಿ ವಿನೂತನ 45ಎಕ್ಸ್ ಮಾದರಿಯನ್ನು ಪ್ರದರ್ಶನ ಮಾಡಿರುವ ಟಾಟಾ ಮೋಟಾರ್ಸ್ ಇದೀಗ ಬಿಡುಗಡೆಯ ಸುಳಿವು ನೀಡಿದ್ದು, ಹೊಸ ಕಾರಿನ ವಿನ್ಯಾಸಗಳು ಇಂಪ್ಯಾಕ್ಟ್ ಡಿಸೈನ್ 2.0 ಸಿದ್ದಾಂತ ಆಧರಿತ ಅಡ್ವಾನ್ಸ್ ಆಕ್ಟಿಟೆಕ್ಕರ್ ವಿನ್ಯಾಸದೊಂದಿಗೆ ಸಿದ್ದವಾಗಿರುವುದು ಹ್ಯಾಚ್‌ಬ್ಯಾಕ್ ಪ್ರಿಯರ ಆಕರ್ಷಣೆಗೆ ಕಾರಣವಾಗಿದೆ ಎನ್ನಬಹುದು.

ಟಾಟಾ ಬಹುನೀರಿಕ್ಷಿತ ಹ್ಯಾರಿಯರ್ ಜೊತೆ ಸ್ಪಾಟ್ ಟೆಸ್ಟಿಂಗ್ ನಡೆಸಿದ ಮತ್ತೊಂದು ಹೊಸ ಕಾರು..!

45ಎಕ್ಸ್ ಎಂಜಿನ್ ಸಾಮರ್ಥ್ಯ

ಪೆಟ್ರೋಲ್ ಕಾರುಗಳು 1.2-ಲೀಟರ್ ಟರ್ಬೋಚಾಜ್ಡ್ ಎಂಜಿನ್ ಜೊತೆಗೆ 108-ಬಿಎಚ್‌ಪಿ, 170ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿಯನ್ನು ಹೊಂದಿದ್ದರೆ, 1.5-ಲೀಟರ್ ಡೀಸೆಲ್ ಎಂಜಿನ್ ಸಹ 108-ಬಿಎಚ್‌ಪಿ ಮತ್ತು 260-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿಯನ್ನು ಹೊಂದಿರಲಿವೆ.

MOST READ: ಬೈಕ್ ಮೂಲಕವೇ ಬೆಂಗಳೂರು ಟು ಸಿಡ್ನಿಗೆ ಹೊರಟಿರುವ ಹುಬ್ಬಳ್ಳಿ ಹುಡುಗಿಯ ಕನಸು ಏನು?

ಟಾಟಾ ಬಹುನೀರಿಕ್ಷಿತ ಹ್ಯಾರಿಯರ್ ಜೊತೆ ಸ್ಪಾಟ್ ಟೆಸ್ಟಿಂಗ್ ನಡೆಸಿದ ಮತ್ತೊಂದು ಹೊಸ ಕಾರು..!

ಈ ಮೂಲಕ ಹ್ಯುಂಡೈ ಐ20 ಮತ್ತು ಮಾರುತಿ ಸುಜುಕಿ ಬಲೆನೊ ಕಾರುಗಳಿಗೆ ತೀವ್ರ ಪೈಪೋಟಿ ನೀಡಲಿರುವ ಟಾಟಾ ಸಂಸ್ಥೆಯು ಕಟರ್ ಫ್ರೀ ಡಿಸೈನ್‌ಗಳ ಮೂಲಕ ಕಾರಿನ ಚಿತ್ರಣವನ್ನೇ ಬದಲಿಸಿರುವುದು ಮತ್ತೊಂದು ವಿಶೇಷ.

ಟಾಟಾ ಬಹುನೀರಿಕ್ಷಿತ ಹ್ಯಾರಿಯರ್ ಜೊತೆ ಸ್ಪಾಟ್ ಟೆಸ್ಟಿಂಗ್ ನಡೆಸಿದ ಮತ್ತೊಂದು ಹೊಸ ಕಾರು..!

ಇನ್ನು ಹ್ಯಾರಿಯರ್ ಕಾರುಗಳನ್ನು ಸಹ ಇಂಪ್ಯಾಕ್ಟ್ ಡಿಸೈನ್ 2.0 ತಂತ್ರಜ್ಞಾನ ಆಧಾರದ ಮೇಲೆ ನಿರ್ಮಾಣ ಮಾಡಲಾಗಿದ್ದು, ಹೊಸ ಕಾರುಗಳಲ್ಲಿ "ಅಪ್ಟಿಮಲ್ ಮಾಡ್ಯೂಲರ್ ಎಫಿಷಿಯೆಂಟ್ ಗ್ಲೋಬಲ್ ಅಡ್ವಾನ್ಸ್ (OMEGA)" ಆರ್ಕಿಟೆಕ್ಚರ್ ಬಳಕೆ ಮಾಡಿರುವುದೇ ಹೊಸ ವಿನ್ಯಾಸಗಳು ಅದ್ಭುತವಾಗಿವೆ.

ಟಾಟಾ ಬಹುನೀರಿಕ್ಷಿತ ಹ್ಯಾರಿಯರ್ ಜೊತೆ ಸ್ಪಾಟ್ ಟೆಸ್ಟಿಂಗ್ ನಡೆಸಿದ ಮತ್ತೊಂದು ಹೊಸ ಕಾರು..!

ಹ್ಯಾರಿಯರ್ ಎಂಜಿನ್ ಸಾಮರ್ಥ್ಯ

ಹ್ಯಾರಿಯರ್ ಎಸ್‌ಯುವಿ ಮಾದರಿಗಳ ಎಂಜಿನ್ ಬಗೆಗೆ ಟಾಟಾ ಯಾವುದೇ ಅಧಿಕೃತ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲವಾದರೂ ಕೆಲವು ವರದಿಗಳ ಪ್ರಕಾರ 2.0-ಲೀಟರ್ ಪೆಟ್ರೋಲ್ ಎಂಜಿನ್ ಅಥವಾ 2.0-ಲೀಟರ್ ಮಲ್ಟಿ ಜೆಟ್ ಡೀಸೆಲ್ ಎಂಜಿನ್ ಮಾದರಿಯಲ್ಲಿ ಹೊಸ ಕಾರುಗಳು ಅಭಿವೃದ್ಧಿಯಾಗಲಿವೆ.

ಟಾಟಾ ಬಹುನೀರಿಕ್ಷಿತ ಹ್ಯಾರಿಯರ್ ಜೊತೆ ಸ್ಪಾಟ್ ಟೆಸ್ಟಿಂಗ್ ನಡೆಸಿದ ಮತ್ತೊಂದು ಹೊಸ ಕಾರು..!

ಬೆಲೆ ಮತ್ತು ಬಿಡುಗಡೆ ದಿನಾಂಕ (ಅಂದಾಜು)

ಟಾಟಾ ಸಂಸ್ಥೆಯು ಬಿಡುಗಡೆ ಮಾಡಲು ಯೋಜಿಸಿರುವ ವಿನೂತನ 45ಎಕ್ಸ್ ಕಾನ್ಸೆಪ್ಟ್ ಮತ್ತು ಹ್ಯಾರಿಯರ್ ಮಾದರಿಗಳು ಇದೇ ವರ್ಷದ ಕೊನೆಯಲ್ಲಿ ಇಲ್ಲವೇ 2019ರ ಆರಂಭದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿದ್ದು, 45ಎಕ್ಸ್ ಕಾರಿನ ಬೆಲೆಯು ರೂ. 9 ಲಕ್ಷ ರಿಂದ ರೂ. 12 ಲಕ್ಷ ಮತ್ತು ಹ್ಯಾರಿಯರ್ ಕಾರಿನ ಬೆಲೆಯು ರೂ. 12 ಲಕ್ಷದಿಂದ ರೂ. 15 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

MOST READ: ವಾಹನಗಳಲ್ಲಿ ಈ ರೀತಿಯ ನಂಬರ್ ಪ್ಲೇಟ್ ಇಲ್ಲವಾದ್ರೆ ಜೈಲು ಗ್ಯಾರಂಟಿ..!

ಟಾಟಾ ಬಹುನೀರಿಕ್ಷಿತ ಹ್ಯಾರಿಯರ್ ಜೊತೆ ಸ್ಪಾಟ್ ಟೆಸ್ಟಿಂಗ್ ನಡೆಸಿದ ಮತ್ತೊಂದು ಹೊಸ ಕಾರು..!

ಇದರೊಂದಿಗೆ ಟಾಟಾ ಹೊಸ ಕಾರುಗಳು ಗೇಮ್‌ಚೆಂಜರ್ ಮಾದರಿಯಾಗಿ ಮಾರುಕಟ್ಟೆ ಪ್ರವೇಶ ಪಡೆಯಲಿದ್ದು, 45ಎಕ್ಸ್ ಕಾರುಗಳು ಹ್ಯುಂಡೈ ಐ20 ಮತ್ತು ಮಾರುತಿ ಸುಜುಕಿ ಬಲೆನೊ ಪ್ರಿಮಿಯಂ ಹ್ಯಾಚ್‌ಬ್ಯಾಕ್ ಕಾರುಗಳಿಗೆ ಪೈಪೋಟಿ ನೀಡಿದ್ದಲ್ಲಿ, ಹ್ಯಾರಿಯರ್ ಕಾರುಗಳು ಹ್ಯುಂಡೈ ಕ್ರೇಟಾ, ಮಾರುತಿ ಸುಜುಕಿ ಬ್ರೆಝಾ ಮತ್ತು ಮಹೀಂದ್ರಾ ಎಕ್ಸ್‌ಯುವಿ500 ಕಾರುಗಳಿಗೆ ಪೈಪೋಟಿ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.

More from DriveSpark

Article Published On: Monday, September 17, 2018, 10:59 [IST]
English summary
Exclusive: Tata 45X Premium Hatchback Spotted Alongside Harrier SUV.
Read more on tata motors suv hatchback
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+